ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಬಿಗ್ ಬಾಸ್ ಕನ್ನಡ 12ರ ಮೊದಲ ಕಂಟೆಸ್ಟೆಂಟ್ ಇವರೇ..?

ಸುದ್ದಿವಾಹಿನಿಗಳಲ್ಲಿ ನಿರೂಪಕಿಯಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಜಾಹ್ನಾವಿ, ಇದೀಗ ಈ ಬಾರಿ ದೊಡ್ಮನೆಯೊಳಗೆ ಹೋಗಲಿದ್ದಾರೆ ಎಂಬ ಗುಸುಗುಸು ಶುರುವಾಗಲಿದೆ. ಅಲ್ಲದೆ ಸಂದರ್ಶನದಲ್ಲಿ ಮಾತನಾಡಿರುವ ಜಾಹ್ನಾವಿ, ನನಗೆ ಬಿಗ್ ಬಾಸ್ಗೆ ಹೋಗಬೇಕೆಂಬ ಆಲೋಚನೆ ಖಂಡಿತ ಇದೆ ಎಂದು ಹೇಳಿದ್ದಾರೆ.

jhanvi bigg boss

ಬಿಗ್ ಬಾಸ್ ಕನ್ನಡ ಸೀಸನ್ 12ರ (Bigg Boss Kannada 12) ಕುರಿತು ಒಂದೊಂದೆ ದೊಡ್ಡ ಅಪ್ಡೇಟ್ ಹೊರಬೀಳುತ್ತಿದೆ. ಸದ್ಯದಲ್ಲೇ ಬಿಬಿಕೆ 12 ಸೀಸನ್ ಶುರುವಾಗಲಿದೆ. ಅಷ್ಟೇ ಅಲ್ಲದೆ ಈ ಬಾರಿ ನಿರೂಪಕರಾಗಿ ಕಿಚ್ಚ ಸುದೀಪ್ ಅವರೇ ಮುಂದುವರೆಯಲಿದ್ದಾರೆ. ಈ ಬಾರಿ ಶೋ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಡೆಯಲಿದೆ ಎನ್ನಲಾಗಿದೆ. ಇಲ್ಲಿ ಹೊಸ ಮನೆ ನಿರ್ಮಾಣ ಮಾಡಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ. ಇದರ ಜೊತೆಗೆ ದೊಡ್ಮನೆಗೆ ಈ ಬಾರಿ ಯಾರೆಲ್ಲ ಹೋಗಬಹುದು ಎಂಬ ಗಾಸಿಪ್ ಕೂಡ ಹರಿದಾಡುತ್ತಿದೆ.

ಈಗಾಗಲೇ 12ನೇ ಸೀಸನ್​ಗೆ ಇವರು ಮನೆಯೊಳಗೆ ಹೋಗಲಿದ್ದಾರೆ ಎಂದು ಅನೇಕ ಹೆಸರುಗಳು ಕೇಳಿಬರುತ್ತಿವೆ. ಈ ಪೈಕಿ ನ್ಯೂಸ್ ಆಂಕರ್ ಚಂದನ್ ಶರ್ಮಾ, ಡಾ ಬ್ರೋ, ಅರ್ಚನಾ ಜೋಯಿಸ್‌, ಶ್ರೀ ಮಹಾದೇವ್, ಗಗನ್ ಚಿನ್ನಪ್ಪ, ಪೂಜಾ ಲೋಕೇಶ್, ನೂರು ಜನ್ಮಕೂ, ಗೀತಾ ಸೀರಿಯಲ್‌ನಲ್ಲಿ ನಟಿಸಿದ್ದ ಧನುಷ್ ಗೌಡ ಹೀಗೆ ಕೆಲವು ಹೆಸರುಗಳಿವೆ. ಇದೀಗ ಈ ಲಿಸ್ಟ್​ಗೆ ಮತ್ತೊಂದು ಹೆಸರು ಸೇರ್ಪಡೆಯಾಗಿದೆ.

ಅದು ಬೇರೆ ಯಾರೂ ಅಲ್ಲ.. ಜಾಹ್ನಾವಿ. ಸುದ್ದಿವಾಹಿನಿಗಳಲ್ಲಿ ನಿರೂಪಕಿಯಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಇವರು ಬಳಿಕ ಅದರಿಂದ ಬ್ರೇಕ್ ಪಡೆದುಕೊಂಡು ನಟನಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟರು. ಮೊದಲಿಗೆ ಗಿಚ್ಚಿ ಗಿಲಿಗಿಲಿ, ನನ್ನಮ್ಮ ಸೂಪರ್‌ ಸ್ಟಾರ್​ನಂತಹ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಮಿಂಚಿದ್ದರು. ಬಳಿಕ ರೂಪೇಶ್‌ ಶೆಟ್ಟಿ ನಟನೆಯ ಅಧಿಪತ್ರ ಸಿನಿಮಾದಲ್ಲಿ ನಟಿಸುವ ಮೂಲಕ ಚಿತ್ರರಂಗದಲ್ಲಿಯೂ ಗಮನ ಸೆಳೆದರು.

ಬಿಗ್ ಬಾಸ್ 19 ಟ್ರೇಲರ್ ಬಿಡುಗಡೆ: ಈ ಬಾರಿ ಹಿಂದೆಂದೂ ಕಂಡು- ಕೇಳರಿಯದ ಕಾನ್ಸೆಪ್ಟ್

ಇದೀಗ ಇವರು ಈ ಬಾರಿ ದೊಡ್ಮನೆಯೊಳಗೆ ಹೋಗಲಿದ್ದಾರೆ ಎಂಬ ಗುಸುಗುಸು ಶುರುವಾಗಲಿದೆ. ಅಲ್ಲದೆ ವಿಜಯ ಕರ್ನಾಟಕ ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಜಾಹ್ನಾವಿ, ನನಗೆ ಬಿಗ್ ಬಾಸ್​ಗೆ ಹೋಗಬೇಕೆಂಬ ಆಲೋಚನೆ ಖಂಡಿತ ಇದೆ ಎಂದು ಹೇಳಿದ್ದಾರೆ. ಆದರೆ, ನಾನೇನಾದರೂ ಬಿಗ್ ಬಾಸ್‌ ಮನೆಗೆ ಹೋದರೆ ಇಲ್ಲಿ ಅಮ್ಮ ಮತ್ತು ಮಗನನ್ನು ನೋಡಿಕೊಳ್ಳೋರು ಯಾರು? ಅವರನ್ನು ಮ್ಯಾನೇಜ್ ಮಾಡೋರು ಯಾರು? ಎಂಬ ಸಣ್ಣ ಗೊಂದಲ ಕೂಡ ನನಗೆ ಇದೆ ಎಂದು ಹೇಳಿರುವ ಜಾಹ್ನವಿ ಈ ವಿಚಾರದಲ್ಲಿ ಅಮ್ಮನ ಬೆಂಬಲ ನನಗೆ ಇದೆ, ಅವರು ಅವಕಾಶ ಬಂದರೆ ಬಿಡಬೇಡ ಹೋಗು, ನಾನು ನೋಡಿಕೊಳ್ತೀನಿ ಎಂದು ಹೇಳುತ್ತಿದ್ದಾರೆ ಎಂದು ಹೇಳಿದ್ದಾರೆ. ಹೀಗಾಗಿ ಈ ಬಾರಿ ಜಾಹ್ನವಿ ಬಿಗ್ ಬಾಸ್​ಗೆ ಬರುವ ಸಾಧ್ಯತೆ ಇದೆ.