ಸದ್ಯ ಭಾರತೀಯ ಚಿತ್ರರಂಗ ಮತ್ತೊಂದು ಸೆಲೆಬ್ರಿಟಿ ಕಲ್ಯಾಣಕ್ಕೆ ಸಾಕ್ಷಿಯಾಗಲಿದೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಫೆ.26ರಂದು ಹಸೆಮಣೆ ಏರುವುದು ನಿಕ್ಕಿಯಾಗಿದೆ. ಈಗಾಗಲೇ ಇವರ ಮದುವೆಯ ವೆಡ್ಡಿಂಗ್ ಕಾರ್ಡ್ ವೈರಲ್ ಆಗಿದೆ. ಫೆ.26ರಂದು ರಾಜಸ್ಥಾನದ ಉದಯಪುರದಲ್ಲಿ ಮದುವೆ ನಡೆಯಲಿದೆ ಎಂದು ಮಾಹಿತಿ ಸಿಕ್ಕಿದೆ. ಈ ಮಧ್ಯೆ ವೆಡ್ಡಿಂಗ್ ಕಾರ್ಡ್ ಜೊತೆಗಿನ ಒಂದು ಹ್ಯಾಂಪರ್ ಬಾಕ್ಸ್ ಎಲ್ಲರ ಗಮನಸೆಳೆಯುತ್ತಿದೆ.
ಉಡುಗೊರೆ ನೀಡಿದ ರಶ್ಮಿಕಾ ಮಂದಣ್ಣ - ವಿಜಯ್
ಹೌದು, ವೆಡ್ಡಿಂಗ್ ಕಾರ್ಡ್ ಜೊತೆಗೆ ಒಂದು ಉಡುಗೊರೆಯ ಹ್ಯಾಂಪರ್ ಬಾಕ್ಸ್ ಅನ್ನು ಆಹ್ವಾನಿತರಿಗೆ ತಲುಪಿಸಲಾಗುತ್ತಿದೆ. ಅಷ್ಟಕ್ಕೂ ಆ ಬಾಕ್ಸ್‌ನಲ್ಲಿ ಏನೇನಿದೆ? ಸಾಮಾನ್ಯವಾಗಿ ಮದುವೆಯ ಆಮಂತ್ರಣ ಎಂದರೆ ಬರೀ ಕಾರ್ಡ್ ಮತ್ತು ಸಿಹಿ ಇರುತ್ತದೆ. ಆದರೆ, ಈ ಜೋಡಿಯ ಆಮಂತ್ರಣ ಬಾಕ್ಸ್ ಅತ್ಯಂತ ಸ್ಟೈಲಿಶ್ ಆಗಿದ್ದು, ಅದರಲ್ಲಿ ರಶ್ಮಿಕಾ ಮತ್ತು ವಿಜಯ್ ಇಬ್ಬರ ವೈಯಕ್ತಿಕ ಬ್ರ್ಯಾಂಡ್‌ಗಳಿಗೆ ಆದ್ಯತೆ ನೀಡಲಾಗಿದೆ.
Rashmika-Vijay Wedding: ರಶ್ಮಿಕಾ-ವಿಜಯ್ ದೇವರಕೊಂಡ ಮದುವೆ ಸಿದ್ಧತೆ ಜೋರು? ವಿಡಿಯೋದಲ್ಲಿದೆ ಮಹಾಸತ್ಯ!
ಈ ಗಿಫ್ಟ್ ಬಾಕ್ಸ್‌ನ ಪ್ರಮುಖ ಆಕರ್ಷಣೆಯೇ ಈ 'ನ್ಯಾಷನಲ್ ಕ್ರಶ್' ಪರ್ಫ್ಯೂಮ್ ಸುಗಂಧ ದ್ರವ್ಯ. ರಶ್ಮಿಕಾ ಮಂದಣ್ಣ ಅವರನ್ನು ಅಭಿಮಾನಿಗಳು ಪ್ರೀತಿಯಿಂದ 'ನ್ಯಾಷನಲ್ ಕ್ರಶ್' ಎಂದು ಕರೆಯುವುದರಿಂದ, ಅದೇ ಹೆಸರಿನ ಪರ್ಫ್ಯೂಮ್ ಅನ್ನು ಈ ಬಾಕ್ಸ್‌ನಲ್ಲಿ ಇರಿಸಲಾಗಿದೆ. ವಿಜಯ್ ದೇವರಕೊಂಡ ಅವರ ಪ್ರಸಿದ್ಧ ಫ್ಯಾಷನ್ ಬ್ರ್ಯಾಂಡ್ ಆದ 'ರೌಡಿ' (Rowdy) ಸಂಸ್ಥೆಯ ಹಳದಿ ಬಣ್ಣದ ಸ್ಟೈಲಿಶ್ ಟಿ-ಶರ್ಟ್ ಕೂಡ ಈ ಹ್ಯಾಂಪರ್‌ನಲ್ಲಿದೆ. ಪರಿಮಳದ ಜೊತೆಗೆ ಕೈ ಮತ್ತು ಪಾದಗಳ ಆರೈಕೆಗಾಗಿ 'ಹ್ಯಾಂಡ್ ಅಂಡ್ ಫೂಟ್ ಕ್ರೀಮ್' ಅನ್ನು ಸಹ ನೀಡಲಾಗಿದೆ.
ರಶ್ಮಿಕಾ ನೀಡಿದ ಹ್ಯಾಂಪರ್ ಬಾಕ್ಸ್
ಇವೆಲ್ಲದರ ಜೊತೆಗೆ ಮದುವೆಯ ಸಂಪ್ರದಾಯದಂತೆ ಗೋಡಂಬಿ ಮತ್ತು ಸಿಹಿ ಪದಾರ್ಥಗಳನ್ನೊಳಗೊಂಡ ಬಾಕ್ಸ್ ಕೂಡ ಈ ಹ್ಯಾಂಪರ್‌ನಲ್ಲಿದೆ. ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ಅತ್ಯಂತ ಖಾಸಗಿಯಾಗಿ ವಿಜಯ್ & ರಶ್ಮಿಕಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಫೆಬ್ರವರಿ 24ರಿಂದಲೇ ವಿವಾಹಪೂರ್ವ ಶಾಸ್ತ್ರಗಳು ಆರಂಭವಾಗಲಿವೆ. ನಂತರ ಮಾರ್ಚ್ 4 ರಂದು ಹೈದರಾಬಾದ್‌ನ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಎಲ್ಲಾ ಚಿತ್ರರಂಗದ ಗಣ್ಯರಿಗಾಗಿ ಭವ್ಯ ಆರತಕ್ಷತೆ ಹಮ್ಮಿಕೊಳ್ಳಲಾಗಿದೆ ಎಂಬ ಮಾಹಿತಿ ಇದೆ.
Rashmika Mandanna: ಕೊನೆಗೂ ರಿವೀಲ್ ಆಯ್ತು ರಶ್ಮಿಕಾ-ವಿಜಯ್ ಎಂಗೇಜ್ಮೆಂಟ್; ಇಲ್ಲಿದೆ ನೋಡಿ ಫೋಟೋ
ವಿಜಯ್ ಮತ್ತು ರಶ್ಮಿಕಾ ಬಹುಕಾಲದಿಂದಲೂ ಪ್ರೀತಿಯಲ್ಲಿದ್ದರು. ಆದರೆ ಎಲ್ಲಿಯೂ ಈ ಜೋಡಿ ಈ ಕುರಿತು ಮಾಹಿತಿ ಹಂಚಿಕೊಂಡಿರಲಿಲ್ಲ. ಈಗಲೂ ಕೂಡ ಮದುವೆ ಬಗ್ಗೆ ಯಾವುದೇ ಮಾಹಿತಿಗಳನ್ನು ವಿಜಯ್ - ರಶ್ಮಿಕಾ ಎಲ್ಲಿಯೂ ಹೇಳಿಲ್ಲ.