'ನ್ಯಾಷನಲ್ ಕ್ರಶ್ʼ ರಶ್ಮಿಕಾ ಮಂದಣ್ಣ ನಟನೆಯ ʻಮೈಸಾʼ ಸಿನಿಮಾದ ಫಸ್ಟ್ ಗ್ಲಿಮ್ಸ್ ರಿಲೀಸ್ ಆಗಿದೆ. ಹಿಂದೆಂದೂ ಕಾಣಿಸಿಕೊಳ್ಳದ ಲುಕ್ ನಲ್ಲಿ ನಟಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್‌ನಿಂದಲೂ ಸದ್ದು ಮಾಡಿದ್ದ ʻಮೈಸಾʼ ಸಿನಿಮಾ ವರ್ಷಾಂತ್ಯದಲ್ಲಿ ಗ್ಲಿಂಪ್ಸ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ.
ಮೈಸಾ ಸಿನಿಮಾದಿಂದ ರವೀಂದ್ರ ಪುಲ್ಲೆ ನಿರ್ದೇಶಕರಾಗಿ ಚಿತ್ರರಂಗದಲ್ಲಿ ತನ್ನ ಮೊದಲ ಹೆಜ್ಜೆಯನ್ನು ಇಡುತ್ತಿದ್ದಾರೆ.
ರಕ್ತಸಿಕ್ತ ಅವತಾರದಲ್ಲಿ ರಶ್ಮಿಕಾ
ಅನ್‌ಫಾರ್ಮ್ಯುಲಾ ಫಿಲ್ಮ್ಸ್ ನಿರ್ಮಾಣ ಮಾಡುತ್ತಿರುವ ಈ ಪ್ಯಾನ್ ಇಂಡಿಯಾ ಚಿತ್ರವು ಭಾರೀ ಬಜೆಟ್‌ನಲ್ಲಿ ಮೂಡಿಬರುತ್ತಿದೆ. ಸದ್ಯ ಬಿಡುಗಡೆ ಆಗಿರೋ ಸಣ್ಣ ತುಣುಕಿನಲ್ಲಿ ರಶ್ಮಿಕಾ ಲುಕ್ ನೋಡ್ತಿದ್ರೆ ಸಿನಿಮಾ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚು ಮಾಡ್ತಿದೆ. ಗ್ಲಾಮರ್ ಪಾತ್ರಗಳಿಂದ ದೂರ ಸರಿದು, ರಕ್ತಸಿಕ್ತ ದೇಹ ಮತ್ತು ಕೈಯಲ್ಲಿ ಗನ್ ಹಿಡಿದು ರಶ್ಮಿಕಾ ಹೊಸ ಪ್ರಯೋಗಕ್ಕೆ ಇಳಿದಿದ್ದಾರೆ. ಪ್ರೇಕ್ಷಕರಿಗೂ ಇದು ಹೊಸ ಅನುಭವ ನೀಡಲಿದೆ.
Rashmika Mandanna: ಕೊನೆಗೂ ರಿವೀಲ್ ಆಯ್ತು ರಶ್ಮಿಕಾ-ವಿಜಯ್ ಎಂಗೇಜ್ಮೆಂಟ್; ಇಲ್ಲಿದೆ ನೋಡಿ ಫೋಟೋ
ಈ ಹೆಸರನ್ನು ನೆನಪಿಟ್ಟುಕೊಳ್ಳಿ!
ರಶ್ಮಿಕಾ ಮಂದಣ್ಣ ಅವರು ಈ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಕೂಡ ಮಾಡಿಕೊಂಡಿದ್ದಾರೆ. ನಾಯಕಿಯ ತಾಯಿ ಹೇಳುವ ಶಕ್ತಿಶಾಲಿ ವಾಯ್ಸ್ ಓವರ್‌ನೊಂದಿಗೆ ಆರಂಭವಾಗುವ ಈ ಟೀಸರ್‌ನಲ್ಲಿ, "ಇವಳು ಮರಣವನ್ನೇ ಎದುರಿಸಿ ನಿಲ್ಲುವ ಶಕ್ತಿ ಹೊಂದಿದ್ದಾಳೆ.. ಈ ಹೆಸರನ್ನು ನೆನಪಿಟ್ಟುಕೊಳ್ಳಿ ಮೈಸಾ" ಎಂದು ತಾಯಿಯ ಪಾತ್ರದ ಮೂಲಕ ಮೈಸಾ ವ್ಯಕ್ತಿತ್ವವನ್ನು ಪರಿಚಯಿಸಲಾಗಿದೆ.
ಗೊಂಡಿ ಸಮುದಾಯದ ಮಹಿಳಾ ನಾಯಕಿಯನ್ನು ಅತ್ಯಂತ ಬಲಿಷ್ಠ, ಉಗ್ರ ಮತ್ತು ಭಾವನಾತ್ಮಕವಾಗಿ ತೋರಿಸುವ ಮೊದಲ ಸಿನಿಮಾವಾಗಿ ಮೈಸಾ ಮೂಡಿಬರುತ್ತಿದೆ. ಈ ಚಿತ್ರದಲ್ಲಿ ಈಶ್ವರಿ ರಾವ್, ಗುರು ಸೋಮಸುಂದರಂ ಮತ್ತು ರಾವ್ ರಮೇಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಚಿತ್ರದ ಛಾಯಾಗ್ರಹಣವನ್ನು ಶ್ರೀಯಾಸ್ ಪಿ. ಕೃಷ್ಣ ಮಾಡುತ್ತಿದ್ದಾರೆ.
ಬಹುಬೇಡಿಕೆಯ ಸಂಗೀತ ನಿರ್ದೇಶಕ ಜೇಕ್ಸ್ ಬೆಜೋಯ್ ಸಂಗೀತನೀಡುತ್ತಿದ್ದು, ಅಂತರರಾಷ್ಟ್ರೀಯ ಸ್ಟಂಟ್ ಡೈರೆಕ್ಟರ್ ಆಂಡಿ ಲಾಂಗ್ (ಕಲ್ಕಿ ಖ್ಯಾತಿ) ಸಾಹಸ ನಿರ್ದೇಶನ ಮಾಡಿದ್ದು, ಟೀಸರ್‌ನಲ್ಲಿನ ಆಕ್ಷನ್ ಸೀನ್‌ಗಳು ವಿಸ್ಮಯಗೊಳಿಸುತ್ತಿವೆ. ಪ್ರಸ್ತುತ ತೆಲಂಗಾಣ ಮತ್ತು ಕೇರಳದ ಅರಣ್ಯ ಪ್ರದೇಶಗಳಲ್ಲಿ ಮೈಸಾ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಟೀಸರ್ ಬಿಡುಗಡೆಯಿಂದ ಚಿತ್ರದ ಮೇಲೆ ಮತ್ತಷ್ಟು ಕುತೂಹಲ ಹೆಚ್ಚಿದೆ. ಇದೊಂದು ಆ್ಯಕ್ಷನ್ ಹಾಗೂ ಮಹಿಳಾ ಪ್ರಧಾನ ಸಿನಿಮಾವಾಗಿದೆ.