ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rishab Shetty: ರಿಷಬ್‌ ಶೆಟ್ಟಿ ವಿರುದ್ಧ ದೈವರಾಧಕರ ತೀವ್ರ ಆಕ್ರೋಶ; ಹರಕೆ ಕೋಲ‌, ನರ್ತಕನ ನಡೆ ಬಗ್ಗೆ ಹೇಳಿದ್ದೇನು?

Kantara: ‘ಕಾಂತಾರ: ಚಾಪ್ಟರ್ 1’ ಸಕ್ಸೆಸ್‌ ಆದ ಬಳಿಕ ತಂಡದ ಜೊತೆ ಮಂಗಳೂರಿಗೆ ತೆರಳಿ ಇತ್ತೀಚೆಗೆ ಹರಕೆ ಕೋಲ ಮಾಡಿಸಿದ್ದರು ರಿಷಬ್‌ ಶೆಟ್ಟಿ. ಕೋಲದ ವೇಳೆ ದೈವ ನರ್ತಕ ರಿಷಬ್ ಶೆಟ್ಟಿ ಜೊತೆಗೆ ವರ್ತಿಸಿದ ರೀತಿ ವಿರುದ್ಧ ಟೀಕೆ ವ್ಯಕ್ತವಾಗಿತ್ತು. ದೈವರಾಧಕ ತಮ್ಮಣ್ಣ ಶೆಟ್ಟಿ ಮಾಧ್ಯಮವೊಂದರಲ್ಲಿ, ಇತ್ತೀಚೆಗೆ ನಡೆದಿದ್ದು ದೈವರಾಧನೆಯ ನಿಯಮಕ್ಕೆ ವಿರುದ್ಧವಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಹರಕೆ ನೀಡುವುದುಕ್ಕೂ ಅದರದ್ದೆ ಆದ ಕಟ್ಟುಪಾಡುಗಳಿವೆ. ಹರಕೆಯ ನೇಮ ಅಂತಾ ಇಲ್ಲ. ಧರ್ಮ ನೇಮ ನೀಡುವ ಕ್ರಮ ಇದೆ ಎಂದು ಹೇಳಿದ್ದಾರೆ.

ರಿಷಬ್‌ ಶೆಟ್ಟಿ

ಮಂಗಳೂರು: ‘ಕಾಂತಾರ: ಚಾಪ್ಟರ್ 1’ ಹಿಟ್ (Kantara Chapter 1) ಆದ ಬಳಿಕ ತಂಡದ ಜೊತೆ ಮಂಗಳೂರಿಗೆ ತೆರಳಿ ಇತ್ತೀಚೆಗೆ ಹರಕೆ ಕೋಲ ಮಾಡಿಸಿದ್ದರು ರಿಷಬ್‌ ಶೆಟ್ಟಿ. ಕೋಲದ ವೇಳೆ ದೈವ ನರ್ತಕ ರಿಷಬ್ ಶೆಟ್ಟಿ (Rishab Shetty) ಜೊತೆಗೆ ವರ್ತಿಸಿದ ರೀತಿ ವಿರುದ್ಧ ಟೀಕೆ ವ್ಯಕ್ತವಾಗಿತ್ತು. ದೈವರಾಧಕ ತಮ್ಮಣ್ಣ ಶೆಟ್ಟಿ ಮಾಧ್ಯಮವೊಂದರಲ್ಲಿ, ಇತ್ತೀಚೆಗೆ ನಡೆದಿದ್ದು ದೈವರಾಧನೆಯ ನಿಯಮಕ್ಕೆ ವಿರುದ್ಧವಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ದೈವರಾಧಕ ತಮ್ಮಣ್ಣ ಶೆಟ್ಟಿ (Tammanna Shetty) ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನಲ್ಲಿ ತಮ್ಮಣ್ಣ ಶೆಟ್ಟಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು ಹೀಗೆ, ʻಕಾಂತಾರದಿಂದ ದೈವಗಳು ಬೀದಿಗೆ ಬಂದಿದೆ. ಈಗ ಹರಕೆಯ ನೇಮೋತ್ಸವದಿಂದ ದೈವರಾಧನೆ ಸಂಪೂರ್ಣ ಮುಗಿತು ಎಂಬಷ್ಟರ ಮಟ್ಟಿಗೆ ಬಂದಿದೆ. ಹರಕೆ ನೀಡುವುದುಕ್ಕೂ ಅದರದ್ದೆ ಆದ ಕಟ್ಟುಪಾಡುಗಳಿವೆ. ಹರಕೆಯ ನೇಮ ಅಂತಾ ಇಲ್ಲ. ಧರ್ಮ ನೇಮ ನೀಡುವ ಕ್ರಮ ಇದೆ. ಕಾಲಾವದಿ ನೇಮ‌ ಕಾಲಾವದಿ ನಡಾವಳಿ‌ ಇರುವಂತದ್ದು.ಮೊನ್ನೆ ಮಾಡಿರೋದು‌ ದೈವರಾಧನೆಯ ನಿಯಮಕ್ಕೆ ವಿರುದ್ಧ. ರಿಷಬ್ ಶೆಟ್ಟಿ ಗೆ ಡೇಟ್ ಇದೆ ಎಂದು ಕದ್ರಿ ಮಂಜುನಾಥನನ್ನು ಬದಿಗೆ ಬಿಟ್ಟು ಇವರು ನೇಮ ಮಾಡಿದ್ದಾರೆ.ʼ ಎಂದಿದ್ದಾರೆ.

ವೈರಲ್‌ ವಿಡಿಯೋ



ಇದನ್ನೂ ಓದಿ: Rishab Shetty: ರಿಷಬ್ ದಂಪತಿಗೆ ಪಂಜುರ್ಲಿ ದೈವದ ಅಭಯ! ಹರಕೆ ತೀರಿಸಿದ ನಟ

ಬಟ್ಟೆಗಳೆಲ್ಲಾ ದೈವರಾಧನೆಗೆ ವಿರುದ್ಧ

ʻನರ್ತಕ ಹಾಕಿದ ಬಟ್ಟೆಗಳೆಲ್ಲಾ ದೈವರಾಧನೆಗೆ ವಿರುದ್ಧ. ದೈವ ಕಡ್ತಳೆಯನ್ನು ತಲೆಗೆ ಹೊಡೆದುಕೊಳ್ಳುವುದಿಲ್ಲ. ತಟ್ಟೆಯನ್ನು ಹೊಡೆದುಕೊಳ್ಳುವುದಕ್ಕಿಲ್ಲ. ಪಲ್ಟಿ ಹೊಡೆಯುವ ದೈವಗಳೆ ಬೇರೆ ಇದೆ. ಅಲ್ಲಿ ಮೊನ್ನೆ ನಡೆದಿರುವುದೆಲ್ಲಾ ದೈವರಾಧನೆಯ ನಿಯಮಕ್ಕೆ ವಿರುದ್ಧವಾಗಿದೆ. ಇದನ್ನು ನೋಡಿದವರು ಏನು ತಿಳಿದುಕೊಳ್ಳಬಹುದು. ಮುಂದೆ ಅತೀದೊಡ್ಡ ಬಿಲ್ ಇವರ ಕೈಗೆ ಸಿಗುತ್ತದೆ. ಮುಂದಿನ ದಿನ‌ ಭಾರಿ‌ ದೊಡ್ಡ ಬೆಲೆ ತೆರಬೇಕಾಗುತ್ತದೆ. ಜನರನ್ನು ಮೆಚ್ಚಿಸಲು ಮೋಸ ಮಾಡಬೇಡಿ. ರಿಷಬ್ ಶೆಟ್ಟಿ ಸಿನಿಮಾ ಮಾಡಿದ ಒಬ್ಬ ವ್ಯಾಪಾರಿ. ರಿಷಬ್ ಶೆಟ್ಟಿಯ ಕಾಲ ಬುಡದಲ್ಲಿ ದೈವ ಹೇಗೆ ಬೀಳುತ್ತೆ. ಈ ದೈವ ನರ್ತಕನೇ ದೈವರಾಧನೆಯ‌ ಅಸ್ಮಿತೆಯನ್ನು ರಿಷಬ್ ಶೆಟ್ಟಿಗೆ ಮಾರಾಟ ಮಾಡಿದ್ದು.ದೈವಕ್ಕೂ ರಿಷಬ್ ಶೆಟ್ಟಿಗೂ ಏನು ಸಂಬಂಧ ಇದೆʼ ಇದೆ ಎಂದಿದ್ದಾರೆ.

ಯಾವ ದೈವವೂ ಮುಟ್ಟಲ್ಲ

ʻಶರ್ಟ್ ಹಾಕಿದವರನ್ನು‌ ಯಾವ ದೈವವೂ ಮುಟ್ಟಲ್ಲ. ಹೊರಳಾಡಿ, ಬಕೇಟ್ ಹಿಡಿದು ಯಾರನ್ನು ಮಾತನಾಡಲ್ಲ. ಹೊರಳಾಟ, ಮುದ್ದು ಮಾಡೋದು ಎಲ್ಲಾ ಇಲ್ಲ. 20 ವರ್ಷದಿಂದ ದೈವರಾಧನೆಯನ್ನು ವ್ಯಾಪಾರ ಮಾಡಿ ಆಗಿದೆ. ಜನ‌ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಇದೆಲ್ಲಾ ದೈವ ಮೆಚ್ಚುವ ಕೆಲಸವಲ್ಲ. ನಾಟಕಗಳೆಲ್ಲಾ ಇನ್ನು ಕೊನೆಯಾಗುತ್ತೆ. ಭಾರಿ‌ ದೊಡ್ಡ ಗಂಡಾಂತರದ ಕೆಲಸ ಆಗಿದೆ. ರಿಷಬ್ ಶೆಟ್ಟಿ ಹರಕೆ ಕೊಟ್ಟಿದಲ್ಲ ದೊಡ್ಡ ಹೂತ ತೆಗೆದುಕೊಂಡು ಹೋಗಿದ್ದಾರೆ. ದೈವರಾಧನೆಯಲ್ಲಿ ನಾಟಕ ಇಲ್ಲ.

ಇದನ್ನೂ ಓದಿ: Kantara Chapter 1: ಚಾವುಂಡಿ ದೈವಕ್ಕೆ 'ದೆವ್ವ' ಎಂದು ಕರೆದ ರಣವೀರ್‌ ಸಿಂಗ್‌; ರಿಷಬ್‌ ಶೆಟ್ಟಿ ಎದುರಲ್ಲೇ ಬಾಲಿವುಡ್‌ ನಟನಿಂದ ಇದೆಂಥ ಮಾತು?

ಈ ದೈವ ನರ್ತಕ ಕಾಂತಾರದ ಮೊದಲಿನಿಂದಲೂ ಅವರ ಜೊತೆ ಇದ್ದಾರೆ. ಪ್ರಶಸ್ತಿ, ವೇಷಭೂಷಣ ಎಲ್ಲಾ ಕೊಟ್ಟಿದ್ದಾರೆ. ಕಣ್ಣೀರು ಒರೆಸಲು ಎಂತಾ ಈರುಳ್ಳಿ ಜಜ್ಜಿದ್ದಾರಾ? ದೈವರಾಧನೆಯನ್ನು ಸಾರ್ವಜನಿಕ ಸ್ಥಳದಲ್ಲಿ ಹರಾಜು ಹಾಕಿದ್ದಾರೆ. ಈ ರೀತಿ ತಪ್ಪು ಮಾಡಿದ ನರ್ತಕ, ಚಾಕರಿ ವರ್ಗ, ತಂತ್ರಿಗಳಿಂದ ಮತ್ತೆ ಸೇವೆ ಮಾಡಿಸಬಾರದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Yashaswi Devadiga

View all posts by this author