ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರಿಗೆ, ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ ‘ದಾದಾ ಸಾಹೇಬ್ ಫಾಲ್ಕೆ’ (Dadasaheb award) ಪ್ರಶಸ್ತಿ ನೀಡಲಾಗಿದೆ. ಗುಜರಾತ್ನ ಏಕತಾ ನಗರದಲ್ಲಿ ಆಯೋಜಿಸಿದ್ದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನಂತ್ ನಾಗ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿ ನೀಡಿ ಗೌರವಿಸಿದರು. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಕೂಡ ಅನಂತ್ ನಾಗ್ ಅವರ ಈ ಸಾಧನೆಯನ್ನು ವಿಶೇಷವಾಗಿ ಸಂಭ್ರಮಿಸಿದ್ದಾರೆ.
ಮನತುಂಬಿ ಬರುವಂತಹ ಕ್ಷಣ
'ಚಿಕ್ಕವಯಸ್ಸಿನಲ್ಲಿ ನೆಲದ ಮೇಲೆ ಕುಳಿತು TV ಯಲ್ಲಿ ನಿಮ್ಮನ್ನು ನೋಡಿಕೊಂಡು ಬೆಳೆದ ನನಗೆ , ನಿಮ್ಮನ್ನು ನಿರ್ದೇಶನ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಪಾಲಿಗೆ ದೊಡ್ಡ ಗೌರವ. ಅಂತಹ ನನ್ನ ನೆಚ್ಚಿನ ಕಲಾವಿದರು ಗೌರವಾನ್ವಿತ ರಾಷ್ಟ್ರಪತಿಗಳಿಂದ ಸಿನಿಮಾ ರಂಗದ ಅತ್ಯುನ್ನತ ಪ್ರಶಸ್ತಿಯಾದ " ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಿದ್ದು " ಪ್ರತಿಯೊಬ್ಬ ಅಭಿಮಾನಿಗೂ ಸಂತೋಷ ಮನತುಂಬಿ ಬರುವಂತಹ ಕ್ಷಣ' ಎಂದು ಗೌರವ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Bigg Boss Kannada 13: ಇದು ಸ್ಪ್ಲಿಟ್ಸ್‌ವಿಲ್ಲಾ ಅಲ್ಲ! ಸೌಂದರ್ಯಾಗೆ ಆಸಿಯಾ ಕೊಟ್ಟ ವಾರ್ನಿಂಗ್ ಇದು
ಅನಂತ್ ನಾಗ್ ಅವರನ್ನು ಪ್ರಶಸ್ತಿ ಸ್ವೀಕರಿಸಲು ವೇದಿಕೆಗೆ ಆಹ್ವಾನಿಸುವ ಮುನ್ನ, ಅವರ ಸಿನಿಮಾ ಹಾಗೂ ಕಿರುತೆರೆ ಕ್ಷೇತ್ರದ ಸುದೀರ್ಘ ಕೊಡುಗೆಯನ್ನು ಪರಿಚಯಿಸುವ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಹಲವು ವರ್ಷಗಳ ಅಭಿನಯ ಪಯಣ, ವಿಭಿನ್ನ ಭಾಷೆಗಳ ಸಿನಿಮಾಗಳಲ್ಲಿನ ಕೆಲಸ ಹಾಗೂ ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಈ ಮೂಲಕ ಸ್ಮರಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಅನಂತ್ ನಾಗ್, ಜನ್ಮ ಭೂಮಿ, ಕರ್ಮ ಭೂಮಿ, ಧರ್ಮ ಭೂಮಿಗೆ ನಮಿಸಿದ್ದಾರೆ. ಈ ಪ್ರಶಸ್ತಿ ಸಿಗಲು ಕೇವಲ ಕರ್ನಾಟಕ ಮತ್ತು ಕನ್ನಡಿಗರು ಮಾತ್ರ ಕಾರಣ. ಕಳೆದ 55 ವರ್ಷಗಳಿಂದ ನನ್ನನ್ನು ಪ್ರೀತಿಯಿಂದ ಸಲುಹಿದ ಸಮಸ್ತ ಕರ್ನಾಟಕದ ಪ್ರೇಕ್ಷಕರಿಗೆ, ಚಿತ್ರರಂಗದ ತಂತ್ರಜ್ಞರಿಗೆ ಮತ್ತು ನಿರ್ದೇಶಕರಿಗೆ ನಾನು ಈ ಅತ್ಯುನ್ನತ ಗೌರವವನ್ನು ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Yash Radhika Pandit: ಫ್ಯಾಮಿಲಿ ಜೊತೆ ರಾಕಿಂಗ್ ಸ್ಟಾರ್ ಯಶ್ ಫಾರಿನ್ ಟ್ರಿಪ್!
ಈ ಪ್ರಶಸ್ತಿ ಕೇವಲ ನನ್ನೊಬ್ಬನದ್ದೇ ಅಲ್ಲ. ನನ್ನ ಸಿನಿಮಾಗಳ ನಿರ್ಮಾಪಕರು, ನಿರ್ದೇಶಕರು, ಸಹ ಕಲಾವಿದರು, ತೆರೆಯ ಮುಂದೆ, ಹಿಂದೆ ಕೆಲಸ ಮಾಡಿದ ಎಲ್ಲರಿಗೂ ಈ ಪ್ರಶಸ್ತಿಯನ್ನು ನಾನು ಅರ್ಪಿಸುತ್ತೇನೆ. ನನ್ನ ಜನ್ಮ ಭೂಮಿ, ಧರ್ಮ ಭೂಮಿ ಭಾರತ ಮತ್ತು ಕರ್ಮ ಭೂಮಿ ಕರ್ನಾಟಕಕ್ಕೆ ಋಣಿಯಾಗಿ ಇರುತ್ತೇನೆ’ ಎಂದು ಅನಂತ್ ನಾಗ್ ಹೇಳಿದ್ದಾರೆ.