ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ನಿಮ್ಗೆ ಬ್ಯಾಕ್ ಸ್ಟೋರಿ ಗೊತ್ತುಂಟಾ?: ಜಾನ್ವಿಯ ಮೈಚಳಿ ಬಿಡಿಸಿದ ರಕ್ಷಿತಾ ಶೆಟ್ಟಿ

ಬಿಗ್ ಬಾಸ್ ಮನೆಯಲ್ಲಿ ನಿರೂಪಕಿ ಜಾನ್ವಿ ಅವರು ಒಂಟಿಗಳ ತಂಡದ ಸದಸ್ಯೆ ಆಗಿದ್ದಾರೆ. ಆದರೆ, ಜಂಟಿ ತಂಡದ ಸ್ಪರ್ಧಿಗಳಿಗೆ ತುಂಬಾ ದಬ್ಬಾಳಿಕೆ ಮತ್ತು ಕಿರುಕುಳ ನೀಡುತ್ತಿದ್ದಾರೆ ಎಂದು ಅನೇಕರ ಆರೋಪ. ಹೀಗಾಗಿ ಅನೇಕರ ಕೆಂಗಣ್ಣಿಗೆ ಇವರು ಗುರಿಯಾಗಿದ್ದಾರೆ. ಅಲ್ಲದೆ ತಮ್ಮದೇ ತಂಡದ ರಕ್ಷಿತಾ ಕೂಡ ಇವರನ್ನು ನಾಮಿನೇಟ್ ಮಾಡಿದ್ದಾರೆ.

ಜಾನ್ವಿಯ ಮೈಚಳಿ ಬಿಡಿಸಿದ ರಕ್ಷಿತಾ ಶೆಟ್ಟಿ

Rakshita Shetty vs Jhanvi -

Profile Vinay Bhat Oct 7, 2025 3:01 PM

ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ (Bigg Boss Kannada 12) ಎರಡನೇ ವಾರದ ನಾಮಿನೇಷನ್ ಬಿಸಿ ಶುರುವಾಗಿದೆ. ಮನೆಯಲ್ಲಿ ಒಂಟಿ ಹಾಗೂ ಜಂಟಿಗಳ ನಡುವಣ ಜಗಳ ತಾರಕಕ್ಕೇರಿದೆ. ಮೊದಲ ವಾರ ಕೊಂಚ ಸೈಲೆಂಟ್ ಆಗಿದ್ದ ಮನೆ ಇದೀಗ ಎರಡನೇ ವಾರದ ಎರಡು ದಿನವೂ ಗಲಾಟೆಯಿಂದ ಕೂಡಿದೆ. ಮೊದಲ ದಿನ ಕೂಡ ದೊಡ್ಮನೆ ಹೊತ್ತಿ ಉರಿದಿತ್ತು. ದೊಡ್ಮನೆಯಲ್ಲಿ ಗಾಂಚಾಲಿ ಪದ ದೊಡ್ಡ ಮಟ್ಟದ ಸದ್ದು ಮಾಡಿತು. ಇದೀಗ ಎರಡನೇ ದಿನ ನಾಮಿನೇಷನ್ ವಿಚಾರದಲ್ಲಿ ರಕ್ಷಿತಾ-ಜಾನ್ವಿ ನಡುವೆ ಕಿಚ್ಚುಹೊತ್ತಿಕೊಂಡಿದೆ.

ಬಿಗ್ ಬಾಸ್ ಮನೆಯಲ್ಲಿ ನಿರೂಪಕಿ ಜಾನ್ವಿ ಅವರು ಒಂಟಿಗಳ ತಂಡದ ಸದಸ್ಯೆ ಆಗಿದ್ದಾರೆ. ಆದರೆ, ಜಂಟಿ ತಂಡದ ಸ್ಪರ್ಧಿಗಳಿಗೆ ತುಂಬಾ ದಬ್ಬಾಳಿಕೆ ಮತ್ತು ಕಿರುಕುಳ ನೀಡುತ್ತಿದ್ದಾರೆ ಎಂದು ಅನೇಕರ ಆರೋಪ. ಹೀಗಾಗಿ ಅನೇಕರ ಕೆಂಗಣ್ಣಿಗೆ ಇವರು ಗುರಿಯಾಗಿದ್ದಾರೆ. ಅಲ್ಲದೆ ತಮ್ಮದೇ ತಂಡದ ರಕ್ಷಿತಾ ಕೂಡ ಇವರನ್ನು ನಾಮಿನೇಟ್ ಮಾಡಿದ್ದಾರೆ. ಎಲ್ಲರೂ ಟಾರ್ಗೆಟ್ ಮಾಡಿ ಜಾನ್ವಿಯನ್ನಯ ಹೊರಗೆ ಕಳುಹಿಸಲು ಪ್ಲ್ಯಾನ್ ಮಾಡಿದ್ದು ಡೇಂಜರ್​ಝೋನ್​ಗೆ ಸಿಲುಕಿದ್ದಾರೆ.

ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಮೊದಲಿಗೆ ನಟ ಧ್ರುವಂತ್ ಜಾನ್ವಿ ಅವರನ್ನು ನಾಮಿನೇಟ್ ಮಾಡಿದ್ದಾರೆ. ಇದಾದ ನಂತರ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಜೋಡಿ ಕೂಡ ಜಾನ್ವಿ ಅವರನ್ನೇ ಎಲಿಮಿನೇಷನ್‌ಗೆ ನಾಮಿನೇಟ್ ಮಾಡುತ್ತಾರೆ. ಇದಕ್ಕೆ ಗಿಲ್ಲಿ ನಟ ಕಾರಣ ಕೊಡುವಾಗ ಯಾವಾಗ ಬೇಕೋ ಅವಾಗ ಜಾನ್ವಿ ಚೇಂಜ್ ಆಗುತ್ತಾರೆ ಎಂದು ಹೇಳುತ್ತಾರೆ. ಆಗ ನೀವು ಎಷ್ಟು ಸಾರಿ ಬೇಕೋ ಅಷ್ಟು ಚೇಂಜ್ ಆಗಿ.. ನಾನು ಕೂಡ ಚೇಂಜ್ ಆಗುತ್ತೇನೆ ಎಂದು ಹೇಳುತ್ತಾರೆ.

ಜಾನ್ವಿಯನ್ನು ರಕ್ಷಿತಾ ಶೆಟ್ಟಿ ನಾಮಿನೇಟ್ ಮಾಡಿದ ವಿಡಿಯೋ:



ಇದಾದ ನಂತರ ರಕ್ಷಿತಾ ಶೆಟ್ಟಿ ಬಂದು ಜಾನ್ವಿ ಅವರನ್ನೇ ನಾಮಿನೇಟ್ ಮಾಡುತ್ತಾರೆ. ಇದಕ್ಕೆ ಕಾರಣವನ್ನೂ ರಕ್ಷಿತಾ ನೀಡಿದ್ದಾರೆ. ಮೊದಲ ದಿನ ರಕ್ಷಿತಾ ಎಲಿಮಿನೇಟ್ ಆಗುವಾಗ ಜಾನ್ವಿ, ‘ತಪ್ಪು-ತಪ್ಪು ಮಾತಾಡಿ ಫೇಮಸ್ ಆದವರು’ ಎಂದು ಹೇಳಿದ್ದರು. ಈ ವಿಚಾರವನ್ನು ತೆಗೆದುಕೊಂಡ ರಕ್ಷಿತಾ, ನೀವು ಅವತ್ತು ಏನು ಹೇಳಿದ್ದು ತಪ್ಪು-ತಪ್ಪು ಮಾತಾಡಿ ಬಂದಿದ್ದೀರಿ ಅಂತ.. ಸೋ ಈಸಿನ ನಿಮ್ಗೆ ಅದು?, ನಿಮ್ಗೆ ಗೊತ್ತಿಲ್ಲ ಅಲ್ವಾ ಅದರ ಬ್ಯಾಕ್ ಸ್ಟೋರಿ ಏನು ಅಂತ.. ನೀವು ಕೂಡ ವೈರಲ್ ಆಗಬಹುದು.. ತಪ್ಪು-ತಪ್ಪು ಮಾತಾಡ್ಲಿಕೆ ಕೂಡ ಒಂದು ಟ್ಯಾಲೆಂಟ್ ಇರಬೇಕು.. ಎಲ್ಲ ಪ್ರೊಫೇಷನ್ ಲಫ್ ಬಗ್ಗೆ ನೀವು ರೆಸ್ಪೆಕ್ಟ್ ಮಾಡಿ ಎಂದು ರಕ್ಷಿತಾ ಗರಂ ಆಗಿದ್ದಾರೆ.

BBK 12: ರಕ್ಷಿತಾ ಶೆಟ್ಟಿಯನ್ನು ‘ಕಾರ್ಟೂನ್’ ಎಂದು ಕರೆದ ಅಶ್ವಿನಿ ಗೌಡ: ಫ್ಯಾನ್ಸ್​ನಿಂದ ಆಕ್ರೋಶ

ರಕ್ಷಿತಾ ಮಾತಿಗೆ ಇಡೀ ಜಂಟಿ ತಂಡದ ಸದಸ್ಯರು ಚಪ್ಪಾಳೆ ತಟ್ಟಿದ್ದಾರೆ. ಸದ್ಯ ಎರಡನೇ ವಾರ ದೊಡ್ಮನೆಯಿಂದ ಹೊರಹೋಗಲು ಜಾನ್ವಿ ನಾಮಿನೇಟ್ ಆಗುವುದು ಖಚಿತ. ಉಳಿದಂತೆ ಯಾರೆಲ್ಲ ನಾಮಿನೇಟ್ ಆಗುತ್ತಾರೆ ಎಂಬುದು ಇಂದಿನ ಎಪಿಸೋಡ್​ನಲ್ಲಿ ನೋಡಬೇಕಿದೆ.