Prema Kavya: ಬಿಗ್ ಬಾಸ್ಗು ಮುನ್ನ ಕಲರ್ಸ್ಲ್ಲಿ ಹೊಸ ಧಾರಾವಾಹಿ ಶುರು: ಪ್ರೊಮೋ ಔಟ್
ಕಲರ್ಸ್ ಕನ್ನಡ ಮತ್ತೊಂದು ಹೊಸ ಧಾರಾವಾಹಿಯ ಪ್ರೊಮೋ ಹಂಚಿಕೊಂಡಿದೆ. ಇದರ ಹೆಸರು ಪ್ರೇಮ ಕಾವ್ಯ. ಪ್ರಿಯಾ ಆಚಾರ್, ರಾಘು, ಮಿಥುನರಾಶಿ ಧಾರಾವಾಹಿ ಖ್ಯಾತಿಯ ವೈಷ್ಣವಿ ಹಾಗೂ ವಿಕಾಸ್ ಈ ಧಾರಾವಾಹಿಯ ಲೀಡ್ ರೋಲ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರು ಸಹೋದರರು ಹಾಗೂ ಇಬ್ಬರು ಸಹೋದರಿಯರ ನಡುವಿನ ಪ್ರೇಮ್ ಕಹಾನಿಯೇ ಪ್ರೇಮ್ ಕಾವ್ಯ ಧಾರಾವಾಹಿ ಕಥೆ.

Prema Kavya Serial

ಕಲರ್ಸ್ ಕನ್ನಡದಲ್ಲಿ ಒಂದರ ಹಿಂದೆ ಒಂದರಂತೆ ಹೊಸ ಹೊಸ ಕಾರ್ಯಕ್ರಮ ಬರುತ್ತಿವೆ. ಇತ್ತೀಚೆಗಷ್ಟೆ ವಧು, ಲಕ್ಷ್ಮೀ ಬಾರಮ್ಮ, ಮಜಾ ಟಾಕೀಸ್, ಬಾಯ್ಸ್ vs ಗರ್ಲ್ಸ್ ಶೋಗಳು ಮುಕ್ತಾಯಕಂಡಿತು. ಇದರ ಬೆನ್ನಲ್ಲೆ ಕಲರ್ಸ್ ಹೊಸ ಹೊಸ ಧಾರಾವಾಹಿ (New Serial), ಶೋನೊಂದಿಗೆ ಬರುತ್ತಿದೆ. ಮೊನ್ನೆಯಷ್ಟೆ ನಂದಗೋಕುಲ ಎಂಬ ಹೊಸ ಧಾರಾವಾಹಿ ಪ್ರಾರಂಭವಾಯಿತು. ವೀಕೆಂಡ್ನಲ್ಲಿ ಕ್ವಾಟ್ಲೆ ಕಿಚನ್ ನಡೆಯುತ್ತಿದೆ. ಸೆಪ್ಟೆಂಬರ್ನಿಂದ ಬಿಗ್ ಬಾಸ್ ಕನ್ನಡ ಸೀಸನ್ 12 ಕೂಡ ಪ್ರಾರಂಭವಾಗಲಿದೆ. ಇದಕ್ಕೂ ಮುನ್ನ ಹೊಸ ಧಾರಾವಾಹಿಯೊಂದು ಪ್ರಸಾರ ಕಾಣಲಿದೆ.
ಕಲರ್ಸ್ ಕನ್ನಡ ಮತ್ತೊಂದು ಹೊಸ ಧಾರಾವಾಹಿಯ ಪ್ರೊಮೋ ಹಂಚಿಕೊಂಡಿದೆ. ಇದರ ಹೆಸರು ಪ್ರೇಮ ಕಾವ್ಯ. ಪ್ರಿಯಾ ಆಚಾರ್, ರಾಘು, ಮಿಥುನರಾಶಿ ಧಾರಾವಾಹಿ ಖ್ಯಾತಿಯ ವೈಷ್ಣವಿ ಹಾಗೂ ವಿಕಾಸ್ ಈ ಧಾರಾವಾಹಿಯ ಲೀಡ್ ರೋಲ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರು ಸಹೋದರರು ಹಾಗೂ ಇಬ್ಬರು ಸಹೋದರಿಯರ ನಡುವಿನ ಪ್ರೇಮ್ ಕಹಾನಿಯೇ ಪ್ರೇಮ್ ಕಾವ್ಯ ಧಾರಾವಾಹಿ ಕಥೆ.
ಪ್ರೋಮೋ ನೋಡಿದರೆ ಇದರಲ್ಲಿ ಪ್ರಿಯಾ ಆಚಾರ್ ಪ್ರೇಮಾ, ವೈಷ್ಣವಿ ಕಾವ್ಯಾ ರೋಲ್ ಮಾಡಿದ್ದಾರೆ. ಹಾಗೇ, ರಾಘು ಮಹಾದೇವ ಮತ್ತು ವಿಕಾಸ್ ರಾಮ್‌ನಾಗಿ ಕಾಣಿಸಿಕೊಂಡಿದ್ದಾರೆ ಎಂಬುದು ಗೊತ್ತಾಗುತ್ತದೆ. ರಾಮ್ ಮತ್ತು ಮಹಾದೇವ್ ಅಣ್ಣ-ತಮ್ಮ ಆಗಿದ್ದರೆ, ಇತ್ತ ಪ್ರೇಮಾ ಮತ್ತು ಕಾವ್ಯಾ ಅಕ್ಕ-ತಂಗಿ ಎಂದೂ ಎನ್ನಿಸುತ್ತದೆ. ಪ್ರೋಮೋದಲ್ಲಿ ಪ್ರೇಮಾ (ಪ್ರಿಯಾ ಆಚಾರ್)ಗೆ ರಾಮ್ ಮೇಲೆ ಲವ್ ಆಗಿರುವಂತೆ ತೋರಿಸಲಾಗಿದೆ. ಇದರಲ್ಲಿ ರಾಮ್ ಒಬ್ಬ ವೈದ್ಯ.
ಕಾವೇರಿ ಕನ್ನಡ ಮೀಡಿಯಂ ಬಳಿಕ ಪ್ರಿಯಾ ಆಚಾರ್ ಮತ್ತೆ ಲಂಗಾ ದಾವಣಿಯಲ್ಲಿ ಮಿಂಚಿದ್ದಾರೆ. ಮೃಧು ಸ್ವಭಾವದ ಯುವಕನಾಗಿ ವಿಕಾಸ್ ಕಾಣಿಸಿಕೊಂಡಿದ್ದಾರೆ. ಆತನಿಗೆ ಚೈತ್ರಾ ಜೋಡಿಯಾಗಿದ್ದಾರೆ. ತಮಿಳಿನ ಸಿಂಧು ಭೈರವಿ ಧಾರಾವಾಹಿ ರೀಮೆಕ್ ಪ್ರೇಮ ಕಾವ್ಯ ಧಾರಾವಾಹಿ ಎನ್ನಲಾಗುತ್ತಿದೆ. ಸದ್ಯ ಈ ಹೊಸ ಸೀರಿಯಲ್ ಯಾವಾಗ ಆರಂಭವಾಗಲಿದೆ? ಎಂಬ ಬಗ್ಗೆ ವಾಹಿನಿ ಮಾಹಿತಿ ಹಂಚಿಕೊಂಡಿಲ್ಲ. ಬಿಗ್ ಬಾಸ್ಗು ಮುನ್ನ ಈ ಧಾರಾವಾಹಿ ಶುರುವಾಗಲಿದೆ ಎನ್ನಲಾಗಿದೆ.
Anushree Marriage: ಅನುಶ್ರೀ ಮದುವೆ ಸುಳ್ಳು ಸುದ್ದಿಯೇ?: ಅನುಮಾನ ಮೂಡಿಸಿದ ಇನ್ಸ್ಟಾಗ್ರಾಮ್ ವಿಡಿಯೋ