ಧುರಂಧರ್ ದಿ ರಿವೆಂಜ್ (Dhurandhar 2) ಬಾಕ್ಸ್ ಆಫೀಸ್ ದಾಖಲೆಗಳನ್ನು (Box Office Collection) ಮುರಿಯುತ್ತಲೇ ಇದೆ. ವಿವಿಧ ಉದ್ಯಮಗಳ ಪ್ರಸಿದ್ಧ ವ್ಯಕ್ತಿಗಳಿಂದ ಪ್ರಶಂಸೆ ಗಳಿಸುತ್ತಿದೆ. ಆದಿತ್ಯ ಧರ್ ನಿರ್ದೇಶನದ ಈ ಚಿತ್ರ ಮಾರ್ಚ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಬಾಕ್ಸ್ ಆಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ. ಅಲ್ಲು ಅರ್ಜುನ್, ವಿಜಯ್ ದೇವರಕೊಂಡ ಮತ್ತು ಮಹೇಶ್ ಬಾಬು ನಂತರ, ಈಗ ನಟ ರಿಷಬ್ ಶೆಟ್ಟಿ (Rishab Shetty) ರಣವೀರ್ ಸಿಂಗ್ (Ranveer Singh) ಅಭಿನಯದ ಚಿತ್ರವನ್ನು 'ಅದ್ಭುತ' ಸಿನಿಮಾ ಎಂದು ಹಾಡಿ ಹೊಗಳಿದ್ದಾರೆ.
ರಿಷಬ್ ಶೆಟ್ಟಿ ಹೇಳಿದ್ದೇನು?
ತಮ್ಮ X ಖಾತೆಯಲ್ಲಿ ರಿಷಬ್ ತಮ್ಮ ವಿಮರ್ಶೆಯನ್ನು ಹಂಚಿಕೊಂಡು, "ಧುರಂಧರ್ ದಿ ರಿವೆಂಜ್ ಮೊದಲ ದೃಶ್ಯವೇ ನಿಮ್ಮನ್ನು ಆಕರ್ಷಿಸುತ್ತದೆ ಮತ್ತು ಎಂದಿಗೂ ಬಿಟ್ಟುಕೊಡುವುದಿಲ್ಲ. ಪ್ರತಿಯೊಂದು ಸಿನಿಮಾವೂ ಯುದ್ಧದಂತೆ ಕಾಣುತ್ತದೆ. ಇದೊಂದು ಕೇವಲ ಸೀಕ್ವೆಲ್ ಅಷ್ಟೇ ಅಲ್ಲ. ಇದೊಂದು ಸ್ಟೇಟ್ಮೆಂಟ್. ಅದ್ಭುತವಾಗಿ ಸ್ಟೋರಿಯನ್ನು ಹೇಳಲಾಗಿದೆ. ಅದಿತ್ಯಧರ್ ಅವರ ಡಿಲಿಂಗ್ ತುಂಬಾನೇ ಇಷ್ಟ ಆಯ್ತು. ಪ್ರತಿಯೊಬ್ಬರ ಪರ್ಫಾಮೆನ್ಸ್ ಕೂಡ ತುಂಬಾನೇ ಇಷ್ಟ ಆಯ್ತು" ಎಂದು ರಿಷಬ್ ಶೆಟ್ಟಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Ranveer Singh: ‘ಧುರಂಧರ್ 2’ ಸಿನಿಮಾ ಪ್ರದರ್ಶನದ ವೇಳೆ ಚಿತ್ರಮಂದಿರ ಧ್ವಂಸ! ಏನಿದು ಪ್ರಕರಣ?
ಆದಿತ್ಯ ಧರ್ ಅವರ ಪ್ರತಿಕ್ರಿಯೆ
ಈ ಹೊಗಳಿಕೆ ನಿರ್ದೇಶಕ ಆದಿತ್ಯ ಧರ್ ಅವರ ಗಮನ ಸೆಳೆಯಿತು, ಅವರು ಪೋಸ್ಟ್‌ನ ಕಾಮೆಂಟ್‌ಗಳಲ್ಲಿ ಪ್ರತಿಕ್ರಿಯಿಸಿದರು. ಅವರು ಹೇಳಿದರು, "ನಿಜವಾಗಿಯೂ ನಿಮ್ಮಿಂದ ಈ ಹೊಗಳಿಕೆ ಬರುತ್ತಿರುವುದು ಅರ್ಥಪೂರ್ಣವಾಗಿದೆ ಸಹೋದರ. ಕಾಂತಾರ ದೊಡ್ಡ ಅಭಿಮಾನಿಯಾಗಿ, ನಿಮ್ಮ ಮಾತುಗಳು ಇದನ್ನು ಇನ್ನಷ್ಟು ವಿಶೇಷವಾಗಿಸುತ್ತವೆ. ಕೃತಜ್ಞತೆಗಳು."ಎಂದು ಬರೆದುಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ, ಚಿತ್ರದ ನಿರ್ಮಾಪಕರು ಪಾತ್ರವರ್ಗ ಮತ್ತು ಸಿಬ್ಬಂದಿಗಾಗಿ ವಿಶೇಷ ಪ್ರದರ್ಶನವನ್ನು ಆಯೋಜಿಸಿದ್ದರು, ಅಲ್ಲಿ ಆದಿತ್ಯ ಧರ್ ಪಾತ್ರವರ್ಗಕ್ಕಾಗಿ ವಿಶೇಷ ಸಂದೇಶವನ್ನು ನೀಡಿದರು. ಆರ್ ಮಾಧವನ್, ರಾಕೇಶ್ ಬೇಡಿ , ಸಾರಾ ಅರ್ಜುನ್ ಮತ್ತು ಅರ್ಜುನ್ ರಾಂಪಾಲ್ ಕೂಡ ಸಿನಿಮಾದಲ್ಲಿ ನಟಿಸಿದ್ದಾರೆ.
ರಣ್‌ವೀರ್ ಸಿಂಗ್, ಸಂಜಯ್ ದತ್, ಸಾರಾ ಅರ್ಜುನ್, ಅರ್ಜುನ್ ರಾಮ್‌ಪಾಲ್, ಆರ್. ಮಾಧನವ್ ಸೇರಿದಂತೆ ಸಿನಿಮಾದಲ್ಲಿ ನಟಿಸಿದವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ಇದರೊಂದಿಗೆ ಛಾಯಾಗ್ರಹಣ ಹಾಗೂ ಮ್ಯೂಸಿಕ್ ಅನ್ನೂ ರಿಷಬ್ ಶೆಟ್ಟಿ ಮೆಚ್ಚಿಕೊಂಡಿದ್ದಾರೆ.
ಕಳೆದ ವರ್ಷ 'ಧುರಂಧರ್' ರಿಲೀಸ್‌ಗೂ ಮುನ್ನ ರಣ್‌ವೀರ್ ಸಿಂಗ್ ವಿವಾದಕ್ಕೆ ಸಿಕ್ಕಿಕೊಂಡಿದ್ದರು. ಗೋವಾ ಫಿಲ್ಮ್ ಇವೆಂಟ್‌ನಲ್ಲಿ ರಿಷಬ್ ಶೆಟ್ಟಿಯ ಮುಂದೆ 'ಕಾಂತಾರ'ದ ಪಾತ್ರವನ್ನು ಹೊಗಳುವ ಭರಾಟೆಯಲ್ಲಿ ಅಣಕಿಸಿದ್ದರು. ಈ ಹಿನ್ನೆಲೆಯಲ್ಲಿ ರಣ್‌ವೀರ್ ಸಿಂಗ್ ವಿರುದ್ಧ ದೂರು ಕೂಡ ದಾಖಲಾಗಿತ್ತು. ಈಗ ರಿಷಬ್ ಶೆಟ್ಟಿಯೇ ಆ ಮೌನವನ್ನು ಮುರಿದು ರಣ್‌ವೀರ್ ಸಿಂಗ್ ಸಿನಿಮಾ 'ಧುರಂಧರ್ 2' ಅನ್ನು ಹಾಡಿ ಹೊಗಳಿಸಿದ್ದಾರೆ.
ಈ ಸಿನಿಮಾ ಕೇವಲ 3 ದಿನಗಳಲ್ಲಿ 500 ಕೋಟಿ ಕ್ಲಬ್ ಸೇರುವ ಮೂಲಕ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿದೆ. ಸಕ್ನಿಲ್ಕ್ ಪ್ರಕಾರ, ಚಿತ್ರವು ಪೂರ್ವವೀಕ್ಷಣೆ ಪ್ರದರ್ಶನಗಳಲ್ಲಿ 43 ಕೋಟಿ ರೂ. ಗಳಿಸಿತು, ಇದು ಇದುವರೆಗಿನ ಚಲನಚಿತ್ರ ಪ್ರೀಮಿಯರ್ ಇತಿಹಾಸದಲ್ಲಿ ಅತಿ ಹೆಚ್ಚು ಗಳಿಸಿದೆ.
ಇದನ್ನೂ ಓದಿ: Dhurandhar 2 movie : 300 ಕೋಟಿ ರೂಪಾಯಿ ಮೀರಿದ ಗಳಿಕೆ; 'ಧುರಂಧರ್' 2 ಸುನಾಮಿ!
ನಂತರ, ಗುರುವಾರ, ಮೊದಲ ದಿನ, ಭಾರತದಲ್ಲಿ 102.55 ಕೋಟಿ ರೂ.ಗೆ ಏರಿತು. ಇದರೊಂದಿಗೆ, 'ಧುರಂಧರ್: ದಿ ರಿವೆಂಜ್' ಚಿತ್ರದ ನಿವ್ವಳ ಸಂಗ್ರಹವು ಭಾರತದಲ್ಲಿ 339.37 ಕೋಟಿ ರೂ. ನಿವ್ವಳ ಮತ್ತು 404.54 ಕೋಟಿ ರೂ. ಒಟ್ಟು ಗಳಿಕೆಯಾಗಿದೆ.