ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

6‌ ದಿನಗಳಿಗೆ 900 ಕೋಟಿ ರೂ. ದಾಟಿದ ʻಧುರಂಧರ್‌ 2ʼ ಸಿನಿಮಾ ಕಲೆಕ್ಷನ್;‌ ʻಬಾಹುಬಲಿʼ ದಾಖಲೆ ಮುರಿಯಲು ರಣವೀರ್‌ ಸಿಂಗ್‌ ರೆಡಿ!

ರಣವೀರ್ ಸಿಂಗ್ ಅಭಿನಯದ 'ಧುರಂಧರ್: ದಿ ರಿವೆಂಜ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ಬಿಡುಗಡೆಯಾದ ಕೇವಲ 6 ದಿನಗಳಲ್ಲಿ ವಿಶ್ವದಾದ್ಯಂತ 919 ಕೋಟಿ ರೂಪಾಯಿ ಗಳಿಸುವ ಮೂಲಕ ಸಾವಿರ ಕೋಟಿ ಕ್ಲಬ್ ಸೇರಲು ಸಜ್ಜಾಗಿದೆ.

ರಣವೀರ್‌ ಸಿಂಗ್‌ ನಟನೆಯ 'ಧುರಂಧರ್: ದಿ ರಿವೆಂಜ್' ಸಿನಿಮಾದ ಗಳಿಕೆಯು ಜೋರಾಗಿದೆ. ವೀಕೆಂಡ್‌ ಮಾತ್ರವಲ್ಲ, ವೀಕ್‌ ಡೇಸ್‌ನಲ್ಲೂ ಅದೇ ಪ್ರಮಾಣದಲ್ಲಿ ಹವಾ ಮುಂದುವರಿಸಿದೆ. ಮಂಗಳವಾರ (ಮಾ.24) ಕೂಡ ಭಾರತದಾದ್ಯಂತ 56.55 ಕೋಟಿ ರೂ. ಗಳಿಸಿ, ಈ ಸಿನಿಮಾ ದಾಖಲೆ ಬರೆದಿದೆ. ಅಂದಹಾಗೆ, ವಿಶ್ವಾದ್ಯಂತ ಈ ಚಿತ್ರದ ಒಟ್ಟಾರೆ ಗಳಿಕೆಯು 900 ಕೋಟಿ ರೂ. ದಾಟಿದ್ದು, ಸಾವಿರ ಕೋಟಿ ಕ್ಲಬ್‌ ಸೇರಲು ಕ್ಷಣಗಣನೆ ಶುರುವಾಗಿದೆ.

900 ಕೋಟಿ ರೂ. ʻಧುರಂಧರ್ 2ʼ ದಾಟಿದ ಗಳಿಕೆ

'ಧುರಂಧರ್: ದಿ ರಿವೆಂಜ್' ಸಿನಿಮಾ ಮಾ.19ರಂದು ತೆರೆಕಂಡಿತ್ತು. ಇದುವರೆಗೂ ಈ ಚಿತ್ರದ ಗಳಿಕೆಯು 919 ಕೋಟಿ ರೂ. ದಾಟಿದ್ದು, ಈ ವರ್ಷದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿದೆ. ಜೊತೆಗೆ ಛಾವಾ, ಕಾಂತಾರ: ಚಾಪ್ಟರ್‌ 1, ಅನಿಮಲ್‌, ಸ್ತ್ರೀ 2 ಮುಂತಾದ ಸಿನಿಮಾಗಳ ದಾಖಲೆಯನ್ನು ಮುರಿದಿದೆ. ಸದ್ಯ ಅತೀ ಹೆಚ್ಚು ಗಳಿಕೆ ಮಾಡಿದ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಈ ಹಿಂದೆ ತೆರೆಕಂಡ ʻಧುರಂಧರ್‌ 1ʼ ಸಿನಿಮಾವು 4ನೇ ಸ್ಥಾನದಲ್ಲಿದೆ. 'ಧುರಂಧರ್: ದಿ ರಿವೆಂಜ್' ಸಿನಿಮಾದ ಹವಾ ನೋಡಿದರೆ, ಟಾಪ್‌ 3ರಲ್ಲಿ ಸ್ಥಾನ ಪಡೆಯುವುದು ಖಚಿತ ಎನ್ನಲಾಗುತ್ತಿದೆ.

Dhurandhar 2 : 'ಧುರಂಧರ್​ 2' ವಿರುದ್ಧ ಸಿಖ್ ಸಂಘಟನೆಯಿಂದ FIR; ಮಾಧವನ್ ಕೊಟ್ಟ ಸ್ಪಷ್ಟನೆ ಇದು

ಭಾರತದಲ್ಲಿ ಈ ಸಿನಿಮಾದ ಗಳಿಕೆ 680 ಕೋಟಿ ರೂ. ದಾಟಿದ್ದು, ವಿದೇಶದಿಂದಲೂ ಉತ್ತಮ ಕಮಾಯಿ ಹರಿದುಬರುತ್ತಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಈ ಸಿನಿಮಾ ಬಿಡುಗಡೆಯಾಗದೇ ಇದ್ದರೂ ಸಹ, ವಿದೇಶಿ ಮಾರುಕಟ್ಟೆಯಲ್ಲಿ 230+ ಕೋಟಿ ರೂ. ಗಳಿಸುವಲ್ಲಿ ಯಶಸ್ವಿಯಾಗಿದೆ. ಸಾವಿರ ಕೋಟಿ ಕ್ಲಬ್‌ ಸೇರಲು 81 ಕೋಟಿ ರೂ. ಬೇಕಿದ್ದು, ಏಳನೇ ದಿನದ ಗಳಿಕೆ ಮೇಲೆ ಎಲ್ಲರ ಕಣ್ಣು ಇದೆ.

Rajinikanth: ಪ್ರತಿಯೊಬ್ಬ ಭಾರತೀಯ ನೋಡಬೇಕಾದ ಸಿನಿಮಾ! ಧುರಂಧರ್‌ ಸಿನಿಮಾ ಬಗ್ಗೆ ರಜನಿಕಾಂತ್ ಹೇಳಿದ್ದೇನು?

ಭಾರತದ 3ನೇ ಅತಿದೊಡ್ಡ ಸಿನಿಮಾ ಫ್ರಾಂಚೈಸಿ

ರಣವೀರ್ ಸಿಂಗ್ ಅಭಿನಯದ 'ಧುರಂಧರ್' ಸರಣಿಯು ಭಾರತದ ಅತೀ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಮೂರನೆ ಸ್ಥಾನ ಪಡೆದಿದೆ. 'ಯಶ್ ರಾಜ್ ಫಿಲ್ಮ್ಸ್ ಸ್ಪೈ ಯೂನಿವರ್ಸ್' ಮತ್ತು 'ಬಾಹುಬಲಿ' ನಂತರದ ಸ್ಥಾನದಲ್ಲಿ ನಿಲ್ಲುವ ಮೂಲಕ ಬಾಲಿವುಡ್ ಪಾಲಿಗೆ ಹೆಮ್ಮೆಪಡುವಂತೆ ಮಾಡಿದೆ. ಧುರಂಧರ್ 1 ಮತ್ತು 2 ಸೇರಿ ಒಟ್ಟು 2,200+ ಕೋಟಿ ಗಳಿಕೆ ಆಗಿದೆ.

ಈ ಪಟ್ಟಿಯಲ್ಲಿ ಯಶ್ ರಾಜ್ ಸ್ಪೈ ಯೂನಿವರ್ಸ್ (ಟೈಗರ್, ವಾರ್, ಪಠಾಣ್) 3,195 ಕೋಟಿ ರೂ. ಗಳಿಕೆಯೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, 2,462 ಕೋಟಿ ರೂ. ಗಳಿಕೆ ಮಾಡಿರುವ ಬಾಹುಬಲಿ ಸರಣಿಗಳು ಎರಡನೇ ಸ್ಥಾನದಲ್ಲಿದೆ. ಅಲ್ಲು ಅರ್ಜುನ್ ಅವರ 'ಪುಷ್ಪ' ಸರಣಿಯನ್ನು (2,002 ಕೋಟಿ ರೂ.) ಹಿಂದಿಕ್ಕಿ 'ಧುರಂಧರ್' ಸರಣಿಯು ಮೂರನೇ ಸ್ಥಾನಕ್ಕೆ ಏರಿದೆ.