ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Saraayah Malhotra: ನಾಲ್ಕು ತಿಂಗಳ ಮಗಳಿಗೆ ನಾಮಕರಣ ಮಾಡಿದ ಕಿಯಾರಾ ಅಡ್ವಾಣಿ - ಸಿದ್ಧಾರ್ಥ್ ಮಲ್ಹೋತ್ರಾ; ಈ ಹೆಸರಿನ ಅರ್ಥ ಏನು?

Kiara Advani And Sidharth Malhotra Baby: ಬಾಲಿವುಡ್‌ನ ಜನಪ್ರಿಯ ಜೋಡಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರು ತಮ್ಮ ಮುದ್ದಾದ ಹೆಣ್ಣುಮಗಳಿಗೆ 'ಸರಾಯಾಹ್' (Saraayah) ಎಂದು ಹೆಸರಿಟ್ಟಿದ್ದಾರೆ. ಮಗಳ ಕಾಲುಗಳ ಫೋಟೋವನ್ನು ಹಂಚಿಕೊಂಡಿದ್ದಾರೆ.

ಬಾಲಿವುಡ್‌ನ ಕ್ಯೂಟ್‌ ಕಪಲ್‌ ಎಂದೇ ಕರೆಸಿಕೊಳ್ಳುವ ನಟಿ ಕಿಯಾರಾ ಅಡ್ವಾಣಿ (Kiara Advani) ಮತ್ತು ನಟ ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ದಂಪತಿಯು ನಾಲ್ಕು ತಿಂಗಳ ಹಿಂದೆ ಹೆಣ್ಣು ಮಗುವಿಗೆ ಪೋಷಕರಾಗಿದ್ದರು. ಇದೀಗ ಈ ದಂಪತಿಯು ತಮ್ಮ ಮುದ್ದಾದ ಮಗಳಿಗೆ ನಾಮಕರಣ ಮಾಡಿದ್ದಾರೆ. ಹಾಗಾದರೆ, ಈ ಮುದ್ದು ಮಗಳ ಹೆಸರೇನು? ಸರಾಯಾಹ್ ಮಲ್ಹೋತ್ರಾ!

ಏನಿದರ ಅರ್ಥ?

ಸರಾಯಾಹ್ (Saraayah) ಎಂಬ ಹೆಸರು ಹೀಬ್ರೂ ಭಾಷೆಯಿಂದ ಬಂದಿದ್ದು, ಇದರ ಅರ್ಥ 'ದೈವಿಕ ರಾಜಕುಮಾರಿ' ಅಥವಾ ʻರಾಜಕುಮಾರಿ' ಎಂದಿದೆ. ಮಗಳ ಕಾಲು ಫೋಟೋವನ್ನು ಹಂಚಿಕೊಂಡಿರುವ ಕಿಯಾರಾ ಮತ್ತು ಸಿದ್ದಾರ್ಥ್‌, "ನಮ್ಮ ಪ್ರಾರ್ಥನೆಗಳಿಂದ, ನಮ್ಮ ತೋಳುಗಳವರೆಗೆ.. ನಮ್ಮ ದೈವಿಕ ಆಶೀರ್ವಾದ, ನಮ್ಮ ರಾಜಕುಮಾರಿ" ಎಂದು ಕ್ಯಾಪ್ಷನ್‌ ಬರೆದುಕೊಂಡಿದ್ದಾರೆ. ಫೋಟೋ ಹಂಚಿಕೊಂಡ ಒಂದು ಗಂಟೆಯೊಳಗೆ 6.25 ಲಕ್ಷಕ್ಕೂ ಅಧಿಕ ಲೈಕ್ಸ್‌ ಬಂದಿವೆ. ಬಾಲಿವುಡ್‌ ನಿರ್ದೇಶಕ ಕರಣ್‌ ಜೋಹರ್‌ ಅವರು, "ನನ್ನ ಪ್ರೀತಿ ಮತ್ತು ಆಶೀರ್ವಾದಗಳು ಯಾವಾಗಲೂ ಇರಲಿ...." ಎಂದು ಈ ಫೋಟೋಗೆ ಕಾಮೆಂಟ್‌ ಮಾಡಿದ್ದಾರೆ.

Kiara Advani and Sidharth: ಕಿಯಾರಾ-ಸಿದಾರ್ಥ್‌ ಮಗುವಿನ ಫೇಸ್‌ ರಿವೀಲ್‌? ಸಲ್ಲು ಜೊತೆಗಿರುವ ಫೋಟೋದ ಅಸಲಿಯತ್ತು ಏನು?

ಯಾರೆಲ್ಲಾ ವಿಶ್‌ ಮಾಡಿದ್ರು?

ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ದಂಪತಿಗೆ ಬಾಲಿವುಡ್‌ನ ವರುಣ್‌ ಧವನ್‌, ಶಿಲ್ಪಾ ಶೆಟ್ಟಿ, ಆಮಿ ಜಾಕ್ಸನ್‌, ಭೂಮಿ ಪೆಡ್ನೇಕರ್‌, ಸಂಜಯ್‌ ಕಪೂರ್‌, ಆಥಿಯ ಶೆಟ್ಟಿ, ಪತ್ರಲೇಖಾ, ನಿಕಿತಿನ್‌ ಧೀರ್‌, ಮನೀಶ್‌ ಮಲ್ಹೋತ್ರಾ ಮುಂತಾದ ಸೆಲೆಬ್ರಿಟಿಗಳು ಶುಭ ಹಾರೈಸಿದ್ಧಾರೆ.

ಕಿಯಾರಾ ಅಡ್ವಾಣಿ ಪೋಸ್ಟ್‌



ಕಿಯಾರಾ ಮತ್ತು ಸಿದ್ಧಾರ್ಥ್ ಲವ್‌ ಸ್ಟೋರಿ

ನಟಿ ಕಿಯಾರಾ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರು ಮದೊಲು ಭೇಟಿಯಾಗಿದುದ 2018ರಲ್ಲಿ. ಆನಂತರ 2021ರಲ್ಲಿ ತೆರೆಕಂಡ 'ಶೇರ್ಷಾಹ್' (Shershaah) ಚಿತ್ರದ ಚಿತ್ರೀಕರಣದ ಸಮಯದಲ್ಲಿ ಇವರಿಬ್ಬರು ಜೋಡಿಯಾಗಿ ನಟಿಸಿದ್ದರು. ಆಗಲೇ ಇವರ ನಡುವೆ ಪ್ರೀತಿ ಚಿಗುರಿತ್ತು. ಕೆಲ ಸಮಯ ಈ ಜೋಡಿ ತಮ್ಮ ಸಂಬಂಧವನ್ನು ಹೆಚ್ಚು ಬಹಿರಂಗಪಡಿಸದೆ ಖಾಸಗಿಯಾಗಿ ಇರಿಸಿಕೊಂಡಿದ್ದರು. ಆದರೆ 2023ರ ಫೆ.7ರಂದು ರಾಜಸ್ಥಾನದ ಜೈಸಲ್ಮೇರ್‌ನಲ್ಲಿರುವ ಸೂರ್ಯಗಢ್ ಪ್ಯಾಲೇಸ್‌ನಲ್ಲಿ ಅದ್ದೂರಿಯಾಗಿ ಈ ಜೋಡಿ ಮದುವೆಯಾದರು. ಈ ವರ್ಷ ಫೆಬ್ರವರಿಯಲ್ಲಿ, "ತಮ್ಮ ಜೀವನದ ದೊಡ್ಡ ಉಡುಗೊರೆ ಶೀಘ್ರದಲ್ಲೇ ಬರಲಿದೆ" ಎಂದು ಸಿದ್ಧಾರ್ಥ್ ಮತ್ತು ಕಿಯಾರಾ ಹೇಳಿಕೊಂಡಿದ್ದರು. ಜುಲೈ 15ರಂದು ಹೆಣ್ಣು ಮಗುವಿಗೆ ಕಿಯಾರಾ ಜನ್ಮ ನೀಡಿದ್ದರು.

ಈ ವರ್ಷ ಕಿಯಾರಾ ಅಭಿನಯದ ಗೇಮ್‌ ಚೇಂಜರ್‌ ಮತ್ತು ವಾರ್‌ 2 ಸಿನಿಮಾಗಳು ತೆರೆಕಂಡು ಫ್ಲಾಪ್‌ ಎನಿಸಿಕೊಂಡಿವೆ. ಯಶ್‌ ಜೊತೆ ನಟಿಸಿರುವ ಟಾಕ್ಸಿಕ್‌ ಸಿನಿಮಾದ ಮೇಲೆ ಸದ್ಯ ಕಿಯಾರಾ ಅವರ ಗಮನ ಇದೆ. ಇನ್ನು, ಸಿದ್ದಾರ್ಥ್‌ ನಟನೆಯ ʻಪರಮ್‌ ಸುಂದರಿʼ ತೆರೆಕಂಡು ಸಾಧಾರಣ ಯಶಸ್ಸು ಕಂಡಿದೆ. ಇದೀಗ ಅವರ ಗಮನ ʻವನ್ : ಫೋರ್ಸ್ ಆ ದಿ ಫಾರೆಸ್ಟ್ʼ ಚಿತ್ರದ ಮೇಲಿದೆ.