ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಫೆಬ್ರವರಿಯಲ್ಲೇ ನಡೆದಿತ್ತಾ ಸಮಂತಾ - ರಾಜ್‌ ನಿಡಿಮೋರು ನಿಶ್ಚಿತಾರ್ಥ? ಸ್ಯಾಮ್‌ ಬೆರಳಲ್ಲಿರುವ ಎಂಗೇಜ್‌ಮೆಂಟ್ ರಿಂಗ್‌ನ ಬೆಲೆ ಎಷ್ಟು ಗೊತ್ತಾ?‌

Samantha Ruth Prabhu Raj Nidimoru Wedding: ನಟಿ ಸಮಂತಾ ರುತ್ ಪ್ರಭು ಮತ್ತು ನಿರ್ದೇಶಕ ರಾಜ್ ನಿಡಿಮೋರು ಡಿಸೆಂಬರ್ 1 ರಂದು ಭೂತ ಶುದ್ಧಿ ವಿವಾಹ ಪದ್ಧತಿಯಲ್ಲಿ ಮದುವೆಯಾಗಿದ್ದಾರೆ. ಆದರೆ, ಇವರಿಬ್ಬರ ನಿಶ್ಚಿತಾರ್ಥವು ಈ ವರ್ಷದ ಫೆಬ್ರವರಿ 13ರಂದೇ ನಡೆದಿತ್ತು ಎಂಬ ಅನುಮಾನ ವ್ಯಕ್ತವಾಗಿದೆ.

ಬಹುಭಾಷಾ ನಟಿ ಸಮಂತಾ ರುತ್‌ ಪ್ರಭು ಮತ್ತು ರಾಜ್‌ ನಿಡಿಮೋರು ಅವರು ಕೊಯಮತ್ತೂರಿನ ಇಶಾ ಯೋಗ ಫೌಂಡೇಶನ್‌ನಲ್ಲಿ ಇರುವ ಲಿಂಗ ಭೈರವಿ ದೇವಿ ದೇವಸ್ಥಾನದಲ್ಲಿ ಡಿಸೆಂಬರ್‌ 1ರಂದು ಮದುವೆಯಾಗಿದ್ದಾರೆ. ಭೂತ ಶುದ್ಧಿ ವಿವಾಹ (Bhuta Shuddhi Vivaha) ಪದ್ಧತಿಯಲ್ಲಿ ಸ್ಯಾಮ್‌ ಮತ್ತು ರಾಜ್‌ ಹೊಸಬಾಳಿಗೆ ಕಾಲಿಟ್ಟಿದ್ದಾರೆ. ಆದರೆ ಇವರಿಬ್ಬರು ಈ ವರ್ಷದ ಆರಂಭದಲ್ಲೇ ಮದುವೆಯಾಗುವ ನಿರ್ಧಾರ ಮಾಡಿದ್ದರು ಎಂಬ ಮಾಹಿತಿ ಈಗ ಕೇಳಿಬಂದಿದೆ.

ಫೆಬ್ರವರಿಯಲ್ಲೇ ನಡೆದಿತ್ತಾ ಎಂಗೇಜ್‌ಮೆಂಟ್‌?

ಹೌದು, ಈ ವರ್ಷದ ಫೆಬ್ರವರಿ 13ರಂದು ಸಮಂತಾ ಒಂದಷ್ಟು ಫೋಟೋಗಳನ್ನ ಹಂಚಿಕೊಂಡಿದ್ದರು. ಅದರಲ್ಲಿ ಒಂದು ಫೊಟೋದಲ್ಲಿ ಅವರು ಧರಿಸಿದ್ದ ಉಂಗುರ ತುಂಬಾ ಹೈಲೈಟ್‌ ಆಗಿತ್ತು. ಆಗಲೇ ತುಂಬಾ ಜನಕ್ಕೆ ಡೌಟಿತ್ತು. ಆದರೆ ಸಮಂತಾ ಅಂದು ಏನು ಹೇಳಿರಲ್ಲ. ಇದೀಗ ಅಂದು ಧರಿಸಿದ್ದ ಉಂಗುರವನ್ನೇ ಮದುವೆಯಲ್ಲೂ ಸಮಂತಾ ಧರಿಸಿದ್ದನ್ನು ಎಲ್ಲರೂ ನೋಟಿಸ್‌ ಮಾಡಿದ್ದಾರೆ. ಜತೆಗೆ ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಉಂಗುರ ಡಿಸೈನ್‌ ಮಾಡಿದ್ದ ಸಂಸ್ಥೆಯನ್ನು ಮೆನ್ಷನ್‌ ಮಾಡಿದ್ದಾರೆ. ಉಂಗುರದ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಮದುವೆ ಸಂದರ್ಭದಲ್ಲಿ 10 ತಿಂಗಳ ಹಿಂದಿನ ಉಂಗುರದ ಬಗ್ಗೆ ಮಾತನಾಡುತ್ತಿದ್ದಾರೆ ಎಂದರೆ, ಇದು ಪಕ್ಕಾ ಎಂಗೇಜ್‌ಮೆಂಟ್‌ ರಿಂಗ್‌ ಎಂಬ ಮಾತುಗಳು ಕೇಳಿಬಂದಿವೆ.

Samantha Ruth Prabhu: ಸಮಂತಾ-ನೀಡಿಮೋರ್ ಡೇಟಿಂಗ್ ಮಾಡುತ್ತಿರುವುದು ನಿಜವೇ? ಏನು ಹೇಳುತ್ತಿವೆ ಈ ಚಿತ್ರಗಳು?

ಈ ರಿಂಗ್‌ನ ಬೆಲೆ ಎಷ್ಟು?

ವಿಂಟೇಜ್ ಮದುವೆಯ ಉಂಗುರಗಳು ಯಾವಾಗಲೂ ತನ್ನದೇ ಆದ ಮೋಡಿಯನ್ನು ಹೊಂದಿವೆ. ಸಮಂತಾ ರುತ್ ಪ್ರಭು ಅವರ ಈ ವಜ್ರದ ಉಂಗುರವನ್ನು ಅಥೆನ್ಸ್ ಮೂಲದ ಥಿಯೋಡೋರೋಸ್ ಸವೊಪೌಲೋಸ್ ವಿನ್ಯಾಸಗೊಳಿಸಿದ್ದಾರೆ. ಅಂದಹಾಗೆ, ಸಮಂತಾ ಅವರು ಧರಿಸಿದ್ದ ವಜ್ರದ ಉಂಗುರದ ಬೆಲೆಯು ಸುಮಾರು 1.50 ಕೋಟಿ ರೂ. ಎಂದು ಹೇಳಲಾಗುತ್ತಿದೆ.

ಫೆಬ್ರವರಿಯಲ್ಲಿ ಸಮಂತಾ ಹಂಚಿಕೊಂಡಿದ್ದ ಪೋಸ್ಟ್



ಮತ್ತೊಂದು ಪೋಸ್ಟ್‌ ಹಾಕಿದ ಮಾಜಿ ಪತ್ನಿ

ಈ ಮಧ್ಯೆ ರಾಜ್‌ ನಿಡಿಮೋರು ಅವರ ಮಾಜಿ ಪತ್ನಿ ಶ್ಯಾಮಿಲಿ ಡೇ ಅವರು ಮತ್ತೊಂದು ಪೋಸ್ಟ್‌ ಹಾಕಿದ್ದಾರೆ. ಸಮಂತಾ ಮತ್ತು ರಾಜ್‌ ಮದುವೆಗೂ ಮುನ್ನ ಹತಾಶಾ ಜನರು ಹತಾಶೆಯ ಕೆಲಸಗಳನ್ನೇ ಮಾಡುತ್ತಾರೆ ಎಂದಿದ್ದ ಅವರು ಇದೀಗ ಒಂದು ಗ್ಯಾಲಕ್ಸಿ ಫೋಟೋವನ್ನು ಹಂಚಿಕೊಂಡು, ನಾವು ಇಲ್ಲಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಇದರರ್ಥ ಈ ಜಗತ್ತಿನಲ್ಲಿ ನಾವೆಷ್ಟು ಚಿಕ್ಕವರು ಎಂದು ಹೇಳುವುದಕ್ಕೆ ಅವರು ಸ್ಟೋರಿ ಹಂಚಿಕೊಂಡಿದ್ದಾರೆ.

Samantha Bhuta Shuddhi Vivaha: ಪವಿತ್ರ ಭೂತ ಶುದ್ಧಿ ವಿವಾಹವಾದ ಸಮಂತಾ - ರಾಜ್‌; ಏನಿದು ಆಚರಣೆ?

ಮದುವೆ ದಿನಾಂಕದಲ್ಲೂ ಇದೆ ಒಂದು ಟ್ವಿಸ್ಟ್‌

ಈ ನಡುವೆ ಸಮಂತಾ ಅವರ ಮದುವೆ ದಿನಾಂಕಗಳ ಬಗ್ಗೆ ಚರ್ಚೆ ಶುರುವಾಗಿದೆ. ಅದೇನಪ್ಪ ಅಂದ್ರೆ, ಈ ಹಿಂದೆ ಅವರು ನಾಗ ಚೈತನ್ಯ ಅವರನ್ನು ಮದುವೆಯಾಗಿದ್ದು 2017ರ ಅಕ್ಟೋಬರ್‌ನಲ್ಲಿ. ಡಿವೋರ್ಸ್‌ ಪಡೆದುಕೊಂಡಿದ್ದು 2021ರ ಅಕ್ಟೋಬರ್‌ನಲ್ಲಿ. ಇನ್ನು, ನಾಗ ಚೈತನ್ಯ ಎರಡನೇ ಮದುವೆ ಆಗಿದ್ದು ಕಳೆದ ವರ್ಷ ಡಿಸೆಂಬರ್‌ನಲ್ಲಿ. ಇದೀಗ ಸಮಂತಾ ಕೂಡ ಡಿಸೆಂಬರ್‌ 1ರಂದೇ ಮದುವೆಯಾಗಿದ್ದಾರೆ. ಹಾಗಾಗಿ, ನೆಟ್ಟಿಗರು ಕೂಡ ಈ ಮದುವೆ ದಿನಾಂಕಗಳನ್ನು ಲೆಕ್ಕ ಹಾಕುತ್ತಿದ್ದಾರೆ.