ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಬಿಗ್ ಬಾಸ್ ಜೈಲಿನಲ್ಲಿ ಅಶ್ವಿನಿ ಗೌಡ ದುರಹಂಕಾರ: ಸ್ಪರ್ಧಿಗಳ ಕೆಂಗಣ್ಣಿಗೆ ಗುರಿ

ಕಲರ್ಸ್ ಕನ್ನಡ ಒಂದು ಪ್ರೋಮೋ ಬಿಡುಗಡೆ ಮಾಡಿದ್ದು, ಇದರಲ್ಲಿ ಅಶ್ವಿನಿ ಗೌಡ ಅವರು ಕಳಪೆ ಪಡೆದು ಜೈಲಿನ ಒಳಗೆ ತೆರಳಿದ್ದಾರೆ. ಮೊದಲನೆಯದಾಗಿ ಮ್ಯೂಟೆಂಟ್ ರಘು ಅವರು, ಕಳಪೆ ಅಂತ ಬಂದಾಗ ನಾನು ಅಶ್ವಿನಿ ಮೇಡಂಗೆ ಕೊಡುತ್ತೇನೆ ಎಂದು ಹೇಳಿದ್ದಾರೆ. ಆಗ ಅಶ್ವಿನಿ ಅವರು ಥ್ಯಾಂಕ್ಯು ಎಂದು ಚಪ್ಪಾಳೆ ತಟ್ಟಿದ್ದಾರೆ.

ಬಿಗ್ ಬಾಸ್ ಜೈಲಿನಲ್ಲಿ ಅಶ್ವಿನಿ ಗೌಡ ದುರಹಂಕಾರ

Ashwini Gowda Kalape -

Profile Vinay Bhat Oct 24, 2025 4:10 PM

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಶುರುವಾಗಿ ನಾಲ್ಕು ವಾರ ಸಾಗುತ್ತಿದೆ. ಕಳೆದ ಮೂರನೇ ವಾರದಲ್ಲಿ ಮೊದಲ ಫಿನಾಲೆ ನಡೆದಿತ್ತು. ಇದಾದ ಬಳಿಕ ಮನೆಯ ವಾತಾವರಣ ಸಂಪೂರ್ಣ ಬದಲಾಗಿದೆ. ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಮೊದಲ ಮೂರು ವಾರದ ಬಿಗ್ ಬಾಸ್ ನೋಡಿಬಂದು ಮನೆಯವರ ಎಲ್ಲ ಟೆಕ್ನಿಕ್ ಅರಿತಿರುವಂತೆ ಕಂಡುಬರುತ್ತಿದೆ. ಇಂದಿನ ಎಪಿಸೋಡ್​ನಲ್ಲಿ ಬಿಗ್ ಬಾಸ್ ಮನೆಯಲ್ಲಿ ಕೆಲ ಮಹತ್ವದ ಬೆಳವಣಿಗೆ ನಡೆದಿದೆ. ಓರ್ವನಿಗೆ ಕ್ಯಾಪ್ಟರ್ ಪಟ್ಟ ಸಿಕ್ಕರೆ ಮತ್ತೊಂದೆಡೆ ಉತ್ತಮ ಹಾಗೂ ಕಳಪೆ ಭರ್ಜರಿ ಸೌಂಡ್ ಮಾಡಿದಂತಿದೆ ಕಂಡುಬರುತ್ತಿದೆ.

ಕಲರ್ಸ್ ಕನ್ನಡ ಒಂದು ಪ್ರೋಮೋ ಬಿಡುಗಡೆ ಮಾಡಿದ್ದು, ಇದರಲ್ಲಿ ಅಶ್ವಿನಿ ಗೌಡ ಅವರು ಕಳಪೆ ಪಡೆದು ಜೈಲಿನ ಒಳಗೆ ತೆರಳಿದ್ದಾರೆ. ಮೊದಲನೆಯದಾಗಿ ಮ್ಯೂಟೆಂಟ್ ರಘು ಅವರು, ಕಳಪೆ ಅಂತ ಬಂದಾಗ ನಾನು ಅಶ್ವಿನಿ ಮೇಡಂಗೆ ಕೊಡುತ್ತೇನೆ ಎಂದು ಹೇಳಿದ್ದಾರೆ. ಆಗ ಅಶ್ವಿನಿ ಅವರು ಥ್ಯಾಂಕ್ಯು ಎಂದು ಚಪ್ಪಾಳೆ ತಟ್ಟಿದ್ದಾರೆ. ಇದಾದ ಬಳಿಕ ಅವರು ಜೈಲಿನ ಒಳಗೆ ತೆರಳಿದ್ದಾರೆ. ಇಲ್ಲಿಂದ ಅವರು ತಮ್ಮ ಅಸಲಿ ಆಟ ಶುರುಹಚ್ಚಿಕೊಂಡಿದ್ದಾರೆ.

ಹುಲಿ ಹೊರಗಡೆ ಇದ್ರು ಬೋನಲ್ಲಿದ್ದು ಹುಲಿ.. ಹುಲಿಯೇ ಎಂದು ಹೇಳಿದ್ದಾರೆ. ಬಳಿಕ ಜೈಲಿನಲ್ಲಿ ಇತರೆ ಸ್ಪರ್ಧಿಗಳಿಗೆ ಅಶ್ವಿನಿ ಸಖತ್ ಕಾಡಿದ್ದಾರೆ. ಮೊದಲಿಗೆ ಕಂಬಿಯಿಂದ ಒಂದು ಕಾಲು ಹೊರಗೆ ಹಾಕಿ ನನ್ಗೆ ರೆಸ್ಟ್ ರೂಮ್​ಗೆ ಹೋಗಬೇಕು ಎಂದು ಹೇಳಿದ್ದಾರೆ. ಆಗ ರಘು ಬಂದು ಒಳಗೆ ಹೋಗಿ ಎಂದು ವಾರ್ನ್ ಮಾಡಿದ್ದಾರೆ. ಅದಕ್ಕೆ ಅಶ್ವಿನಿ ಅವರು ಡೋಂಟ್ ಟಚ್ ಮಿ.. ನನ್ನ ಒಂದೇ ಒಂದು ಬೆರಳು ಮುಟ್ಟೊಹಾಗಿಲ್ಲ ಎಂದಿದ್ದಾರೆ.



ಇದಾದ ಬಳಿಕ ಮನೆಯ ನಿಯಮದಂತೆ ಸಾಂಬಾರಿಗೆ ತರಕಾರಿಯನ್ನು ಜೈಲಿನಲ್ಲಿರುವ ಸದಸ್ಯರು ಕಟ್ ಮಾಡಿಕೊಡಬೇಕು. ಅದರಂತೆ ಅಶ್ವಿನಿ ಬಳಿ ತರಕಾರಿ ಹಚ್ಚಿ ಕೊಡಲು ಕೇಳಲಾಗಿದೆ. ಆದರೆ, ಅಶ್ವಿನಿ ಅವರು ಅದನ್ನು ಕಟ್ ಮಾಡದೆ ಸಮಯ ಕಳೆಯುತ್ತ ಸುಮ್ಮನೆ ಕುಳಿತುಕೊಂಡಿದ್ದಾರೆ. ಕೊಡಿ ನನಗೆ ಯಾವಾಗ ಆಗುತ್ತೊ ಅವಾಗ ಕಟ್ ಮಾಡಿಕೊಡುತ್ತೇನೆ.. ನನ್ನ ಹತ್ರ ಕಟ್ ಮಾಡೋಕೆ ಹೇಳಿದ್ದಾರಷ್ಟೆ.. ಇದೇ ಟೈಮ್​ಗೆ ಕಟ್ ಮಾಡಿಕೊಡಬೇಕು ಅಂತ ಹೇಳಿಲ್ಲ.. ನಮ್ಮ ಬಾರ್ಡರ್ ಒಳಗೆ ಬಂದ ಮೇಲೆ ನಾವು ಆಡಿದ್ದೇ ಆಟ ಎಂದು ಹೇಳಿದ್ದಾರೆ. ಅಶ್ವಿನಿ ನಡವಳಿಕೆಯಿಂದ ಮನೆ ಮಂದಿ ಕೋಪಗೊಂಡಂತೆ ಪ್ರೋಮೋದಲ್ಲಿ ತೋರಿಸಲಾಗಿದೆ.

BBK 12: ನಿನ್ನೆ ಮೊನ್ನೆ ಬಂದಿರೋ ಸೆಡೆ..: ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾಗೆ ಮತ್ತೆ ಅವಮಾನ