ಉದಯಪುರದಲ್ಲಿ (Udaipur) ಕೇವಲ ಆಪ್ತರು ಮತ್ತು ಕುಟುಂಬದರ ಸಮ್ಮುಖದಲ್ಲಿ ಮದುವೆ ಮಾಡಿಕೊಂಡ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ (Vijay Devarakonda) ಅವರು ಈಗ ಬಹಳ ಗ್ರ್ಯಾಂಡ್ ಆಗಿ ಹೈದರಾಬಾದ್‌ನಲ್ಲಿ ರಿಸೆಪ್ಷನ್ ಮಾಡಿಕೊಂಡಿದ್ದಾರೆ. ಈ ಸಮಾರಂಭಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಆಗಮಿಸಿ ಶುಭ ಹಾರೈಸಿದ್ದು, ರಶ್ಮಿಕಾ (Rashmika) ಕುಟುಂಬಸ್ಥರು ಕೊಡವ ಶೈಲಿಯ ಸೀರೆಯುಟ್ಟು ಗಮನ ಸೆಳೆದರು. ಟಾಲಿವುಡ್‌ನ ಹಲವು ಗಣ್ಯರು ಈ ಸಂಭ್ರಮಕ್ಕೆ ಸಾಕ್ಷಿಯಾದರು.
ಹೈದರಾಬಾದ್‌ನಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಮಾಡಿದ್ದಾರೆ. ಸಿನಿಮಾ, ರಾಜಕೀಯ, ಉದ್ಯಮ ಸೇರಿ ವಿವಿಧ ಕ್ಷೇತ್ರಗಳ ಗಣ್ಯರು ಈ ಸಮಾರಂಭಕ್ಕೆ ಸಾಕ್ಷಿಯಾಗಿದ್ದಾರೆ.
ಇದನ್ನೂ ಓದಿ: Breast Cancer : ಕ್ಯಾನ್ಸರ್ ಇರುವ ಬಗ್ಗೆ ಏಕಾಏಕಿ ಪೋಸ್ಟ್ ಮಾಡಿದ ಖ್ಯಾತ ನಟಿ
ಡಿಕೆ ಶಿವಕುಮಾರ್ ಟ್ವೀಟ್‌ನಲ್ಲಿ ಏನಿದೆ?
ಡಿಕೆ ಶಿವಕುಮಾರ್ ಟ್ವೀಟ್‌ನಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿವಾಹ ಆರತಕ್ಷತೆಯಲ್ಲಿ ಭಾಗವಹಿಸಲು ಮತ್ತು ವೈಯಕ್ತಿಕವಾಗಿ ದಂಪತಿಗಳಿಗೆ ನನ್ನ ಶುಭಾಶಯಗಳನ್ನು ತಿಳಿಸಲು ಸಂತೋಷವಾಗಿದೆ. ಅವರು ಈ ಹೊಸ ಅಧ್ಯಾಯವನ್ನು ಒಟ್ಟಿಗೆ ಪ್ರಾರಂಭಿಸುತ್ತಿರುವಾಗ ಅವರೆಲ್ಲರಿಗೂ ಸಂತೋಷ ಮತ್ತು ಒಗ್ಗಟ್ಟಿನ ಜೀವನವನ್ನು ಹಾರೈಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಎರಡೂ ಕುಟುಂಬದವರು ಜೊತೆಯಾಗಿ ಆರತಕ್ಷತೆ ಕಾರ್ಯಕ್ರಮ ಮಾಡಿದ್ದಾರೆ. ಕನ್ನಡ, ತಮಿಳು, ಹಿಂದಿ, ತೆಲುಗು ಮುಂತಾದ ಭಾಷೆಯ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಬಂದು ನವ ಜೋಡಿಗೆ ಶುಭ ಹಾರೈಸಿದ್ದಾರೆ. ನಾನಿ, ರಾಮ್ ಚರಣ್, ನಾಗಾರ್ಜುನ, ವೆಂಕಟೇಶ್, ಶರತ್ ಕುಮಾರ್ ಮುಂತಾದ ಕಲಾವಿದರು ಆರತಕ್ಷತೆಗೆ ಬಂದಿದ್ದಾರೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಫೇಮಸ್ ಆಗಿರುವ ಈ ಜೋಡಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಭದ್ರತೆಯ ದೃಷ್ಟಿಯಿಂದ ಕೇವಲ ಆಹ್ವಾನ ಇದ್ದರಿಗೆ ಮಾತ್ರ ಈ ಆರತಕ್ಷತೆಗೆ ಕಾರ್ಯಕ್ರಮಕ್ಕೆ ಎಂಟ್ರಿ ನೀಡಲಾಗಿದೆ. ಈಗಾಗಲೇ ಅಭಿಮಾನಿಗಳಿಗಾಗಿ ಹಲವು ಕಡೆಗಳಲ್ಲಿ ಅನ್ನದಾನ ಮತ್ತು ಸಿಹಿ ವಿತರಣೆ ಮಾಡಲಾಗಿದೆ. ಅಲ್ಲು ಅರ್ಜುನ್, ಸುಕುಮಾರ್, ಚಿರಂಜೀವಿ, ರವಿತೇಜ ಮುಂತಾದ ಸೆಲೆಬ್ರಿಟಿಗಳು ಬಂದು ನವಜೋಡಿಗೆ ವಿಶ್ ಮಾಡಿದ್ದಾರೆ.
ಇದನ್ನೂ ಓದಿ: Rashmika Reception: ಹೈದರಾಬಾದ್‌ನಲ್ಲಿ 'ವಿರೋಷ್' ಅದ್ಧೂರಿ ರಿಸೆಪ್ಷನ್; ಯಾರೆಲ್ಲಾ ಭಾಗಿ?
ಮುಂದಿನ ವಾರದಿಂದಲೇ ವಿಜಯ್ ಹಾಗೂ ರಶ್ಮಿಕಾ ತಮ್ಮ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ ಎನ್ನಲಾಗ್ತಿದೆ. 'ರಣಬಾಲಿ' ಚಿತ್ರದಲ್ಲಿ ರಶ್ಮಿಕಾ- ವಿಜಯ್ ಒಟ್ಟಿಗೆ ನಟಿಸುತ್ತಿದ್ದಾರೆ. ಮುಂದಿನ ಗುರುವಾರ ವಿಜಯ್ ಚಿತ್ರೀಕರಣಕ್ಕೆ ಹಾಜರಾಗುತ್ತಾರೆ ಎನ್ನಲಾಗ್ತಿದೆ.