ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Majaa Talkies: ಮಜಾ ವೇದಿಕೆಯಲ್ಲಿ ಡೈನಾಮಿಕ್ ಫ್ಯಾಮಿಲಿ: ನಕ್ಕು ನಕ್ಕು ಸುಸ್ತಾದ ದೇವರಾಜ್

ಮಜಾ ಟಾಕೀಸ್ನಲ್ಲಿ ಈ ವಾರ ಮತ್ತಷ್ಟು ಮನರಂಜನೆ ಸಿಗೋದು ಪಕ್ಕಾ ಆಗಿದೆ. ಈ ವಾರ ಮಜಾ ಮನೆಯಲ್ಲಿ ಯಾಕೋ ಫ್ಯಾಮಿಲಿ ವೀಕ್ ಇದ್ದಂತಿದೆ. ಈ ವಾರ ಡೈನಾಮಿಕ್ ಕಿಂಗ್ ದೇವರಾಜ್ ಫ್ಯಾಮಿಲಿ ಮಜಾ ಟಾಕೀಸ್ ವೇದಿಕೆಗೆ ಬಂದಿದೆ. ದೇವರಾಜ್ ಜೊತೆ ಅವರ ಪತ್ನಿ-ಮಹ ಮತ್ತು ಪ್ರಜ್ವಲ್ ದೇವರಾಜ್-ಅವರ ಪತ್ನಿ ಮಜಾ ಟಾಕೀಸ್ಗೆ ಬಂದಿದ್ದಾರೆ.

ಮಜಾ ವೇದಿಕೆಯಲ್ಲಿ ಡೈನಾಮಿಕ್ ಫ್ಯಾಮಿಲಿ: ನಕ್ಕು ನಕ್ಕು ಸುಸ್ತಾದ ದೇವರಾಜ್

Majaa Talkies

Profile Vinay Bhat Feb 27, 2025 4:09 PM

ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿದ ಬಳಿಕ ಕಲರ್ಸ್ ಕನ್ನಡದಲ್ಲಿ ವೀಕೆಂಡ್​ನಲ್ಲಿ ಎರಡು ಹೊಸ ಶೋ ಆರಂಭವಾಗಿರುವುದು ಗೊತ್ತೇ ಇದೆ. ಒಂದು ಬಾಯ್ಸ್ vs ಗರ್ಲ್ಸ್ ಮತ್ತೊಂದು ಸೃಜನ್ ಲೋಕೇಶ್ ನೇತೃತ್ವದ ಮಜಾ ಟಾಕೀಸ್. ಹೊಸ ತಂಡದೊಂದಿಗೆ ಜನರನ್ನು ಹೊಟ್ಟೆ ಹುಣ್ಣಾಗುವಷ್ಟು ನಗಿಸಲು ಶುರುವಾಗಿರುವ ಮಜಾ ಟಾಕೀಸ್​ಗೆ ಈ ವಾರ ಹೊಸ ಫ್ಯಾಮಿಲಿ ಸೆಲೆಬ್ರಿಟಿಗಳು ಬಂದಿದ್ದಾರೆ. ಇವರು ಮಜಾ ಸದಸ್ಯರ ಕಾಮಿಡಿಗೆ ನಕ್ಕು-ನಕ್ಕು ಸುಸ್ತಾಗಿದ್ದಾರೆ. ಹಾಗಾದರೆ ಮಜಾ ಟಾಕೀಸ್ ವೇದಿಕೆಗೆ ಈ ವಾರ ಯಾರೆಲ್ಲ ಬಂದಿದ್ದಾರೆ?, ಈ ಕುರಿತು ವರದಿ ಇಲ್ಲಿದೆ ನೋಡಿ.

ಮಜಾ ಟಾಕೀಸ್​​ನಲ್ಲಿ ಈ ವಾರ ಮತ್ತಷ್ಟು ಮನರಂಜನೆ ಸಿಗೋದು ಪಕ್ಕಾ ಆಗಿದೆ. ಈ ವಾರ ಮಜಾ ಮನೆಯಲ್ಲಿ ಯಾಕೋ ಫ್ಯಾಮಿಲಿ ವೀಕ್ ಇದ್ದಂತಿದೆ. ಕಳೆದ ವಾರ ಪ್ರೇಮಿಗಳ ದಿನದ ಪ್ರಯುಕ್ತ ಶನಿವಾರದ ಎಪಿಸೋಡ್​​ಗೆ ನಾಗಭೂಷಣ್ ಹಾಗೂ ಅವರ ಪತ್ನಿ, ವಾಸುಕಿ ವೈಭನ್ ಹಾಗೂ ಅವರ ಪತ್ನಿ ಆಗಮಿಸಿದ್ದರು. ಇವರು ಪ್ರೀತಿಸಿ ಮದುವೆ ಆದ ಕಾರಣ ಪ್ರೇಮಿಗಳ ದಿನಕ್ಕೆ ಇವರನ್ನು ಕರೆಸಲಾಗಿತ್ತು. ಇವರು ಮಸ್ತ್ ಮಜಾ ಮಾಡಿದ್ದರು.

ಇದೀಗ ಈ ವಾರ ಡೈನಾಮಿಕ್ ಕಿಂಗ್ ದೇವರಾಜ್ ಫ್ಯಾಮಿಲಿ ಮಜಾ ಟಾಕೀಸ್ ವೇದಿಕೆಗೆ ಬಂದಿದೆ. ಮಜಾ ಟಾಕೀಸ್​​ನಲ್ಲಿ ಈ ಬಾರಿ ಡೈನಾಮಿಕ್ ಫ್ಯಾಮಿಲಿಯ ಆಗಮನ ಆಗಿದೆ. ದೇವರಾಜ್ ಜೊತೆ ಅವರ ಪತ್ನಿ-ಮಹ ಮತ್ತು ಪ್ರಜ್ವಲ್ ದೇವರಾಜ್-ಅವರ ಪತ್ನಿ ಮಜಾ ಟಾಕೀಸ್​ಗೆ ಬಂದಿದ್ದಾರೆ. ಈ ಕುಟುಂಬದ ಎದುರು ಕುರಿ ಪ್ರತಾಪ್ ಅವರು ಎಂದಿನಂತೆ ತಮ್ಮ ಹಾಸ್ಯದ ಹೊಳೆ ಹರಿಸಿದ್ದಾರೆ. ಇದರಿಂದ ಎಲ್ಲರೂ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಅದರಲ್ಲೂ ವಿಲನ್ ಪಾತ್ರ ಮಾಡುವಾಗ ಸದಾ ಗಂಭೀರವಾಗಿಯೇ ಇರೋ ದೇವರಾಜ್ ಕೂಡ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಈ ಪ್ರೋಮೋನ ಕಲರ್ಸ್ ಕನ್ನಡ ಹಂಚಿಕೊಂಡಿದೆ.



ಇದರ ಜೊತೆಗೆ ದೇವರಾಜ್ ಅವರು ತಮ್ಮ ಸಿನಿಮಾ ಜೀವನದಲ್ಲಿ ಆದ ಒಂದಷ್ಟು ಅನುಭವಗಳನ್ನ ಕೂಡ ಹೇಳಿಕೊಂಡಿದ್ದಾರೆ. ಆ ಅನುಭವದಲ್ಲಿ ಹಳ್ಳಿಯಲ್ಲಿ ಎಣ್ಣೆ ಹೊಡೆದಿರೊದು ಕೂಡ ಇದೆ. ದೇವರಾಜ್ ಅವರು ಹಳ್ಳಿಯೊಂದರಲ್ಲಿ ಶೂಟಿಂಗ್ ಮಾಡ್ತಾ ಇದ್ದರಂತೆ. ಈ ಸಂದರ್ಭ ಎಣ್ಣೆ ಕುಡಿಯಬೇಕು ಅಂತ ಅನಿಸಿದೆ. ಆದ್ರೆ ಅದು ಹಳ್ಳಿ ಜಾಗ. ಅಲ್ಲಿ ಸುಲಭವಾಗಿ ಸಿಗುವುದಿಲ್ಲ.. ಇದ್ದಿದ್ದ ಎಲ್ಲವೂ ಬಹುಬೇಗ ಬಂದ್ ಆಗಿಬಿಡುತ್ತೆ.

ಆದ್ರೂ ಹೇಗೋ ಮಾಡಿ ಎಣ್ಣೆ ತಂದಿದ್ದಾರೆ. ಆಗ ಮತ್ತೊಂದು ಪ್ರಾಬ್ಲಂ ಬರುತ್ತೆ. ಎಣ್ಣೆ ಏನೋ ಇದೆ.. ಆದ್ರೆ ಆ ದಿನ ಅದನ್ನು ಕುಡಿಯಲು ಗ್ಲಾಸ್ ಇರಲಿಲ್ಲ. ಲೋಟ ಕೂಡ ಇರಲಿಲ್ಲ. ಆಗಲೇ ಒಂದು ಐಡಿಯಾ ಮಾಡಿದ್ರಂತೆ. ಸ್ನಾನದ ಮನೆಯಲ್ಲಿ ಸ್ನಾನದ ಬಕೆಟ್ ಇತ್ತು. ಮಗ್ ಕೂಡ ಇತ್ತು. ಅದರಿಂದಲೇ ಎಲ್ಲವನ್ನೂ ಮಿಕ್ಸ್ ಮಾಡಿದೆವು. ಹಾಗೆ ಎಲ್ಲರೂ ಎಣ್ಣೆ ಹೊಡೆದೆವು ಎಂದು ದೇವರಾಜ್ ಬಹುದೊಡ್ಡ ಸೀಕ್ರೆಟ್ ಹೇಳಿದ್ದಾರೆ. ಇಲ್ಲಿ ಟ್ವಿಸ್ಟ್ ಏನಲ್ಲ ಅಂದ್ರೆ.. ಈ ವಿಚಾರ ದೇವರಾಜ್ ಅವರ ಪತ್ನಿ ಚಂದ್ರಲೇಖ ಅವರಿಗೆ ಇದುವರೆಗೆ ತಿಳಿದಿರಲಿಲ್ಲವಂತೆ. ಇದನ್ನು ಕೇಳಿ ಅವರು ಆಶ್ವರ್ಯದಿಂದಲೇ ನೋಡಿದ್ದಾರೆ. ಒಟ್ಟಾರೆ ಈ ವಾರದ ಮಜಾ ಟಾಕೀಸ್ ಸಖತ್ ಮಜಾ ಇದೆ.

Bhagya Lakshmi Serial: ಮೋಸ ಮಾಡಿದ ತಾಂಡವ್​ನ ಬೆಂಡೆತ್ತಲು ಬಂದ ಭಾಗ್ಯಾ ತಂಗಿ ಲಕ್ಷ್ಮೀ