ನಿರ್ದೇಶಕ ಓಂ ಪ್ರಕಾಶ್ ರಾವ್ (Om prakash) ಅವರು ದಶಕಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ತಂದೆ ಖ್ಯಾತ ಹ್ಯಾಸ್ಯಕಲಾವಿದ, ಬರಹಗಾರ ಮತ್ತು ರಂಗಭೂಮಿ ಕಲಾವಿದರಾಗಿದ್ದ ಹಿರಿಯ ನಟ ಎನ್ ಎಸ್ ರಾವ್ ಅವರು. ಮಗಳು ಶ್ರಾವ್ಯಾ ರಾವ್ (Shravya Rao) ಈಗ ಸಾತ್ವಿಕಾ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ.
`ಪಾಸಿಬಲ್',`ಹುಚ್ಚ 2' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ 'ಮೋಡ ಕವಿದ ವಾತಾವರಣ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಓಂ ಪ್ರಕಾಶ್ ರಾವ್ ಹಾಗೂ ರೇಖಾ ದಾಸ್ ಡಿವೋರ್ಸ್ ಪಡೆದು ದೂರಾಗಿದ್ದಾರೆ. ಈ ವಿಚಾರವಾಗಿ ಶ್ರಾವ್ಯ ಈಗ ಸಂದರ್ಶನದಲ್ಲಿ ಭಾವುಕರಾಗಿ ಮಾತನಾಡಿದ್ದಾರೆ.
ಅರಗಿಸಿಕೊಳ್ಳಲು ಆಗಲಿಲ್ಲ
ನಟಿ ಮಾತನಾಡಿ, ಚಿಕ್ಕಂದಿನಲ್ಲಿ ಅದನ್ನೆಲ್ಲಾ ಅರಗಿಸಿಕೊಳ್ಳಲು ಆಗಲಿಲ್ಲ. ಈಗ ಅಂಥದ್ದಕ್ಕೆ ತಲೆ ಕೆಡಿಸಿಕೊಳ್ಳಲ್ಲ. ಇವತ್ತು ಅವರಿಬ್ಬರಿಗೆ ಡಿವೋರ್ಸ್ ಆಗಿದ್ದರೆ ಅದನ್ನು ಬೇರೆ ರೀತಿ ತೆಗೆದುಕೊಳ್ಳಬಹುದು. ಆದ್ರೆ ನಾನು ಚಿಕ್ಕವಳಾಗಿದ್ದಾಗ ಅಕ್ಸೆಪ್ಟ್ ಮಾಡೋಕೆ ಆಗಲಿಲ್ಲ. ತುಂಬಾ ಡಿಸ್ಟರ್ಬ್ ಚೈಲ್ಡ್‌ವುಡ್ ನನ್ನದು. ಈವಾಗಿನ ಕಾಲಘಟ್ಟ ಬೇರೆ ಇದೆ. ಡಿವೋರ್ಸ್ ವಿಚಾರವನ್ನು ಬೇರೆ ರೀತಿಯೇ ಹ್ಯಾಂಡಲ್ ಮಾಡ್ತಾರೆ. ಆದರೆ ನಾನು ಚಿಕ್ಕವಳಿದ್ದಾಗ ಇದ್ದ ಕಾಲಘಟ್ಟ ಬೇರೆ.
ಇದನ್ನೂ ಓದಿ: Actor Jaggesh: ಕೆಟ್ಟ ಅಭ್ಯಾಸ ಬಿಟ್ಟುಬಿಡಿ! ಶ್ರೀಕೃಷ್ಣನ ಸಂದೇಶ ಹಂಚಿಕೊಂಡ ಜಗ್ಗೇಶ್
ನಾನು ಚಿಕ್ಕವಳಿದ್ದಾಗ ತುಂಬಾ ಡಿಸ್ಟರ್ಬ್ ಆಗಿದ್ದೆ. ಅರ್ಥವೇ ಆಗ್ತಾ ಇರಲಿಲ್ಲ. ನಾನು ಏಕೆ ಇಲ್ಲಿ ಇದ್ದೀನಿ? ಅಲ್ಲಿಗೆ ಏಕೆ ಹೋಗ್ತಿದ್ದೀನಿ ಅನ್ನೋದೇ ಆರ್ಥ ಆಗ್ತಿರಲಿಲ್ಲ. ಇಬ್ಬರ ಜೊತೆ ಇರೋಕೆ ಇಷ್ಟ ಪಡುತ್ತಿದ್ದೆ. ಆದರೆ ಒಂದು ಮಾತು ಹೇಳ್ತೀನಿ. ಜೊತೆಗಿರೋಕೆ ಆಗಲ್ಲ ಅಂದಾಗ ದಯವಿಟ್ಟು ಮಕ್ಕಳನ್ನು ಮಾತ್ರ ಮಾಡ್ಕೋಬೇಡಿ.
ನಾನು ಹೇಳೊದೇ ಇವತ್ತಿಗೂ ಅದೆ. ಎಲ್ಲದರ ನಡುವೆ ಮಕ್ಕಳಿಗೆ ಆಗುವ ಟ್ರೊಮಾ ಅಷ್ಟಿಷ್ಟಲ್ಲ. ನಾನು ಪೋಷಕರನ್ನು ದೇವರ ರೀತಿ ನೋಡ್ತಿದ್ದೆ. ನನ್ನ ಮೊದಲ ಹಾರ್ಟ್ ಬ್ರೇಕ್ ಅದೇ.. ಅವರಿಬ್ಬರು ದೂರಾಗಿದ್ದು. ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾರೆ. . ಅಪ್ಪನಿಗೆ ಯಾಕೆ 2ನೇ ಮದುವೆ. ಇವ್ರು ಯಾರು ಗೊತ್ತಿಲ್ಲ, ನನ್ನ ಹತ್ರ ಯಾಕೆ ಮಾತಾಡ್ತಿದ್ದಾರೆ ಅನ್ನಿಸ್ತಿತ್ತು. ತುಂಬಾ ಅಳ್ತಿದ್ದೆ..ಯಾರ ಹತ್ರ ಕೂಡ ಹೇಳಿಕೊಳ್ಳಲು ಆಗ್ತಿರ್ಲಿಲ್ಲ. ಎಂದು ಭಾವುಕರಾಗಿದ್ದಾರೆ.
ಇನ್ನು ಒಂದು ಸರಳ ಪ್ರೇಮಕಥೆ’ ಸಿನಿಮಾ ನಿರ್ಮಾಣ ಮಾಡಿದ್ದ ʻರಾಮ್ ಮೂವೀಸ್ʼ ಅವರೆ ಮೋಡ ಕವಿದ ವಾತಾವರಣ ಸಿನಿಮಾ ನಿರ್ಮಾಣ ಮಾಡಿದೆ. ಮೈಸೂರು ರಮೇಶ್, ಶ್ರೀರಂಗರಾಜು, ಲೋಕೇಶ್ ಬೆಳವಾಡಿ ಹಾಗೂ ಗೋವಾ ರಮೇಶ್ ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ: Haiwaan first look out: KVN ನಿರ್ಮಾಣದ ಬಾಲಿವುಡ್ ಸಿನಿಮಾ 'ಹೈವಾನ್'; ಪೋಸ್ಟರ್ ಔಟ್
ʻಮೋಡ ಕವಿದ ವಾತಾವರಣʼ ಸಿನಿಮಾಗೆ ಸಂತೋಷ್ ರೈ ಪಾತಾಜೆ ಕ್ಯಾಮೆರಾ ಹಿಡಿದಿದ್ದು, ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ ಹಾಗೂ ಆದಿತ್ಯ ಕಶ್ಯಪ್ ಸಂಕಲನ ಸಿನಿಮಾಗಿದೆ.