ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

'ಹುಡ್ಗೀರು ಡೇಂಜರಸ್' ಅಂತ ಹಾಡಿದ ನಟ ʻನೀನಾಸಂʼ ಸತೀಶ್‌; ‘ಅಯೋಗ್ಯ 2’ ಚಿತ್ರದ ಮತ್ತೊಂದು ಕ್ಯಾಚಿ ಸಾಂಗ್‌ ರಿಲೀಸ್‌

ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ನಟನೆಯ 'ಅಯೋಗ್ಯ 2' ಚಿತ್ರದ ‘ಹುಡ್ಗೀರ್ ಡೇಂಜರಸ್’ ಎಂಬ ಮೂರನೇ ಹಾಡು ಹುಬ್ಬಳ್ಳಿಯಲ್ಲಿ ಬಿಡುಗಡೆಯಾಗಿದೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆಯ ಈ ಹಾಡಿಗೆ ಗಾಯಕ ವಿಜಯ್ ಪ್ರಕಾಶ್ ಧ್ವನಿಯಾಗಿದ್ದಾರೆ.

‘ನೀನಾಸಂ’ ಸತೀಶ್ ಮತ್ತು ರಚಿತಾ ರಾಮ್ ಜೋಡಿಯ ಬಹುನಿರೀಕ್ಷಿತ ‘ಅಯೋಗ್ಯ 2’ ಸಿನಿಮಾದ ಮೂರನೇ ಹಾಡು ಬಿಡುಗಡೆಯಾಗಿದೆ. ಈಗಾಗಲೇ ತೆರೆಗೆ ಬಂದಿರುವ 'ಮುದ್ಮುದ್ದು ಪುಟ್‌ ಲಕ್ಷ್ಮಿ' ಹಾಗೂ ‘ಅಣ್ಣಾ ಬಂದ್ರೆ ಜೋಶ್ ಬತ್ತದೆ’ ಹಾಡುಗಳು ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಪಡೆದುಕೊಂಡ ಬೆನ್ನಲ್ಲೇ, ಚಿತ್ರತಂಡ ಇದೀಗ 'ಹುಡ್ಗೀರ್ ಡೇಂಜರಸ್' ಎಂಬ ಕ್ಯಾಚಿ ಸಾಂಗ್ ಅನ್ನು ಹುಬ್ಬಳ್ಳಿಯಲ್ಲಿ ಪ್ರೇಕ್ಷಕರ ಸಮ್ಮುಖದಲ್ಲಿ ಬಿಡುಗಡೆ ಮಾಡಿದೆ. ಮಹೇಶ್ ಕುಮಾರ್ ನಿರ್ದೇಶನದ ಈ ಸಿನಿಮಾ ಮುಂಬರುವ ಆಗಸ್ಟ್ 7 ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

ಅರ್ಜುನ್ ಜನ್ಯ ಸಂಗೀತ, ವಿಜಯ್ ಪ್ರಕಾಶ್ ಗಾಯನ

ಈಗ ರಿಲೀಸ್ ಆಗಿರುವ ‘ಹುಡ್ಗೀರ್ ಡೇಂಜರಸ್’ ಹಾಡಿಗೆ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಟ್ಯೂನ್ ಹಾಕಿದ್ದು, ‘ಬಹದ್ದೂರ್’ ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದಾರೆ. ಗಾಯಕ ವಿಜಯ ಪ್ರಕಾಶ್ ಅವರ ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಸಂತೋಷ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಎಸ್.ವಿ.ಸಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಎಂ. ಮುನೇಗೌಡ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ.

Ayogya-2 Movie: ಅದ್ಧೂರಿಯಾಗಿ ಸೆಟ್ಟೇರಿತು 'ಅಯೋಗ್ಯ-2'; ಮತ್ತೆ ಒಂದಾದ ಸತೀಶ್ ನೀನಾಸಂ, ರಚಿತಾ ರಾಮ್‌

ಪ್ರತಿಯೊಂದು ಹಳ್ಳಿಗೂ ತಲುಪುವಂತಿದೆ

"ಮೊದಲ ಭಾಗದ ‘ಅಯೋಗ್ಯ’ ಸಿನಿಮಾಗೆ ಬ್ಲಾಕ್ ಬಸ್ಟರ್ ಗೆಲುವು ತಂದುಕೊಟ್ಟ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ನಾವು ಎಂದೆಂದಿಗೂ ಚಿರಋಣಿ. ನಿರ್ದೇಶಕ ಮಹೇಶ್ ಕುಮಾರ್ ಹಿಂದೆ ಮಂಡ್ಯದ ಹಳ್ಳಿಯ ಕಥೆ ಹೇಳಿ ರಂಜಿಸಿದ್ದರು. ಆದರೆ ‘ಅಯೋಗ್ಯ 2’ ಚಿತ್ರದ ಕಂಟೆಂಟ್ ಕೇವಲ ಒಂದು ಹಳ್ಳಿಗೆ ಸೀಮಿತವಾಗದೆ, ಕರ್ನಾಟಕದ ಪ್ರತಿಯೊಂದು ಹಳ್ಳಿಗೂ ತಲುಪುವಂತಿದೆ" ಎನ್ನುತ್ತಾರೆ ನಟ ಸತೀಶ್‌ ನೀನಾಸಂ.

ನಾನು ಕಾತುರದಿಂದ ಕಾಯುತ್ತಿದ್ದೇನೆ

"ನಮ್ಮ ‘ಅಯೋಗ್ಯ’ ಹಾಗೂ ‘ಅಯೋಗ್ಯ 2’ ಸಿನಿಮಾಗಳನ್ನು ನಾನು ತುಂಬಾ ಇಷ್ಟಪಟ್ಟು, ಕಥೆಯನ್ನು ಎಂಜಾಯ್ ಮಾಡುತ್ತಾ ಅಭಿನಯಿಸಿದ್ದೇನೆ. ನಮ್ಮ ವಿಐಪಿಗಳ (ಪ್ರೇಕ್ಷಕರು) ಜೊತೆ ಚಿತ್ರಮಂದಿರದಲ್ಲೇ ಕುಳಿತು ಸಿನಿಮಾ ನೋಡಲು ನಾನು ಕಾತುರದಿಂದ ಕಾಯುತ್ತಿದ್ದೇನೆ" ಎನ್ನುತ್ತಾರೆ ನಟಿ ರಚಿತಾ ರಾಮ್.

ನಾನು ದರ್ಶನ್‌ ಸರ್‌ ಅಭಿಮಾನಿ

"ನಾನು ಡಿ ಬಾಸ್ ಅವರ ಅಪ್ಪಟ ಅಭಿಮಾನಿ. ಅವರು ತಮ್ಮ ಅಭಿಮಾನಿಗಳನ್ನು ಸೆಲೆಬ್ರಿಟೀಸ್ ಎಂದು ಕರೆಯುವಂತೆ, ನಾವು ಕೂಡ ನಮ್ಮ ಪ್ರೇಕ್ಷಕರನ್ನು ಆ ಸ್ಥಾನದಲ್ಲಿಟ್ಟು ಗೌರವಿಸುತ್ತೇವೆ. ಹುಬ್ಬಳ್ಳಿ ಭಾಗದ ಪ್ರೇಕ್ಷಕರ ಸಮ್ಮುಖದಲ್ಲಿ ನಮ್ಮ 3ನೇ ಹಾಡನ್ನು ಬಿಡುಗಡೆ ಮಾಡಿದ್ದೇವೆ, ನಿಮ್ಮೆಲ್ಲರ ಹಾರೈಕೆ ನಮ್ಮ ಮೇಲಿರಲಿ" ಎನ್ನುತ್ತಾರೆ ನಿರ್ದೇಶಕ ಎಸ್.‌ ಮಹೇಶ್‌ ಕುಮಾರ್.

ಈ ಚಿತ್ರದಲ್ಲಿ ದೊಡ್ಡ ತಾರಾಗಣವೇ ಇದ್ದು, ರವಿಶಂಕರ್, ಸಾಧು ಕೋಕಿಲ, ತಬಲ ನಾಣಿ, ಸುಂದರ್ ರಾಜ್, ಶಿವರಾಜ್ ಕೆ. ಆರ್. ಪೇಟೆ, ಅರುಣಾ ಬಾಲರಾಜ್, ಗಿರಿ ಶಿವಣ್ಣ ಹಾಗೂ ಮಂಜು ಪಾವಗಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸಂಭಾಷಣೆಯನ್ನು ಮಾಸ್ತಿ ಉಪ್ಪಾರಳ್ಳಿ ಬರೆದಿದ್ದು, ‘ಶಾಖಾಹಾರಿ’ ಖ್ಯಾತಿಯ ವಿಶ್ವಜಿತ್ ರಾವ್ ಈ ಚಿತ್ರದ ಕ್ಯಾಮೆರಾಮನ್ ಆಗಿ ಕೆಲಸ ಮಾಡಿದ್ದಾರೆ. ಸುರೇಶ್ ಆರ್ಮುಗಂ ಸಂಕಲನ, ಅರ್ಜುನ್ ರಾಜ್ ಸಾಹಸ ನಿರ್ದೇಶನ ʻಅಯೋಗ್ಯ 2ʼ ಚಿತ್ರಕ್ಕಿದೆ.