ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Samantha Ruth Prabhu: ಪತಿ ರಾಜ್ ಜೊತೆಗಿನ ಕ್ಯೂಟ್ ಫೋಟೋಸ್ ಹಂಚಿಕೊಂಡ ನಟಿ; ಸಮಂತಾ ಫುಲ್ ಖುಷ್‌!

Samantha Ruth Prabhu: ಇತ್ತೀಚಿನ ಚಿತ್ರ 'ಮಾ ಇಂಟಿ ಬಂಗಾರಂ' (Maa Inti Bangaaram) ಯಶಸ್ಸಿನ ನಂತರ ಈ ದಂಪತಿ ಥೈಲ್ಯಾಂಡ್‌ನ ಬೀಚ್ ರೆಸಾರ್ಟ್‌ನಲ್ಲಿ ಬೇಬಿಮೂನ್‌ನಲ್ಲಿದ್ದಾರೆ. ಸಮಂತಾ ಅಲ್ಲಿ ತಮ್ಮ ನೆನಪುಗಳ ಚಿತ್ರಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ.ಸಮಂತಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಕೇಷನ್‌ನ ಸುಂದರ ಮತ್ತು ಕ್ಯೂಟ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಈ ಫೋಟೋಗಳಲ್ಲಿ ಗಂಡ-ಹೆಂಡತಿ ಇಬ್ಬರೂ ಜೊತೆಯಾಗಿ ಸಮಯ ಕಳೆಯುತ್ತಿರುವುದನ್ನು ಕಾಣಬಹುದು.

ಸಮಂತಾ ರಾಜ್‌

ನಟಿ ಸಮಂತಾ ರುತ್ ಪ್ರಭು (Samantha) ಮತ್ತು ಚಲನಚಿತ್ರ ನಿರ್ಮಾಪಕ ರಾಜ್ ನಿಡಿಮೋರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚಿನ ಚಿತ್ರ 'ಮಾ ಇಂಟಿ ಬಂಗಾರಂ' (Maa Inti Bangaaram) ಯಶಸ್ಸಿನ ನಂತರ ಈ ದಂಪತಿ ಥೈಲ್ಯಾಂಡ್‌ನ ಬೀಚ್ ರೆಸಾರ್ಟ್‌ನಲ್ಲಿ ಬೇಬಿಮೂನ್‌ನಲ್ಲಿದ್ದಾರೆ. ಸಮಂತಾ ಅಲ್ಲಿ ತಮ್ಮ ನೆನಪುಗಳ ಚಿತ್ರಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ.

ಸಮಂತಾ ಪೋಸ್ಟ್‌!

ಸಮಂತಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಕೇಷನ್‌ನ ಸುಂದರ ಮತ್ತು ಕ್ಯೂಟ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಈ ಫೋಟೋಗಳಲ್ಲಿ ಗಂಡ-ಹೆಂಡತಿ ಇಬ್ಬರೂ ಜೊತೆಯಾಗಿ ಸಮಯ ಕಳೆಯುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ: Aamir Khan : ಲವ್ ಜಿಹಾದ್‌ನ ಬ್ಯ್ರಾಂಡ್ ಅಂದವರಿಗೆ ಆಮಿರ್ ಖಾನ್ ಖಡಕ್‌ ರಿಯಾಕ್ಷನ್‌

ಒಳ್ಳೆ ಊಟ, ಹೀಲಿಂಗ್ ಸೆಷನ್‌ಗಳು, ಮಸಾಜ್, ಯೋಗ ಮತ್ತು ಸ್ಕಿನ್‌ಕೇರ್ ಸೆಷನ್‌ಗಳನ್ನು ಎಂಜಾಯ್ ಮಾಡುತ್ತಾ, ಸಮಂತಾ ಮತ್ತು ರಾಜ್ ತಮ್ಮ ಖುಷಿಯ ಕ್ಷಣಗಳನ್ನು ಕಳೆದಿದ್ದಾರೆ. ಈ ಪೋಸ್ಟ್ ಹಂಚಿಕೊಂಡು ಸಮಂತಾ, "ವೆಲ್‌ನೆಸ್ ಟ್ರಾವೆಲ್ ಯಾವಾಗಲೂ ನನ್ನ ಫೇವರಿಟ್," ಎಂದು ಬರೆದುಕೊಂಡಿದ್ದಾರೆ.



"ಆರೋಗ್ಯ ಯಾವಾಗಲೂ ನನ್ನ ನೆಚ್ಚಿನ ಪ್ರಯಾಣವಾಗಿದೆ" ಎಂದು ಸಮಂತಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ,

ಪೂಲ್ ಬಳಿ ವಿಶ್ರಾಂತಿ ಪಡೆಯುವುದು, ಮಸಾಜ್ ಪಡೆಯುವುದು ಖುಷಿಯ ಕ್ಷಣಗಳನ್ನು ಕಳೆದಿದ್ದಾರೆ. ಈ.

ಸಮಂತಾ ಈ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಂತೆ, ಅಭಿಮಾನಿಗಳು ಕಾಮೆಂಟ್‌ಗಳ ಸುರಿಮಳೆಗೈದಿದ್ದಾರೆ.

ಸಮಂತಾ ರಾಜ್ & ಡಿಕೆ ಜೊತೆ ಪ್ರೈಮ್ ವಿಡಿಯೋ ವೆಬ್ ಸರಣಿ 'ದಿ ಫ್ಯಾಮಿಲಿ ಮ್ಯಾನ್ ಸೀಸನ್ 2 (2021)' ಮತ್ತು ಸಿಟಾಡೆಲ್: ಹನಿ ಬನ್ನಿ (2024) ನಲ್ಲಿ ಕೆಲಸ ಮಾಡಿದ್ದಾರೆ. 2024 ರಲ್ಲಿ ರಾಜ್ ಜೊತೆ ಅವರ ಡೇಟಿಂಗ್ ವದಂತಿಗಳು ಹರಡಲು ಪ್ರಾರಂಭಿಸಿದವು. ಆ ವರ್ಷದ ಕೊನೆಯಲ್ಲಿ ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ಮದುವೆ ಆದರು.

ನಂದಿನಿ ರೆಡ್ಡಿ ನಿರ್ದೇಶನದ ಮತ್ತು ಸಮಂತಾ ಪತಿ ರಾಜ್ ನಿರ್ಮಾಣದ 'ಮಾ ಇಂಟಿ ಬಂಗಾರಂ' ಸಿನಿಮಾ ವಿಶ್ವಾದ್ಯಂತ 100 ಕೋಟಿ ರೂಪಾಯಿ ಗಳಿಕೆ ಮಾಡಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.

ಈ ಚಿತ್ರದಲ್ಲಿ ಗೌತಮಿ, ಮಂಜುಷಾ ಮತ್ತು ದಿಗಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಥೆಯನ್ನು ರಾಜ್ ನಿಡಿಮೋರು ಬರೆದಿದ್ದರೆ, ಸಂತೋಷ್ ನಾರಾಯಣನ್ ಸಂಗೀತ ಸಂಯೋಜಿಸಿದ್ದಾರೆ.

ಇದನ್ನೂ ಓದಿ: Uma Shankari: ‘ಉಪ್ಪಿ ದಾದಾ MBBS’ ನಟಿ ಉಮಾಶಂಕರಿಗೆ ಕ್ಯಾನ್ಸರ್! ಭಾವನಾತ್ಮಕ ಪೋಸ್ಟ್ ವೈರಲ್‌

ಮಯೋಸಿಟಿಸ್ ರೋಗದಿಂದಾಗಿ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದ ಸಮಂತಾ ಅವರು 'ಮಾ ಇಂಟಿ ಬಂಗಾರಂ' ಚಿತ್ರದ ಮೂಲಕ ಬೆಳ್ಳಿಪರದೆಯಲ್ಲಿ ಕಾಣಿಸಿಕೊಂಡರು. ನಿರ್ಮಾಪಕರ ಪ್ರಕಾರ, ಈ ಚಿತ್ರ ಬಿಡುಗಡೆಯಾದ 22 ದಿನಗಳಲ್ಲಿ ವಿಶ್ವದಾದ್ಯಂತ ₹100 ಕೋಟಿಗಳಿಗೂ ಹೆಚ್ಚು ಗಳಿಸಿದೆ. ಬಿಡುಗಡೆಯಾದ ಮೊದಲ ದಿನವೇ ಸುಮಾರು ₹13 ಕೋಟಿ ಗಳಿಕೆ ಕಂಡಿತ್ತು.

Yashaswi Devadiga

View all posts by this author