ಕಿಚ್ಚ ಸುದೀಪ್ (kichcha sudeep) ಅವರ ಪುತ್ರಿ ಸಾನ್ವಿ ಸುದೀಪ್ (Saanvi sudeep) ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸುದೀಪ್ ಪುತ್ರಿ ಸಾನ್ವಿ ಬೆನ್ನಿನ ಮೇಲೆ ಅದ್ಭುತ ಗಣೇಶ ಟ್ಯಾಟೂ (Ganesh Tattoo) ಮೂಡಿದ್ದು, 8 ಗಂಟೆಗಳ ಕಲಾಕೃತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೆಂಪು ಮತ್ತು ಕಪ್ಪು ಬಣ್ಣದ ಮಿಶ್ರಣವಿರುವ ಈ ಟ್ಯಾಟೂ ಬಗ್ಗೆಯೇ ಸುದ್ದಿಯಾಗಿದೆ.
ಪ್ರತಿಭಾವಂತ ಗಾಯಕಿ
ಸಾನ್ವಿ ಸುದೀಪ್ ಅವರು ದೇಶದ ಅತ್ಯಂತ ಪ್ರತಿಷ್ಠಿತ ಟ್ಯಾಟೋ ಸ್ಟುಡಿಯೋಗಳಲ್ಲಿ ಒಂದಾದ ಹೈದರಾಬಾದಿನ 'ಏಲಿಯನ್ ಟ್ಯಾಟೋ'ಗೆ (Aliens Tattoo) ಭೇಟಿ ನೀಡಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಸಾನ್ವಿ ಪ್ರತಿಭಾವಂತ ಗಾಯಕಿ ಕೂಡ ಹೌದು. ಬಾಲ್ಯದಿಂದಲೇ ಸಂಗೀತದ ಕಡೆಗೆ ಹೆಚ್ಚಿನ ಒಲವು ಹೊಂದಿರುವ ಇವರು, ಸುದೀಪ್ ನಟನೆಯ ಸಿನಿಮಾಗಳಲ್ಲಿ ಈಗಾಗಲೇ ಹಾಡುವ ಮೂಲಕ ತಮ್ಮನ್ನು ತಾವು ಸಾಬೀತು ಪಡಿಸಿಕೊಂಡಿದ್ದಾರೆ.
ಸಾನ್ವಿ ಅವರು ಹಂಚಿಕೊಂಡಿರುವ ಈ ಟ್ಯಾಟೋ ವಿಡಿಯೋಗೆ ನೆಟ್ಟಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಣೇಶನ ಟ್ಯಾಟೋವನ್ನು ಬೆನ್ನಿನ ಮೇಲ್ಭಾಗದಲ್ಲಿ ಅಥವಾ ಭುಜಗಳ ಮಧ್ಯೆ ಹಾಕಿಸಿಕೊಳ್ಳುವುದು ಅತ್ಯಂತ ಸೂಕ್ತ ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ.
ನಟ ಸುದೀಪ್ ಅವರು ಕೂಡ ದೈವ ಭಕ್ತರು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಈಗ ಮಗಳು ಕೂಡ ಅದೇ ದಾರಿಯಲ್ಲಿ ಸಾಗುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.
ಕೆಲವರು ಈ ವೀಡಿಯೋವನ್ನು ಟ್ವಿಟ್ಟರ್, ಫೇಸ್‌ಬುಕ್ ಖಾತೆಗಳಲ್ಲಿ ಕೂಡ ಶೇರ್ ಮಾಡಿ ವೈರಲ್ ಮಾಡುತ್ತಿದ್ದಾರೆ. 'ಮಾರ್ಕ್' ಚಿತ್ರದ 'ಮಸ್ತ್ ಮಲೈಕಾ' ಬಳಿಕ 'ಮ್ಯಾಂಗೋ ಪಚ್ಚ' ಚಿತ್ರದ 'ಅರಗಿಣಿಯೇ' ಹಾಡಿಗೆ ಸಾನ್ವಿ ಸುದೀಪ್ ದನಿಯಾಗಿದ್ದಾರೆ.
ಇದನ್ನೂ ಓದಿ: Shilpa Shetty: ಮತ್ತೆ ರಿಯಾಲಿಟಿ ಶೋ ಮೂಲಕ ಕಮ್‌ಬ್ಯಾಕ್ ಆದ್ರು ಶಿಲ್ಪಾ ಶೆಟ್ಟಿ!
'ಮಸ್ತ್ ಮಲೈಕಾ' ಹಾಡಿಗಾಗಿ 'ಚಂದನವನ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್ಸ್' ಅತ್ಯುತ್ತಮ ನಟಿ ಪ್ರಶಸ್ತಿ ಕೂಡ ಸಾನ್ವಿಗೆ ಸಿಕ್ಕಿತ್ತು.