ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Anusha Rai: ವಿಶೇಷ ವ್ಯಕ್ತಿ ನೀಡಿದ ಸೀರೆಯುಟ್ಟು ವರ ಮಹಾಲಕ್ಷ್ಮೀ ಹಬ್ಬ ಆಚರಿಸಿದ ಅನುಷಾ ರೈ

ಪಿಸ್ತಾ ಗ್ರೀನ್ ಹಣ್ಣದ ಸಾರಿಗೆ ಆರಿ ವರ್ಕ್ ಮಾಡಿದ ಬ್ಲೌಸ್ ತೊಟ್ಟು ಜೊತೆಗೆ ಲಕ್ಷ್ಮೀಯನ್ನು ಹಿಡಿದುಕೊಂಡು ಅನುಷಾ ಗೊಂಬೆಯಂತೆ ಕಂಗೊಳಿಸಿದ್ದಾರೆ. ಮತ್ತೊಂದು ವಿಶೇಷ ಎಂದರೆ ಈ ವಿಡಿಯೋ ಇವರು ಸ್ಪೆಷಲ್ ಕ್ಯಾಪ್ಶನ್ ನೀಡಿದ್ದಾರೆ. ‘ನನ್ನ ಅತ್ಯಂತ ವಿಶೇಷ ವ್ಯಕ್ತಿ ಉಡುಗೊರೆಯಾಗಿ ನೀಡಿದ ಈ ಸುಂದರವಾದ ಸೀರೆಯನ್ನು ಧರಿಸಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

ಸೀರೆಯುಟ್ಟು ವರ ಮಹಾಲಕ್ಷ್ಮೀ ಹಬ್ಬ ಆಚರಿಸಿದ ಅನುಷಾ ರೈ

Anusha Rai

Profile Vinay Bhat Aug 8, 2025 3:31 PM

ಬಿಗ್ ಬಾಸ್​ ಕನ್ನಡ ಸೀಸನ್ 11 ಮುಗಿದ ಬಳಿಕ ಅನುಷಾ ರೈ (Anusha Rai) ಕಿರುತೆರೆ ಅಥವಾ ದೊಡ್ಡ ಪರದೆಯೆ ಮೇಲೆ ಎಲ್ಲೂ ಕಾಣಿಸಿಕೊಂಡಿಲ್ಲ. ಇನ್​ಸ್ಟಾಗ್ರಾಮ್​ನಲ್ಲಿ ಹೆಚ್ಚಾಗಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ ಬಿಟ್ಟರೆ ಟ್ರಿಪ್ ಹೋಗುತ್ತ ಸಮಯ ಕಳೆಯುತ್ತಿದ್ದಾರೆ. ಇತ್ತೀಚೆಗಷ್ಟೆ ಅನುಷಾ ರೈ ವಿಯಾಟ್ಮಂಗೆ ಟ್ರಿಪ್ ಹೋಗಿದ್ದರು. ವಿಯಾಟ್ಮಂನ ಸುಂದರ ತಾಣಕ್ಕೆ ಇವರು ಭೇಟಿ ನೀಡಿ ಫೋಟೋ ತೆಗೆಸಿಕೊಂಡಿದ್ದು ಭರ್ಜರಿ ವೈರಲ್ ಆಗಿತ್ತು. ಇದೀಗ ಅನುಷಾ ವರ ಮಹಾಲಕ್ಷ್ಮೀ ಹಬ್ಬದ ದಿನ ವಿಶೇಷ ಸಾರಿಯೊಂದಿಗೆ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ.

ಪಿಸ್ತಾ ಗ್ರೀನ್ ಹಣ್ಣದ ಸಾರಿಗೆ ಆರಿ ವರ್ಕ್ ಮಾಡಿದ ಬ್ಲೌಸ್ ತೊಟ್ಟು ಜೊತೆಗೆ ಲಕ್ಷ್ಮೀಯನ್ನು ಹಿಡಿದುಕೊಂಡು ಅನುಷಾ ಗೊಂಬೆಯಂತೆ ಕಂಗೊಳಿಸಿದ್ದಾರೆ. ಮತ್ತೊಂದು ವಿಶೇಷ ಎಂದರೆ ಈ ವಿಡಿಯೋ ಇವರು ಸ್ಪೆಷಲ್ ಕ್ಯಾಪ್ಶನ್ ನೀಡಿದ್ದಾರೆ. ‘ನನ್ನ ಅತ್ಯಂತ ವಿಶೇಷ ವ್ಯಕ್ತಿ ಉಡುಗೊರೆಯಾಗಿ ನೀಡಿದ ಈ ಸುಂದರವಾದ ಸೀರೆಯನ್ನು ಧರಿಸಿದ್ದೇನೆ’ ಎಂದು ಬರೆದುಕೊಂಡಿದ್ದಾರೆ. ಆದರೆ, ಆ ವಿಶೇಷ ವ್ಯಕ್ತಿ ಯಾರು ಎಂಬುದನ್ನು ಅನುಷಾ ರಿವೀಲ್ ಮಾಡಿಲ್ಲ.

ಮೂಲತಃ ತುಮಕೂರಿನವರಾಗಿರುವ ಅನುಷಾ ರೈ ಬೆಂಗಳೂರಿನ ಆಚಾರ್ಯ ಇನ್​ಸ್ಟಿಟ್ಯೂಟ್​ ಆಫ್ ಟೆಕ್ನಾಜಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಕಾಲೇಜಿನಲ್ಲಿ ಇರುವಾಗಲೇ ಮಾಡೆಲಿಂಗ್​ ಮಾಡಿ ಫೇಮಸ್​ ಆದವರು. 2016ರಲ್ಲಿ 'ಬೆಸ್ಟ್ ಮಾಡೆಲ್ ಆಫ್ ಕರ್ನಾಟಕ' ಎಂಬ ಬಿರುದು ಕೂಡ ಸಿಕ್ಕಿದೆ.

ಕಿರುತೆರೆ ಮತ್ತು ಬೆಳ್ಳಿತೆರೆಗಳಲ್ಲಿ ಗುರುತಿಸಿಕೊಂಡಿರುವ ಅನುಷಾ ರೈ, ಸರಯೂ, ರಾಜಕುಮಾರಿ ಸೇರಿದಂತೆ ಹಲವು ಸೀರಿಯಲ್​ಗಳಲ್ಲಿ ಅಭಿನಯಿಸಿದ್ದಾರೆ. 2017ರಲ್ಲಿ ಬಿಡುಗಡೆಯಾದ ಮಹಾನುಭಾವರು ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟರು. ಆ ಬಳಿಕ ಗೋಸಿ ಗ್ಯಾಂಗ್, ಬಿಎಂಡಬ್ಲ್ಯೂ, ದಮಯಂತಿ, ರೈಡರ್, ಖಡಕ್, ಪೆಂಟಗನ್, ಧೈರ್ಯಂ ಸರ್ವತ್ರ ಸಾಧನಂ, ಅಬ್ಬಬ್ಬ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ.

Bhagya Lakshmi Serial: ಆಫೀಸ್​ಗೆ ಫೈಲ್ ತಂದುಕೊಟ್ಟು ಆದೀ-ತಾಂಡವ್​ನ ಮಾನ ಉಳಿಸಿದ ಭಾಗ್ಯ

ಸದ್ಯ ಅನುಷಾ ರೈ ಅವರು ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕೋಮಲ್ ಕುಮಾರ್ ಮತ್ತು ಮೇಘನಾ ರಾಜ್ ಜೊತೆಗೆ ಅನುಷಾ ರೈ, ಸಿರಿ ಸಂಗೀತ ಬಾರ್ ಆಂಡ್ ರೆಸ್ಟೋರೆಂಟ್ ಅನ್ನೋ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಇದು ಈ ವರ್ಷದಲ್ಲಿ ಅವರ ಮೊದಲ ಸಿನಿಮಾ ಆಗಿದೆ.