ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Ravin Tandon: ಪುತ್ರಿ ಜೊತೆ ರವೀನಾ ಟಂಡನ್ ಟೆಂಪಲ್‌ ರನ್‌- 12 ಜ್ಯೋತಿರ್ಲಿಂಗಗಳ ದರ್ಶನ ʻರಮಿಕಾ ಸೇನ್‌ʼ

ಆಧ್ಯಾತ್ಮಿಕತೆ ಹೆಚ್ಚು ಪ್ರಾಮುಖ್ಯತೆ ನೀಡುವ, ಶಿವಭಕ್ತೆಯಾಗಿರುವ ರಾಶಾ 11ನೇ ಜ್ಯೋತಿರ್ಲಿಂಗ ದರ್ಶನವನ್ನು ಈಗಾಗಲೇ ಮಾಡಿದ್ದಾರೆ. ಇದೀಗ 19ನೇ ವಯಸ್ಸಿಗೆ ತಾಯಿ ರವೀನಾ ಟಂಡನ್ ಜೊತೆ 12ನೇ ಜ್ಯೋತಿರ್ಲಿಂಗ ವನ್ನು ದ್ವಾರಕಾದ ನಾಗೇಶ್ವರ್ ನಲ್ಲಿ ದರ್ಶನ ಪಡೆದಿದ್ದಾರೆ. ಇದು ತನ್ನ ಬಹು ದಿನಗಳ ಕನಸಾಗಿದ್ದು ಈಗ ನೆರವೇರಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ಖುಷಿ ಹಂಚಿಕೊಂಡಿದ್ದಾರೆ.

12 ಜ್ಯೋತಿರ್ಲಿಂಗಗಳ ದರ್ಶನ ಪಡೆದ ರವೀನಾ ಟಂಡನ್!

Rasha Thadani visit

Profile Pushpa Kumari Jan 30, 2025 9:44 PM

ಗಾಂಧಿನಗರ: ನಟಿ ರವೀನಾ ಟಂಡನ್‌ (Raveena Tandon) ಮತ್ತು ಅವರ ಮಗಳು ರಾಶಾ ತಡಾನಿ (Rasha Thadani) ಆಗಾಗ ತೀರ್ಥಯಾತ್ರೆ ಕೈಗೊಳ್ಳುತ್ತಾರೆ. ಇತ್ತೀಚೆಗೆ ಇವರಿಬ್ಬರು ದ್ವಾರಕಾದ ನಾಗೇಶ್ವರ 12ನೇ ಜ್ಯೋತಿರ್ಲಿಂಗ ದೇವಸ್ಥಾನಕ್ಕೆ ಪ್ರಯಾಣ ಬೆಳೆಸಿದ್ದಾರೆ. ಈ ಭೇಟಿಯ ಸಂದರ್ಭದ ಫೋಟೊವನ್ನು ಇವರಿಬ್ಬರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಆಧ್ಯಾತ್ಮಿಕತೆ ಹೆಚ್ಚು ಪ್ರಾಮುಖ್ಯತೆ ನೀಡುವ, ಶಿವ ಭಕ್ತೆಯಾಗಿರುವ ರಾಶಾ 11ನೇ ಜ್ಯೋತಿರ್ಲಿಂಗ ದರ್ಶನವನ್ನು ಈಗಾಗಲೇ ಮಾಡಿದ್ದಾರೆ. ಇದೀಗ 19ನೇ ವಯಸ್ಸಿಗೆ ತಾಯಿ ರವೀನಾ ಟಂಡನ್ ಜತೆ 12ನೇ ಜ್ಯೋತಿ ರ್ಲಿಂಗವನ್ನು ದ್ವಾರಕಾದ ನಾಗೇಶ್ವರ್‌ನಲ್ಲಿ ದರ್ಶನ ಪಡೆದಿದ್ದಾರೆ. ಇದು ತನ್ನ ಬಹುದಿನಗಳ ಕನಸಾಗಿದ್ದು, ಈಗ ನೆರವೇರಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ.

ರವೀನಾ ಟಂಡನ್ ಮತ್ತು ರಾಶಾ ತಡಾನಿ ಅವರು ನಾಗೇಶ್ವರ ದೇವಾಲಯದಲ್ಲಿ‌ ನಿಂತು ಭಕ್ತಿಯಿಂದ ಪ್ರಾರ್ಥಿಸಿದ್ದಾರೆ. ಇನ್ನೊಂದು ಫೋಟೊದಲ್ಲಿ ಗರ್ಭಗುಡಿಯೊಳಗೆ ತಾಯಿ ಮಗಳು ಇಬ್ಬರು ಪ್ರಾರ್ಥಿಸುತ್ತಿರುವುದು ಕಂಡು ಬಂದಿದೆ. ಫೋಟೊದಲ್ಲಿ ಅಮ್ಮ ಮಗಳು ಇಬ್ಬರು ಸಿಂಪಲ್ ಕುರ್ತ ಧರಿಸಿದ್ದು ಸಾಂಪ್ರದಾಯಿಕ ಉಡುಗೆಯಲ್ಲಿ ವಿಗ್ರಹಗಳ ಮುಂದೆ ಪೋಸ್ ಕೊಟ್ಟಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ರಾಶಾ ತನ್ನ ಕೈಯಲ್ಲಿರುವ ಕಪ್ಪು ದಾರದ ಹಿಂದಿನ ಅಸಲಿ ಸತ್ಯ ಹೊರ ಹಾಕಿದ್ದು‌, ತಮ್ಮ ಆಧ್ಯಾತ್ಮಿಕ ಪ್ರಯಾಣದ ಬಗ್ಗೆ ಹೇಳಿಕೊಂಡಿದ್ದಾರೆ. ರಾಶಾ ತಮ್ಮ ಮಣಿಕಟ್ಟಿನ ಸುತ್ತ ಸುತ್ತಿದ ಕಪ್ಪು ದಾರಗಳು ಮತ್ತು ಅವುಗಳ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಮಣಿಕಟ್ಟಿನ ಪ್ರತಿಯೊಂದು ದಾರವು ತಾವು ಭೇಟಿ ನೀಡಿದ ಜ್ಯೋತಿರ್ಲಿಂಗದ್ದು ಆಗಿದ್ದು, ಇದು ತನಗೆ ಇರುವಂತಹ ಆಧ್ಯಾತ್ಮಿಕ ನಂಬಿಕೆ ಎಂದು ಹೇಳಿಕೊಂಡಿದ್ದಾರೆ..

ಇದನ್ನು ಓದಿ: Share Cinema Teaser: ಕನ್ನಡತಿ ಖ್ಯಾತಿ ಕಿರಣ್‌ ರಾಜ್‌ ನಟನೆಯ ʼಶೇರ್‌ʼ ಸಿನಿಮಾದ ಟೀಸರ್‌ ರಿಲೀಸ್‌

ಈಗಾಗಲೇ ರಶಾ ತಡಾನಿ ಅವರು ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದು, ಇತ್ತೀಚೆಗೆ ತೆರೆಕಂಡ ʼಆಜಾದ್ʼ ಸಿನಿಮಾದ ಮೂಲಕ ಪ್ರಖ್ಯಾತಿ ಗಳಿಸಿದ್ದಾರೆ. ಅಭಿಷೇಕ್ ಕಪೂರ್ ನಿರ್ದೇಶನದ ಚಿತ್ರ ಇದಾಗಿದ್ದು, ಅಜಯ್ ದೇವಗನ್, ಡಯಾನಾ ಪೆಂಟಿ ಮತ್ತು ಅಜಯ್ ದೇವಗನ್ ಅವರ ಸೋದರಳಿಯ ಅಮನ್ ದೇವಗನ್ ನಟಿಸಿದ್ದಾರೆ. ನಟಿ ಮೊದಲ ಸಿನಿಮಾದಲ್ಲಿಯೇ ಗಮನ ಸೆಳೆದಿದ್ದು, ಅವರ ಅಭಿನಯಕ್ಕೆ ಅಬಿಮಾನಿಗಳು ಫಿದಾ ಆಗಿದ್ದಾರೆ.