ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fake application: ನಾಯಿ, ಟ್ರ್ಯಾಕ್ಟರ್ ಆಯ್ತು ಇದೀಗ ರಾಮ, ಸೀತೆ, ಕಾಗೆ ಹೆಸರಿನಲ್ಲಿ ವಸತಿ ಪ್ರಮಾಣ ಪತ್ರಕ್ಕೆ ಅರ್ಜಿ

Viral Video: ನಾಯಿ, ಟ್ರ್ಯಾಕ್ಟರ್ ಆಯ್ತು ಈಗ ದೇವರು, ಕಾಗೆ ಹೆಸರಿನಲ್ಲಿ ವಸತಿ ಪ್ರಮಾಣ ಪತ್ರ ಕೋರಿರುವ ಪ್ರಕರಣ ಬಿಹಾರದ ಖಗಾರಿಯಾ ಜಿಲ್ಲೆಯಲ್ಲಿ ನಡೆದಿದೆ. ಅರ್ಜಿದಾರರು ಇದಕ್ಕೆ ಸಂಬಂಧಿಸಿ ಫೋಟೋ ಕೂಡ ಸಲ್ಲಿಸಿದ್ದಾರೆ. ಆದರೆ ಇದನ್ನು ತಿರಸ್ಕರಿಸಲಾಗಿದೆ. ಅಲ್ಲದೇ ಅರ್ಜಿ ಸಲ್ಲಿಸಿದವರ ವಿರುದ್ಧ ಪ್ರಕರಣವನ್ನೂ ದಾಖಲಿಸಲಾಗಿದೆ.

ರಾಮ, ಸೀತೆ, ಕಾಗೆ ಹೆಸರಿನಲ್ಲಿ ವಸತಿ ಪ್ರಮಾಣ ಪತ್ರಕ್ಕೆ ಅರ್ಜಿ!

ಖಗಾರಿಯಾ: ದೇವರು (god) ಮತ್ತು ಕಾಗೆಯ (crow) ಹೆಸರಿನಲ್ಲಿ ವಸತಿ ಪ್ರಮಾಣಕ್ಕೆ (fake residence certificate applications) ಅರ್ಜಿ ಸಲ್ಲಿಸಿರುವ ಘಟನೆ ಬಿಹಾರದ (bihar) ಖಗಾರಿಯಾ (khagaria) ಜಿಲ್ಲೆಯಲ್ಲಿ ನಡೆದಿದೆ. ಈ ಹಿಂದೆ ನಾಯಿ, ಟ್ರ್ಯಾಕ್ಟರ್ ಹೆಸರಿನಲ್ಲಿ ಇಂತಹ ಅರ್ಜಿಗಳು ಬಂದಿದ್ದು,ಇದೀಗ ದೇವರಾದ ರಾಮ, ಸೀತೆ ಮತ್ತು ಕಾಗೆ ಎನ್ನುವ ಹೆಸರಿನಲ್ಲಿ ವಸತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿರುವ ಘಟನೆ ನಡೆದಿದೆ. ಅರ್ಜಿಯಲ್ಲಿ ದೇವರ ಫೋಟೋಗಳನ್ನು ಕೂಡ ಸಲ್ಲಿಸಲಾಗಿದೆ. ಈ ಅರ್ಜಿಗಳನ್ನು ತಿರಸ್ಕರಿಸಲಾಗಿದ್ದು, ಸಂಬಂಧಪಟ್ಟವರ ವಿರುದ್ಧ ಕ್ರಮಕ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಖಗಾರಿಯಾ ಜಿಲ್ಲೆಯಲ್ಲಿ ಈ ಹಿಂದೆ ನಾಯಿ ಬಾಬು, ಸೋನಾಲಿಕ ಟ್ರ್ಯಾಕ್ಟರ್ ಹೆಸರಿನಲ್ಲಿ ವಸತಿ ಪ್ರಮಾಣ ಪತ್ರವನ್ನು ಕೋರಲಾಗಿತ್ತು. ಇಡಿದ ಭಗವಾನ್ ರಾಮ, ಸೀತಾ ದೇವಿ, ಕಾಗೆ ಹೆಸರಿನಲ್ಲಿ ವಸತಿ ಪ್ರಮಾಣಪತ್ರಕ್ಕೆ ಚೌತಮ್ ವಲಯ ಕಚೇರಿಗೆ ಅರ್ಜಿ ಸಲ್ಲಿಸಲಾಗಿದೆ. ಶ್ರೀ ರಾಮ ರಾಮ್ ಹೆಸರಿನಲ್ಲಿ ಸಲ್ಲಿಸಿರುವ ನಿವಾಸ ಪ್ರಮಾಣಪತ್ರದ ಅರ್ಜಿಯೊಂದಿಗೆ ಭಗವಾನ್ ರಾಮನ ಫೋಟೋವನ್ನು ಕೂಡ ಸಲ್ಲಿಸಲಾಗಿದೆ. ಇದರಲ್ಲಿ ತಂದೆ- ದಶರಥ, ತಾಯಿ- ಕೌಶಲ್ಯ, ಗ್ರಾಮ- ಅಯೋಧ್ಯೆ, ಪೊಲೀಸ್ ಠಾಣೆ- ಚೌತಮ್, ಜಿಲ್ಲೆ ಖಗಾರಿಯಾ ಎಂದು ಉಲ್ಲೇಖಿಸಲಾಗಿದೆ.

ಸೀತಾ ದೇವಿಯ ಫೋಟೋದೊಂದಿಗೆ ಸಲ್ಲಿಸಿರುವ ಅರ್ಜಿಯಲ್ಲಿ ಶ್ರೀಮತಿ ಮಾತಾ ಸೀತಾ, ತಂದೆ- ರಾಜ ಜನಕ್, ತಾಯಿ- ರಾಣಿ ಸುನೈನಾ, ಗ್ರಾಮ- ಅಯೋಧ್ಯೆ, ಪೊಲೀಸ್ ಠಾಣೆ ಚೌತಮ್, ಜಿಲ್ಲೆ ಖಗಾರಿಯಾ ಎಂದು ಬರೆಯಲಾಗಿದೆ. ಇನ್ನೊಂದು ಅರ್ಜಿಯಲ್ಲಿ ಕಾಗೆಯ ಫೋಟೋವನ್ನು ಸಲ್ಲಿಸಲಾಗಿದ್ದು, ಇದರಲ್ಲಿ ಅರ್ಜಿದಾರರ ಹೆಸರನ್ನು ಕಾಗೆ, ತಂದೆಯ ಹೆಸರು ಕೌವಾ ಸಿಂಗ್, ತಾಯಿಯ ಹೆಸರು ಮೈನಾ ಸಿಂಗ್, ಗ್ರಾಮ ಭದಾಸ್, ಜಿಲ್ಲೆ, ಖಗಾರಿಯಾ ಎಂದು ನಮೂದಿಸಲಾಗಿದೆ.

ಇಂತಹ ಹಲವಾರು ನಕಲಿ ಅರ್ಜಿಗಳನ್ನು ಆರ್‌ಟಿಪಿಎಸ್ ಪೋರ್ಟಲ್ ಮೂಲಕ ಸಲ್ಲಿಸಲಾಗಿದ್ದು, ಇದನ್ನು ತಿರಸ್ಕರಿಸಲಾಗಿದೆ. ಇದರ ವಿರುದ್ಧ ಕ್ರಮಕ್ಕೆ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ. ಈ ಬಗ್ಗೆ ಚೌಥಮ್, ಗೋಗ್ರಿ ಮತ್ತು ಚಿತ್ರಗುಪ್ತನಗರ ಸೇರಿದಂತೆ ವಿವಿಧ ಪೊಲೀಸ್ ಠಾಣೆ ಪ್ರದೇಶಗಳಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ಕೂಡ ದಾಖಲಿಸಿರುವುದಾಗಿ ಜಿಲ್ಲಾಡಳಿತ ತಿಳಿಸಿದೆ.



ಈ ನಕಲಿ ಅರ್ಜಿ ಪ್ರತಿಗಳ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ಹಿಂದೆ ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ಭೋಜ್‌ಪುರಿ ನಟಿ ಮೊನಾಲಿಸಾ ಅವರ ಫೋಟೋವನ್ನು ಬಳಸಿಕೊಂಡು ಸೋನಾಲಿಕಾ ಟ್ರ್ಯಾಕ್ಟರ್ ಹೆಸರಿನಲ್ಲಿ ವಸತಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯಲ್ಲಿ ತಂದೆಯ ಹೆಸರು ಸ್ವರಾಜ್ ಟ್ರ್ಯಾಕ್ಟರ್ ಮತ್ತು ತಾಯಿ ಕಾರ್ ದೇವಿ ಎಂದು ಉಲ್ಲೇಖಿಸಲಾಗಿತ್ತು.

ಈ ಸುದ್ದಿಯನ್ನೂ ಓದಿ: China Restriction to Travel Abroad: ಶಿಕ್ಷಕರು, ವೈದ್ಯರು, ನಿವೃತ್ತರು...ಚೀನಾ ನೌಕರರು ವಿದೇಶಕ್ಕೆ ಹೋಗುವಂತಿಲ್ಲ

ಕುಟ್ಟಾ ಬಾಬು ಮತ್ತು ಕುಟಿಯಾ ದೇವಿ ದಂಪತಿಯ ಮಗ ನಾಯಿ ಬಾಬು ಹೆಸರಿನಲ್ಲೂ ಕೂಡ ನಿವಾಸ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಲಾಗಿದ್ದು, ಇದಕ್ಕೆ ಅನುಮೋದನೆಯು ಸಿಕ್ಕಿತ್ತು. ಆದರೆ ಇದು ಬಳಿಕ ಆಡಳಿತಕ್ಕೆ ಮುಜುಗರವನ್ನುಂಟು ಮಾಡಿದ್ದು ತಕ್ಷಣವೇ ರದ್ದುಗೊಳಿಸಲಾಗಿತ್ತು. ಅಲ್ಲದೆ ಅರ್ಜಿಯನ್ನು ಅಜಾಗರೂಕತೆಯಿಂದ ರವಾನಿಸಿ ಕಂಪ್ಯೂಟರ್ ಆಪರೇಟರ್‌, ಪ್ರಮಾಣಪತ್ರ ನೀಡಿದ ಕಂದಾಯ ಇಲಾಖೆ ಅಧಿಕಾರಿಯನ್ನು ವಜಾಗೊಳಿಸಲಾಯಿತು.

ಇಂತಹ ನಕಲಿ ಅರ್ಜಿಗಳು ಕೇವಲ ನಿವಾಸ ಪ್ರಮಾಣ ಪತ್ರಕ್ಕಾಗಿ ಮಾತ್ರವಲ್ಲ ಆಧಾರ್ ಕಾರ್ಡ್‌, ಪಡಿತರ ಚೀಟಿಗಳಿಗೂ ಬರುತ್ತಿದೆ. ಆದರೆ ಇದರ ವಿರುದ್ಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಡಳಿತ ಹೇಳಿದೆ.