ಸಂಗೀತ ಲೋಕದಲ್ಲಿ ಬಹಳ ಜನಪ್ರಿಯ ಕಾರ್ಯಕ್ರಮ ‘ ಸರಿಗಮಪ (Sa re ga Ma Pa)’. ಅದೆಷ್ಟೋ ಪ್ರತಿಭೆಗಳನ್ನ ಚಿತ್ರರಂಗಕ್ಕೆ ಪರಿಚಯಿಸಿದ ಹಿರಿಮೆ ಸರಿಗಮಪ ಕಾರ್ಯಕ್ರಮಕ್ಕೆ ಸಲ್ಲುತ್ತದೆ. ಈ ಶೋ ಮೂಲಕ ಗುರುತಿಸಿಕೊಂಡವರು ಈಗ ಹಿನ್ನೆಲೆ ಗಾಯಕರಾಗಿ ಹೆಸರು ಮಾಡಿದ್ದಾರೆ. ಅದ್ಧೂರಿ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಶುರುವಾಗಿದೆ. ‘ಸರಿಗಮಪ ಲಿಟಲ್ ಚಾಂಪ್ಸ್’ (sa re ga Ma Pa Little Champs) ಚಾಂಪಿಯನ್ ಪಟ್ಟಕ್ಕಾಗಿ ಸ್ಪರ್ಧಿಗಳು ಪರಸ್ಪರ ಪೈಪೋಟಿ ನಡೆಸಲಿದ್ದು, ಇದೇ ಆಗಸ್ಟ್ 22 ಮತ್ತು 23ರಂದು ಸಂಜೆ 7 ಗಂಟೆಗೆ ಎರಡು ದಿನಗಳ ಕಾಲ ಗ್ರ್ಯಾಂಡ್ ಫಿನಾಲೆ (Grand Finale) ನಡೆಯಲಿದೆ.
ಸ್ಪರ್ಧಿಗಳಾದ ಜಯಲಕ್ಷ್ಮೀ, ಅಮ್ಯಕ್ಸ್, ಅಶ್ಮಿತ್, ಮಹನ್ಯ, ಅಚಿಂತ್ಯ ರೈ ಹಾಗೂ ರಗುಷ್ ಈ ಆರು ಮಂದಿ ಫೈನಲಿಸ್ಟ್ ಆಗಿ ಹೊರ ಹೊಮ್ಮಿದ್ದಾರೆ. ಈ ಬಾರಿಯ 'ಸರಿಗಮಪ ಲಿಟಲ್ ಚಾಂಪ್ಸ್' ವಿಜೇತ ಗಾಯಕರಿಗೆ ವೈಟ್ ಗೋಲ್ಡ್ ವತಿಯಿಂದ.
ಇದನ್ನೂ ಓದಿ: Toxic Movie: ಬುಕಿಂಗ್ ಓಪನ್ ಬೆನ್ನಲ್ಲೇ 'ಟಾಕ್ಸಿಕ್' ಟಿಕೆಟ್ ಸೋಲ್ಡ್ ಔಟ್
20 ಲಕ್ಷ ನಗದ ಬಹುಮಾನ ಸಿಗಲಿದೆ. ಹೀಗಾಗಿ ಆಯ್ಕೆಯಾಗಿರುವ ಈ 6 ಪುಟಾಣಿ ಗಾಯಕರಲ್ಲಿ ಲಿಟಲ್ ಚಾಂಪ್ಸ್ ಕಿರೀಟ ಯಾರ ಮುಡಿಗೇರಲಿದೆ ಎಂಬ ಕುತೂಹಲ ವೀಕ್ಷಕರಲ್ಲಿ ಮನೆಮಾಡಿದೆ.
ಖ್ಯಾತ ಗಾಯಕರಾದ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಮಾರ್ಗದರ್ಶನದಲ್ಲಿ ಪುಟ್ಟ ಪ್ರತಿಭೆಗಳು ಪ್ರೇಕ್ಷಕರನ್ನು ನಿರಂತರವಾಗಿ ರಂಜಿಸುತ್ತಾ ಬಂದಿದ್ದಾರೆ. ಇದೀಗ ಶೋ ಗ್ರ್ಯಾಂಡ್ ಫಿನಾಲೆಗೆ ಬಂದು ನಿಂತಿದೆ.
ಈ ಆರು ಪ್ರತಿಭೆಗಳಲ್ಲಿ ‘ಸ ರಿ ಗ ಮ ಪ ಲಿಟಲ್ ಚಾಂಪ್ಸ್’ ಚಾಂಪಿಯನ್ ಪಟ್ಟವನ್ನು ಯಾರು ಮುಡಿಗೇರಿಸಿಕೊಳ್ಳಲಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ವೀಕ್ಷಿಸಿ ‘ಸ ರಿ ಗ ಮ ಪ ಲಿಟಲ್ ಚಾಂಪ್ಸ್’, ಇದೇ ಆಗಸ್ಟ್ 22 ಮತ್ತು 23ರಂದು ಸಂಜೆ 7 ಗಂಟೆಗೆ ನಿಮ್ಮ ಜೀ ಕನ್ನಡದಲ್ಲಿ.
ಕಾರ್ಯಕ್ರಮದ ತೀರ್ಪುಗಾರರ ಸೀಟ್‌ನಲ್ಲಿ ಗಾಯಕ ವಿಜಯ್‌ಪ್ರಕಾಶ್, ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್, ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಅವರು ಇದ್ದಾರೆ.
ಇದನ್ನೂ ಓದಿ: Folk dancer: ಸಹ ಡ್ಯಾನ್ಸರ್ ಜೊತೆ ಹೋಟೆಲ್‌ನಲ್ಲಿ ಸಿಕ್ಕಿಬಿದ್ದ ಪ್ರಸಿದ್ಧ ಜಾನಪದ ನಟ; ತರಾಟೆಗೆ ತೆಗೆದುಕೊಂಡ ಪತ್ನಿ
ನಿರೂಪಕಿ ಅನುಶ್ರೀ ಅವರು ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದಾರೆ. ಜೀ ಕನ್ನಡದಲ್ಲಿ 'ಸರಿಗಮಪ ಲಿಟಲ್ ಚಾಂಪ್ಸ್' ಇರಲಿ ವೀಕ್ಷಕರನ್ನು ರಂಜಿಸುವುದರಲ್ಲಿ ಇದೂವರೆಗೂ ಹಿಂದೆ ಬಿದ್ದಿಲ್ಲ.