ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಟ ದರ್ಶನ್‌ ಜೊತೆ ಗೆಳೆತನ ಶುರುವಾಗಿದ್ದು ಹೇಗೆ? ಕೋರ್ಟ್‌ ಮುಂದೆ ಎಲ್ಲವನ್ನು ತಿಳಿಸಿದ ʻಮಾಫಿ ಸಾಕ್ಷಿʼ ಪ್ರದೋಷ್‌!

Darshan case updates: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಪ್ರದೋಷ್ ನ್ಯಾಯಾಲಯದಲ್ಲಿ ಸತತ ಮೂರು ಗಂಟೆಗಳ ಕಾಲ ಸಾಕ್ಷ್ಯ ನುಡಿದಿದ್ದಾರೆ. 2003ರಿಂದ ನಟ ದರ್ಶನ್ ಜೊತೆಗಿನ ಸ್ನೇಹ ಹಾಗೂ ಘಟನೆ ನಡೆದ ದಿನದ ಪಾರ್ಟಿ ವಿವರಗಳನ್ನು ಬಿಚ್ಚಿಟ್ಟಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಫಿ ಸಾಕ್ಷಿಯಾಗಿರುವ 14ನೇ ಆರೋಪಿ ಪ್ರದೋಷ್ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಸೋಮವಾರದಿಂದ ಆರಂಭಗೊಂಡಿದೆ. ಬೆಂಗಳೂರಿನ 59ನೇ ಸಿಸಿಎಚ್ ಕೋರ್ಟ್ ನ್ಯಾಯಾಲಯದ ಮುಂದೆ ಹಾಜರಾಗಿದ್ದ ಪ್ರದೋಷ್ ಸತತ ಮೂರು ಗಂಟೆಗಳ ಕಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ತನೆಗೆ ಏನೆಲ್ಲಾ ಗೊತ್ತಿದೆಯೋ ಅದನ್ನೆಲ್ಲವನ್ನೂ ಹೇಳಿಕೆ ದಾಖಲಿಸಿದ್ದಾನೆ.

ದರ್ಶನ್ ಪರಿಚಯದ ಬಗ್ಗೆ ಪ್ರದೋಷ್ ಹೇಳಿದ್ದೇನು?

"2003ರಲ್ಲಿ ಕ್ರಿಕೆಟ್ ಆಡಲು ಹೋಗುತ್ತಿದ್ದ ಸಂದರ್ಭದಲ್ಲಿ ದರ್ಶನ್ ಅವರ ಪರಿಚಯವಾಯಿತು. ಕಾಲಕ್ರಮೇಣ ಇಬ್ಬರೂ ಆತ್ಮೀಯ ಸ್ನೇಹಿತರಾದರು. ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದರಿಂದ ಶನಿವಾರ ಮತ್ತು ಭಾನುವಾರ ರಜೆ ಇರುತ್ತದೆ. ಈ ವೇಳೆ ದರ್ಶನ್ ಅವರನ್ನು ಭೇಟಿಯಾಗುತ್ತಿದ್ದೆ. ಕಾರ್ಯಕ್ರಮಗಳಿದ್ದಾಗ ಅವರ ಮನೆಗೂ ಹೋಗುತ್ತಿದ್ದೆ. 2024ರ ಜೂನ್ 8ರಂದು ಶನಿವಾರ ರಜೆ ಇದ್ದ ಕಾರಣ ಗಿರಿನಗರದ ಮನೆಯಿಂದ ಬೈಕ್‌ನಲ್ಲಿ ದರ್ಶನ್ ಅವರ ಐಡಿಯಲ್ ಹೋಮ್ಸ್‌ನ ಮನೆಗೆ ತೆರಳಿದ್ದೆ. ಆಗ ದರ್ಶನ್ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದರು. ಅವರ ತರಬೇತುದಾರ ಹೇಮಂತ್ ಕೂಡ ಅಲ್ಲಿದ್ದರು" ಎಂದು ಪ್ರದೋಷ್‌ ಹೇಳಿದ್ದಾರೆ.

ದರ್ಶನ್ ಒತ್ತಾಯದಿಂದ ಪಾರ್ಟಿಗೆ ತೆರಳಲು ಒಪ್ಪಿಕೊಂಡೆ

"ದರ್ಶನ್ ಅವರನ್ನು ಭೇಟಿಯಾಗಿ ಕುಶಲೋಪರಿ ವಿಚಾರಿಸಿದ ಬಳಿಕ ಅವರ ಶೂಟಿಂಗ್ ಬಗ್ಗೆ ಸುಮಾರು 15 ನಿಮಿಷ ಮಾತನಾಡಿದ್ದೆ. ಮಗಳನ್ನು ಸ್ವಿಮ್ಮಿಂಗ್‌ಗೆ ಕರೆದು ಕೊಂಡು ಹೋಗಬೇಕಿರುವುದರಿಂದ ಮನೆಗೆ ತೆರಳುವುದಾಗಿ ತಿಳಿಸಿದ್ದೆ. ಆದರೆ, ಮಧ್ಯಾಹ್ನ ವಿನಯ್ ಅವರ ಸ್ಟೋನಿ ಬ್ರೂಕ್‌ನಲ್ಲಿ ಸಣ್ಣ ಪಾರ್ಟಿ ಇದೆ, ಬರುವಂತೆ ದರ್ಶನ್ ಒತ್ತಾಯಿಸಿದರು. ನಾನು ಸುಸ್ತಾಗಿದ್ದೇನೆ, ಬರಲು ಸಾಧ್ಯವಿಲ್ಲ ಎಂದು ಹೇಳಿದರೂ ದರ್ಶನ್ ಒತ್ತಾಯಿಸಿದ ಹಿನ್ನೆಲೆಯಲ್ಲಿ ಪಾರ್ಟಿಗೆ ತೆರಳಲು ಒಪ್ಪಿಕೊಂಡೆ" ಎಂದು ಪ್ರದೋಷ್‌ ಹೇಳಿದ್ದಾರೆ.

Actor Darshan: ಸವಲತ್ತು ಕೋರಿದ ದರ್ಶನ್‌ ಅರ್ಜಿ 9ಕ್ಕೆ ಮುಂದೂಡಿಕೆ, ʼಉಮೇಶ್‌ ರೆಡ್ಡಿಗೆ ಕೊಟ್ಟ ಸೌಲಭ್ಯ ದರ್ಶನ್‌ಗೆ ಏಕಿಲ್ಲ?ʼ ಎಂದ ವಕೀಲರು

"ನಂತರ ಮನೆಗೆ ತೆರಳಿ ಬಟ್ಟೆ ಬದಲಿಸಿಕೊಂಡು ಸ್ಕಾರ್ಪಿಯೋ ಕಾರಿನಲ್ಲಿ ದರ್ಶನ್ ಅವರ ಮನೆಗೆ ಮಧ್ಯಾಹ್ನ ಸುಮಾರು 12.30ಕ್ಕೆ ಬಂದೆ. ನಟ ದರ್ಶನ್ ಮನೆಯಿಂದ ನಾಗರಾಜ್ ಕೂಡ ಕಾರಿನಲ್ಲಿ ಬಂದರು. ಅಲ್ಲಿಂದ ನಗರದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ, ಬಳಿಕ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ಗೆ ತೆರಳಿದ್ದೆವು" ಎಂದು ತಿಳಿಸಿದ್ದಾರೆ.

ಪ್ರದೋಷ್ ನೀಡಿರುವ ಸುದೀರ್ಘ ಹೇಳಿಕೆಯನ್ನು ಪ್ರಿಂಟ್‌ಔಟ್ ತೆಗೆದು, ಅದಕ್ಕೆ ಸಹಿ ಪಡೆಯುವ ಹಿನ್ನೆಲೆಯಲ್ಲಿ ಹಾಗೂ ಎಸ್‌ಪಿಪಿ ಅವರ ಮನವಿಯ ಮೇರೆಗೆ ವಿಚಾರಣೆಯನ್ನು ಮಂಗಳವಾರಕ್ಕೆ (ಸೆ.29) ಮುಂದೂಡಲಾಗಿತ್ತು. ಇಂದು ಪುನಃ ಪ್ರದೋಷ್‌ ಸಾಕ್ಷಿ ಹೇಳಲಿದ್ದಾರೆ.

ವಿಡಿಯೋ ಕಾನ್ಸರೆನ್ಸ್‌ನಲ್ಲಿ ಭಾಗಿ

ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸುವ ಸಂದರ್ಭದಲ್ಲಿ ಪ್ರಕರಣದ ಮತ್ತೊಬ್ಬ ಆರೋಪಿ ಪವಿತ್ರಾ ಗೌಡ ಕಣ್ಣೀರು ಹಾಕಿದ್ದಾರೆ ಎಂದು ತಿಳಿದುಬಂದಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಯಲ್ಲಿ ಭಾಗಿಯಾಗಿದ್ದ ಪವಿತ್ರಾ ಗೌಡ ನಿರಂತರವಾಗಿ ಕಣ್ಣೀರು ಹಾಕುತ್ತಿದ್ದರು. ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್ ಕೂಡ ಪ್ರದೋಷ್ ಹೇಳಿಕೆ ದಾಖಲಿಸುವ ಸಂದರ್ಭದಲ್ಲಿ ಮೌನವಾಗಿದ್ದರು ಎನ್ನಲಾಗಿದೆ. ಪ್ರದೋಷ್ ನೀಡುತ್ತಿದ್ದ ಹೇಳಿಕೆ ಕೇಳಿಸಿಕೊಂಡ ಬಳಿಕ ದರ್ಶನ್ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಜಾರಿದ್ದರು.