ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಸಂಭ್ರಮಗಳು ಅದ್ದೂರಿಯಾಗಿ ಮುಕ್ತಾಯವಾಗಿವೆ. ಹೈದರಾಬಾದ್‌ನಲ್ಲಿ ನಡೆದ ಗ್ರ್ಯಾಂಡ್ ರಿಸೆಪ್ಷನ್ ಮೂಲಕ ವಿರೋಶ್ ಕಲ್ಯಾಣದ ಎಲ್ಲಾ ಸಮಾರಂಭಗಳು ಮುಗಿದಿದ್ದು, ಈ ಎಲ್ಲಾ ಕಲರ್‌ಫುಲ್ ಕ್ಷಣಗಳನ್ನು ರಶ್ಮಿಕಾ ನಿಯಮಿತವಾಗಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಆದರೆ ಅವರ ರಿಸೆಪ್ಷನ್ ವಿಡಿಯೋ ಮಾತ್ರ ಸಿಕ್ಕಾಪಟ್ಟೆ ಗಮನಸೆಳೆದಿದೆ. ಅದಕ್ಕೆ ಕಾರಣ, ಅಲ್ಲಿ ಬಳಕೆ ಆಗಿರುವ ಹಾಡು!
ಕನ್ನಡ ಹಾಡನ್ನು ಬಳಕೆ ಮಾಡಿದ ರಶ್ಮಿಕಾ
ರಶ್ಮಿಕಾ ಮಂದಣ್ಣ ಅವರು ಹಂಚಿಕೊಂಡಿರುವ ಮದುವೆಯ ಆರತಕ್ಷತೆಯ ವಿಡಿಯೋಗೆ ಕನ್ನಡದ ಹಾಡನ್ನು ಹಿನ್ನೆಲೆಯಾಗಿ ಬಳಸಿಕೊಂಡಿದ್ದಾರೆ. ಈಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್ ಆಗಿರುವ ತುಳಸಿ ಹಾಡು ಈಗ ರಶ್ಮಿಕಾಗೂ ಇಷ್ಟವಾಗಿದೆ. ‘ತುಳಸಿ’ ಹಾಡನ್ನು ಪುರಂದರ ದಾಸರ ದಾಸಪದಗಳಿಂದ ತೆಗೆದುಕೊಳ್ಳಲಾಗಿದೆ. ಇದಕ್ಕೆ ಸಂಗೀತ ಸಂಯೋಜನೆ ಮಾಡಿದ್ದು ʻಸು ಫ್ರಮ್ ಸೋʼ ಸಿನಿಮಾ ಖ್ಯಾತಿಯ ಸುಮೇಧ್.
ಈ ಹಾಡು ಕೇಳುವುದಕ್ಕೆ ಎಷ್ಟು ಇಂಪಾಗಿದೆಯೋ, ಛಾಯಾಗ್ರಹಣವೂ ಅಷ್ಟೇ ಚೆನ್ನಾಗಿದೆ. ಈ ಹಾಡಿನಲ್ಲಿ ಬಾಲ ನಟಿ ಪ್ರಣ್ವಿ ಅಕ್ಷಯ್, ಸುಷ್ಮಿತಾ ಭಟ್ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಮೂಲಕ ಹಲವು ಸೂಕ್ಷ್ಮ ವಿಷಯಗಳನ್ನು ಹೇಳುವ ಪ್ರಯತ್ನ ಮಾಡಲಾಗಿದೆ.
ಇದೀಗ ಇದೇ ಹಾಡನ್ನು ರಶ್ಮಿಕಾ ಕೂಡ ತಮ್ಮ ಮದುವೆಯ ಆರತಕ್ಷತೆಯ ವಿಡಿಯೋಗೆ ಬಳಕೆ ಮಾಡಿರುವುದು ವಿಶೇಷ. ಕನ್ನಡದ ವಿಚಾರಕ್ಕೆ ರಶ್ಮಿಕಾ ಹಲವು ಬಾರಿ ವಿರೋಧವನ್ನು ಎದುರಿಸಿದ್ದಾರೆ. ಇದೀಗ ತಮ್ಮ ಮದುವೆ ಆರತಕ್ಷತೆಯ ವಿಡಿಯೋಗೆ ಕನ್ನಡ ಹಾಡನ್ನೇ ಬಳಕೆ ಮಾಡಿರುವುದಕ್ಕೆ ಅಭಿಮಾನಿಗಳು ಖುಷಿಯಾಗಿದ್ದಾರೆ.
ರಶ್ಮಿಕಾ ಮತ್ತು ವಿಜಯ್ ಅವರ ಮದುವೆ ರಿಸೆಪ್ಷನ್ ವಿಡಿಯೋ
ಗಮನಸೆಳೆದ ರಶ್ಮಿಕಾ ಕಾಸ್ಟ್ಯೂಮ್
ಇನ್ನು, ರಿಸೆಪ್ಷನ್‌ನಲ್ಲಿ ಗಮನಸೆಳೆದ ಮತ್ತೊಂದು ಅಂಶ ಎಂದರೆ, ರಶ್ಮಿಕಾ ಅವರ ಕಾಸ್ಟ್ಯೂಮ್. ಹೌದು, ರಶ್ಮಿಕಾ ತಮ್ಮ ಮದುವೆಯ ರಿಸೆಪ್ಷನ್‌ಗಾಗಿ ಕಸ್ಟಮೈಸ್ಡ್ ಸಿಂಪಲ್ ಡಿಸೈನರ್ ಮೈಸೂರು ಸಿಲ್ಕ್ ಸೀರೆಯನ್ನು ಆಯ್ಕೆ ಮಾಡಿದ್ದರು. ಕೆಂಪು ವರ್ಣದ ಈ ಮೈಸೂರ್ ಸಿಲ್ಕ್ ಸೀರೆ ತಕ್ಷಣಕ್ಕೆ ಸಾಮಾನ್ಯವಾಗಿ ಕಂಡರೂ ಸಾಕಷ್ಟು ಡಿಟೇಲಿಂಗ್ ಸೂಕ್ಷ್ಮ ವಿನ್ಯಾಸವನ್ನು ಒಳಗೊಂಡಿದೆ. ಕಪ್ಪು ವರ್ಣದ ಮಲ್ಟಿ ಲೈನ್ಸ್ ಬಾರ್ಡರ್‌ಗೆ ಎಕ್ಸ್ಟ್ರಾ ಮಿನುಗುವ ಡಿಸೈನರ್ ಬಾರ್ಡರ್ ಅಳವಡಿಸಲಾಗಿದೆ. ಸೀರೆಯ ಬ್ಲೌಸ್ ಹೈ ನೆಕ್ ಹೊಂದಿದ್ದು, ಸಿಂಪಲ್ ಗೋಲ್ಡನ್ ಲೈನಿಂಗ್ ಒಳಗೊಂಡಿದೆ.
Rashmika Mandanna: ರಶ್ಮಿಕಾ-ವಿಜಯ್ ದೇವರಕೊಂಡ ಅರಿಶಿಣ ಶಾಸ್ತ್ರದ ಫೋಟೋಗಳಿವು!
ಬ್ಲೌಸ್‌ನ ಹಿಂಭಾಗದಲ್ಲಿ ಕರ್ನಾಟಕದ ಪ್ರತಿಷ್ಠೆಯ ಸಂಕೇತವಾದ ಗಂಡು-ಭೇರುಂಡ ಚಿಹ್ನೆ ಎಂಬ್ರಾಯ್ಡರಿ ಮೂಲಕ ಸಿಂಗರಿಸಲಾಗಿದೆ. ಜೊತಗೆ ಕೊಡವರ ಪ್ರತಿಷ್ಠೆಯ ಸಂಕೇತವಾದ ಕತ್ತಿಗಳನ್ನು ಡಿಸೈನ್ ಮಾಡಿರುವುದು ಬಹಳ ವಿಶೇಷವಾಗಿದೆ. ರಶ್ಮಿಕಾ ಎಷ್ಟೇ ದೊಡ್ಡ ಸ್ಟಾರ್ ನಟಿಯಾದರೂ ತಮ್ಮ ಮೂಲವನ್ನು ಮರೆತಿಲ್ಲ ಎಂದು ಫ್ಯಾನ್ಸ್ ಮುಕ್ತವಾಗಿ ಹೊಗಳಿದ್ದಾರೆ.