ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಾಕ್ಸ್‌ ಆಫೀಸ್‌ನಲ್ಲಿ ರಣಬೇಟೆ ಆರಂಭಿಸಿದ ನಟಿ ಸಮಂತಾ; ಎರಡೇ ದಿನದಲ್ಲಿ ದಾಖಲೆ ಗಳಿಕೆ ಮಾಡಿದ ʻಮಾ ಇಂಟಿ ಬಂಗಾರಂʼ

ನಟಿ ಸಮಂತಾ ರುತ್ ಪ್ರಭು ಹಾಗೂ ನಿರ್ದೇಶಕಿ ನಂದಿನಿ ರೆಡ್ಡಿ ಕಾಂಬಿನೇಷನ್‌ನ 'ಮಾ ಇಂಟಿ ಬಂಗಾರಂ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ರಣಬೇಟೆ ಆರಂಭಿಸಿದ್ದು, ಕೇವಲ ಎರಡೇ ದಿನಗಳಲ್ಲಿ ಬರೋಬ್ಬರಿ 28 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಕುಟುಂಬ ರಕ್ಷಿಸಲು ಆಯುಧ ಹಿಡಿಯುವ ಸಾಧಾರಣ ಗೃಹಿಣಿಯ ಪಾತ್ರದಲ್ಲಿ ಸಮಂತಾ ಅಬ್ಬರಿಸಿದ್ದಾರೆ.

ನಟಿ ಸಮಂತಾ ರುತ್‌ ಪ್ರಭು ಮತ್ತು ನಿರ್ದೇಶಕಿ ನಂದಿನಿ ರೆಡ್ಡಿ ಕಾಂಬಿನೇಷನ್‌ನ 'ಮಾ ಇಂಟಿ ಬಂಗಾರಂ' ಸಿನಿಮಾ ಜೂನ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಆಕ್ಷನ್ ಫ್ಯಾಮಿಲಿ ಡ್ರಾಮಾ ಶೈಲಿಯ ಈ ಚಿತ್ರವು ಮೊದಲ ದಿನದಿಂದಲೇ ಭರ್ಜರಿ ಪಾಸಿಟಿವ್ ಟಾಕ್ ಪಡೆದುಕೊಂಡು, ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಕಲೆಕ್ಷನ್ ಮಾಡುತ್ತಿದೆ. ಸಾಮಾನ್ಯ ಗೃಹಿಣಿಯಾಗಿ ಸೀರೆಯಲ್ಲಿ ಕಾಣಿಸಿಕೊಳ್ಳುತ್ತಲೇ, ತನ್ನ ಕುಟುಂಬವನ್ನು ರಕ್ಷಿಸಲು ಆಯುಧ ಹಿಡಿಯುವ ನಾಯಕಿಯ ಪಾತ್ರದಲ್ಲಿ ಸಮಂತಾ ಅವರ ನಟನೆಗೆ ಸಿನಿಪ್ರಿಯರು ಫಿದಾ ಆಗಿದ್ದಾರೆ.

ಎರಡೇ ದಿನಕ್ಕೆ 28 ಕೋಟಿ ರೂ. ಬಾಚಿದ ಸಮಂತಾ

‘ಮಾ ಇಂಟಿ ಬಂಗಾರಂ’ ಸಿನಿಮಾವು ಮೊದಲ ದಿನವೇ ಬರೋಬ್ಬರಿ 13 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಇನ್ನು ಶನಿವಾರ (ಜೂನ್ 20) ವೀಕೆಂಡ್ ಆಗಿದ್ದರಿಂದ ಈ ಸಿನಿಮಾದ ಕಲೆಕ್ಷನ್ ಮತ್ತಷ್ಟು ಹೆಚ್ಚಾಗಿದೆ. ಒಟ್ಟಾರೆಯಾಗಿ ಈ ಎರಡು ದಿನಗಳಲ್ಲಿ 'ಮಾ ಇಂಟಿ ಬಂಗಾರಂ' ಸಿನಿಮಾ 28 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಅಂದರೆ ಶನಿವಾರ ಒಂದೇ ದಿನ ‘ಮಾ ಇಂಟಿ ಬಂಗಾರಂ’ ಸಿನಿಮಾಗೆ 15 ಕೋಟಿಗೂ ಹೆಚ್ಚು ಕಲೆಕ್ಷನ್ ಬಂದಿದೆ. ಭಾನುವಾರ (ಜೂನ್ 21) ರಜಾದಿನವಾಗಿರುವುದರಿಂದ ಕಲೆಕ್ಷನ್ ಇನ್ನಷ್ಟು ಹೆಚ್ಚಾಗಬಹುದು ಎಂದು ಎಂದು ಹೇಳಲಾಗುತ್ತಿದೆ.

Samantha Ruth Prabhu: ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸಿದ ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’!

ಭಾನುವಾರವೂ 15 ಕೋಟಿ ರೂ.ಗಳಷ್ಟು ಗಳಿಕೆಯಾದರೆ, ‘ಮಾ ಇಂಟಿ ಬಂಗಾರಂ’ ಸಿನಿಮಾದ ಗಳಿಕೆಯು ಮೊದಲ ವಾರಾಂತ್ಯಕ್ಕೆ 43+ ಕೋಟಿ ರೂ. ತಲುಪುವ ನಿರೀಕ್ಷೆ ಇದೆ. ಈ ಮೂಲಕ ತಮ್ಮ ಸ್ಟಾರ್‌ ಪವರ್‌ ಏನೆಂಬುದನ್ನು ನಟಿ ಸಮಂತಾ ಅವರು ಸಾಬೀತು ಮಾಡಿದ್ದಾರೆ. ಅಂದಹಾಗೆ, ವಿದೇಶಿ ಮಾರುಕಟ್ಟೆಯಲ್ಲೂ ಈ ಚಿತ್ರಕ್ಕೆ ಉತ್ತಮ ಕಲೆಕ್ಷನ್ ಸಿಕ್ಕಿದೆ. ಪ್ರಮುಖವಾಗಿ ಅಮೆರಿಕದಲ್ಲಿ ಈ ಸಿನಿಮಾವು ರೆಕಾರ್ಡ್ ಗಳಿಕೆ ಮಾಡುತ್ತಿದ್ದು, ಈಗಾಗಲೇ ಅಲ್ಲಿ ಸುಮಾರು 9+ ಕೋಟಿ ರೂ. ಗಳಿಕೆ ಆಗಿರುವ ಮಾಹಿತಿ ಇದೆ ಎಂದು ಹೇಳಲಾಗುತ್ತಿದೆ.

28 ಕೋಟಿ ರೂ. ಬಾಚಿದ ಮಾ ಇಂಟಿ ಬಂಗಾರಂ



ಲಾಭದಲ್ಲಿರುವ ಚಿತ್ರತಂಡ

'ಟ್ರಲಾಲಾ ಪಿಕ್ಚರ್ಸ್' ಬ್ಯಾನರ್ ಅಡಿಯಲ್ಲಿ ಸಮಂತಾ, ರಾಜ್ ನಿಡಿಮೋರು ಮತ್ತು ಹಿಮಾಂಕ್ ದುವ್ವೂರಿ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸುಮಾರು 30 ಕೋಟಿ ರೂಪಾಯಿ ಬಜೆಟ್ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದ್ದು, ಸಮಂತಾ ಜೊತೆಗೆ ಶ್ರೀನಿವಾಸ ಗವಿರೆಡ್ಡಿ, ಮಂಜೂಷಾ, ದಿಗಂತ್, ಗುಲ್ಶನ್ ದೇವಯ್ಯ, ಶ್ರೀಮುಖಿ, ಗೌತಮಿ, ಆನಂದ್, ಲಕ್ಷ್ಮಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಂತೋಷ್ ನಾರಾಯಣನ್ ಸಂಗೀತ ನಿರ್ದೇಶನ ಮಾಡಿದ್ದರೆ, ಓಂ ಪ್ರಕಾಶ್ ಛಾಯಾಗ್ರಹಣ ಹಾಗೂ ಧರ್ಮೇಂದ್ರ ಕಾಕರ್ಲ ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ಬಿಡುಗಡೆಗೂ ಮೊದಲೇ ಈ ಸಿನಿಮಾವು ಲಾಭದಲ್ಲಿತ್ತು ಎನ್ನಲಾಗಿದೆ.