ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ (Bigg Boss Kannada 12) ಈ ವಾರ ಪೂರ್ತಿ ಜಗಳಗಳಿಂದಲೇ ಕೂಡಿದೆ. ನಿನ್ನೆ ರಕ್ಷಿತಾ ಶೆಟ್ಟಿ ಮೇಲೆ ರಾಶಿಕಾ ಹಾಗೂ ಅಶ್ವಿನಿ ಗೌಡ ಮುಗಿಬಿದ್ದರು. ಅಡುಗೆ ಮಾಡುವ ವಿಚಾರಕ್ಕೆ ಮನೆಯಲ್ಲಿ ದೊಡ್ಡ ಜಗಳವೇ ನಡೆಯಿತು. ಅಲ್ಲದೆ ಕಬಡ್ಡಿ ಆಟದ ಮಧ್ಯೆ ರಕ್ಷಿತಾಗೆ ಮೋಸ ಆಯಿತು ಎಂಬ ದೂರು ಕೂಡ ಇದೆ. ಇದೀಗ ಇಂದಿನ ಎಪಿಸೋಡ್ನ ಪ್ರೋಮೋ ಕಲರ್ಸ್ ಕನ್ನಡ ಬಿಡುಗಡೆ ಮಾಡಿದ್ದು, ಇದರಲ್ಲಿ ಕಾವ್ಯಾ ಶೈವ ಹಾಗೂ ಅಶ್ವಿನಿ ಗೌಡ ನಡುವೆ ಬೆಂಕಿ ಹೊತ್ತಿಕೊಂಡಿದೆ.
ಡಿಸ್ಕಷನ್ ನೀನು ರೈಡ್ ಅಥವಾ ನಾನು ರಾಂಗ್ ಅಂತ ಅಲ್ಲ.. ನಮ್ಗೆ ಮಾತಡೋಕೆ ಒಂದು ವೇದಿಕೆ ಸಿಕ್ಕಿತ್ತು ಅಲ್ವಾ ಅದು ಆಗಿಲ್ಲ ಅಂತ ಅಷ್ಟೆ ಎಂದಯ ಅಶ್ವಿನಿ ಗೌಡ ಅವರು ಕಾವ್ಯಾ ಬಳಿ ಹೇಳಿದ್ದಾರೆ. ಅದಕ್ಕೆ ಕಾವ್ಯಾ ಅವರು, ನಿಮ್ಮ ಮಾತು ನನ್ಗೆ ಅವಶ್ಯಕತೆ ಇರಲಿಲ್ಲ, ನಿಮ್ಗೆ ಇಗೋ ಇತ್ತು ಅದಕ್ಕೆ ನೀವು ಮಾತಾಡಿಲ್ಲ ಎಂದಿದ್ದಾರೆ. ಅದಕ್ಕೆ ಅಶ್ವಿನಿ ಅವರು, ಬರೀ ಅಶ್ವಿನಿ ಗೌಡ ಹೆಸರು ಹೇಳಿಕೊಂಡು ಪವರ್ ಕಾರ್ಡ್ ಯೂಸ್ ಮಾಡ್ತಾ ಇದ್ದೀಯ ಅಷ್ಟೆ ಎಂದಿದ್ದಾರೆ.
ಅಶ್ವಿನಿ ಗೌಡ ಮಾತಿನಿಂದ ರೊಚ್ಚಿಗೆದ್ದ ಕಾವ್ಯಾ ಏಕವಚನದಲ್ಲೇ, ನಿನ್ನ ಹೆಸರು ತೆಗೆದುಕೊಳ್ಳುವ ಅವಶ್ಯಕತೆ ಏನು? ಎಂದಿದ್ದಾರೆ. ಏಕವಚನದಲ್ಲಿ ಮಾತನಾಡಿದ್ದಕ್ಕೆ ಕೋಪಗೊಂಡ ಅಶ್ವಿನಿ, ನಿನ್ನ ಅನ್ಬೇಡ.. ಏನು ನಿನ್ನ.. ಏನು ನಿನ್ನ ಎಂದು ಇಬ್ಬರ ನಡುವೆ ಫೈಟ್ ನಡೆದಿದೆ. ಕಾವ್ಯಾ ಅವರು ನೀನು ರೆಸ್ಪೆಕ್ಟ್ ಕೊಟ್ರೆ ನಾನೂ ಕೊಡ್ತೀನಿ ಎಂದಿದ್ದು ಗೆಟ್ ಲಾಸ್ಟ್ ಎಂದು ಹೇಳಿದ್ದಾರೆ. ನಾನು ಹಂಗೇ ಮಾತಾಡೋದು ಎಂದು ಕಾವ್ಯಾ ಹೇಳಿದರೆ ಅಶ್ವಿನಿ ಅವರು ನೀನು ಯಾವಾಳೇ ಮಾತಾಡೋಕೆ ಎಂದು ಕೂಗಾಡಿದ್ದಾರೆ.
ಒಟ್ಟಾರೆ ಪ್ರತಿದಿನ ಅಶ್ವಿನಿ ಗೌಡ ಒಬ್ಬಲ್ಲ ಒಬ್ಬ ಸ್ಪರ್ಧಿಯ ವಿರುದ್ಧ ಜಗಳ ಆಡುತ್ತಲೇ ಇದ್ದಾರೆ. ವೀಕ್ಷಕರು ಮಾತ್ರ ಇಷ್ಟಾದರೂ ಅಶ್ವಿನಿ ದುರಹಂಕಾರ ನಿಲ್ಲುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಕಳೆದ ಎರಡೂ ವೀಕೆಂಡ್ನಲ್ಲಿ ಕಿಚ್ಚ ಸುದೀಪ್ ಬಂದು ಬಿದ್ದಿವಾದ ಹೇಳಿದರೂ ಅಶ್ವಿನಿ ಮತ್ತೆ ಮತ್ತೆ ಅದೇ ತಪ್ಪು ಮಾಡುತ್ತಿದ್ದಾರೆ. ಈ ವೀಕೆಂಡ್ನಲ್ಲೂ ಪುನಃ ಇವರಿಗೆ ಕಿಚ್ಚನ ಕ್ಲಾಸ್ ಖಚಿತ ಎಂದು ಹೇಳುತ್ತಿದ್ದಾರೆ.