‘ಪೆದ್ದಿ’ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ಮೆಗಾಪವರ್ ಸ್ಟಾರ್ ರಾಮ್ ಚರಣ್ ತಮ್ಮ 17ನೇ (RC17) ಸಿನಿಮಾಗೆ ಸಜ್ಜಾಗುತ್ತಿದ್ದಾರೆ. 'ರಂಗಸ್ಥಲಂ' ನಂತಹ ಇಂಡಸ್ಟ್ರಿ ಹಿಟ್ ನೀಡಿದ್ದ ಸೆನ್ಸೇಷನಲ್ ನಿರ್ದೇಶಕ ಸುಕುಮಾರ್ ಜೊತೆ ರಾಮ್ ಚರಣ್ ಮತ್ತೆ ಕೈಜೋಡಿಸುತ್ತಿರುವುದು ಚಿತ್ರಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಪ್ರಸ್ತುತ ಈ ಬಿಗ್ ಪ್ರಾಜೆಕ್ಟ್‌ನ ಸ್ಕ್ರಿಪ್ಟ್ ಕೆಲಸಗಳು ಅಂತಿಮ ಹಂತ ತಲುಪಿದ್ದು, ಶೀಘ್ರದಲ್ಲೇ ಶೂಟಿಂಗ್ ಆರಂಭವಾಗಲಿದೆ.
ಈ ಮಧ್ಯೆ, ಚಿತ್ರದ ನಾಯಕಿ ಯಾರೆಂಬ ಕುತೂಹಲಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಆರಂಭದಲ್ಲಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಹೆಸರು ಕೇಳಿಬರುತ್ತಿತ್ತಾದರೂ, ಈಗ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಬಲವಾಗಿ ಹರಿದಾಡುತ್ತಿದೆ.
Anand Deverakonda: ರಶ್ಮಿಕಾ-ವಿಜಯ್ ಜೊತೆ ಭರ್ಜರಿ ಡ್ಯಾನ್ಸ್ ಮಾಡಿದ ಆನಂದ್ ದೇವರಕೊಂಡ
ಸುಕುಮಾರ್-ರಶ್ಮಿಕಾ ಕಾಂಬಿನೇಷನ್ ಜಾದೂ!
'ಪುಷ್ಪ' ಸರಣಿಯ ಬ್ಲಾಕ್‌ಬಸ್ಟರ್ ಯಶಸ್ಸಿನ ಮೂಲಕ ರಶ್ಮಿಕಾ ಮಂದಣ್ಣ ಅವರ ಪ್ಯಾನ್-ಇಂಡಿಯಾ ಜನಪ್ರಿಯತೆ ಹೆಚ್ಚಾಗಿದೆ. 'RC17' ಚಿತ್ರದ ಪ್ರಮುಖ ನಾಯಕಿ ಪಾತ್ರಕ್ಕೆ ರಶ್ಮಿಕಾ ಅವರ ನಟನೆ ಮತ್ತು ಗ್ಲಾಮರ್ ಸೂಕ್ತ ನ್ಯಾಯ ಒದಗಿಸಲಿದೆ ಎಂದು ನಿರ್ದೇಶಕ ಸುಕುಮಾರ್ ಭಾವಿಸಿದ್ದಾರೆ ಎನ್ನಲಾಗಿದೆ. ರಾಮ್ ಚರಣ್ ಅವರ ಮಾಸ್ ಇಮೇಜ್, ಸುಕುಮಾರ್ ಅವರ ವಿಶಿಷ್ಟ ನಿರೂಪಣೆ ಹಾಗೂ ರಶ್ಮಿಕಾ ಅವರ ಗ್ಲಾಮರ್ ಈ ಸಿನಿಮಾಗೆ ದೊಡ್ಡ ಬಲ ತುಂಬಲಿದ್ದು, ಚಿತ್ರತಂಡ ಶೀಘ್ರದಲ್ಲೇ ನಾಯಕಿಯ ಕುರಿತು ಅಧಿಕೃತ ಪ್ರಕಟಣೆ ನೀಡುವ ಸಾಧ್ಯತೆಯಿದೆ.
Rashmika Mandanna: ಹನಿಮೂನ್ ಮೂಡ್ನಲ್ಲಿ ರಶ್ಮಿಕಾ-ವಿಜಯ್; ಕ್ಯೂಟ್ ಫೋಟೊ ವೈರಲ್
ಸಾಲು ಸಾಲು ಬೃಹತ್ ಸಿನಿಮಾಗಳಲ್ಲಿ ರಶ್ಮಿಕಾ ಬ್ಯುಸಿ
ರಶ್ಮಿಕಾ ಮಂದಣ್ಣ ಪ್ರಸ್ತುತ ಸಾಲು ಸಾಲು ದೊಡ್ಡ ಬಜೆಟ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಪತಿ ವಿಜಯ್ ದೇವರಕೊಂಡ ಜೊತೆ ಬೃಹತ್ ಪೀರಿಯಾಡಿಕ್ ಆಕ್ಷನ್ ಡ್ರಾಮಾ 'ರಣಬಾಲಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ. 'ಗೀತಾ ಗೋವಿಂದಂ' ಮತ್ತು 'ಡಿಯರ್ ಕಾಮ್ರೇಡ್' ನಂತರ ಮೂಡಿಬರುತ್ತಿರುವ ಈ ಚಿತ್ರವನ್ನು ರಾಹುಲ್ ಸಾಂಕೃತ್ಯಾಯನ್ ನಿರ್ದೇಶಿಸುತ್ತಿದ್ದಾರೆ. 19ನೇ ಶತಮಾನದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ರಾಯಲಸೀಮಾದ ಯೋಧನ ಕಥೆ ಇದಾಗಿದೆ. ಇದರ ಜೊತೆಗೆ ರಶ್ಮಿಕಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಮಹಿಳಾ ಪ್ರಧಾನ ಸಿನಿಮಾ 'ಮೈಸಾ'ದಲ್ಲೂ ಬ್ಯುಸಿಯಾಗಿದ್ದಾರೆ.