ಮದುವೆಯಾದ 13 ಗಂಟೆಯಲ್ಲೇ ದಾಖಲೆ ಬರೆದ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಜೋಡಿ
Virosh Wedding: ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ರಾಜಸ್ಥಾನದ ಜೈಪುರದಲ್ಲಿ ಫೆಬ್ರವರಿ 26ರಂದು ಹಮ್ಮಿಕೊಂಡ ಅದ್ಧೂರಿ ವಿವಾಹ ಸಮಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಇವರ ಮದುವೆ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ದಾಖಲೆ ಬರೆದಿದೆ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆ. -
ಜೈಪುರ, ಫೆ. 27: ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ (Vijay Deverakonda) ರಾಜಸ್ಥಾನದ ಜೈಪುರದಲ್ಲಿ ಫೆಬ್ರವರಿ 26ರಂದು ಹಮ್ಮಿಕೊಂಡ ಅದ್ಧೂರಿ ವಿವಾಹ ಸಮಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ (Virosh Wedding). ಉದಯಪುರದ ಹೊಟೇಲ್‌ನಲ್ಲಿ ಆಯ್ದ ಗಣ್ಯರ ಸಮ್ಮುಖದಲ್ಲಿ ಮದುವೆ ವೈಭವಯುತವಾಗಿ ನೆರವೇರಿತು. ರಾಜರ ಕಾಲದ ಮದುವೆಯನ್ನು ನೆನಪಿಸುವ ಅಲಂಕಾರದಲ್ಲಿ ಇವರು ಸತಿ-ಪತಿಗಳಾದರು. ಬೆಳಗ್ಗೆ ತೆಲುಗು ಸಂಪ್ರದಾಯದಂತೆ ಮದುವೆ ನಡೆದರೆ ಸಂಜೆ ಕೊಡವ ಸಂಪ್ರದಾಯದಂತೆ ಆಚರಣೆ ನೆರವೇರಿತು. ಇದೀಗ ದಂಪತಿಯ ಮದುವೆ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದು, ದಾಖಲೆಯ ವೀವ್ಸ್ ಪಡೆದುಕೊಂಡಿದೆ.
ವಿರೋಶ್ ವೆಡ್ಡಿಂಗ್ ಹೆಸರಿನಲ್ಲಿ ನಡೆದ ಈ ಸಮಾರಂಭದಲ್ಲಿ ವಿಜಯ್ ಮತ್ತು ರಶ್ಮಿಕಾ ಸಂಪ್ರದಾಯಿಕ ಉಡುಗೆ ತೊಟ್ಟು, ಮೈತುಂಬ ಆಭರಣ ಧರಿಸಿ ಗಮನ ಸೆಳೆದರು. ಇಬ್ಬರೂ ತಮ್ಮ ಮದುವೆಯ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು, ಸೆಲೆಬ್ರಿಟಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ. ವಿಶೇಷ ಎಂದರೆ ಇವರ ಮದುವೆಯ ಫೋಟೊ ಇದೀಗ ದಾಖಲೆ ಬರೆದಿದೆ. ಬಾಲಿವುಡ್ ಸ್ಟಾರ್ ಜೋಡಿ ಸಿದ್ಧಾರ್ಥ್ ಮಲ್ಹೋತ್ರ-ಕಿಯಾರಾ ಅಡ್ವಾಣಿ ಮದುವೆ ಫೋಟೊಕ್ಕಿಂತಲೂ ಅಧಿಕ ವೀವ್ಸ್ ಪಡೆದುಕೊಂಡಿದೆ.
ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಂ ಪೋಸ್ಟ್:
ಯಾವೆಲ್ಲ ದಾಖಲೆ ಪುಡಿಪುಡಿ?
ಈ ಹಿಂದೆ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮ, ಸಿದ್ಧಾರ್ಥ್ ಮಲ್ಹೋತ್ರ-ಕಿಯಾರಾ ಅಡ್ವಾಣಿ, ವಿಕ್ಕಿ ಕೌಶಲ್-ಕತ್ರೀನಾ ಕೈಫ್ ಜೋಡಿಯ ಮದುವೆ ಪೋಸ್ಟ್ ಹೆಚ್ಚು ಲೈಕ್ಸ್ ಗಿಟ್ಟಿಸಿದ್ದವು. ಅದನ್ನೆಲ್ಲ ವಿರೋಶ್ ವೆಡ್ಡಿಂಗ್ ಮೀರಿದೆ. ರಶ್ಮಿಕಾ ಮಂದಣ್ಣ ಹಂಚಿಕೊಂಡ ಮದುವೆ ಫೋಟೊ 13 ಗಂಟೆಗಳಲ್ಲಿ 14.8 ಮಿಲಿಯನ್ (1.48 ಕೋಟಿ) ಲೈಕ್ಸ್ ಪಡೆದರೆ, ವಿಜಯ್ ದೇವರಕೊಂಡ ಅವರ ಪೋಸ್ಟ್ 12.5 (1.25 ಕೋಟಿ) ಲೈಕ್ಸ್ ಗಿಟ್ಟಿಸಿಕೊಂಡಿದೆ. ಈ ಹಿಂದೆ ಕಿಯಾರಾ ಅಡ್ವಾಣಿ ಹಂಚಿಕೊಂಡ ಮದುವೆಯ ಪೋಸ್ಟ್ 3 ವರ್ಷಗಳಲ್ಲಿ 15 ಮಿಲಿಯನ್ (1.5 ಕೋಟಿ) ಲೈಕ್ಸ್ ಗಿಟ್ಟಿಸಿದೆ. ಇದೀಗ ರಶ್ಮಿಕಾ ಪೋಸ್ಟ್ ಕೇವಲ 13 ಗಂಟೆಗಳಲ್ಲಿ ಈ ದಾಖಲೆಯ ಸನಿಹಕ್ಕೆ ಬಂದಿದೆ.
ಉದಯಪುರದಲ್ಲಿ ಕಾಣಿಸಿಕೊಂಡ ವಿಜಯ್-ರಶ್ಮಿಕಾ:
ಉದಯಪುರ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ವಿರೋಶ್
ಮದುವೆ ಬಳಿಕ ಇದೇ ಮೊದಲ ಬಾರಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಮದುವೆಯ ಮಾರನೇ ದಿನ ಶುಕ್ರವಾರ (ಫೆಬ್ರವರಿ 27) ನವದಂಪತಿ ಉದಯಪುರ ವಿಮಾನ ನಿಲ್ದಾಣದಲ್ಲಿ ಕ್ಯಾಮರಾ ಕಣ್ಣಿಗೆ ಬಿದ್ದರು. ಈ ವೇಳೆ ಇಬ್ಬರೂ ಕೈ ಮುಗಿದು ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದರು.
ವಿಜಯ್ ದೇವರಕೊಂಡ ತಾಳಿ ಕಟ್ಟುವ ವೇಳೆ ಕಣ್ತುಂಬಿಕೊಂಡ ರಶ್ಮಿಕಾ ಮಂದಣ್ಣ; ಇಲ್ಲಿದೆ ವಿರೋಶ್ ವಿವಾಹದ ಫೋಟೊಗಳು
ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ ಇದೀಗ ಮದುವೆಯ ಮುದ್ರೆಯೊತ್ತಿದೆ. ಸದ್ಯದಲ್ಲೇ ಹೈದರಾಬಾದ್ ಮತ್ತು ವಿರಾಜಪೇಟೆಯಲ್ಲಿ ಅದ್ಧೂರಿಯಾಗಿ ರಿಸೆಪ್ಶನ್ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಮದುವೆಗೆ ಆಪ್ತರು, ಹತ್ತಿರ ಸಂಬಂಧಿಕರಿಗಷ್ಟೇ ಅಹ್ವಾನವಿತ್ತು. ಹೀಗಾಗಿ ಅದ್ಧೂರಿ ರಿಸೆಪ್ಶನ್ ಆಯೋಜಿಸಲು ಈ ಜೋಡಿ ಮುಂದಾಗಿದೆ. ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ರಿಸೆಪ್ಶನ್ ನಡೆದರೆ ವಿರಾಜಪೇಟೆಯ ದಿನಾಂಕ ನಿಗದಿಯಾಗಿಲ್ಲ. ಈಗಾಗಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತಿತರ ಗಣ್ಯರಿಗೆ ಜೋಡಿ ಆಹ್ವಾನ ಪತ್ರಿಕೆ ನೀಡಿದೆ. ವಿಶೇಷ ಎಂದರೆ ಇವರ ಮದುವೆಗೆ ನರೇಂದ್ರ ಮೋದಿ ಶುಭ ಹಾರೈಸಿದ್ದರು.