ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Sanvi Sudeep: ನಿಮ್ಮ ಪರ್ಮಿಷನ್ ತಗೋಬೇಕಾ? ಟ್ಯಾಟೂ ವಿಚಾರಕ್ಕೆ ಸುದೀಪ್‌ ಪುತ್ರಿ ಗರಂ

Sanvi Sudeep: ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಈಗಾಗಲೇ ಗಾಯಕಿಯಾಗಿ ಚಿತ್ರಂಗ ಪ್ರವೇಶಿಸಿದ್ದಾರೆ. 'ಮಾರ್ಕ್' ಚಿತ್ರದ 'ಮಸ್ತ್ ಮಲೈಕಾ' ಸಾಂಗ್ ಹಾಡಿ ಮೋಡಿ ಮಾಡಿದ್ದ ಸಾನ್ವಿ ಶೀಘ್ರದಲ್ಲೇ ಸಿನಿಮಾದಲ್ಲಿ ನಟಿಸುವ ಸಾಧ್ಯತೆಯಿದೆ. ಇತ್ತೀಚೆಗೆ ಗಣೇಶನ ಟ್ಯಾಟೂ ಹಾಕಿಸಿಕೊಂರುವುದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.

ಸಾನ್ವಿ ಸುದೀಪ್‌

ಬೆನ್ನಿನ ಮೇಲೆ ಗಣೇಶನ ಟ್ಯಾಟೂ ಹಾಕಿಸಿಕೊಂಡು ವಿವಾದಕ್ಕೆ ಕಾರಣರಾಗಿದ್ದ ಸುದೀಪ್‌ ಪುತ್ರಿ, ಗಾಯಕಿ ಸಾನ್ವಿ ಸುದೀಪ್‌ ಇದೀಗ ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ʻನಿಮ್ಮಿಂದ ಪಮಿರ್ಷನ್ ತೆಗೆದುಕೊಂಡು ನನ್ನ ಮೈಮೇಲೆ ಟ್ಯಾಟೂ ಹಾಕಿಸಿಕೊಳ್ಳಬೇಕಾ? ಎಂದು ಸಾನ್ವಿ ಸುದೀಪ್ (Sanvi Sudeep) ನಟ್ಟಿಗರ ವಿರುದ್ಧ ಗರಂ ಆಗಿದ್ದಾರೆ.

ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಈಗಾಗಲೇ ಗಾಯಕಿಯಾಗಿ ಚಿತ್ರಂಗ ಪ್ರವೇಶಿಸಿದ್ದಾರೆ. 'ಮಾರ್ಕ್' ಚಿತ್ರದ 'ಮಸ್ತ್ ಮಲೈಕಾ' ಸಾಂಗ್ ಹಾಡಿ ಮೋಡಿ ಮಾಡಿದ್ದ ಸಾನ್ವಿ ಶೀಘ್ರದಲ್ಲೇ ಸಿನಿಮಾದಲ್ಲಿ ನಟಿಸುವ ಸಾಧ್ಯತೆಯಿದೆ. ಇತ್ತೀಚೆಗೆ ಗಣೇಶನ ಟ್ಯಾಟೂ ಹಾಕಿಸಿಕೊಂರುವುದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.

ನೀವೇನೇ ಕಾಮೆಂಟ್ ಮಾಡಿದರೂ ನಾನು ಕೇರ್ ಮಾಡಲ್ಲ. ಆದರೆ ನನ್ನೊಬ್ಬಳ ಬಗ್ಗೆ ಟ್ರೋಲ್ ಮಾಡಲು ಅದೆಷ್ಟು ಎನರ್ಜಿ ವೇಸ್ಟ್ ಮಾಡುತ್ತಿದ್ದೀರಲ್ಲಾ? ಜನರ ಗಮನ ಸೆಳೆಯಲು ಹೀಗೆಲ್ಲಾ ಮಾಡಿರಬಹುದು. ಆ ಆಸೆಯೂ ಈಡೇರಲಿ ಎಂದಿದ್ದಾರೆ.

ಇದನ್ನೂ ಓದಿ: Samantha Ruth Prabhu: ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸಿದ ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’!

ಸಾನ್ವಿ ತಂದೆ ಸುದೀಪ್‌ ಅವರನ್ನು ಓಲ್ಡ್‌ ಮ್ಯಾನ್‌ ಅಂದಿದ್ದಕ್ಕೆ ಒಂದಿಷ್ಟು ಮಂದಿ ತಗಾದೆ ತೆಗೆದಿದ್ದರು. ಅದಕ್ಕೂ ಸಾನ್ವಿ ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ಸುದೀಪ್‌ ಮಗಳು. ನನ್ನ ಪಾಲಿಗೆ ಅವರು ಯಾವತ್ತೂ ಓಲ್ಡ್‌ ಮ್ಯಾನ್‌ ಆಗಿರುತ್ತಾರೆ. ದ್ವೇಷಿಸಲು ನಿಮಗೊಂದು ಸಣ್ಣ ಕಾರಣ ಸಿಕ್ಕರೂ ಸಾಕಾಗುತ್ತದೆ. ಆದರೆ ಹೀಗೆಲ್ಲ ಸಮಯ ವ್ಯರ್ಥ ಮಾಡುವ ಬದಲು ಒಳ್ಳೆ ಕೆಲಸಗಳಿಗೆ ನಿಮ್ಮ ಸಮಯ ವಿನಿಯೋಗಿಸಿ’ ಎಂದಿದ್ದಾರೆ.



ಭಾಗವಹಿಸಲು ಸಾಧ್ಯವಾಗದೇ ಇರಲು ಇದೇ ಕಾರಣ

ಏನೂ ಸಾಧನೆ ಮಾಡದೇ ಎಷ್ಟೆಲ್ಲಾ ಮಾತನಾಡುತ್ತಾಳೆ ಬ್ಲಾ ಬ್ಲಾ ಅಂತೆಲ್ಲಾ ನೀವು ಹೇಳಬಹುದು. ನಿಮ್ಮ ಮಾತು ನಿಜ. ಹಾಗೆಂದು ನೀವು ಹೇಳಿದ್ದನ್ನೆಲ್ಲಾ ಕೇಳಿಕೊಂಡು ಇರಲಿಕ್ಕೆ ಸಾಧ್ಯವಿಲ್ಲ. ನೀವು ತೆರೆಯ ಹಿಂದೆ ಹೇಡಿಗಳ ರೀತಿ ಅವಿತು ಕುಳಿತು ನಮ್ಮ ಬಗ್ಗೆ ಮಾತನಾಡುತ್ತೀರಿ. ನಮ್ಮ ಬದುಕಿನ ಪ್ರತೀ ಸನ್ನೀವೇಶವನ್ನೂ ಇದೇ ರೀತಿ ನೋಡುತ್ತೀರಿ.

ನಿಮ್ಮಿಂದಾಗಿ ಅಪ್ಪನ ಹುಟ್ಟುಹಬ್ಬ ಆಚರಿಸಲು ಅಥವಾ ಆಪ್ತರ ಕೊನೆಯ ಕ್ಷಣಗಳಲ್ಲಿ ನಮಗೆ ಭಾಗವಹಿಸಲು ಸಾಧ್ಯವಾಗುವುದಿಲ್ಲ. ನಮ್ಮ ಕುಟುಂಬವನ್ನು ನಿಮ್ಮ ಮನರಂಜನೆಗೆ ಬಳಸಿಕೊಂಡಿದ್ದೀರಿ ಎಂದು ಬೇಸರ ಹೊರಹಾಕಿದ್ದಾರೆ.

ತಾವು ಜೀವನದಲ್ಲಿ ಏನನ್ನೂ ಸಾಧಿಸಿಲ್ಲ ಎಂದು ಟೀಕಿಸುವವರಿಗೆ ಉತ್ತರಿಸಿದ ಸಾನ್ವಿ, ತಾನು ಇನ್ನೂ ಏನನ್ನೂ ಸಾಧಿಸಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇನೆ, ಆದರೆ ಅನಾಮಧೇಯ ಪ್ರೊಫೈಲ್‌ಗಳ ಹಿಂದೆ ಅಡಗಿಕೊಳ್ಳುವವರಿಗಿಂತ ತಾನು ಪ್ರಾಮಾಣಿಕವಾಗಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: Darshan Movie: ಈ ವಾರ ದರ್ಶನ್ ನಟನೆಯ ಈ ಹಿಟ್‌ ಮೂವಿ ರೀ-ರಿಲೀಸ್!

ಮಾರ್ಕ್' ಚಿತ್ರದ 'ಮಸ್ತ್ ಮಲೈಕಾ' ಬಳಿಕ 'ಮ್ಯಾಂಗೋ ಪಚ್ಚ' ಚಿತ್ರದ 'ಅರಗಿಣಿಯೇ' ಹಾಡಿಗೆ ಸಾನ್ವಿ ಸುದೀಪ್ ದನಿಯಾಗಿದ್ದಾರೆ. ನಿಧಾನವಾಗಿ ಒಂದೊಂದೇ ಅವಕಾಶಗಳು ಹುಡುಕಿ ಬರ್ತಿವೆ.

Yashaswi Devadiga

View all posts by this author