Photos: ʻಕಾಂತಾರ: ಚಾಪ್ಟರ್ 1ʼ ಸಿನಿಮಾದ ಮೊದಲ ವರ್ಕ್‌ಶಾಪ್‌ನ ಫೋಟೋಗಳನ್ನ ಶೇರ್ ಮಾಡಿ ರಿಷಬ್ ಶೆಟ್ಟಿ ಹೇಳಿದ್ದೇನು?
ರಿಷಬ್ ಶೆಟ್ಟಿ ಅಭಿನಯದ ʻಕಾಂತಾರ ಚಾಪ್ಟರ್ 1ʼ ಸಿನಿಮಾವು ತೆರೆಕಂಡು ಬಾಕ್ಸ್ ಆಫೀಸ್‌ನಲ್ಲಿ ಎಂಥ ದಾಖಲೆ ಬರೆದಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಚಿತ್ರಕ್ಕಾಗಿ ರಿಷಬ್ ಶೆಟ್ಟಿ ಮತ್ತು ಅವರ ತಂಡ ಸುಮಾರು 3 ವರ್ಷಗಳ ಕಾಲ ಕಷ್ಟಪಟ್ಟಿದೆ. ಇದೀಗ ಈ ಚಿತ್ರಕ್ಕಾಗಿ ಮಾಡಿದ ಮೊದಲ ವರ್ಕ್‌ಶಾಪ್‌ನ ಫೋಟೋಗಳನ್ನು ರಿಷಬ್ ಶೆಟ್ಟಿ ಅವರು ಹಂಚಿಕೊಂಡಿದ್ದಾರೆ. "ಇದು ನಮ್ಮ ಕಥೆಯ ಆತ್ಮವನ್ನು ನಾನು ವರ್ಗಾಯಿಸಿದ ಕ್ಷಣವಾಗಿತ್ತು — ಕಾಗದದ ಮೇಲೆ ಹುಟ್ಟಿದ ಪಾತ್ರವು ನನ್ನ ನಟರ ಮೂಲಕ ಜೀವವನ್ನು ಕಂಡುಕೊಂಡಾಗ. ನಮ್ಮ ಮೊದಲ ಕಾರ್ಯಾಗಾರ (ವರ್ಕ್‌ಶಾಪ್) ಕೇವಲ ತಾಲೀಮು ಆಗಿರಲಿಲ್ಲ; ಅದು ಕಲ್ಪನೆಗೆ ಭಾವನೆಯನ್ನು ಉಸಿರಾಡುವಿಕೆಯ ಆರಂಭವಾಗಿತ್ತು. ಕಾಂತಾರ ಬುಡಕಟ್ಟಿನ ನನ್ನ ಎಲ್ಲ ನಟರ ಮೇಲೆ ನನ್ನ ಪ್ರೀತಿ ಸದಾ ಇರುತ್ತದೆ" ಎಂದು ರಿಷಬ್ ಶೆಟ್ಟಿ ಅವರು ಹೇಳಿಕೊಂಡಿದ್ದಾರೆ.
1/6
ಕಾಗದದ ಮೇಲೆ ಹುಟ್ಟಿದ ಪಾತ್ರಕ್ಕೆ ಜೀವ ಬಂದ ಕ್ಷಣಗಳನ್ನು ನೆನೆದ ರಿಷಬ್
2/6
ʻನಮ್ಮ ಕಥೆಯ ಆತ್ಮವನ್ನು ನಟರಿಗೆ ವರ್ಗಾಯಿಸಿದ ಮೊದಲ ಕಾರ್ಯಾಗಾರ ಇದಾಗಿತ್ತು' ಎಂದ ರಿಷಬ್
3/6
ಕಾಂತಾರ: ಚಾಪ್ಟರ್ 1 ಸಿನಿಮಾಕ್ಕಾಗಿ ಇಡೀ ತಂಡ ಸುಮಾರು 3 ವರ್ಷ ಶ್ರಮ ಹಾಕಿತ್ತು
4/6
ಕಾಂತಾರ ಬುಡಕಟ್ಟಿನ ಎಲ್ಲ ನಟರ ಮೇಲೆ ಸದಾ ಪ್ರೀತಿ ಇರುತ್ತದೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ
5/6
ಅಕ್ಟೋಬರ್ 2ರಂದು ತೆರೆಕಂಡಿದ್ದ ಕಾಂತಾರ ಚಾಪ್ಟರ್ 1 ಸಿನಿಮಾವು ದೊಡ್ಡ ಹಿಟ್ ಆಗಿದೆ
6/6
2025ರಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಭಾರತೀಯ ಸಿನಿಮಾ ಎಂಬ ಖ್ಯಾತಿ ಕಾಂತಾರ: ಚಾಪ್ಟರ್ 1 ಸಿನಿಮಾಕ್ಕಿದೆ