Salman Khan: ಸಲ್ಮಾನ್ ಖಾನ್ ಜೊತೆ ತಿಂಗಳುಗಟ್ಟಲೇ ಮಾತು ಬಿಟ್ಟಿದ್ರಂತೆ ತಂದೆ ಸಲೀಂ ಖಾನ್; ಕಾರಣವೇನು?
ಖ್ಯಾತ ಚಿತ್ರಕಥೆಗಾರ, ನಟ ಸಲ್ಮಾನ್ ಖಾನ್ ಅವರ ತಂದೆಯಾದ ಸಲೀಂ ಖಾನ್ ಅವರು ಇತ್ತೀಚೆಗೆ ಮ್ಯಾಜಿಕ್ ಮೊಮೆಂಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಮಗ ಸಲ್ಮಾನ್ ಖಾನ್(Salman Khan) ಮತ್ತು ತಮ್ಮ ನಡುವಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ. ಹಾಗೂ ಅವರು ಮಕ್ಕಳನ್ನು ಹೇಗೆ ಬೆಳಸಬೇಕು ಎಂಬುದನ್ನು ತಿಳಿಸಿದ್ದಾರೆ.


ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್(Salman Khan) ಮತ್ತು ಅವರ ತಂದೆ, ಪ್ರಸಿದ್ಧ ಚಿತ್ರಕಥೆಗಾರ ಸಲೀಂ ಖಾನ್(Salim Khan) ನಡುವಿನ ಆಘಾದವಾದ ಪ್ರೀತಿ ಬಾಂದವ್ಯ ಎಲ್ಲರನ್ನೂ ಸೆಳೆಯುವಂಥದ್ದು. ಸಿನಿಮಾ ಶೂಟಿಂಗ್‍ನಿಂದ ಹಿಡಿದು ಟ್ರೈಲರ್ ಬಿಡುಗಡೆಯ ಸಮಯದವರೆಗೂ ಸಲೀಂ ಖಾನ್ ತಮ್ಮ ಪುತ್ರನನ್ನು ಬೆಂಬಲಿಸುವುದನ್ನು ಕಾಣಬಹುದು. ಇಳಿವಯಸ್ಸಿನಲ್ಲೂ ಪುತ್ರನ ಸಿನಿಮಾ ಪ್ರೊಮೋಶನ್‌ನಲ್ಲಿ ಭಾಗಿಯಾಗುವುದನ್ನು ಕಾಣಬಹುದು. ಸಲ್ಮಾನ್ ಖಾನ್ ಅಭಿನಯದ ಸಿಕಂದರ್ ಸಿನಿಮಾ ಟ್ರೈಲರ್ ಬಿಡುಗಡೆಯಲ್ಲಿಯೂ ಸಲೀಂ ಖಾನ್ ಹಾಜರಿದ್ದರು. ಅದು ಅಲ್ಲದೇ ಅವರು ಇತ್ತೀಚೆಗೆ ಮ್ಯಾಜಿಕ್ ಮೊಮೆಂಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಮಗ ನಟ ಸಲ್ಮಾನ್ ಖಾನ್ ಅವರೊಂದಿಗಿನ ಬಾಂಧವ್ಯದ ಕುರಿತು ಮಾತುಗಳನ್ನು ಹಂಚಿಕೊಂಡಿದ್ದಾರೆ.
ಸಲೀಂ ಖಾನ್ ಮತ್ತು ಸಲ್ಮಾನ್ ಖಾನ್ ನಡುವಿನ ಒಡನಾಟ
ಸಲೀಂ ಖಾನ್ ಅವರು ಹೇಳಿದಂತೆ ನಟ ಸಲ್ಮಾನ್ ಖಾನ್, ಸಲೀಂ ಖಾನ್ ಅವರಿಗೆ ಇಷ್ಟವಾಗದ ಏನನ್ನಾದರೂ ಮಾಡಿದರೆ ಅಥವಾ ಏನಾದರೂ ತಪ್ಪು ಮಾಡಿದರೆ ಅವರು ನಟನೊಂದಿಗೆ ತಿಂಗಳುಗಟ್ಟಲೆ ಮಾತನಾಡುತ್ತಿರಲಿಲ್ಲವಂತೆ. ಆ ವೇಳೆ ನಟ ತನ್ನ ತಂದೆಯನ್ನು ಭೇಟಿಯಾಗದೆ ಮನೆಯಿಂದ ಹೊರಗೆ ಹೋಗುತ್ತಿದ್ದರಂತೆ. ಆದರೆ ನಂತರ ಬಂದು 'ಕ್ಷಮಿಸಿ, ನಾನು ಮಾಡಿದ್ದು ಸರಿಯಲ್ಲ' ಎಂದು ಹೇಳುತ್ತಿದ್ದರಂತೆ.
ಸಲೀಂ ಅವರು ತಮ್ಮ ತಂದೆಯೊಂದಿಗೆ ಹೊಂದಿದ್ದಕ್ಕಿಂತ ಹೆಚ್ಚು ಒಡನಾಟವನ್ನು ತಮ್ಮ ಮಗ ಸಲ್ಮಾನ್ ಜೊತೆ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ. ಇನ್ನು ತಮ್ಮ ತಂದೆಯೊಂದಿಗಿನ ಸಂಬಂಧದ ಬಗ್ಗೆ ಮಾತನಾಡಿದ ಸಲೀಂ, ಅವರ ತಂದೆಯ ಬೂಟುಗಳ ಶಬ್ದ ಕೇಳಿದ ತಕ್ಷಣ ಹೆದರುತ್ತಿದ್ದರಂತೆ. ಆದರೆ ಅವರು ತಮ್ಮ ಮಕ್ಕಳಿಗೆ ಆ ರೀತಿಯ ಪೋಷಕರಾಗಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಸಲೀಂ ತಮ್ಮ ಮಕ್ಕಳು ತಮ್ಮ ಸ್ನೇಹಿತರಾಗಬೇಕೆಂದು ತಾನು ಬಯಸುತ್ತೇನೆ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Sikandar Teaser Out: ಸಲ್ಮಾನ್-ರಶ್ಮಿಕಾ ನಟನೆಯ ಬಹು ನಿರೀಕ್ಷಿತ ʼಸಿಕಂದರ್ʼ ಚಿತ್ರದ ಟೀಸರ್ ಔಟ್
ಸಲೀಂ ಖಾನ್ ಕುಟುಂಬದ ಬಗ್ಗೆ
ಸಲೀಂ ಖಾನ್ ಮತ್ತು ಅವರ ಮೊದಲ ಪತ್ನಿ ಸಲ್ಮಾ ಖಾನ್ ಅವರಿಗೆ ಮೂವರು ಗಂಡು ಮಕ್ಕಳಿದ್ದಾರೆ. ಸಲ್ಮಾನ್, ಸೊಹೈಲ್ ಖಾನ್ ಮತ್ತು ಅರ್ಬಾಜ್ ಖಾನ್ ಮತ್ತು ಮಗಳು ಅಲ್ವಿರಾ ಖಾನ್ ಅಗ್ನಿಹೋತ್ರಿ ಮತ್ತು ಅರ್ಪಿತಾ ಖಾನ್. 1981ರಲ್ಲಿ, ಸಲೀಂ ಅವರು ನಟಿ ಹೆಲೆನ್ ಅವರನ್ನು ಎರಡನೇ ಬಾರಿಗೆ ವಿವಾಹವಾದರು.
ನಟ ಸಲ್ಮಾನ್ ಖಾನ್ ನಟನೆಯ ಸಿಕಂದರ್ ಸಿನಿಮಾ ಮಾರ್ಚ್ 30ರಂದು ಚಿತ್ರಮಂದಿರದಲ್ಲಿ ರಿಲೀಸ್ ಆಗಿದೆ. ಎ.ಆರ್.ಮುರುಗದಾಸ್ ನಿರ್ದೇಶನದ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಕಾಜಲ್ ಅಗರ್‌ವಾಲ್ ಮತ್ತು ಸತ್ಯರಾಜ್ ನಟಿಸಿದ್ದಾರೆ. ಈ ಚಿತ್ರವನ್ನು ಸಾಜಿದ್ ನಾಡಿಯಾಡ್ವಾಲಾ ನಿರ್ಮಿಸಿದ್ದಾರೆ. ಇದು ಇಲ್ಲಿಯವರೆಗೆ ಈ ಸಿನಿಮಾ 98 ಕೋಟಿ ರೂ. ಗಳಿಸಿದೆಯಂತೆ.