Photos: ʻನೀವು ಬದ್ರರ್ ಇನ್ ಲಾ ಅಲ್ಲ, ನನ್ನ ನಿಜವಾದ ಬ್ರದರ್ʼ; ವಿಜಯ್ ದೇವರಕೊಂಡಗೆ ಅಣ್ಣನ ಸ್ಥಾನ ನೀಡಿದ ರಶ್ಮಿಕಾ ಸಹೋದರಿ ಶಿಮನ್
ನಟಿ ರಶ್ಮಿಕಾ ಮಂದಣ್ಣ ಹಾಗೂ ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಹಸೆಮಣೆ ಏರುವ ಮೂಲಕ ತಮ್ಮ ದಾಂಪತ್ಯ ಜೀವನಕ್ಕೆ ಅದ್ಧೂರಿ ಮುನ್ನುಡಿ ಬರೆದಿದ್ದಾರೆ. ಫೆಬ್ರವರಿ 26 ರಂದು ರಾಜಸ್ಥಾನದ ಉದಯ್‌ಪುರದಲ್ಲಿ ಈ ತಾರಾ ಜೋಡಿಯ ವಿವಾಹ ಮಹೋತ್ಸವ ಅತ್ಯಂತ ವೈಭವದಿಂದ ಜರುಗಿತು. ಈ ಅದ್ಧೂರಿ ಮದುವೆಯು ರಾಜಸ್ಥಾನದ ಉದಯ್‌ಪುರದಲ್ಲಿ ನಡೆದಿದ್ದರೂ, ರಶ್ಮಿಕಾ ಅವರು ತಮ್ಮ ಮೂಲನೆಲೆಯಾದ ಕೊಡಗಿನ ಸಂಪ್ರದಾಯವನ್ನು ಮರೆತಿರಲಿಲ್ಲ. ಕೊಡವ ಸಂಪ್ರದಾಯದಂತೆ ಮದುವೆಯ ಶಾಸ್ತ್ರಗಳು ರಶ್ಮಿಕಾ ಅವರ ತವರಿನಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಿದ್ದವು. ಸಂಗೀತ, ಹಳದಿ ಶಾಸ್ತ್ರ ಸೇರಿದಂತೆ ಪ್ರತಿಯೊಂದು ಕಾರ್ಯಕ್ರಮದಲ್ಲೂ ಕುಟುಂಬಸ್ಥರು ಮತ್ತು ಆತ್ಮೀಯರು ಸಂಭ್ರಮದಿಂದ ಭಾಗಿಯಾಗಿದ್ದರು. ಇದೀಗ ಈ ಮದುವೆಯ ಅಪರೂಪದ ಫೋಟೋಗಳನ್ನು ರಶ್ಮಿಕಾ ತಂಗಿ ಶಿಮನ್ ಮಂದಣ್ಣ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಅಕ್ಕ ಹಾಗೂ ಬಾವನ ಬಗ್ಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
"ಎಲ್ಲವೂ ಎಷ್ಟು ಬೇಗ ನೆರವೇರಿತು ಎಂದು ನಂಬಲು ಸಾಧ್ಯವಾಗುತ್ತಿಲ್ಲ. ಸಂಗೀತ, ಹಳದಿ ಶಾಸ್ತ್ರ ಮತ್ತು ಮದುವೆಯ ಸಂಭ್ರಮದ ನಡುವೆ ದಿನಗಳು ಕಳೆದಿದ್ದೇ ಗೊತ್ತಾಗಲಿಲ್ಲ" ಎಂದು ಶಿಮನ್ ಬರೆದುಕೊಂಡಿದ್ದಾರೆ.
"ಮದುವೆಯ ಪ್ರತಿ ಹಂತದಲ್ಲೂ ಭಾಗಿಯಾಗಲು ನಾನು ಶಾಲೆಯನ್ನೇ ಬಂಕ್ ಮಾಡಿದ್ದೆ" ಎಂದ ಅಕ್ಕನ ವಿವಾಹದ ಖುಷಿಯನ್ನು ಹಂಚಿಕೊಂಡಿದ್ದಾರೆ ಶಿಮನ್.
ಸೋಶಿಯಲ್ ಮೀಡಿಯಾದಲ್ಲಿ ಮಂದಣ್ಣ ಸಹೋದರಿಯರ ಫೋಟೋಗಳು ಭಾರಿ ವೈರಲ್ ಆಗುತ್ತಿವೆ.
"ವಿಜಯ್ ದೇವರಕೊಂಡ ಈಗ ಅಧಿಕೃತವಾಗಿ ನನ್ನ ಬಾವ (Brother-in-law). ಆದರೆ ಅವರು ನನಗೆ ನಿಜವಾದ ಅಣ್ಣನಂತೆಯೇ (Brother) ಕಾಣುತ್ತಾರೆ" ಎಂದು ಶಿಮನ್ ಹೇಳಿಕೊಂಡಿದ್ದಾರೆ.
"ನಿಮ್ಮಂತಹ ಅಣ್ಣನನ್ನು ಪಡೆಯಬೇಕು ಎಂಬುದು ನನ್ನ ಕನಸಾಗಿತ್ತು. ಈ ಸ್ವೀಟ್ ಮೆಮೊರೀಸ್ ಹಾಗೂ ಭಾವುಕ ಕ್ಷಣಗಳನ್ನು ನಾನು ಜೀವನದಲ್ಲಿ ಎಂದಿಗೂ ಮರೆಯುವುದಿಲ್ಲ" ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ ಶಿಮನ್.
ಅಕ್ಕ ರಶ್ಮಿಕಾ ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಿರುವ ಶಿಮನ್ ಮಂದಣ್ಣ.
ರಶ್ಮಿಕಾ ವಿಜಯ್ ಮದುವೆಯ ಅರಿಶಿನ ಶಾಸ್ತ್ರದಲ್ಲಿ ಶಿಮನ್ ಕಂಡಿದ್ದು ಹೀಗೆ.
ರಶ್ಮಿಕಾ ಮಂದಣ್ಣ ಹಾಗೂ ಶಿಮನ್ ಮಂದಣ್ಣ ನಡುವೆ ಸುಮಾರು 16 ವರ್ಷಗಳ ವಯಸ್ಸಿನ ಅಂತರವಿದೆ