ರಶ್ಮಿಕಾ (Rashmika Mandanna) ಹಾಗೂ ವಿಜಯ್ ದೇವರಕೊಂಡ (Vijay Devarkonda) ಅದ್ದೂರಿಯಾಗಿ ವಿವಾಹ ಆದರು. ಮದುವೆ ಬಳಿಕ ವಿಜಯ್ ಹುಟ್ಟೂರಿನಲ್ಲಿ ಅದ್ದೂರಿ ಕಾರ್ಯಕ್ರಮ ಆಯೋಜನೆ ಮಾಡಲಾಯಿತು. ಹೈದರಾಬಾದ್ನಲ್ಲಿಯೂ ಆರತಕ್ಷತೆ ಮಾಡಲಾಯಿತು. ಸೆಲೆಬ್ರೆಟಿಗಳು ಎಂದರೆ ಅವರ ಮದುವೆ (Marriage) ಆಧುನಿಕ ರೀತಿಯಾಗಿ ನಡೆಯುತ್ತದೆ ಎನ್ನಲಾಗಿತ್ತು. ಆದರೆ ಉಡುಗೆ ತೊಡುಗೆಯಿಂದ ಹಿಡಿದು ವಿವಾಹದ ನಂತರ ದೇಶದ ಹತ್ತಾರು ದೇವಸ್ಥಾನಗಳಿಗೆ ಭೇಟಿ ನೀಡುವವರೆಗೂ ನಟಿ ರಶ್ಮಿಕಾ ಮತ್ತು ನಟ ವಿಜಯ್ ಹಿಂದೂ ಸಾಂಪ್ರದಾಯ ಪಾಲಿಸಿದ್ದರು. ಇಂದು ವಿಜಯ್ ಮತ್ತು ರಶ್ಮಿಕಾ ತಮ್ಮ ಮೆಹೆಂದಿ (Mehendi pictures) ಸಮಾರಂಭದ ಫೋಟೋಗಳನ್ನು ರಿವೀಲ್ ಮಾಡಿದ್ದಾರೆ.
ಇದನ್ನೂ ಓದಿ: Geetha Bhat: ಅಷ್ಟಿದ್ರೆ ಆ ಪಾತ್ರ ಮಾಡಬಾರದಿತ್ತು; ಗೀತಾ ಭಾರತಿ ಭಟ್ ಆರೋಪದ ಬಗ್ಗೆ ಮಿಲನಾ ಖಡಕ್ ಉತ್ತರ
ಮೆಹೆಂದಿ ಸಮಾರಂಭದ ಫೋಟೋಗಳು ಔಟ್
ಹಳೇಯ ಪದ್ಧತಿ, ನಿಯಮಗಳಡಿ, ವಧು ವರರು ವಿಶಿಷ್ಟ ಬಗೆಯ ಉಡುಗೆಯಲ್ಲಿ ವಿವಾಹವಾಗಿ ಮತ್ತೊಮ್ಮೆ ಅಭಿಮಾನಿಗಳ ಮನ ಗೆದ್ದಿತ್ತು ಈ ಜೋಡಿ.ಇಂದು ವಿಜಯ್ ಮತ್ತು ರಶ್ಮಿಕಾ ತಮ್ಮ ಮೆಹೆಂದಿ ಸಮಾರಂಭದ ಫೋಟೋಗಳನ್ನು ಅನಾವರಣಗೊಳಿಸಿದ್ದಾರೆ.
ಫೆಬ್ರವರಿ 25ರಂದು ನಡೆದ ಅವರ ಮೆಹೆಂದಿ ಮತ್ತು ಪ್ರಧಾನಂ ಸಮಾರಂಭಕ್ಕಾಗಿ, ವಧು-ವರರು ಕರಣ್ ತೋರಣಿ ವಿನ್ಯಾಸದ ಬಟ್ಟೆಗಳನ್ನು ಆಯ್ಕೆ ಮಾಡಿದ್ದರು(Karan Torani’s fashion label Torani). ಕರಣ್ ತೋರಣಿ ಅವರು ಭಾರತದ ಪ್ರಸಿದ್ಧ ಫ್ಯಾಷನ್ ಡಿಸೈನರ್ ಮತ್ತು 2018 ರಲ್ಲಿ ಸ್ಥಾಪಿತವಾದ 'Torani' (ತೋರಣಿ) ಲೇಬಲ್‌ನ ಸಂಸ್ಥಾಪಕರು.
ಮೆಹೆಂದಿ ಚಿತ್ರಗಳನ್ನು ಹಂಚಿಕೊಂಡ ವಿಜಯ್ ಹೀಗೆ ಬರೆದಿದ್ದಾರೆ: “25.02.26 ಪ್ರಧಾನಂ ಮತ್ತು ಮೆಹೆಂದಿ ಸಂಜೆ. ಅತ್ಯಂತ ಮೋಜಿನ ಸಂಜೆ, ಸಂಪೂರ್ಣವಾಗಿ ಬದುಕಿದ ಸಂಜೆ ಎಂದು ಬರೆದುಕೊಂಡಿದ್ದಾರೆ. ರಶ್ಮಿಕಾ ಕೂಡ “25.02.26 ರಂದು ಪ್ರಧಾನಂ ಮತ್ತು ಮೆಹೆಂದಿ ಸಂಜೆಯಾಗಿತ್ತು. ತುಂಬಾ ಪರಿಪೂರ್ಣವಾಗಿತ್ತು. ಸಮಯ ಹೋಗಿದ್ದೆ ಗೊತ್ತಾಗಿಲ್ಲ ಎಂದು ಬರೆದುಕೊಂಡಿದ್ದಾರೆ.
ಪ್ರಧಾನಂ ತೆಲುಗು ಹಿಂದೂ ಸಂಪ್ರದಾಯದಲ್ಲಿ ವಿವಾಹ ಪೂರ್ವ ನಿಶ್ಚಿತಾರ್ಥ ಸಮಾರಂಭ ಎನ್ನಲಾಗುತ್ತದೆ. ಅಲ್ಲಿ ವಧು-ವರರ ಕುಟುಂಬಗಳು ಸೇರುತ್ತವೆ. ಈ ಫೋಟೋಗಳನ್ನು ನೋಡಿ ಫ್ಯಾನ್ಸ್ ಖುಷ್ ಆಗಿದ್ದಾರೆ. ಜೋಡಿ ಅಂತೂ ಸಖತ್ ಮಿಂಚುತ್ತಿದೆ ಎಂದು ಕಮೆಂಟ್ ಮಾಡ್ತಿದ್ದಾರೆ ಫ್ಯಾನ್ಸ್.
ರಶ್ಮಿಕಾ ಸಂದೇಶ
ಈ ಪೋಸ್ಟ್‌ಗು ಮುಂಚೆ ರಶ್ಮಿಕಾ ಅವರು ಸೋಶಿಯಲ್ ಮೀಡಿಯಾದಲ್ಲಿ ಒಂದು ಸಂದೇಶ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ‘ನಿಮ್ಮನ್ನು ಸ್ವತಂತ್ರ್ಯಗೊಳಿಸುವ ಪ್ರೀತಿ ಹುಡುಕಿಕೊಳ್ಳಿ’ ಎಂದು ಅವರು ಹೇಳಿದ್ದಾರೆ. ಧಾಮಿನಿ ಎಂಬುವವರು ರಶ್ಮಿಕಾ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದರು.
ಇದನ್ನೂ ಓದಿ: Actor Prabhas : ಮಲಯಾಳಂ ಖ್ಯಾತ ನಿರ್ದೇಶಕರನ್ನ ಭೇಟಿ ಮಾಡಿದ ಪ್ರಭಾಸ್; ಹೊಂಬಾಳೆಯದ್ದೇ ಪ್ಲ್ಯಾನ್
ಈ ಟ್ವೀಟ್ನ ರಶ್ಮಿಕಾ ರೀ ಟ್ವೀಟ್ ಮಾಡಿದ್ದಾರೆ. ‘ಇಷ್ಟು ದಿನ ನನ್ನ ಬಗ್ಗೆ ಬರೆದದ್ದನ್ನು ಓದಿ ನಾನು ಇಷ್ಟೊಂದು ಭಾವನಾತ್ಮಕವಾಗಿ ವರ್ತಿಸಿಲ್ಲ. ನಾನು ಹೇಳಲು ಬಯಸುವುದು ಬಹಳಷ್ಟಿದೆ. ಆದರೆ ನಾನು ಹೇಳೋದು ತುಂಬಾ ಕಡಿಮೆ. ನಾನು ನನ್ನದೇ ಆದ ಜಾಗವನ್ನು ಹುಡುಕುತ್ತಿದ್ದೆ. ಅದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ಅದನ್ನು ಗುರುತಿಸಿದ್ದಕ್ಕಾಗಿ ಧನ್ಯವಾದಗಳು. ಪ್ರೀತಿಯ ಬಗ್ಗೆ ನಾನು ಹೇಳುವುದು ಇಷ್ಟೇ, ‘ನಿಮ್ಮನ್ನು ಮುಕ್ತಗೊಳಿಸುವ ಅಥವಾ ಸ್ವತಂತ್ರಗೊಳಿಸುವ ಪ್ರೀತಿಯನ್ನು ಕಂಡುಕೊಳ್ಳಿ’ ಎಂದು ಅವರು ಬರೆದುಕೊಂಡಿದ್ದಾರೆ.