ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಬಿಗ್ ಬಾಸ್ ಸೀಸನ್ 12ರ ಮೊದಲ ಕ್ಯಾಪ್ಟನ್ ಆದ ಮ್ಯುಟೆಂಟ್ ರಘು

ಬಿಬಿಕೆ 12ರ ಮೊದಲ ಕ್ಯಾಪ್ಟನ್ಸಿ ಟಾಸ್ಕ್ಗೆ ರಘು ಹಾಗೂ ರಿಷಾ ಆಯ್ಕೆ ಆಗಿದ್ದರು. ಸೂರಜ್ ತಂಡ ವಿವಿಧ ಮುಖಬೆಲೆಯ ನಕಲಿ ನಾಣ್ಯಗಳ ಟಾಸ್ಕ್ನಲ್ಲಿ ಸೋತ ಕಾರಣ ಇವರು ಆಯ್ಕೆ ಆಗಲಿಲ್ಲ. ಅತ್ತ ರಘು ಹಾಗೂ ರಿಷಾ ಬಿಗ್ ಬಾಸ್ ಕೊಟ್ಟ ಸ್ಪೆಷಲ್ ಪವರ್ ಮೂಲಕ ನೇರವಾಗಿ ಕ್ಯಾಪ್ಟನ್ಸಿ ಟಾಸ್ಕ್ಗೆ ಅರ್ಹತೆ ಪಡೆದರು.

mutant raghu Captain

ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ (Bigg Boss Kannada 12) ವೈಲ್ಡ್ ಕಾರ್ಡ್ ಸ್ಪರ್ಧಿಗಳ ಹವಾ ಜೋರಾಗಿದೆ. ಬಂದ ಮೊದಲ ವಾರವೇ ಮ್ಯುಟೆಂಟ್ ರಘು, ರಿಷಾ ಗೌಡ ಹಾಗೂ ಸೂರಜ್ ಸಿಂಗ್ ಧೂಳೆಬ್ಬಿದಿದ್ದಾರೆ. ರಘು ಮನೆಯವರ ವಿರೋಧ ಕಟ್ಟಿಗೊಂಡೆ ಬಿಗ್ ಬಾಸ್ ಕನ್ನಡ ಸೀಸನ್ 12ರ ಮೊದಲ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ಈ ವಾರದ ಉತ್ತಮ ಪ್ರದರ್ಶನ ಧ್ರುವಂತ್ ಅವರಿಗೆ ಸಿಕ್ಕಿದರೆ ಕಳಪೆ ಅಶ್ವಿನಿ ಗೌಡ ಅವರಿಗೆ ಸಿಕ್ಕಿ ಜೈಲು ಪಾಲಾಗಿದ್ದಾರೆ.

ಬಿಬಿಕೆ 12ರ ಮೊದಲ ಕ್ಯಾಪ್ಟನ್ಸಿ ಟಾಸ್ಕ್​ಗೆ ರಘು ಹಾಗೂ ರಿಷಾ ಆಯ್ಕೆ ಆಗಿದ್ದರು. ಸೂರಜ್ ತಂಡ ವಿವಿಧ ಮುಖಬೆಲೆಯ ನಕಲಿ ನಾಣ್ಯಗಳ ಟಾಸ್ಕ್​ನಲ್ಲಿ ಸೋತ ಕಾರಣ ಇವರು ಆಯ್ಕೆ ಆಗಲಿಲ್ಲ. ಅತ್ತ ರಘು ಹಾಗೂ ರಿಷಾ ಬಿಗ್ ಬಾಸ್ ಕೊಟ್ಟ ಸ್ಪೆಷಲ್ ಪವರ್ ಮೂಲಕ ನೇರವಾಗಿ ಕ್ಯಾಪ್ಟನ್ಸಿ ಟಾಸ್ಕ್​ಗೆ ಅರ್ಹತೆ ಪಡೆದರು.

ಈ ಸೀಸನ್​ನ ಮೊದಲ ಕ್ಯಾಪ್ಟನ್ಸಿ ಟಾಸ್ಕ್ ತುಂಬಾ ಕಷ್ಟವಿತ್ತು. ಆ್ಯಕ್ಟಿವಿಟಿ ರೂಮ್​ನಲ್ಲಿ ಕಗ್ಗತ್ತಲ ವಾತಾವರಣ ನಿರ್ಮಿಸಲಾಗಿತ್ತು. ಇಲ್ಲಿ ರಘು ಹಾಗೂ ರಿಷಾ ತಮ್ಮ ಹೆಸರಿನ ಅಕ್ಷರಗಳನ್ನು ಹುಡುಕಬೇಕು.. ಅದನ್ನು ಸರಿಯಾಗಿ ಜೋಡಿಸಬೇಕು.. ಅತಿ ಕಡಿಮೆ ಸಮಯದಲ್ಲಿ ಈ ಟಾಸ್ಕ್ ಅನ್ನು ಯಶಸ್ವಿಯಾಗಿ ಮುಗಿಸಿದ ಸದಸ್ಯ ಬಿಬಿಕೆ 12ರ ಮೊದಲ ಕ್ಯಾಪ್ಟನ್ ಆಗಿ ಆಯ್ಕೆ ಆಗುತ್ತಾರೆ. ಅದರಂತೆ ಈ ಟಾಸ್ಕ್ ಅನ್ನು ಮ್ಯೂಟೆಂಟ್ ರಘು ಗೆದ್ದು ಕ್ಯಾಪ್ಟನ್ ಆಗಿದ್ದಾರೆ. ರಿಷಾ ಫೌಲ್ ಮಾಡಿದ್ದಲ್ಲದೆ ಟಾಸ್ಕ್ ಅನ್ನು ಮುಗಿಸಲು ಸಾಧ್ಯವಾಗಲಿಲ್ಲ.

ಅಶ್ವಿನಿ ಗೌಡಾಗೆ ಕಳಪೆ ಪಟ್ಟ

ಈ ವಾರ ಕೂಡ ಹೆಚ್ಚು ಜಗಳಗಳಲ್ಲೇ ಕಾಣಿಸಿಕೊಂಡಿದ್ದು ಮಾತ್ರವಲ್ಲದೆ ಕ್ಯಾಪ್ಟನ್ಸಿ ಟಾಸ್ಕ್​ನಿಂದ ಹೊರಬಿದ್ದ ಅಶ್ವಿನಿ ಗೌಡಾಗೆ ಕಳಪೆ ಪಟ್ಟ ಸಿಕ್ಕಿ ಜೈಲು ಸೇರಿದ್ದಾರೆ. ಕ್ಯಾಪ್ಟನ್ ರಘು ಅವರಿಗೆ ಮಾತ್ರ ಕಳಪೆ ಯಾರು ಎಂದು ಘೋಷಿಸುವ ಅಧಿಕಾರವಿತ್ತು. ಹೀಗಾಗಿ ಅವರು, ಕಳಪೆ ಅಂತ ಬಂದಾಗ ನಾನು ಅಶ್ವಿನಿ ಮೇಡಂಗೆ ಕೊಡುತ್ತೇನೆ ಎಂದು ಹೇಳಿದ್ದಾರೆ. ಆಗ ಅಶ್ವಿನಿ ಅವರು ಥ್ಯಾಂಕ್ಯು ಎಂದು ಚಪ್ಪಾಳೆ ತಟ್ಟಿ ಅಹಂಕಾರ ಮೆರೆದರು. ಇಲ್ಲಿಗೆ ನಿಲ್ಲದ ಇವರು, ಹುಲಿ ಹೊರಗಡೆ ಇದ್ರು ಬೋನಲ್ಲಿದ್ದು ಹುಲಿ.. ಹುಲಿಯೇ ಎಂದು ಹೇಳಿದರು. ಬಳಿಕ ಜೈಲಿನಲ್ಲಿ ಇತರೆ ಸ್ಪರ್ಧಿಗಳಿಗೆ ಅಶ್ವಿನಿ ಸಖತ್ ಕಾಡಿದ್ದಾರೆ. ತರಕಾರಿ ಹಚ್ಚಿ ಕೊಡಿ ಎಂದಿದ್ದಕ್ಕೆ, ಅದನ್ನು ಕಟ್ ಮಾಡದೆ ಸಮಯ ಕಳೆಯುತ್ತ ಸುಮ್ಮನೆ ಕುಳಿತುಕೊಂಡಿದ್ದಾರೆ. ನನಗೆ ಯಾವಾಗ ಆಗುತ್ತೊ ಅವಾಗ ಕಟ್ ಮಾಡಿಕೊಡುತ್ತೇನೆ.. ನನ್ನ ಹತ್ರ ಕಟ್ ಮಾಡೋಕೆ ಹೇಳಿದ್ದಾರಷ್ಟೆ.. ಇದೇ ಟೈಮ್​ಗೆ ಕಟ್ ಮಾಡಿಕೊಡಬೇಕು ಅಂತ ಹೇಳಿಲ್ಲ ಎಂದು ಹೇಳಿದ್ದಾರೆ.

BBK 12: ಬಿಗ್ ಬಾಸ್ ಜೈಲಿನಲ್ಲಿ ಅಶ್ವಿನಿ ಗೌಡ ದುರಹಂಕಾರ: ಸ್ಪರ್ಧಿಗಳ ಕೆಂಗಣ್ಣಿಗೆ ಗುರಿ