Kannada Serial TRP: ಕರ್ಣನ ಅಬ್ಬರ ತಗ್ಗಿತೇ?: ಇಲ್ಲಿದೆ ಧಾರಾವಾಹಿಗಳ ಟಿಆರ್‌ಪಿ
ಇನ್ನು ಕಲರ್ಸ್ನಲ್ಲಿ ಕಳೆದ ವಾರ ಶುರುವಾದ ಹೊಸ ಧಾರಾವಾಹಿ ಪ್ರೇಮ ಕಾವ್ಯಕ್ಕೆ ನೀರಸ ವೀಕ್ಷಣೆ ಲಭಿಸಿದೆ. ಇದಕ್ಕೆ ಅರ್ಬನ್ + ರೂರಲ್ ಮಾರ್ಕೆಟ್‌ನಲ್ಲಿ 3.0 ಟಿವಿಆರ್ ಸಿಕ್ಕಿದೆಯಷ್ಟೆ. ಝೀ ಕನ್ನಡದಲ್ಲಿ ಶುರುವಾದ ಹೊಸ ರಿಯಾಲಿಟಿ ಶೋ ನಾವು ನಮ್ಮವರು ಲಾಂಚ್ ವೀಕ್ಗೆ 7.8 ಟಿವಿಆರ್ ಲಭಿಸಿದೆ.

Karna Serial

ಕನ್ನಡ ಕಿರುತೆರೆಯಲ್ಲಿ ಸೀರಿಯಲ್ಗಳ (Kannada Serial) ಲೆಕ್ಕಾಚಾರ ವಾರದಿಂದ ವಾರಕ್ಕೆ ಬದಲಾಗುತ್ತ ಇರುತ್ತದೆ. ಪ್ರತಿವಾರ ನಿರ್ದೇಶಕರು ಜನರನ್ನು ಸೆಳೆಯಲು ಒಂದಲ್ಲ ಒಂದು ಟ್ವಿಸ್ಟ್ ಕೊಡುತ್ತಾ ಇರುತ್ತಾರೆ. ಯಾವ ಧಾರಾವಾಹಿ ಹಿಟ್ ಆಯಿತು-ಫ್ಲಾಫ್ ಆಯಿತು ಎಂಬುದು ಪ್ರತಿ ವಾರದ ಟಿಆರ್‌ಪಿ ಮೂಲಕ ತಿಳಿಯಲಿದೆ. ಇದೀಗ 31ನೇ ವಾರದ ಟಿಆರ್‌ಪಿ ರೇಟಿಂಗ್ಸ್ ಹೊರಬಿದ್ದಿದೆ. ಈ ವಾರದ ವಿಶೇಷ ಎಂದರೆ, ಝೀ ಕನ್ನಡದಲ್ಲಿ ಕರ್ಣನ ಆರ್ಭಟ ಈ ಬಾರಿಯೂ ಮುಂದುವರೆದಿದೆ. ಕಿರುತೆರೆ ಲೋಕದಲ್ಲಿ ಸತತ ಆರನೇ ವಾರವೂ ನಂಬರ್ ಒನ್ ಆಗಿ ಕರ್ಣ ಇತಿಹಾಸ ನಿರ್ಮಿಸಿದ್ದಾನೆ.
ಮೊದಲ ವಾರ ಕರ್ಣ ಧಾರಾವಾಹಿಗೆ ಅರ್ಬನ್ + ರೂರಲ್‌ನಲ್ಲಿ 10.2 ಟಿವಿಆರ್, ಎರಡನೇ ವಾರ 10.4 ಟಿವಿಆರ್, ಮೂರನೇ ವಾರ 10.2 ಟಿವಿಆರ್ ಲಭಿಸಿತ್ತು. ನಾಲ್ಕನೇ ವಾರ 9.6 ಟಿವಿಆರ್ ಪಡೆದಿತ್ತು. ಐದನೇ ವಾರ ಕರ್ಣ ಸೀರಿಯಲ್‌ಗೆ 10.1 ಟಿವಿಆರ್ (ಅರ್ಬನ್ + ರೂರಲ್ ಮಾರ್ಕೆಟ್) ಲಭಿಸಿತ್ತು. ಇದೀಗ ಆರನೇ ವಾರ ಕೂಡ 9.1 ಟಿವಿಆರ್ (ಅರ್ಬನ್ + ರೂರಲ್ ಮಾರ್ಕೆಟ್) ಪಡೆಯುವ ಮೂಲಕ ನಂಬರ್ ಒನ್ ಸ್ಥಾನದಲ್ಲೇ ಮುಂದುವರೆದಿದೆ.
ಇನ್ನು 8.8 ಟಿವಿಆರ್ ದಾಖಲಿಸಿ ಅಣ್ಣಯ್ಯ ಎರಡನೇ ಸ್ಥಾನ ಪಡೆದುಕೊಂಡರೆ, ಲಕ್ಷ್ಮೀ ನಿವಾಸ ಸೀರಿಯಲ್ 8.3 ಟಿವಿಆರ್ ಪಡೆದುಕೊಂಡು ಮೂರನೇ ಸ್ಥಾನದಲ್ಲಿದೆ. ನಾ ನಿನ್ನ ಬಿಡಲಾರೆ ಸೀರಿಯಲ್ ಮತ್ತು ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ 7.5 ಟಿವಿಆರ್‌ನೊಂದಿಗೆ ನಾಲ್ಕನೇ ಮತ್ತು ಐದನೇ ಸ್ಥಾನದಲ್ಲಿದೆ.
Ugramm Manju: ಕಿರುತೆರೆಗೆ ಎಂಟ್ರಿಕೊಟ್ಟ ಉಗ್ರಂ ಮಂಜು: ಯಾವ ಧಾರಾವಾಹಿ ನೋಡಿ
ಇನ್ನು ಕಲರ್ಸ್ ಕನ್ನಡದ ವಿಚಾರಕ್ಕೆ ಬಂದರೆ ಅರ್ಬಲ್ + ರೂರಲ್ ಮಾರ್ಕೆಟ್‌ನಲ್ಲಿ 4.7 ಟಿವಿಆರ್ ಪಡೆದು ಭಾಗ್ಯ ಲಕ್ಷ್ಮೀ ಸೀರಿಯಲ್ ಕಲರ್ಸ್ನ ನಂಬರ್ ಒನ್ ಧಾರಾವಾಹಿ ಆಗಿದೆ. ನಂದಗೋಕುಲ ಅರ್ಬನ್ + ರೂರಲ್ ಮಾರ್ಕೆಟ್‌ನಲ್ಲಿ 4.6 ಟಿವಿಆರ್ ಪಡೆದುಕೊಂಡು ಎರಡನೇ ಸ್ಥಾನದಲ್ಲಿದೆ. ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿಗೆ 4.5 ಟಿವಿಆರ್, ಮುದ್ದು ಸೊಸೆ ಧಾರಾವಾಹಿಗೆ 4.1 ಟಿವಿಆರ್ ಲಭಿಸಿದೆ.
ಇನ್ನು ಕಲರ್ಸ್ನಲ್ಲಿ ಕಳೆದ ವಾರ ಶುರುವಾದ ಹೊಸ ಧಾರಾವಾಹಿ ಪ್ರೇಮ ಕಾವ್ಯಕ್ಕೆ ನೀರಸ ವೀಕ್ಷಣೆ ಲಭಿಸಿದೆ. ಇದಕ್ಕೆ ಅರ್ಬನ್ + ರೂರಲ್ ಮಾರ್ಕೆಟ್‌ನಲ್ಲಿ 3.0 ಟಿವಿಆರ್ ಸಿಕ್ಕಿದೆಯಷ್ಟೆ. ಝೀ ಕನ್ನಡದಲ್ಲಿ ಶುರುವಾದ ಹೊಸ ರಿಯಾಲಿಟಿ ಶೋ ನಾವು ನಮ್ಮವರು ಲಾಂಚ್ ವೀಕ್ಗೆ 7.8 ಟಿವಿಆರ್ ಲಭಿಸಿದೆ.