ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

BBK 11 Final: ಬಿಗ್‌ ಬಾಸ್‌ ಫಿನಾಲೆ ಆರಂಭ; ಟಾಪ್‌ ಸ್ಪರ್ಧಿಗಳು ಔಟ್‌ ?

ಸುಮಾರು 115 ದಿನಗಳಿಂದ ಪ್ರೇಕ್ಷಕರನ್ನು ರಂಜಿಸಿದ ಬಿಗ್ ಬಾಸ್ ಕನ್ನಡ ಸೀಸನ್ 11 ಕೊನೆಯ ಹಂತಕ್ಕೆ ಬಂದಿದ್ದು, ಯಾರು ವಿನ್‌ ಆಗಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.

ಬಿಗ್‌ ಬಾಸ್‌ ಫಿನಾಲೆ ಆರಂಭ; ಟಾಪ್‌ ಸ್ಪರ್ಧಿಗಳು ಔಟ್‌ ?

BBK 11

Profile Ramesh B Jan 26, 2025 6:08 PM

ಬೆಂಗಳೂರು: ಸುಮಾರು 115 ದಿನಗಳಿಂದ ಪ್ರೇಕ್ಷಕರನ್ನು ರಂಜಿಸಿದ ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಗ್ರ್ಯಾಂಡ್ ಫಿನಾಲೆಗೆ ಚಾಲನೆ ಸಿಕ್ಕಿದೆ (BBK 11 Final). ಶನಿವಾರ ಎಲಿಸೋಡ್ ಈಗಾಗಲೇ ಪ್ರಸಾರಗೊಂಡಿದ್ದು, ವಿನ್ನರ್ ಯಾರು ಎಂಬುದು ಕೆಲವೇ ತಾಸುಗಳಲ್ಲಿ ಘೋಷಣೆಯಾಗಲಿದೆ. ಸದ್ಯ ಮನೆಯಲ್ಲಿ 5 ಮಂದಿ ಇದ್ದಾರೆ. ಶನಿವಾರದ ಎಪಿಸೋಡ್​ನಲ್ಲಿ ಭವ್ಯಾ ಗೌಡ ಎಲಿಮಿನೇಟ್ ಆಗಿ ಆಚೆ ಬಂದಿದ್ದಾರೆ. ಈಗ ಉಳಿದಿರುವ ಉಗ್ರಂ ಮಂಜು, ತ್ರಿವಿಕ್ರಮ್, ಹನುಮಂತ, ರಜತ್ ಕಿಶನ್ ಹಾಗೂ ಮೋಕ್ಷಿತಾ ಪೈ ಪೈಕಿ ಯಾರು ಟ್ರೋಫಿ ಎತ್ತಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.

ಸದ್ಯ ದೊಡ್ಡಮನೆಯಲ್ಲಿ ಉಳಿದಿರುವ 5 ಮಂದಿಯ ಪೈಕಿ ಇಬ್ಬರು ಹೊರ ಬಂದಿದ್ದಾರೆ ಎನ್ನಲಾಗಿದೆ. ರಜತ್ ಅವರು ಬಿಗ್‌ ಬಾಸ್‌ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇವರ ಜತೆಗೆ ಉಗ್ರಂ ಮಂಜು ಕೂಡ ಹೊರ ಹೋಗಿದ್ದಾರೆ ಎನ್ನುವ ಚರ್ಚೆ ಆರಂಭವಾಗಿದೆ.



ಸದ್ಯ ಟಾಪ್ ಮೂರರಲ್ಲಿ ಮೋಕ್ಷಿತಾ ಪೈ, ಹನುಮಂತ ಹಾಗೂ ತ್ರಿವಿಕ್ರಂ ಇದ್ದಾರೆ ಎನ್ನಲಾಗಿದೆ. ಇವರ ಪೈಕಿ ವಿನ್ ಯಾರಾಗುತ್ತಾರೆ, ಯಾರಾಗಲಿದ್ದಾರೆ ಎನ್ನುವ ಚರ್ಚೆ ಜೋರಾಗಿದೆ. ಅಂತಿಮವಾಗಿ ಯಾರ ಕೈಯನ್ನು ಕಿಚ್ಚ ಸುದೀಪ್‌ ಮೇಲಕ್ಕೆತ್ತಲಿದ್ದಾರೆ ಎನ್ನುವ ಕೂತೂಹಲ ಮನೆ ಮಾಡಿದೆ. ಈ ಪ್ರಶ್ನೆಗೆ ಉತ್ತರ ಕೆಲವೇ ಗಂಟೆಗಳಲ್ಲಿ ಸಿಗಲಿದೆ.

ಸ್ಪರ್ಧಿಗಳು ಹೇಳಿದ್ದೇನು?

ಇನ್ನು ಶನಿವಾರ ಬಿಗ್ ಬಾಸ್ ಫಿನಾಲೆ ವೇದಿಕೆ ಮೇಲೆ ಬಂದಿದ್ದ ಎಲಿಮಿನೇಟ್ ಕಂಟೆಸ್ಟೆಂಟ್ ಬಳಿ ಯಾರು ವಿನ್ ಆಗಬೇಕು-ಯಾರು ವಿನ್ ಆಗಬಾರದು ಎಂಬ ಪ್ರಶ್ನೆ ಕೇಳಲಾಗಿತ್ತು. ಇದರಲ್ಲಿ ಗೌತಮಿ ಅವರು ಹನುಮಂತೂ ವಿನ್​ ಆಗಬೇಕು, ಮೋಕ್ಷಿತಾ ಪೈ ಗೆಲ್ಲಬಾರದು ಎಂದಿದ್ದರು. ಧನರಾಜ್ ಪ್ರಕಾರ, ಹನುಮ ಗೆಲ್ಲಬೇಕು, ಮೋಕ್ಷಿತಾ ಗೆಲ್ಲಬಾರದು. ಗೋಲ್ಡ್​ ಸುರೇಶ್ ಪ್ರಕಾರ, ಹನುಮ ವಿನ್ ಆಗಬೇಕು, ಮೋಕ್ಷಿತಾ ಗೆಲ್ಲಬಾರದು. ಯಮುನಾ ಅವರ ಪ್ರಕಾರ, ಹನುಮ ಗೆಲ್ಲಬೇಕು, ಮೋಕ್ಷಿತಾ ಗೆಲ್ಲಬಾರದು. ಅನುಷಾ ಅವರ ಪ್ರಕಾರ ತ್ರಿವಿಕ್ರಮ್​ ವಿನ್​ ಆಗಬೇಕು, ಮೋಕ್ಷಿತಾ ಗೆಲ್ಲಬಾರದು. ಚೈತ್ರಾ ಕೂಡ ತ್ರಿವಿಕ್ರಮ್​ ಗೆಲ್ಲಬೇಕು, ರಜತ್ ಗೆಲ್ಲಬಾರದು ಎಂದು ತಿಳಿಸಿದ್ದರು.

ಈ ಸುದ್ದಿಯನ್ನೂ ಓದಿ: BBK 11 Final: ಬಿಗ್ ಬಾಸ್ ಕನ್ನಡ ಸೀಸನ್ 11ರ ವಿನ್ನರ್​ಗೆ ಬಂದ ವೋಟ್ ಎಷ್ಟು ಕೋಟಿ ಗೊತ್ತಾ?: ರಿವೀಲ್

ಇನ್ನು ಹಂಸ ಅವರ ಪ್ರಕಾರ ತ್ರಿವಿಕ್ರಮ್​ ವಿನ್​ ಆಗಬೇಕು, ರಜತ್ ಗೆಲ್ಲಬಾರದು. ಐಶ್ವರ್ಯ ಪ್ರಕಾರ, ಹನುಮ ಗೆಲ್ಲಬೇಕು, ಭವ್ಯಾ ಗೆಲ್ಲಬಾರದು ಎಂದಿದ್ದರು. ಶಿಶಿರ್ ಪ್ರಕಾರ, ಮೋಕ್ಷಿತಾ ವಿನ್​ ಆಗಬೇಕು, ಮಂಜಣ್ಣ ಗೆಲ್ಲಬಾರದು ಎಂದು ತಿಳಿಸಿದ್ದರು. ಧರ್ಮ ಕೀರ್ತಿರಾಜ್​ ಪ್ರಕಾರ ತ್ರಿವಿಕ್ರಮ್​ ವಿನ್​ ಆದ್ರೆ, ಮೋಕ್ಷಿತಾ ಆಗಬಾರದು ಎಂದಿದ್ದರು. ರಂಜಿತ್ ಪ್ರಕಾರ, ತ್ರಿವಿಕ್ರಮ್​ಗೆಲ್ಲಬೇಕು, ಮೋಕ್ಷಿತಾ ಗೆಲ್ಲಬಾರದು ಎಂದು ತಿಳಿಸಿದ್ದರು. 5 ಮಂದಿ ಹನುಮಂತ ಗೆಲ್ಲಬೇಕು ಎಂದಿದ್ದರೆ, ಇನ್ನೂ 5 ಮಂದಿ ತ್ರಿವಿಕ್ರಮ್​ ಗೆಲ್ಲಬೇಕು ಎಂದು ತಿಳಿಸಿದ್ದಾರೆ.