ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Sikandar Teaser Out: ಸಲ್ಮಾನ್‌-ರಶ್ಮಿಕಾ ನಟನೆಯ ಬಹು ನಿರೀಕ್ಷಿತ ʼಸಿಕಂದರ್‌ʼ ಚಿತ್ರದ ಟೀಸರ್‌ ಔಟ್‌

ಸಲ್ಮಾನ್‌ ಖಾನ್‌-ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವ ಬಾಲಿವುಡ್‌ ಚಿತ್ರ ʼಸಿಕಂದರ್‌ʼನ ಟೀಸರ್‌ ರಿಲೀಸ್‌ ಆಗಿದೆ. ಆ್ಯಕ್ಷನ್‌ ಪ್ಯಾಕ್ಡ್‌ ಟೀಸರ್‌ನಲ್ಲಿ ಸಲ್ಮಾನ್‌ ಮತ್ತೊಮ್ಮೆ ಮಿಂಚು ಹರಿಸಿದ್ದಾರೆ. ಲಕ್ಕಿ ಚಾರ್ಮ್‌ ಎನಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ಮೋಡಿ ಮಾಡಿದ್ದಾರೆ.

ಸಲ್ಮಾನ್‌ ಖಾನ್‌ ನಟನೆಯ ʼಸಿಕಂದರ್‌ʼ ಚಿತ್ರದ ಟೀಸರ್‌ ಔಟ್‌

ʼಸಿಕಂದರ್‌ʼ ಚಿತ್ರದ ಪೋಸ್ಟರ್‌.

Profile Ramesh B Feb 27, 2025 3:54 PM

ಮುಂಬೈ: ಸಲ್ಮಾನ್‌ ಖಾನ್‌ (Salman Khan)-ರಶ್ಮಿಕಾ ಮಂದಣ್ಣ(Rashmika Mandanna) ಅಭಿಮಾನಿಗಳ ಬಹು ದಿನಗಳ ಕಾಯುವಿಕೆಗೆ ಕೊನೆಗೂ ತೆರೆ ಬಿದ್ದಿದೆ. ಇಬ್ಬರು ಸೂಪರ್‌ ಸ್ಟಾರ್‌ಗಳು ಮೊದಲ ಬಾರಿ ತೆರೆ ಹಂಚಿಕೊಳ್ಳುತ್ತಿರುವ, ಈಗಾಗಲೇ ಭಾರೀ ನಿರೀಕ್ಷೆ ಹುಟ್ಟು ಹಾಕಿರುವ 'ಸಿಕಂದರ್‌' ಬಾಲಿವುಡ್‌ ಸಿನಿಮಾದ ಜಬರ್‌ಜಸ್ತ್‌ ಟೀಸರ್‌ ಹೊರ ಬಿದ್ದಿದೆ (Sikandar Teaser Out). ಆ್ಯಕ್ಷನ್‌ ಪ್ಯಾಕ್ಡ್‌ ಟೀಸರ್‌ನಲ್ಲಿ ಸಲ್ಮಾನ್‌ ಮತ್ತೊಮ್ಮೆ ಮಿಂಚು ಹರಿಸಿದ್ದಾರೆ. ಸೂಪರ್‌ ಹಿಟ್‌ ಚಿತ್ರಗಳ ನಿರ್ದೇಶಕ, ಕಾಲಿವುಡ್‌ನ ಎ.ಆರ್‌.ಮುರುಗದಾಸ್‌ (A.R. Murugadoss) ಆ್ಯಕ್ಷನ್‌‌ ಕಟ್‌ ಹೇಳುತ್ತಿರುವ ಈ ಸಿನಿಮಾ ಇದೀಗ ಟೀಸರ್‌ ಮೂಲಕ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ.

ಸಾಜಿದ್‌ ನಾಡಿಯಾವಾಲ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸುತ್ತಿದ್ದು, ಅವರ ಹುಟ್ಟುಹಬ್ಬದ ಪ್ರಯುಕ್ತ ಈ ವಿಶೇಷ ಟೀಸರ್‌ ಹೊರ ತರಲಾಗಿದೆ. ಈ ಹಿಂದೆ ಸಲ್ಮಾನ್‌ ಖಾನ್‌ ಅವರ ಜನ್ಮದಿನದ ಪ್ರಯುಕ್ತ ಅವರ ಪಾತ್ರವನ್ನು ಪರಿಚಯಿಸುವ ಟೀಸರ್‌ನಲ್ಲೇ ಬಿಡುಗಡೆ ಮಾಡಲಾಗಿತ್ತು. ಸಲ್ಮಾನ್‌ ಅವರ ಲುಕ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದರು. ಇದೀಗ ರಿಲೀಸ್‌ ಆದ ಮತ್ತೊಂದು ಟೀಸರ್‌ ಇನ್ನಷ್ಟು ಗಮನ ಸೆಳೆಯುವಂತಿದೆ. ರಶ್ಮಿಕಾ ಮಂದಣ್ಣ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಹಿಂದಿನ ಟೀಸರ್‌ನಲ್ಲಿ ರಶ್ಮಿಕಾ ಪಾತ್ರವನ್ನು ಪರಿಚಯಿಸಿರಲಿಲ್ಲ. ಇದರಿಂದ ಅವರ ಫ್ಯಾನ್ಸ್‌ ನಿರಾಸೆಗೊಳಗಾಗಿದ್ದರು. ಇದೀಗ ಅವರ ಪಾತ್ರದ ಸಣ್ಣ ಝಲಕ್‌ ಹೊರ ಬಿದ್ದಿದೆ.



ಸದ್ಯ ರಶ್ಮಿಕಾ ʼಛಾವಾʼ ಚಿತ್ರದ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ವಿಕ್ಕಿ ಕೌಶಲ್‌ ಜತೆಗೆ ಮೊದಲ ಬಾರಿಗೆ ಕಾಣಿಸಿಕೊಂಡ ಈ ಸಿನಿಮಾ ಈಗಾಗಲೇ ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ 500 ಕೋಟಿ ರೂ. ಗಳಿಸಿದೆ. ಕಳೆದ ವರ್ಷ ತೆರೆಕಂಡ ರಶ್ಮಿಕಾ ಅಭಿನಯದ ʼಪುಷ್ಪ 2ʼ ಟಾಲಿವುಡ್‌ ಚಿತ್ರವೂ ಗಲ್ಲಾ ಪಟ್ಟಿಗೆ ದೋಚಿತ್ತು. ಹೀಗಾಗಿ ʼಸಿಕಂದರ್‌ʼ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

2025ರ ಈದ್‌ ವೇಳೆಗೆ ಈ ಚಿತ್ರ ತೆರೆ ಕಾಣಲಿದೆ. ಪ್ರಮುಖ ಪಾತ್ರಗಳಲ್ಲಿ ದಕ್ಷಿಣ ಭಾರತದ ಜನಪ್ರಿಯ ನಟಿ, ಬಹುಭಾಷಾ ಕಲಾವಿದೆ ಕಾಜಲ್ ಅಗರ್​ವಾಲ್, ಕನ್ನಡದ ಕಿಶೋರ್‌, ಸುನೀಲ್‌ ಶೆಟ್ಟಿ, ಪ್ರತೀಕ್‌ ಬಬ್ಬರ್‌, ಚೈತನ್ಯ ಚೌಧರಿ, ನವಾಬ್‌ ಶಾ ಮತ್ತಿತರರು ನಟಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Sikandar Teaser Out: 'ಸಿಕಂದರ್‌' ಚಿತ್ರದ ಟೀಸರ್‌ ಔಟ್‌; ಸಲ್ಮಾನ್‌ ಲುಕ್‌ಗೆ ಫ್ಯಾನ್ಸ್‌ ಫಿದಾ: ರಶ್ಮಿಕಾ ಅಭಿಮಾನಿಗಳಿಗೆ ನಿರಾಸೆ

ಗೆಲುವಿನ ಜೈತ್ರ ಯಾತ್ರೆ ಮುಂದುವರಿಸ್ತಾರಾ ರಶ್ಮಿಕಾ?

ವಿಶೇಷ ಎಂದರೆ ರಶ್ಮಿಕಾ ಸದ್ಯ ʼಅನಿಮಲ್‌ʼ, ʼಪುಷ್ಪ 2ʼ ಮತ್ತು ʼಛಾವಾʼ ಚಿತ್ರದ ಹ್ಯಾಟ್ರಿಕ್‌ ಗೆಲುವಿನ ಸಂಭ್ರಮದಲ್ಲಿದ್ದಾರೆ. ಅವರು ನಾಯಕಿಯಾಗಿ ಕಾಣಿಸಿಕೊಂಡ ಈ 3 ಚಿತ್ರಗಳೂ ಭರ್ಜರಿ ಜಯ ದಾಖಲಿಸಿವೆ. ಇತ್ತ ಸಲ್ಮಾನ್‌ ಖಾನ್‌ ಅವರ ಇತ್ತೀಚಿನ ಚಿತ್ರಗಳು ಬಾಕ್ಸ್‌ ಆಫೀಸ್‌ನಲ್ಲಿ ಅಷ್ಟೇನೂ ಸದ್ದು ಮಾಡಿಲ್ಲ. ಇತ್ತೀಚೆಗೆ ತೆರೆಕಂಡ ʼಕಿಸಿ ಕ ಭಾಯಿ ಕಿಸಿ ಕಿ ಜಾನ್‌ʼ ಮತ್ತು ʼಟೈಗರ್‌ 3ʼ ಬಾಕ್ಸ್‌ ಆಫೀಸ್‌ನಲ್ಲಿ ಸಾಧಾರಣ ಯಶಸ್ಸನ್ನಷ್ಟೇ ಕಂಡಿದೆ. ನಿರೀಕ್ಷಿತ ಮಟ್ಟದಲ್ಲಿ ಕಮಾಲ್‌ ಮಾಡಿರಲಿಲ್ಲ. ಹೀಗಾಗಿ ಲಕ್ಕಿ ಚಾರ್ಮ್‌ ಎನಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಅವರಿಂದಾಗಿ ಈ ಸಿನಿಮಾ ಧೂಳೆಬ್ಬಿಸಲಿದೆ ಎನ್ನುವ ಲೆಕ್ಕಾಚಾರ ಅರಂಭವಾಗಿದೆ.