ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Drone Prathap: ಗಗನಾಗೋಸ್ಕರ ಉರುಳು ಸೇವೆ ಮಾಡಿ ಹರಕೆ ಹೊತ್ತ ಡ್ರೋನ್ ಪ್ರತಾಪ್: ಭಾವುಕ ಎಪಿಸೋಡ್

ಮೊನ್ನೆಯಷ್ಟೆ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಶೋನಲ್ಲಿ ಡ್ರೋನ್ ಪ್ರತಾಪ್ ಅವರು 1000 ಅಡಿ ಎತ್ತರದಲ್ಲಿ ಹಾರುವ ಹೆಲಿಕ್ಯಾಪ್ಟರ್‌ ತಂದು ಗಗನಾಗೆ ಸರ್ಪ್ರೈಸ್‌ ಕೊಟ್ಟಿದ್ದರು. ಇದೀಗ ಬ್ಯಾಚುಲರ್ಸ್ನಲ್ಲಿ ನೀಡಿದ ಮತ್ತೊಂದು ಟಾಸ್ಕ್ನಲ್ಲಿ ಕೂಡ ಡ್ರೋನ್ ಪ್ರತಾಪ್ ಎಲ್ಲರ ಗಮನ ಸೆಳೆದಿದ್ದಾರೆ.

ಗಗನಾಗೋಸ್ಕರ ಉರುಳು ಸೇವೆ ಮಾಡಿ ಹರಕೆ ಹೊತ್ತ ಡ್ರೋನ್ ಪ್ರತಾಪ್

Gagana and Drone Prathap

Profile Vinay Bhat May 21, 2025 8:05 AM

ಬಿಗ್ ​ಬಾಸ್ ಕನ್ನಡ​ ಸೀಸನ್​ 10ರ ರನ್ನರ್​ ಅಪ್​ ಡ್ರೋನ್​ ಪ್ರತಾಪ್ (Drone Prathap)​ ಇತ್ತೀಚಿನ ದಿನಗಳಲ್ಲಿ ಸದಾ ​ಸುದ್ದಿಯಲ್ಲಿರುತ್ತಾರೆ. ಸದ್ಯ ಡ್ರೋನ್ ಪ್ರತಾಪ್ ಝೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಭರ್ಜರಿ ಬ್ಯಾಚುಲರ್ಸ್​ ಸೀಸನ್ 2 ನಲ್ಲಿ ಎಲ್ಲರ ನೆಚ್ಚಿನ ಸ್ಪರ್ಧಿಯಾಗಿದ್ದು, ಇಲ್ಲಿ ಇವರ ಹವಾ ಭರ್ಜರಿ ಆಗಿದೆ. ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಭರ್ಜರಿ ಬ್ಯಾಚ್ಯುಲರ್ಸ್ ಸೀಸನ್​ 2 ಪ್ರಸಾರವಾಗುತ್ತಿದೆ. ಈ ಶೋಗೆ ಅಮೋಘ ರೆಸ್ಪಾನ್ಸ್ ಕೇಳಿಬರುತ್ತಿದೆ. ಹತ್ತು ಬ್ಯಾಚುಲರ್ಸ್​ಗೆ ಹತ್ತು ಸುಂದರಿಯರು ಮೆಂಟರ್ಸ್ ಆಗಿದ್ದಾರೆ.

ಗಗನಾ ಜೊತೆಗೆ ಜೋಡಿಯಾಗಿರುವ ಡ್ರೋನ್​ ಪ್ರತಾಪ್ ಪ್ರತಿ ಎಪಿಸೋಡ್​ನಲ್ಲಿ ಎಲ್ಲರ ಕಣ್ಣುಕುಕ್ಕುವಂತೆ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ ​ ಪ್ರತಾಪ್ ಬಳಿಕ ಮೈ ಚಳಿ ಬಿಟ್ಟು ಗಗನಾ ಜೊತೆಗೆ ಸಖತ್ ಸ್ಟೆಪ್​ ಹಾಕಿದ್ದರು. ಬಳಿಕ ಕಿರುತೆರೆ ಇತಿಹಾಸದಲ್ಲೇ ಈವರೆಗೆ ಯಾರೂ ಮಾಡಿದ ಸಾಧನೆಯೊಂದನ್ನ ಪ್ರತಾಪ್ ಮಾಡಿದ್ದರು. ಈ ಶೋನಲ್ಲಿ ಪ್ರತಾಪ್ ಅವರು 1000 ಅಡಿ ಎತ್ತರದಲ್ಲಿ ಹಾರುವ ಹೆಲಿಕ್ಯಾಪ್ಟರ್‌ ತಂದು ಗಗನಾಗೆ ಸರ್ಪ್ರೈಸ್‌ ಕೊಟ್ಟಿದ್ದರು. ಇದೀಗ ಬ್ಯಾಚುಲರ್ಸ್​ನಲ್ಲಿ ನೀಡಿದ ಮತ್ತೊಂದು ಟಾಸ್ಕ್​ನಲ್ಲಿ ಕೂಡ ಡ್ರೋನ್ ಪ್ರತಾಪ್ ಎಲ್ಲರ ಗಮನ ಸೆಳೆದಿದ್ದಾರೆ.

ಡೆಡಿಕೇಷನ್‌ ರೌಂಡ್​ ಹೆಸರಿನ ಟಾಸ್ಕ್​ನಲ್ಲಿ ತಮ್ಮ ತಮ್ಮ ಮೆಂಟರ್‌ಗಳ ಏಳಿಗೆ ಮತ್ತು ಸಾಧನೆಗಾಗಿ ಬ್ಯಾಚುಲರ್ಸ್‌ ಹಲವು ವಿಶೇಷ ಸರ್ಪ್ರೈಸ್‌ ನೀಡಬೇಕು. ಇದರಲ್ಲಿ ಡ್ರೋನ್‌ ಪ್ರತಾಪ್‌ ವಿಶೇಷ ಎಂದೆನಿಸಿಕೊಂಡಿದ್ದಾರೆ. ಈ ರೌಂಡ್‌ನಲ್ಲಿ ಗಗನಾಗೋಸ್ಕರ ಡ್ರೋನ್‌ ಪ್ರತಾಪ್‌ ಉರುಳು ಸೇವೆ ಮಾಡಿ ಹರಕೆ ಹೊತ್ತಿದ್ದಾರೆ. ಗಗನಾ ಅವರ ಆರೋಗ್ಯ ಮತ್ತು ಏಳಿಗೆಗಾಗಿ ಲಕ್ಷ್ಮೀ ಭೂ ವರಾಹ ಸ್ವಾಮಿ ದೇವಸ್ಥಾನದಲ್ಲಿ ಡ್ರೋನ್‌ ಪ್ರತಾಪ್‌ ವಿಶೇಷ ಹರಕೆ ಸಲ್ಲಿಸಿದ್ದಾರೆ. ಬಾವಿಯ ತಣ್ಣೀರು ಸ್ನಾನ ಮಾಡಿ, ಬಿಳಿ ಪಂಚೆ ಧರಿಸಿ ಸಾಷ್ಟಾಂಗ ನಮಸ್ಕಾರ ಹಾಕಿ ದೇವಿ ಬಳಿ ಗಗನಾ ಅವರ ಹೆಸರಿನಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ.

Seetha Rama Serial: ಹೌದು ನಾನು ಸಿಹಿ ಅಲ್ಲ: ಸೀತಮ್ಮನ ಮುಂದೆ ಸತ್ಯ ಒಪ್ಪಿಕೊಂಡ ಸುಬ್ಬಿ

‘‘ಗಗನಾ ಯಾವಾಗಲೂ ಹುಷಾರು ತಪ್ಪುತ್ತಿರುತ್ತಾರೆ. ಅವರು ತುಂಬಾ ಸೂಕ್ಷ್ಮ. ಅವರು ಕನ್ನಡ ಚಿತ್ರರಂಗದಲ್ಲಿ ಒಬ್ಬ ನಟಿಯಾಗಿ ಬೆಳೆಯಬೇಕು ಅನ್ನೋ ಆಸೆ ಅವರಲ್ಲಿ ಕೊರೆಯುತ್ತಿದೆ. ಯಾವುದೇ ಕೆಟ್ಟ ದೃಷ್ಟಿ ಅವರ ಮೇಲೆ ಬೀಳದೇ ಇರಲಿ ಅನ್ನೋ ಕಾರಣಕ್ಕೆ ಹರಕೆ ಕಟ್ಟಿಕೊಳ್ಳೋಕೆ ಬಂದಿದ್ದೇನೆ’’ ಎಂದು ಡ್ರೋನ್‌ ಪ್ರತಾಪ್‌ ಹೇಳಿದ್ದಾರೆ. ಇದನ್ನು ಕಂಡು ಅನೇಕರು ಭಾವುಕರಾಗಿದ್ದಾರೆ.