ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shah Rukh Khan: ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಶಾರುಖ್ ಖಾನ್

Global Peace Honours 2025: ಶಾರುಖ್‌ ಅವರು ಭಾವಪೂರ್ಣ ಭಾಷಣ ಮಾಡಿದರು. ನಟ ಭಾರತೀಯ ಸೈನಿಕರ ಚೈತನ್ಯ ಮತ್ತು ಶೌರ್ಯಕ್ಕೆ ನಮನ ಸಲ್ಲಿಸಿದರು .ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಅವರು ಶ್ರದ್ಧಾಂಜಲಿ ಅರ್ಪಿಸಿದರು. ನಮ್ಮ ನಡುವೆ ಶಾಂತಿ ಇದ್ದರೆ ಭಾರತವನ್ನು ಬೇರೆ ಯಾರೂ ಕೂಡ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಶಾರುಖ್ ಖಾನ್ ಅವರು ಹೇಳಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.

ಶಾರುಖ್‌ ಖಾನ್‌

ನಟ ಶಾರುಖ್ ಖಾನ್ (Sharukh Khan) ಅವರು ಮುಂಬೈನಲ್ಲಿ ನಡೆದ ‘ಗ್ಲೋಬಲ್ ಪೀಸ್ ಆನರ್ಸ್ 2025’ (Global Peace Honours 2025) ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಶಾರುಖ್‌ ಅವರು ಭಾವಪೂರ್ಣ ಭಾಷಣ ಮಾಡಿದರು. ನಟ ಭಾರತೀಯ ಸೈನಿಕರ ಚೈತನ್ಯ ಮತ್ತು ಶೌರ್ಯಕ್ಕೆ ನಮನ ಸಲ್ಲಿಸಿದರು .ಭಯೋತ್ಪಾದಕ ದಾಳಿಯಲ್ಲಿ (Pahalgam attack and Delhi blasts ) ಪ್ರಾಣ ಕಳೆದುಕೊಂಡವರಿಗೆ ಅವರು ಶ್ರದ್ಧಾಂಜಲಿ ಅರ್ಪಿಸಿದರು. ನಮ್ಮ ನಡುವೆ ಶಾಂತಿ ಇದ್ದರೆ ಭಾರತವನ್ನು ಬೇರೆ ಯಾರೂ ಕೂಡ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಶಾರುಖ್ ಖಾನ್ ಅವರು ಹೇಳಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: King Teaser Unveiled: ಹುಟ್ಟುಹಬ್ಬದಂದೇ ರಕ್ತದ ಹೊಳೆ ಹರಿಸಿದ ಶಾರುಖ್‌ ಖಾನ್‌; ʼಕಿಂಗ್‌ʼ ಚಿತ್ರದ ಟೀಸರ್‌ ಔಟ್‌

ಗೌರವಯುತ ನಮನಗಳು

ಶಾರುಖ್ ವೇದಿಕೆಯಲ್ಲಿ ಮಾತನಾಡಿ, "26/11 ಭಯೋತ್ಪಾದಕ ದಾಳಿ, ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಇತ್ತೀಚಿನ ದೆಹಲಿ ಸ್ಫೋಟಗಳಲ್ಲಿ ಪ್ರಾಣ ಕಳೆದುಕೊಂಡ ಮುಗ್ಧ ಜನರಿಗೆ ನನ್ನ ವಿನಮ್ರ ಶ್ರದ್ಧಾಂಜಲಿ ಮತ್ತು ಈ ದಾಳಿಗಳಲ್ಲಿ ಹುತಾತ್ಮರಾದ ನಮ್ಮ ಭದ್ರತಾ ಸಿಬ್ಬಂದಿಗೆ ನನ್ನ ಗೌರವಯುತ ನಮನಗಳು" ಎಂದು ಅವರು ಹೇಳಿದರು.



'ನಾವೆಲ್ಲರೂ ಒಟ್ಟಾಗಿ ಶಾಂತಿಯತ್ತ ಹೆಜ್ಜೆ ಹಾಕೋಣ'

"ಯಾರಾದರೂ ನೀವು ಏನು ಮಾಡುತ್ತೀರಿ ಎಂದು ಕೇಳಿದಾಗ, ನಾನು ದೇಶವನ್ನು ರಕ್ಷಿಸುತ್ತೇನೆ ಎಂದು ಹೆಮ್ಮೆಯಿಂದ ಹೇಳಿ. ಯಾರಾದರೂ ನೀವು ಎಷ್ಟು ಸಂಪಾದಿಸುತ್ತೀರಿ ಎಂದು ಕೇಳಿದರೆ, ಸ್ವಲ್ಪ ನಗುತ್ತಾ, ನಾನು 1.4 ಬಿಲಿಯನ್ ಜನರ ಆಶೀರ್ವಾದವನ್ನು ಗಳಿಸುತ್ತೇನೆ ಎಂದು ಹೇಳಿ. ನಮ್ಮ ಸುತ್ತಲಿನ ಜಾತಿ, ಧರ್ಮ ಮತ್ತು ತಾರತಮ್ಯವನ್ನು ಮರೆತು ಮಾನವೀಯತೆಯ ಹಾದಿಯಲ್ಲಿ ನಡೆಯೋಣ, ಇದರಿಂದ ನಮ್ಮ ದೇಶದ ಶಾಂತಿಗಾಗಿ ನಮ್ಮ ವೀರರ ಹುತಾತ್ಮತೆ ವ್ಯರ್ಥವಾಗುವುದಿಲ್ಲ. ನಮ್ಮಲ್ಲಿ ಶಾಂತಿ ಇದ್ದರೆ, ಭಾರತವನ್ನು ಯಾವುದೂ ಅಲುಗಾಡಿಸಲು ಸಾಧ್ಯವಿಲ್ಲ..." ಎಂದು ಶಾರುಖ್ ಹೇಳಿದರು.

ದೇಶದ ಶಾಂತಿಗಾಗಿ ಸೈನಿಕರ ಬಲಿದಾನ ವ್ಯರ್ಥವಾಗದಿರಲಿ. ನಮ್ಮ ನಡುವೆ ಶಾಂತಿ ಇದ್ದರೆ ಭಾರತವನ್ನು ಬೇರೆ ಯಾರೂ ಕೂಡ ಅಲುಗಾಡಿಸಲು ಸಾಧ್ಯವಿಲ್ಲ’ ಎಂದು ಶಾರುಖ್ ಖಾನ್ ಅವರು ಹೇಳಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.

ಕಿಂಗ್‌ ಸಿನಿಮಾ

ಶಾರುಖ್ ಕೊನೆಯ ಬಾರಿಗೆ 2023 ರಲ್ಲಿ ಬಿಡುಗಡೆಯಾದ ಪಠಾಣ್, ಜವಾನ್ ಮತ್ತು ಡಂಕಿ ಚಿತ್ರಗಳಲ್ಲಿ ಕಾಣಿಸಿಕೊಂಡರು. ಅವರು ಶೀಘ್ರದಲ್ಲೇ ಸಿದ್ಧಾರ್ಥ್ ಆನಂದ್ ಅವರ ಕಿಂಗ್ ಎಂಬ ಚಿತ್ರದಲ್ಲಿ ಸುಹಾನಾ ಖಾನ್, ದೀಪಿಕಾ ಪಡುಕೋಣೆ, ಅಭಿಷೇಕ್ ಬಚ್ಚನ್ ಮತ್ತು ಇತರರೊಂದಿಗೆ ನಟಿಸಲಿದ್ದಾರೆ.

ಪಠಾಣ್’ ಖ್ಯಾತಿಯ ನಿರ್ದೇಶಕ ಸಿದ್ದಾರ್ಥ್ ಆನಂದ್ ಅವರು ‘ಕಿಂಗ್’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಸತತ ಸೋಲಿನಿಂದ ಕಂಗೆಟ್ಟಿದ್ದ ಶಾರುಖ್ ಖಾನ್ ಅವರಿಗೆ 2023ರಲ್ಲಿ ಬಹು ದೊಡ್ಡ ಸಕ್ಸಸ್ ತಂದುಕೊಟ್ಟಿದ್ದು ಇದೇ ಸಿದ್ದಾರ್ಥ್ ಆನಂದ್. ಹಾಗಾಗಿ ಅವರ ಮೇಲೆ ಶಾರುಖ್ ಖಾನ್ ಅವರಿಗೆ ಸಖತ್ ಭರವಸೆ.

ಇದನ್ನೂ ಓದಿ: Bigg Boss Kannada 12: ದೊಡ್ಮನೆಯಿಂದ ಹೊರಗೆ ಹೋಗ್ತೀನಿ ಅಂತ ಅಶ್ವಿನಿ ಕೂಗಾಡಲು ಇದೇ ಕಾರಣ ಅಂತೆ! ಗಿಲ್ಲಿ ಹೇಳಿದ್ದೇನು?

‘ಕಿಂಗ್’ ಸಿನಿಮಾಗೆ ಈಗ 350 ಕೋಟಿ ರೂಪಾಯಿ ಬಜೆಟ್ ಹಾಕಲಾಗಿದೆ. ಪ್ರಚಾರದ ಖರ್ಚು ಕೂಡ ಇದರಲ್ಲಿ ಸೇರ್ಪಡೆ ಆಗಿದೆ. ಭಾರತದ ಅತಿ ದೊಡ್ಡ ಆ್ಯಕ್ಷನ್ ಸಿನಿಮಾ ಎಂಬ ಖ್ಯಾತಿಗೆ ‘ಕಿಂಗ್’ ಚಿತ್ರ ಪಾತ್ರವಾಗುತ್ತಿದೆ. ಇತ್ತೀಚೆಗಷ್ಟೇ ಈ ಸಿನಿಮಾದ ಟೀಸರ್ ಬಿಡುಗಡೆ ಆಗಿತ್ತು. ಅದರಲ್ಲಿ ಶಾರುಖ್ ಖಾನ್ ಅವರ ಆ್ಯಕ್ಷನ್ ಅಬ್ಬರ ನೋಡಿ ಅಭಿಮಾನಿಗಳು ಅಚ್ಚರಿಪಟ್ಟರು.

Yashaswi Devadiga

View all posts by this author