Ugramm Manju: ಎಲ್ಲವೂ ಸುದೀಪ್ ಕೃಪೆ: ಹೆಸರು ಬದಲಾಯಿಸಿಕೊಂಡ ಉಗ್ರಂ ಮಂಜು
ಬಿಗ್ ಬಾಸ್ ನಿಂದ ಹೊರ ಬರುತ್ತಿದ್ದಂತೆ ಉಗ್ರಂ ಮಂಜುಗೆ ದೊಡ್ಡ ಸಿನಿಮಾ ಆಫರ್ ಹರಸಿ ಬರುತ್ತಿದೆ. ಸುದೀಪ್ ಅಳಿಯನ ‘ಮ್ಯಾಂಗೋ ಪಚ್ಚ’ ಸಿನಿಮಾದಲ್ಲಿ ಬಹುಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೊಸ ಸಿನಿಮಾ ಜೊತೆಗೆ ಮಂಜು ಅವರು ಹೊಸ ಹೆಸರಿನೊಂದಿಗೆ ಅಬ್ಬರಿಸಲಿದ್ದಾರೆ.

Max Manju

ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳು ಪ್ರತಿದಿನ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಕೆಲವರು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದರೆ, ಇನ್ನೂ ಕೆಲವರು ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಹಾಗೆಯೆ ದೊಡ್ಡ ದೊಡ್ಡ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದಾರೆ. ಇದರ ಮಧ್ಯೆ ಉಗ್ರಂ ಮಂಜು ಹೊಸ ಸಿನಿಮಾವನ್ನೇ ಒಪ್ಪಿಕೊಂಡಿದ್ದಾರೆ. ಸುದೀಪ್ ಅಳಿಯನ ‘ಮ್ಯಾಂಗೋ ಪಚ್ಚ’ ಸಿನಿಮಾದಲ್ಲಿ ಬಹುಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೊಸ ಸಿನಿಮಾ ಜೊತೆಗೆ ಮಂಜು ಅವರು ಹೊಸ ಹೆಸರಿನೊಂದಿಗೆ ಅಬ್ಬರಿಸಲಿದ್ದಾರೆ.
ಬಿಗ್ ಬಾಸ್ ನಿಂದ ಹೊರ ಬರುತ್ತಿದ್ದಂತೆ ಉಗ್ರಂ ಮಂಜುಗೆ ದೊಡ್ಡ ಸಿನಿಮಾ ಆಫರ್ ಹರಸಿ ಬರುತ್ತಿದೆ. ಇತ್ತೀಚೆಗಷ್ಟೇ ಸುಪ್ರಿಯಾನ್ವಿ ಮತ್ತು ಕೆಆರ್‌ಜಿ ಸ್ಟುಡಿಯೋಸ್ ಪ್ರೊಡಕ್ಷನ್ ಹೌಸ್‌ನಲ್ಲಿ ಅನೌನ್ಸ್ ಆದ ಮ್ಯಾಂಗೋ ಪಚ್ಚ ಸಿನಿಮಾದಲ್ಲಿ ಉಗ್ರಂ ಮಂಜು ಪಾತ್ರವಹಿಸುತ್ತಿದ್ದಾರೆ. ಈಗಾಗಲೇ ಸುಮಾರು ಸಿನಿಮಾಗಳಲ್ಲಿ ನಟಿಸಿರುವ ಮಂಜುಗೆ ಕಿಚ್ಚ ಸುದೀಪ್ ಅಳಿಯ ಸಂಚಿತ್ ಸಂಜೀವ್ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿರುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಮಂಜುಗೆ ಬೇಡಿಕೆ ಹೆಚ್ಚಾಗಲು ಎರಡು ಕಾರಣ ಇದೆ. ಒಂದು ಬಿಗ್ ಬಾಸ್ ಶೋ ಆದರೆ ಮತ್ತೊಂದು ಮ್ಯಾಕ್ಸ್ ಸಿನಿಮಾ. ಉಗ್ರಂ ಮಂಜು ಕಳೆದ ಡಿ.25 ರಂದು ರಿಲೀಸ್ ಆಗಿ ಮ್ಯಾಕ್ಸಿಮಮ್ ಹಿಟ್ ಕೊಟ್ಟ ಮ್ಯಾಕ್ಸ್ ಸಿನಿಮಾದಲ್ಲಿ ನಟ ಸುದೀಪ್ ಜೊತೆ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮ್ಯಾಕ್ಸ್ ನಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಉಗ್ರಂ ಮಂಜುಗೆ ಎಲ್ಲರೂ ಭೇಷ್ ಎಂದಿದ್ದರು. ಇವರ ನಟನೆ ಕಂಡು ಎಲ್ಲರೂ ತಲೆಬಾಗಿದ್ದರು.
ಇದೀಗ ಉಗ್ರಂ ಮಂಜು ಅವರು ಮಾಕ್ಸ್ ಮಂಜು ಆಗಿ ತಮ್ಮ ಹೆಸರನ್ನು ಚೇಂಚ್ ಮಾಡಿಕೊಂಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಮೊದಲು ಉಗ್ರಂ ಮಂಜು ಅಂತ ಹೆಸರಿತ್ತು. ಆದರೆ ಇದೀಗ ಆ ಜಾಗಕ್ಕೆ ಮಾಕ್ಸ್ ಮಂಜು ಅಂತ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿದ್ದಾಗ ಕಿಚ್ಚ ಸುದೀಪ್ ಅವರು ಉಗ್ರಂ ಮಂಜುಗೆ ಪ್ರತಿ ವೀಕೆಂಡ್ನಲ್ಲಿ ಮ್ಯಾಕ್ಸಿಮಮ್, ಮಾಕ್ಸ್ ಎಂಬ ಪದವನ್ನು ಮಂಜುಗೆ ಬಳಸಿ ಮಾಡುತ್ತಿದ್ದರು. ಅಲ್ಲದೇ ಅಭಿಮಾನಿಗಳು ಕೂಡ ಮಂಜು ಅವರನ್ನು ಮಾಕ್ಸ್ ಮಂಜು ಅಂತ ಕರೆಯೋದಕ್ಕೆ ಶುರು ಮಾಡಿದ್ದರು. ಹೀಗಾಗಿ ಹೆಸರನ್ನು ಚೇಂಚ್ ಮಾಡಿಕೊಂಡಿರುವ ಸಾಧ್ಯತೆ ಇದೆ. ಈ ಮೂಲಕ ಉಗ್ರಂ ಮಂಜು ಈಗ ಮ್ಯಾಕ್ಸ್ ಮಂಜು ಆಗಿ ಬದಲಾಗಿದ್ದಾರೆ ಎನ್ನಬಹುದು.
Bhagya Lakshmi Serial: ಮಗಳ ಹುಟ್ಟುಹಬ್ಬಕ್ಕೇ ಜೋಕರ್ ವೇಷ ತೊಟ್ಟು ಹಣ ಸಂಪಾದಿಸಿದ ಭಾಗ್ಯಾ