Chaithra Kundapura: ಕೂಲಿಂಗ್ ಗ್ಲಾಸ್ ಹಾಕಿ ಸಖತ್ ಸೈಲಿಶ್ ಲುಕ್ನಲ್ಲಿ ಮಿಂಚಿದ ಚೈತ್ರಾ ಕುಂದಾಪುರ
ಬಿಗ್ ಬಾಸ್ನಿಂದ ಹೊರಬಂದ ಬಳಿಕ ಚೈತ್ರಾ ಕುಂದಾಪುರ ಅವರು ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಌಕ್ಟೀವ್ ಆಗಿದ್ದಾರೆ. ಯೂಟ್ಯೂಬ್ ಚಾನೆಲ್ ಕೂಡ ಶುರುಮಾಡಿಕೊಂಡಿದ್ದಾರೆ. ಬಿಗ್ ಬಾಸ್ನಿಂದ ಆಚೆ ಬರುತ್ತಿದ್ದಂತೆ ಎಲ್ಲವೂ ಬದಲಾಗಿ ಬಿಟ್ಟಿದೆ. ದಿನೇ ದಿನೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಹೊಸ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ.

Chaithra Kundapura

ಫೈರ್ ಬ್ರ್ಯಾಂಡ್ ಎಂದೇ ಖ್ಯಾತಿ ಪಡೆದಿರುವ ಭಾಷಣಗಾರ್ತಿ ಚೈತ್ರಾ ಕುಂದಾಪುರ ಬಿಗ್ ಬಾಸ್ನಿಂದ ಹೊರ ಬಂದ ಮೇಲೆ ದೊಡ್ಡ ಸೆಲೆಬ್ರಿಟಿ ಆಗಿಬಿಟ್ಟಿದ್ದಾರೆ. ದಿನದಿಂದ ದಿನಕ್ಕೆ ಚೈತ್ರಾ ಅವರ ವರ್ಚಸ್ಸನ್ನು ಹೆಚ್ಚುತ್ತಿದೆ. ದೊಡ್ಮನೆಯೊಳಗೆ ಸೀರೆಯುಟ್ಟು ಎಲ್ಲರ ಮನಸ್ಸು ಗೆದ್ದಿದ್ದ ಚೈತ್ರಾ ಅವರಿಗೆ ಈಗ ಬ್ಯೂಟಿ ಪಾರ್ಲರ್ ಗಳಿಂದ ಬಂಪರ್ ಆಫರ್ ಬರ್ತಿದೆ. ಒಂದಾದ್ಮೇಲೆ ಒಂದು ಬ್ಯೂಟಿ ಪಾರ್ಲರ್, ಸೀರೆ ಅಂಗಡಿಗೆ ಹೋಗುವ ಚೈತ್ರಾ, ವಿಡಿಯೋ ಮಾಡಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಇದೀಗ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದು, ಸಖತ್ ಸೈಲಿಶ್ ಲುಕ್ನಲ್ಲಿ ಮಿಂಚಿದ್ದಾರೆ.
ಬಿಗ್ ಬಾಸ್ನಿಂದ ಹೊರಬಂದ ಬಳಿಕ ಚೈತ್ರಾ ಕುಂದಾಪುರ ಅವರು ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಌಕ್ಟೀವ್ ಆಗಿದ್ದಾರೆ. ಯೂಟ್ಯೂಬ್ ಚಾನೆಲ್ ಕೂಡ ಶುರುಮಾಡಿಕೊಂಡಿದ್ದಾರೆ. ದೊಡ್ಮನೆಯಲ್ಲಿದ್ದಾಗ ಚೈತ್ರಾ ಅವರು ಸಿಂಪಲ್ ಆಗಿ ಇರುತ್ತಿದ್ದರು. ಆದರೆ, ಬಿಗ್ ಬಾಸ್ನಿಂದ ಆಚೆ ಬರುತ್ತಿದ್ದಂತೆ ಎಲ್ಲವೂ ಬದಲಾಗಿ ಬಿಟ್ಟಿದೆ. ದಿನೇ ದಿನೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಹೊಸ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ.
ಈ ಬಾರಿ ನೇರಳೆ ಬಣ್ಣದ ಸೀರೆಯನ್ನು ತೊಟ್ಟು, ಕಣ್ಣಿಗೆ ಕೂಲಿಂಗ್ ಕ್ಲಾಸ್ ಹಾಕಿಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ ಚೈತ್ರಕ್ಕ. ಇದೇ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಭರ್ಜರಿ ವೈರಲ್ ಆಗುತ್ತಿದೆ. ಇದನ್ನು ನೋಡಿದ ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ. ಒಬ್ಬ ಅಭಿಮಾನಿ ಕರ್ನಾಟಕದ ಕ್ರಶ್ ಚೈತ್ರಕ್ಕ ಅಂತ ಕಾಮೆಂಟ್ ಮಾಡಿದ್ದಾನೆ. ಬೆಂಕಿ ಬಿಡಿ ನೀವು ಮೇಡಂ, ತುಂಬಾ ಚೆನ್ನಾಗಿ ಕಾಣ್ತಾ ಇದ್ದೀರಿ ಅಕ್ಕ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
ಬಿಗ್ ಬಾಸ್ ಕನ್ನಡದಲ್ಲಿ ಚೈತ್ರಾ ಹೆಚ್ಚಿನವರ ಜೊತೆ ಜಗಳವಾಡಿದ್ದರು. ಇವರ ಮಾತಿನ ಚಾತುರ್ಯತೆಯೆ ಇವರನ್ನು ಬಿಬಿಕೆ 11ನಲ್ಲಿ ಫಿನಾಲೆ ಹತ್ತಿರದ ವರೆಗೆ ಕರೆದುಕೊಂಡುಬಂತು. ಅದರಲ್ಲೂ ಚೈತ್ರಾ ಮತ್ತು ರಜತ್ ನಡುವಿನ ಜಗಳ-ಪರಸ್ಪರ ಕಾಲು ಎಳೆದುಕೊಳ್ಳುವ ರೀತಿಗಳೆಲ್ಲ ಜನರಿಗೆ ಇಷ್ಟವಾಗಿದ್ದವು. ಎದುರಿನವರು ಯಾರೇ ಆಗಲಿ ಗಟ್ಟಿಯಾಗಿ ನಿಂತು ಚೈತ್ರಾ ತಮ್ಮದೇ ಶೈಲಿಯಲ್ಲಿ ಬಾಯಿಮುಚ್ಚಿಸುತ್ತಿದ್ದರು. ಬಿಗ್ ಬಾಸ್ ಮುಗಿದ ಬೆನ್ನಲ್ಲೇ ಇವರಿಗೆ ಹೇಳಿ ಮಾಡಿಸಿದ ಮತ್ತೊಂದು ಶೋ ಬಾಯ್ಸ್ ವರ್ಸಸ್ ಗರ್ಲ್ಸ್ನಲ್ಲಿ ಮಿಂಚುತ್ತಿದ್ದಾರೆ.
ಹೀಗಾಗಿ ಚೈತ್ರಾ ಕುಂದಾಪುರ ತಮ್ಮ ಭಾಷಣ, ಸಾಮಾಜಿಕ ಕಾರ್ಯಚಟುವಟಿಕೆಗಳ ಜೊತೆ-ಜೊತೆಗೇ ರಿಯಾಲಿಟಿ ಶೋ-ಕೆಲವು ಬ್ರ್ಯಾಂಡ್ಗಳಿಗೆ ಪ್ರಮೋಟರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಅನೇಕ ಸೀರೆ ಅಂಗಡಿಗಳಿಂದ ಆಫರ್ ಬರುತ್ತಿದ್ದು, ಇದನ್ನು ಉಟ್ಟು ಮಿಂಚುತ್ತಿದ್ದಾರೆ.
Majaa Talkies: ಮಜಾ ವೇದಿಕೆಯಲ್ಲಿ ಡೈನಾಮಿಕ್ ಫ್ಯಾಮಿಲಿ: ನಕ್ಕು ನಕ್ಕು ಸುಸ್ತಾದ ದೇವರಾಜ್