ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Maa Inti Bangaram Twitter Review: ಸಮಂತಾ ನಟನೆಯ ಹೊಸ ಸಿನಿಮಾ ನೋಡಿ ಪ್ರೇಕ್ಷಕರು ಏನಂದ್ರು? ತೆಲುಗಿನಲ್ಲಿ ದಿಗಂತ್‌ಗೆ ಸಿಗಲಿದೆಯಾ ಗೆಲುವು?

ಸಮಂತಾ ನಟಿಸಿ, ನಿರ್ಮಿಸಿರುವ 'ಮಾ ಇಂಟಿ ಬಂಗಾರಂ' ಸಿನಿಮಾ ಇಂದು (ಜೂನ್‌ 19) ಬಿಡುಗಡೆಯಾಗಿದ್ದು, ಎಕ್ಸ್ (ಟ್ವಿಟ್ಟರ್) ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಂದಿನಿ ರೆಡ್ಡಿ ನಿರ್ದೇಶನದ ಈ ಫ್ಯಾಮಿಲಿ ಡ್ರಾಮಾದಲ್ಲಿ ಸಮಂತಾ ಸೊಸೆಯಾಗಿ ಅದ್ಭುತವಾಗಿ ನಟಿಸಿದ್ದಾರೆ. ಬಿಡುಗಡೆಗೆ ಮುನ್ನವೇ 35 ಕೋಟಿ ರೂ. ಬಿಸಿನೆಸ್ ಮಾಡಿದ್ದ ಈ ಚಿತ್ರವನ್ನು ಸ್ವತಃ ಸಮಂತಾ ಅವರೇ ನಿರ್ಮಾಣ ಮಾಡಿದ್ದಾರೆ.

ಸಮಂತಾ ನಟಿಸಿ, ನಿರ್ಮಿಸಿರುವ 'ಮಾ ಇಂಟಿ ಬಂಗಾರಂ' ಸಿನಿಮಾವು ಶುಕ್ರವಾರ (ಜೂನ್ 19) ಬಿಡುಗಡೆಯಾಗಿದೆ. 'ಓ ಬೇಬಿ' ರೀತಿಯ ಬ್ಲಾಕ್‌ಬಸ್ಟರ್ ಚಿತ್ರದ ನಂತರ ಸಮಂತಾ ಮತ್ತು ನಿರ್ದೇಶಕಿ ನಂದಿನಿ ರೆಡ್ಡಿ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಸಿನಿಮಾ ಇದಾಗಿದ್ದು, ಅನೌನ್ಸ್‌ ಆದ ದಿನದಿಂದಲೇ ಭಾರಿ ನಿರೀಕ್ಷೆಗಳು ಮೂಡಿದ್ದವು. ಖ್ಯಾತ ನಿರ್ದೇಶಕ, ಸಮಂತಾ ಅವರ ಪತಿ ರಾಜ್ ನಿಡಿಮೋರು ಈ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆ ಒದಗಿಸಿದ್ದು, 'ಟ್ರಲಾಲಾ ಮೂವಿಂಗ್ ಪಿಕ್ಚರ್ಸ್' ಬ್ಯಾನರ್ ಅಡಿಯಲ್ಲಿ ಸಮಂತಾ ನಿರ್ಮಿಸಿದ್ದಾರೆ.

ಸುಮಾರು ರೂ. 25-30 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಸಿನಿಮಾ, ಬಿಡುಗಡೆಗೆ ಮುನ್ನವೇ ನಾನ್-ಥಿಯೇಟ್ರಿಕಲ್ (ಓಟಿಟಿ, ಸ್ಯಾಟಲೈಟ್) ಹಕ್ಕುಗಳ ಮೂಲಕವೇ ಸುಮಾರು ರೂ. 35 ಕೋಟಿ ಪ್ರೀ-ರಿಲೀಸ್ ಬಿಸಿನೆಸ್ ಮಾಡಿತ್ತು. ಇನ್ನು, ಕನ್ನಡ ನಟ ದಿಗಂತ್‌ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿಭಾಯಿಸಿದ್ದು, ಅವರಿಗೂ ಈ ಸಿನಿಮಾದಿಂದ ದೊಡ್ಡ ಗೆಲುವು ಸಿಗಲಿದೆಯಾ ಎಂಬ ಕುತೂಹಲ ಸಿನಿಪ್ರಿಯರದ್ದು. ಸದ್ಯ ಚಿತ್ರವನ್ನು ವೀಕ್ಷಿಸಿದ ಪ್ರೇಕ್ಷಕರು ಎಕ್ಸ್ (ಟ್ವಿಟ್ಟರ್) ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

'ಮಾ ಇಂಟಿ ಬಂಗಾರಂ' ಸಿನಿಮಾದ ಕಥೆ ಏನು?

ಇದೊಂದು ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯಲ್ಲಿ ಸಾಗುವ ಪಕ್ಕಾ ಫ್ಯಾಮಿಲಿ ಕಥೆ. ಕುಟುಂಬಕ್ಕಾಗಿ ಏನನ್ನಾದರೂ ಮಾಡಲು ಸಿದ್ಧಳಾಗಿರುವ ಸೊಸೆಯ ಪಾತ್ರದಲ್ಲಿ ಸಮಂತಾ ಕಾಣಿಸಿಕೊಂಡಿದ್ದಾರೆ. ಮನೆಯಲ್ಲಿ ನಡೆಯುವ ದೈನಂದಿನ ಫ್ಯಾಮಿಲಿ ಡ್ರಾಮಾ, ಹಾಸ್ಯ, ಎಮೋಷನ್ಸ್ ಜೊತೆಗೆ ಅನಿರೀಕ್ಷಿತವಾಗಿ ಬರುವ ಪವರ್‌ಫುಲ್ ಆಕ್ಷನ್ ದೃಶ್ಯಗಳ ಸುತ್ತ ಈ ಕಥೆ ಸುತ್ತುತ್ತದೆ. ಸಮಂತಾ ಅವರೊಂದಿಗೆ ಗುಲ್ಶನ್ ದೇವಯ್ಯ, ದಿಗಂತ್‌, ಶ್ರೀಮುಖಿ, ಲಕ್ಷ್ಮಿ, ಮಂಜೂಷಾ, ಗೌತಮಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಸಂತೋಷ್ ನಾರಾಯಣನ್ ಸಂಗೀತ ಹಾಗೂ ಓಂ ಪ್ರಕಾಶ್ ಛಾಯಾಗ್ರಹಣ ಈ ಸಿನಿಮಾಕ್ಕಿದೆ.

Samantha Ruth Prabhu: ಸಿಎಂ ದಳಪತಿ ವಿಜಯ್ ಭೇಟಿಯಾದ ನಟಿ ಸಮಂತಾ; ಹೇಳಿದ್ದೇನು?

ಹೇಗಿದೆ ರೆಸ್ಪಾನ್ಸ್?

ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ಈ ಸಿನಿಮಾಗೆ ಸಂಬಂಧಿಸಿದ ಪ್ರತಿಕ್ರಿಯೆಗಳು ಸದ್ದು ಮಾಡುತ್ತಿವೆ. ಪ್ರೇಕ್ಷಕರಿಂದ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆರಂಭದಿಂದ ಇಂಟರ್ವೆಲ್ ವರೆಗೆ ಸಿನಿಮಾದ ಕಥೆ ತುಂಬಾ ಫ್ರೆಶ್ ಆಗಿ, ಹಾಸ್ಯದೊಂದಿಗೆ ಸಾಗಿದೆ ಎಂದು ಪ್ರೇಕ್ಷಕರು ಶ್ಲಾಘಿಸುತ್ತಿದ್ದಾರೆ. ಪ್ರಮುಖವಾಗಿ ಸೊಸೆಯ ಪಾತ್ರದಲ್ಲಿ ಸಮಂತಾ ಅವರ ನಟನೆ, ಅಲ್ಲದೆ, ಅವರೇ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಿರುವುದು ಮತ್ತು ಕ್ಲೈಮ್ಯಾಕ್ಸ್ ಆಕ್ಷನ್ ಸೀಕ್ವೆನ್ಸ್ ಪ್ರೇಕ್ಷಕರಿಗೆ ಹಿಡಿಸಿವೆ. ಕುಟುಂಬದೊಂದಿಗೆ ಕುಳಿತು ಆರಾಮಾಗಿ ನೋಡಬಹುದಾದ ಸಿನಿಮಾ ಇದಾಗಿದೆ ಎಂದು ಕೆಲವರು ಪ್ರಶಂಸಿಸುತ್ತಿದ್ದಾರೆ.

'ಮಾ ಇಂಟಿ ಬಂಗಾರಂ' ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ



ಸೆಕೆಂಡ್‌ ಹಾಫ್ ಕೊಂಚ ನೀರಸ

ಈ ಸಿನಿಮಾದ ಸೆಕೆಂಡ್ ಹಾಫ್ ವಿಷಯದಲ್ಲಿ ಮಾತ್ರ ಪ್ರೇಕ್ಷಕರು ಕೊಂಚ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇಂಟರ್ವೆಲ್ ನಂತರ ಸಿನಿಮಾದ ಟೋನ್ ಬದಲಾದರೂ, ಚಿತ್ರಕಥೆ ತುಂಬಾ ಊಹಿಸಬಹುದಾದ ರೀತಿಯಲ್ಲಿದೆ. ಯಾವುದೇ ಟ್ವಿಸ್ಟ್‌ಗಳಿಲ್ಲದೆ ಕಥೆ ಸರಳವಾಗಿ ಸಾಗಿದೆ ಎಂದು ಸಿನಿಮಾ ನೋಡಿದವರು ಹೇಳುತ್ತಿದ್ದಾರೆ. ಕಥೆಯಲ್ಲಿ ವಿಲನ್ ರೋಲ್‌ ಇನ್ನಷ್ಟು ಸ್ಟ್ರಾಂಗ್‌ ಆಗಿರಬೇಕಿತ್ತು. ಸಂತೋಷ್ ನಾರಾಯಣನ್ ಅವರ ಹಿನ್ನೆಲೆ ಸಂಗೀತ ಕೂಡ ಕೆಲವು ಕಡೆ ಸಪ್ಪೆ ಎನಿಸುತ್ತದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

'ಮಾ ಇಂಟಿ ಬಂಗಾರಂ' ಚಿತ್ರಕ್ಕೆ ಸಿಕ್ಕಿರುವ ಪ್ರತಿಕ್ರಿಯೆ



ದ್ವಿತೀಯಾರ್ಧದಲ್ಲಿನ ಕೆಲವು ನೆಗೆಟಿವ್‌ ಅಂಶಗಳನ್ನು ಪಕ್ಕಕ್ಕಿಟ್ಟರೆ, ಫಸ್ಟ್ ಹಾಫ್ ಮಜಾವಾಗಿದೆ ಹಾಗೂ ಸಮಂತಾ ಅವರ ನಟನೆ ಈ ಸಿನಿಮಾವನ್ನು ಕಾಪಾಡಿದೆ. ಇದೊಂದು ಒಮ್ಮೆ ನೋಡಬಹುದಾದ 'ಆವರೇಜ್ ಫ್ಯಾಮಿಲಿ ಎಂಟರ್‌ಟೈನರ್' ಸಿನಿಮಾ ಎಂದು ಸಿನಿಪ್ರಿಯರ ಕಾಮೆಂಟ್‌ ಮಾಡುತ್ತಿದ್ದಾರೆ.