ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪ್ರಭಾಸ್ ಫ್ಯಾನ್ಸ್‌ಗೆ ಗುಡ್ ನ್ಯೂಸ್: 'ಸಲಾರ್ 2' ಚಿತ್ರದ ಟೀಸರ್ ಬಿಡುಗಡೆಗೆ ದಿನಾಂಕ ಫಿಕ್ಸ್‌?

Salaar Part 2: ʼಸಲಾರ್ ಪಾರ್ಟ್ 2ʼ ಚಿತ್ರದ ಬಗ್ಗೆಯೂ ಹೊಸ ಅಪ್‌ಡೇಟ್‌ ಸಿಕ್ಕಿದೆ. ಸೋಶಿಯಲ್ ಮೀಡಿಯಾದಲ್ಲಿ ಹರಿ‌ದಾಡುತ್ತಿರುವ ಮಾಹಿತಿಯ ಪ್ರಕಾರ, ಈ ಚಿತ್ರದ ಬಿಡುಗಡೆ ದಿನಾಂಕ ಹಾಗೂ ಗ್ಲಿಂಪ್ಸ್ ಜನವರಿ 25ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ. ಪ್ರಶಾಂತ್ ನೀಲ್ ನಿರ್ದೇಶನದ ʼಸಲಾರ್ ಪಾರ್ಟ್ 1ʼ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ರಿಲೀಸ್ ಆಗಿ ಕೋಟಿ ಕೋಟಿ ರುಪಾಯಿ ಗಳಿಸಿದ್ದು, ಸೀಕ್ವೆಲ್‌ ಕುತೂಹಲ ಮೂಡಿಸಿದೆ.

ಪ್ರಭಾಸ್ (ಸಂಗ್ರಹ ಚಿತ್ರ)

ಹೈದರಾಬಾದ್‌, ಜ. 20: ಟಾಲಿವುಡ್‌ ರೆಬೆಲ್ ಸ್ಟಾರ್ ಪ್ರಭಾಸ್ (Prabhas) ನಟನೆಯ‌ ‘ದಿ ರಾಜಾ ಸಾಬ್’ ಸಿನಿಮಾ ಬಿಡುಗಡೆಯಾಗಿದ್ದು, ಅಂದುಕೊಂಡಷ್ಟು ಸದ್ದು ಮಾಡುತ್ತಿಲ್ಲ. ಈ ನಡುವೆ ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದ ʼಸಲಾರ್ ಪಾರ್ಟ್ 2ʼ ಚಿತ್ರದ ಬಗ್ಗೆ ಹೊಸ ಅಪ್‌ಡೇಟ್‌ ಹೊರ ಬಿದ್ದಿದೆ. ಸೋಶಿಯಲ್ ಮೀಡಿಯಾದಲ್ಲಿ ಹರಿ‌ದಾಡುತ್ತಿರುವ ಮಾಹಿತಿಯ ಪ್ರಕಾರ, ಈ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಹಾಗೂ ಗ್ಲಿಂಪ್ಸ್ ಜನವರಿ 25ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ. ಕನ್ನಡಿಗ ಪ್ರಶಾಂತ್ ನೀಲ್ ನಿರ್ದೇಶನದ ʼಸಲಾರ್ ಪಾರ್ಟ್ 1ʼ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿದ್ದು ಕೋಟಿ ಕೋಟಿ ರುಪಾಯಿ ಗಳಿಕೆ ಮಾಡಿದ ಕಾರಣ ಸೀಕ್ವೆಲ್‌ ಬಗ್ಗೆ ಕುತೂಹಲ ಮೂಡಿದೆ.

ವರದಿಯ ಪ್ರಕಾರ ಈ ಚಿತ್ರದ ಬಗ್ಗೆ ಗಣರಾಜ್ಯೋತ್ಸವದ ಮುನ್ನಾ ದಿನ ಚಿತ್ರತಂಡ ದೊಡ್ಡ ಅಪ್‌ಡೇಟ್ ನೀಡಲಿದೆ ಎನ್ನಲಾಗಿದೆ. ಆದರೆ ಸದ್ಯಕ್ಕೆ ಹೊಂಬಾಳೆ ಫಿಲ್ಮ್ಸ್ ಆಗಲಿ, ನಿರ್ದೇಶಕ ಪ್ರಶಾಂತ್ ನೀಲ್ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಆದರೆ ಈ ಹಿಂದೆ ಹೊಂಬಾಳೆ ಫಿಲ್ಮ್ಸ್‌ನ ವಿಜಯ್ ಕಿರಗಂದೂರು ʼಸಲಾರ್ʼ ಸೀಕ್ವೆಲ್ ಬಿಡುಗಡೆಯಾಗಲಿದೆ ಎಂದು ಖಚಿತಪಡಿಸಿದ್ದರು. "ಸಲಾರ್ 2ʼ ಚಿತ್ರದ ಸ್ಕ್ರಿಪ್ಟ್ ಸಿದ್ಧವಾಗಿದೆ. ನಾವು ಯಾವಾಗ ಬೇಕಾದರೂ ಚಿತ್ರವನ್ನು ಪ್ರಾರಂಭಿಸುತ್ತೇವೆ" ಎಂದು ಹೇಳಿಕೊಂಡಿದ್ದರು.

`45’ ಮೂವಿಯಿಂದ ಗುಡ್‌ ನ್ಯೂಸ್‌; ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌

ʼಸಲಾರ್ʼ ಚಿತ್ರದ ಮೊದಲ ಭಾಗ ʼಸಲಾರ್: ಸೀಸ್‌ಫೈರ್'ನಲ್ಲಿ ದೇವ ಮತ್ತು ವರದರಾಜ ಮನ್ನಾರ್ ಸ್ನೇಹವನ್ನು ತೋರಿಸಲಾಗಿತ್ತು. ಎರಡನೇ ಭಾಗದಲ್ಲಿ ದೇವ ಹೇಗೆ ವರದನಿಗೆ ಶತ್ರು ಆಗಲಿದ್ದಾನೆ ಮತ್ತು 'ಶೌರ್ಯಾಂಗ' ಕುಲದ ಇತಿಹಾಸವೇನು ಎಂಬುದು ಅನಾವರಣಗೊಳ್ಳಲಿದೆ. ಹೊಂಬಾಳೆ ಫಿಲ್ಮ್ಸ್​ ‘ಸಲಾರ್​ 2’ ಗೆ ಬಂಡವಾಳ ಹೂಡುತ್ತಿದ್ದು ದೊಡ್ಡ ಬಜೆಟ್​ನಲ್ಲಿ ಸಿನಿಮಾ ನಿರ್ಮಾಣ ಆಗಲಿದೆ. ಶೀಘ್ರದಲ್ಲೇ ಈ ಸಿನಿಮಾ ಬಿಡುಗಡೆ ಆಗುವ ನಿರೀಕ್ಷೆ ಇದ್ದು ಸಿನಿಮಾದ 2ನೇ ಪಾರ್ಟ್​ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

ಪ್ರಭಾಸ್ ನಟನೆಯ ʼರಾಜಾ ಸಾಬ್ʼ ಜನವರಿ 9ರಂದು ತೆರೆಗೆ ಬಂದಿದೆ. ಮಾರುತಿ ಈ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದು, ಪ್ರಭಾಸ್ ಜತೆ ಮಾಳವಿಕಾ ಮೋಹನನ್, ನಿಧಿ ಅಗರ್​ವಾಲ್, ಸಂಜಯ್ ದತ್, ಬೋಮನ್ ಇರಾನಿ, ರಿಧಿ ಕುಮಾರ್ ಮುಂತಾದವರು ನಟಿಸಿದ್ದಾರೆ. ಮೊದಲ ದಿನ 112 ಕೋಟಿ ರುಪಾಯಿ ಗಳಿಕೆ ಮಾಡಿದ್ದ ‘ದಿ ರಾಜಾ ಸಾಬ್’ ಚಿತ್ರದ ಕಲೆಕ್ಷನ್‌ ಕುಂಟುತ್ತ ಸಾಗುತ್ತಿದೆ.