ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಅಶ್ವಿನಿ ಗೌಡ ತಾಕತ್ತಿಗೆ ಸಿಂಗಲ್ ಸಿಂಹ ಗಿಲ್ಲಿ ಸವಾಲ್

ಮನೆಯ ಈ ವಾರದ ಕ್ಯಾಪ್ಟನ್ ಆಗಿರುವ ರಘು, ನಿಮ್ಮ ಪ್ರಕಾರ ಡೇರಿಂಗ್ ಎಂದರೇನು ಎಂಬ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಗಿಲ್ಲಿ, ಒಂದು ಟೀಮ್ನಲ್ಲಿ ಎಂಟು ಜನ ಇರುತ್ತಾರೆ ಸರ್ ಅದರಲ್ಲಿ ಏಳು ಜನ ಒಬ್ಬರಿಗೆ ಸ್ಟೂಡೆಂಟ್ ಆಫ್ ದಿ ವೀಕ್ ಅವಾರ್ಡ್ ಕೊಡಬೇಕು ಅಂತ ಸರ್ ಆದ್ರೆ ಒಬ್ಬ ಸಿಂಗಲ್ ಸಿಂಹ ನನಗೆ ಬೇಕು ಅಂತ ನಿಂತುಕೊಳ್ಳುತ್ತಾನೆ ಅದು ಸರ್ ಡೇರಿಂಗ್ ಎಂದು ಹೇಳಿದ್ದಾರೆ.

Gilli and Ashwini

ಬಿಗ್ ಬಾಸ್ ಕನ್ನಡ ಸೀಸನ್ 12ರ (Bigg Boss Kannada 12) ನಿನ್ನೆ ಎಪಿಸೋಡ್​ನಲ್ಲಿ ಡೊಡ್ಡ ಡ್ರಾಮವೇ ನಡೆದು ಹೋಯಿತು. ಕ್ಯಾಪ್ಟನ್ಸಿ ಓಟಕ್ಕಾಗಿ ನಡೆದು ನೀಲಿ ತಂಡ- ಕೆಂಪು ತಂಡ ನಡುವಣ ಟಾಸ್ಕ್​ನಲ್ಲಿ ಅಂತಿಮವಾಗಿ ಕೆಂಪು ತಂಡ ಜಯ ಸಾಧಿಸಿತು. ಹೀಗಾಗಿ ಇವರ ತಂಡದಿಂದ ಓರ್ವ ಸದಸ್ಯನನ್ನು ಸ್ಟೂಡೆಂಟ್ ಆಫ್ ದಿ ವೀಕ್​ಗೆ ಆಯ್ಕೆ ಮಾಡಬೇಕಿತ್ತು. ಅವರದ್ದೇ ತಂಡದ ಸದಸ್ಯರು ಒಮ್ಮತದ ನಿರ್ಧಾರ ಕೈಗೊಳ್ಳಬೇಕಿತ್ತು. ಅಶ್ವಿನಿ ಗೌಡ, ಕಾಕ್ರೋಚ್ ಸುಧಿ, ಧನುಷ್, ರಾಶಿಕಾ ಹಾಗೂ ಮಾಲು ರಾಶಿಕಾ ಹೆಸರನ್ನು ತೆಗೆದುಕೊಂಡರು. ಆದರೆ, ಗಿಲ್ಲಿ ಮತ್ತು ಸ್ಪಂದನಾ ತಮ್ಮ ತಮ್ಮ ಹೆಸರನ್ನು ತೆಗೆದುಕೊಂಡಿದ್ದಾರೆ.

ಎಷ್ಟೇ ಚರ್ಚೆ ಮಾಡಿದರೂ ಗಿಲ್ಲಿ ಇತರರ ಹೆಸರು ಸೂಚಿಸಲು ತಯಾರಿರಲಿಲ್ಲ. ರಾಶಿಕಾಗೆ ಹೆಚ್ಚು ವೋಟ್ ಬಂದಿದ್ದರೂ ಇಲ್ಲಿ ಒಮ್ಮತದ ನಿರ್ಧಾರ ಇಲ್ಲದ ಕಾರಣ ಬಿಗ್ ಬಾಸ್ ಕೆಂಪು ತಂಡಕ್ಕೆ ಸಿಕ್ಕ ಸ್ಟೂಡೆಂಟ್ ಆಫ್ ದಿ ವೀಕ್ ಆಫರ್ ಅನ್ನು ರದ್ದುಗೊಳಿಸಿದರು. ಇಲ್ಲಿಂದ ಅಶ್ವಿನಿ ಹಾಗೂ ಗಿಲ್ಲಿ ನಡುವಣ ಜಟಾಪಟಿ ಮುಂದಿನ ಹಂತಕ್ಕೋಗಿದೆ. ಇದೀಗ ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಒಂದು ಪ್ರೋಮೋದಲ್ಲಿ ಇದು ಎದ್ದು ಕಾಣಿಸಿದೆ.

ಮನೆಯ ಈ ವಾರದ ಕ್ಯಾಪ್ಟನ್ ಆಗಿರುವ ರಘು, ನಿಮ್ಮ ಪ್ರಕಾರ ಡೇರಿಂಗ್ ಎಂದರೇನು ಎಂಬ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಗಿಲ್ಲಿ, ಒಂದು ಟೀಮ್​ನಲ್ಲಿ ಎಂಟು ಜನ ಇರುತ್ತಾರೆ ಸರ್ ಅದರಲ್ಲಿ ಏಳು ಜನ ಒಬ್ಬರಿಗೆ ಸ್ಟೂಡೆಂಟ್ ಆಫ್ ದಿ ವೀಕ್ ಅವಾರ್ಡ್ ಕೊಡಬೇಕು ಅಂತ ಸರ್ ಆದ್ರೆ ಒಬ್ಬ ಸಿಂಗಲ್ ಸಿಂಹ ನನಗೆ ಬೇಕು ಅಂತ ನಿಂತುಕೊಳ್ಳುತ್ತಾನೆ ಅದು ಸರ್ ಡೇರಿಂಗ್ ಎಂದು ಹೇಳಿದ್ದಾರೆ.



ಅತ್ತ ಅಶ್ವಿನಿ ಗೌಡ ಬಳಿ ಕೇಳಿದಾಗ, ನನ್ನ ಪ್ರಕಾರ ಅಶ್ವಿನಿ ಗೌಡ ಅಂದ್ರೆ ತಾಕತ್ತು.. ತಾಕತ್ತು ಅಂದ್ರೆ ಅಶ್ವಿನಿ ಗೌಡ ಎಂದು ಹೇಳಿದರು. ಹೀಗೆ ಹೇಳುತ್ತಿದ್ದಂತೆ ಗಿಲ್ಲಿ ಕ್ಯಾಪ್ಟನ್ ಬಳಿ ಬಂದು ನನ್ಗೆ ಇದನ್ನೆಲ್ಲ ನೋಡೋಕೆ ಆಗ್ತಾ ಇಲ್ಲ ಅಂತ ನನ್ನ ಡಿಬಾರ್ ಮಾಡಿ ಸರ್ ಎಂದು ಹೇಳಿದ್ದಾರೆ. ಮಾತು ಮುಂದುವರೆಸಿದ ಅಶ್ವಿನಿ, ನಾವು ಹೋರಾಟ ಅಂತ ಬಂದಾಗ ನಮ್ಮನ್ನ ಬಕೆಟ್ ಅಂತ ಕರೆದಿದ್ದಾರೆ.. ಸೌಟು ಅಂತ ಕರೆದಿದ್ದಾರೆ.. ಇನ್ನೊಂದು ಅಂತ ಬಹಳ ಕೀಳು ಮಟ್ಟದಲ್ಲಿ ಮಾತನಾಡಬಹುದು ಆದ್ರೆ ಎಲ್ಲವನ್ನೂ ಎದುರಿಸಿ ನಿಂತಿರುವುದು ನನ್ನ ತಾಕತ್ತು ಸರ್ ಎಂದು ಹೇಳಿದ್ದಾರೆ.

BBK 12: ರಕ್ಷಿತಾ ಆಟಕ್ಕೆ ಬಿಗ್ ಬಾಸ್ ವೀಕ್ಷಕರು ಫಿದಾ: ಶೆಟ್ರಿಗೆ ಹೆಚ್ಚುತ್ತಲೇ ಇದೆ ಫ್ಯಾನ್ ಬೇಸ್