ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

BBK 11 Final: ಬಿಗ್ ಬಾಸ್ ಕನ್ನಡ ಸೀಸನ್ 11ರ ವಿನ್ನರ್​ಗೆ ಬಂದ ವೋಟ್ ಎಷ್ಟು ಕೋಟಿ ಗೊತ್ತಾ?: ರಿವೀಲ್

ಬಿಗ್ ಬಾಸ್ ಸೀಸನ್ 11 ರಲ್ಲಿ ಗೆದ್ದ ಸ್ಪರ್ಧಿಗೆ ಸಿಕ್ಕ ಮತ ಎಷ್ಟು ಎಂಬ ವಿಚಾರ ರಿವೀಲ್ ಆಗಿದೆ. ಈ ಬಾರಿ ಬಿಗ್‌ ಬಾಸ್‌ನಲ್ಲಿ ಗೆಲ್ಲಲಿರುವ ಸ್ಪರ್ಧಿಗೆ ಬಂದ ಓಟ್‌ ಓಟ್‌ ಎಷ್ಟು ಎಂಬುದನ್ನು ಬಿಗ್‌ ಬಾಸ್‌ ವೇದಿಕೆಯಲ್ಲೇ ಕಿಚ್ಚ ಸುದೀಪ್ ರಿವೀಲ್ ಮಾಡಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 11ರ ವಿನ್ನರ್​ಗೆ ಬಂದ ವೋಟ್ ಎಷ್ಟು ಕೋಟಿ ಗೊತ್ತಾ?: ರಿವೀಲ್

BBK Final 11

Profile Vinay Bhat Jan 26, 2025 6:41 AM

ಬಿಗ್ ಬಾಸ್ ಕನ್ನಡ ಸೀಸನ್ 11ರ (Bigg Boss Kannada 11) ಗ್ರ್ಯಾಂಡ್ ಫಿನಾಲೆಗೆ ಚಾಲನೆ ಸಿಕ್ಕಿದೆ. ಶನಿವಾರ ಎಲಿಸೋಡ್ ಈಗಾಗಲೇ ಪ್ರಸಾರಗೊಂಡಿದ್ದು, ವಿನ್ನರ್ ಯಾರು ಎಂಬುದು ಇಂದು ಘೋಷಣೆ ಆಗಲಿದೆ. ಸದ್ಯ ಮನೆಯಲ್ಲಿ 5 ಮಂದಿ ಇದ್ದಾರೆ. ಶನಿವಾರದ ಎಪಿಸೋಡ್​ನಲ್ಲಿ ಭವ್ಯಾ ಗೌಡ ಎಲಿಮಿನೇಟ್ ಆಗಿ ಆಚೆ ಬಂದಿದ್ದಾರೆ. ಉಗ್ರಂ ಮಂಜು, ತ್ರಿವಿಕ್ರಮ್, ಹನುಮಂತ, ರಜತ್ ಕಿಶನ್ ಹಾಗೂ ಮೋಕ್ಷಿತಾ ಪೈ ಪೈಕಿ ಇಂದು ಕಿಚ್ಚ ಸುದೀಪ್ ಎತ್ತಿ ಹಿಡಿಯುವ ಕೈ ಯಾರದ್ದು ಎಂಬುದು ರೋಚಕತೆ ಸೃಷ್ಟಿಸಿದೆ.

ಇದರ ನಡುವೆ ಬಿಗ್ ಬಾಸ್ ಸೀಸನ್ 11 ರಲ್ಲಿ ಗೆದ್ದ ಸ್ಪರ್ಧಿಗೆ ಸಿಕ್ಕ ಮತ ಎಷ್ಟು ಎಂಬ ವಿಚಾರ ರಿವೀಲ್ ಆಗಿದೆ. ಈ ಬಾರಿ ಬಿಗ್‌ ಬಾಸ್‌ನಲ್ಲಿ ಗೆಲ್ಲಲಿರುವ ಸ್ಪರ್ಧಿಗೆ ಬಂದ ಓಟ್‌ ಓಟ್‌ ಎಷ್ಟು ಎಂಬುದನ್ನು ಬಿಗ್‌ ಬಾಸ್‌ ವೇದಿಕೆಯಲ್ಲೇ ಕಿಚ್ಚ ಸುದೀಪ್ ರಿವೀಲ್ ಮಾಡಿದ್ದಾರೆ. ಬಿಗ್ ಬಾಸ್‌ ಮನೆಯಲ್ಲಿ ಒಂದು ದೊಡ್ಡ ಬೋರ್ಡ್ ಇಡಲಾಗಿದೆ. ಆ ಬೋರ್ಡ್‌ನಲ್ಲಿ ನಂಬರ್‍‌ಗಳ ವಿವರ ಇರುತ್ತದೆ. ಅದನ್ನು ವೀಕ್ಷಕರೆಲ್ಲರ ಎದುರೇ ರಿವೀಲ್ ಮಾಡಲಾಗಿದೆ.

ಕೋಟಿ ಕೋಟಿ ಲೆಕ್ಕದಲ್ಲಿ ಬಂದ ಓಟ್‌ ನೋಡಿ ಎಲ್ಲರೂ ಆಶ್ಚರ್ಯಪಟ್ಟಿದ್ದಾರೆ. ಅತಿ ಹೆಚ್ಚು ಓಟ್‌ ಪಡೆದು ವಿನ್ ಆಗಲಿರುವ ಸ್ಪರ್ಧಿ ಯಾರು ಎಂದು ಅಧೀಕೃತವಾಗಿ ತಿಳಿಸದಿದ್ದರೂ ಆ ಸ್ಪರ್ಧಿಗೆ ಎಷ್ಟು ಮತ ಬಂದಿದೆ ಎಂದು ತಿಳಿಸಿದ್ದಾರೆ. ಬರೋಬ್ಬರಿ 52389318 ವಿಜೇತರಿಗೆ ಬಂದ ಮತವಾಗಿದೆ. ಅತಿ ಕಡಿಮೆ ಮತ ಎಂದರೆ 6448853 ಆಗಿದೆ.

ಇನ್ನು ಬಿಗ್ ಬಾಸ್ ಫಿನಾಲೆ ವೇದಿಕೆ ಮೇಲೆ ಬಂದಿದ್ದ ಎಲಿಮಿನೇಟ್ ಕಂಟೆಸ್ಟೆಂಟ್ ಬಳಿ ಯಾರು ವಿನ್ ಆಗಬೇಕು-ಯಾರು ವಿನ್ ಆಗಬಾರದು ಎಂಬ ಪ್ರಶ್ನೆ ಕೇಳಲಾಗಿದೆ. ಇದರಲ್ಲಿ ಗೌತಮಿ ಅವರು ಹನುಮಂತೂ ವಿನ್​ ಆಗಬೇಕು, ಮೋಕ್ಷಿತಾ ಪೈ ಗೆಲ್ಲಬಾರದು ಎಂದಿದ್ದಾರೆ. ಧನರಾಜ್ ಪ್ರಕಾರ, ಹನುಮ ಗೆಲ್ಲಬೇಕು, ಮೋಕ್ಷಿತಾ ಗೆಲ್ಲಬಾರದು. ಗೋಲ್ಡ್​ ಸುರೇಶ್ ಪ್ರಕಾರ, ಹನುಮ ವಿನ್ ಆಗಬೇಕು, ಮೋಕ್ಷಿತಾ ಗೆಲ್ಲಬಾರದು. ಯಮೂನ ಅವರ ಪ್ರಕಾರ, ಹನುಮ ಗೆಲ್ಲಬೇಕು, ಮೋಕ್ಷಿತಾ ಗೆಲ್ಲಬಾರದು. ಅನುಷಾ ಅವರ ಪ್ರಕಾರ ತ್ರಿವಿಕ್ರಮ್​ ವಿನ್​ ಆಗಬೇಕು, ಮೋಕ್ಷಿತಾ ಗೆಲ್ಲಬಾರದು. ಚೈತ್ರಾ ಕೂಡ ತ್ರಿವಿಕ್ರಮ್​ ಗೆಲ್ಲಬೇಕು, ರಜತ್ ಗೆಲ್ಲಬಾರದು ಎಂದಿದ್ದಾರೆ.

ಇನ್ನು ಹಂಸ ಅವರ ಪ್ರಕಾರ ತ್ರಿವಿಕ್ರಮ್​ ವಿನ್​ ಆಗಬೇಕು, ರಜತ್ ಗೆಲ್ಲಬಾರದು. ಐಶ್ವರ್ಯ ಪ್ರಕಾರ, ಹನುಮ ಗೆಲ್ಲಬೇಕು, ಭವ್ಯಾ ಗೆಲ್ಲಬಾರದು ಎಂದಿದ್ದಾರೆ. ಶಿಶಿರ್ ಪ್ರಕಾರ, ಮೋಕ್ಷಿತಾ ವಿನ್​ ಆಗಬೇಕು, ಮಂಜಣ್ಣ ಗೆಲ್ಲಬಾರದು ಎಂದಿದ್ದಾರೆ. ಧರ್ಮ ಕೀರ್ತಿರಾಜ್​ ಪ್ರಕಾರ ತ್ರಿವಿಕ್ರಮ್​ ವಿನ್​ ಆದ್ರೆ, ಮೋಕ್ಷಿತಾ ಆಗಬಾರದು ಎಂದಿದ್ದಾರೆ. ರಂಜಿತ್ ಪ್ರಕಾರ, ತ್ರಿವಿಕ್ರಮ್​ಗೆಲ್ಲಬೇಕು, ಮೋಕ್ಷಿತಾ ಗೆಲ್ಲಬಾರದು ಎಂದಿದ್ದಾರೆ. 5 ಮಂದಿ ಹನುಮಂತ ಗೆಲ್ಲಬೇಕು ಎಂದಿದ್ದಾರೆ. ಇನ್ನೂ 5 ಮಂದಿ ತ್ರಿವಿಕ್ರಮ್​ ಗೆಲ್ಲಬೇಕು ಎಂದಿದ್ದಾರೆ. ಸದ್ಯ ವಿನ್ ಯಾರು ಆಗಲಿದ್ದಾರೆ ಎಂಬುದು ಎಂದು ಘೋಷಣೆ ಆಗಲಿದೆ.

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ