ಕಳೆದ ತಿಂಗಳು ದಾಂಪತ್ಯ ಬದುಕಿಗೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣಗೆ ಅದೃಷ್ಟ ಕುದುರಿತ್ತು. ಅದೇನಪ್ಪ ಅಂದ್ರೆ ಅವರ ʻದಿ ಗರ್ಲ್‌ಫ್ರೆಂಡ್ʼ ಸಿನಿಮಾದ ನಟನೆಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿತ್ತು. ತೆಲಂಗಾಣ ಸರ್ಕಾರ ನೀಡುವ 2025ರ ಸಾಲಿನ ಈ ಗದ್ದರ್ ಚಲನಚಿತ್ರಗಳ ಪ್ರಶಸ್ತಿ ಪ್ರದಾನ ಸಮಾರಂಭವು ಈಚೆಗೆ ನಡೆದಿದ್ದು, ನಟಿ ರಶ್ಮಿಕಾ ಅವರು ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಈ ವೇಳೆ ಅವರ ಅತ್ತೆ ಮಾಧವಿ (ವಿಜಯ್ ದೇವರಕೊಂಡ) ಅವರು ಕೂಡ ಹಾಜರಿದ್ದರು. ಅದು ರಶ್ಮಿಕಾಗೆ ಡಬಲ್ ಖುಷಿ ನೀಡಿತ್ತು.
ವೇದಿಕೆ ರಶ್ಮಿಕಾ ಹೇಳಿದ್ದೇನು?
ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಸ್ವೀಕರಿಸಿದ ಮಾತನಾಡಿದ ರಶ್ಮಿಕಾ ಮಂದಣ್ಣ, "ನನ್ನ ನಟನೆಯಿಂದಲೇ ನಾನು ಟ್ರೋಲ್ ಆಗ್ತಿದ್ದೆ. ಆದರೆ, ಇವತ್ತು ನನ್ನ ಅಭಿನಯಕ್ಕಾಗಿಯೇ ಪ್ರಶಸ್ತಿ ಸಿಕ್ಕಿದೆ. ʻದಿ ಗರ್ಲ್‌ಫ್ರೆಂಡ್ʼನಂತಹ ಸಿನಿಮಾಗೆ ಪ್ರಶಸ್ತಿ ಸಿಕ್ಕಿದ್ದು ನನಗೆ ಸಖತ್ ಸ್ಪೆಷಲ್ ಆಗಿದೆ. ಯಾಕೆಂದರೆ, ಮುಂದೆ ಇಂತಹ ಸಿನಿಮಾಗಳನ್ನ ಹೆಚ್ಚು ಮಾಡೋದಕ್ಕೆ ನನಗೆ ಕಾನ್ಫಿಡೆನ್ಸ್ ನೀಡುತ್ತೆ" ಎಂದು ರಶ್ಮಿಕಾ ಹೇಳಿದ್ದಾರೆ.
Anand Deverakonda: ರಶ್ಮಿಕಾ-ವಿಜಯ್ ಜೊತೆ ಭರ್ಜರಿ ಡ್ಯಾನ್ಸ್ ಮಾಡಿದ ಆನಂದ್ ದೇವರಕೊಂಡ
ಅತ್ತೆ ಮಾಧವಿ ಬಗ್ಗೆ ಏನಂದ್ರು ನೋಡಿ ರಶ್ಮಿಕಾ
"ಈ ಸಮಾರಂಭಕ್ಕೆ ನನ್ನ ಅತ್ತೆ ಬಂದಿದ್ದಾರೆ. ವರ್ಷಗಳ ಹಿಂದೆ ನೀವು ನನ್ನನ್ನು ಮಗಳಂತೆ ಪ್ರೀತಿಸುತ್ತಿದ್ರಿ. ಆದರೆ, ಈಗ ಅಧಿಕೃತವಾಗಿ ಸೊಸೆಯಾಗಿ ನಿಮ್ಮ ಮುಂದೆ ನಿಂತಿದ್ದೇನೆ. ಇದು ನನಗೆ ದೊಡ್ಡ ಹೆಮ್ಮೆ. ನಿಮ್ಮ ಪ್ರೀತಿಗೆ ನಾನು ಯಾವಾಗಲೂ ತುಂಬಾ ಕೃತಜ್ಞಳಾಗಿರುತ್ತೇನೆ. ಅತ್ತೆ ನಾನು ಈಗ ಸಾಧಿಸಿದ್ದೇನೆ. ಮನೆಗೆ ಹೋಗಿ ನಾವು ಪಾರ್ಟಿ ಮಾಡೋಣ" ಎಂದು ರಶ್ಮಿಕಾ ಹೇಳಿದ್ದಾರೆ. ಸೊಸೆಯ ಈ ಮಾತುಗಳನ್ನು ಕೇಳಿದ ವಿಜಯ್ ದೇವರಕೊಂಡ ತಾಯಿ ಮಾಧವಿ ದೇವರಕೊಂಡ ಆನಂದಭಾಷ್ಪ ಸುರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಫೆಬ್ರವರಿ 26ರಂದು ನಡೆದ ಮದುವೆ
ರಾಜಸ್ಥಾನದ ಉದಯಪುರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆಯು ಅದ್ದೂರಿಯಾಗಿ ನಡೆದಿತ್ತು. ಬಹಳ ಅದ್ದೂರಿಯಾಗಿ ನಡೆದ ಈ ಮದುವೆಯಲ್ಲಿ ಕೆಲವೇ ಕೆಲವು ಆಪ್ತರು ಭಾಗಿಯಾಗಿದ್ದರು. ನಂತರ ಹೈದರಾಬಾದ್‌ನಲ್ಲಿ ಈ ಜೋಡಿಯು ಗ್ರ್ಯಾಂಡ್ ಆಗಿ ಆರತಕ್ಷತೆಯನ್ನು ಮಾಡಿಕೊಂಡಿತ್ತು.