ಶಾರುಖ್ ಖಾನ್ , ರಣಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ ಭಟ್ ಒಟ್ಟಿಗೆ ನಟಿಸುವುದು ಒಂದು ಕನಸಿನ ತಾರಾಗಣ. ಅಭಿಮಾನಿಗಳು ಈ ಮೂವರನ್ನು ದೊಡ್ಡ ಪರದೆಯ ಮೇಲೆ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಹೊಸ ಜಾಹೀರಾತೊಂದರಲ್ಲಿ ಮೂವರ ಜುಗಲ್ಬಂದಿ ನೆಟ್ಟಿಗರ ಗಮನ ಸೆಳೆದಿದೆ. ತಮ್ಮದೇ ಹಳೆಯ ಸಿನಿಮಾಗಳ ಸಂಭಾಷಣೆಗಳನ್ನು ಬಳಸಿ ಒಬ್ಬರನ್ನೊಬ್ಬರು ಕಾಲೆಳೆದುಕೊಳ್ಳುವ ಈ ಕಾಮಿಡಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ಭಾರಿ ಸದ್ದು ಮಾಡುತ್ತಿದೆ.
ಹೊಸ ರುಂಗ್ತಾ ಸ್ಟೀಲ್ ಜಾಹೀರಾತಿನಲ್ಲಿ ಶಾರುಖ್, ಆಲಿಯಾ ಮತ್ತು ರಣಬೀರ್ ನಟಿಸಿದ್ದಾರೆ. ಈ ಜಾಹೀರಾತು ನಟ ಬಿಜೇಂದ್ರ ಜಾಹೀರಾತಿಗಾಗಿ ಒಂದು ಐಡಿಯಾ ನೀಡುವುದರೊಂದಿಗೆ ಪ್ರಾರಂಭವಾಗುತ್ತದೆ, ಇದರಲ್ಲಿ ಮೂವರು ತಾರೆಯರು ಅಕ್ಷಯ್ ಕುಮಾರ್ ಅವರ 2012 ರ ಚಲನಚಿತ್ರ ಖಿಲಾಡಿ 786 ರ ಹಿಟ್ ಟ್ರ್ಯಾಕ್ ಹುಕ್ಕಾ ಬಾರ್‌ಗೆ ನೃತ್ಯ ಮಾಡುತ್ತಾರೆ.
ಇದನ್ನೂ ಓದಿ: Mango Pachha OTT: ಒಟಿಟಿಗೆ ಕಾಲಿಟ್ಟ 'ಮ್ಯಾಂಗೋ ಪಚ್ಚ'; ಸ್ಟ್ರೀಮಿಂಗ್ ಎಲ್ಲಿ?
. ‘12 ದೇಶಗಳ ಪೊಲೀಸರು ಮನೆ ಸುತ್ತುವರಿದರೂ ಅದನ್ನು ಒಡೆಯಲು ಸಾಧ್ಯವಾಗುವುದಿಲ್ಲ’ ಎನ್ನುತ್ತಾರೆ. ಇದಕ್ಕೆ ತಕ್ಷಣವೇ ತಿರುಗೇಟು ನೀಡುವ ರಣಬೀರ್ ಕಪೂರ್, ಈ ಆ್ಯಡ್ ತಡೆಯುವುದು ನಮಗೆ ಮುಷ್ಕಿಲ್ ಅಲ್ಲ, ನಾಮುಮ್ಕಿನ್’ ಎಂದು ತಮಾಷೆ ಮಾಡುತ್ತಾರೆ . ನಂತರ ರಣಬೀರ್ ತಮ್ಮ ‘ರಾಕ್ಸ್ಟಾರ್’ ಕಲ್ಪನೆಯನ್ನು ವಿವರಿಸುತ್ತಾರೆ. ರಣಬೀರ್ ಮಾತನಾಡುತ್ತಿದ್ದಂತೆ ಆಲಿಯಾ ಭಟ್, ‘ಓ ನಾದಾನ್ ಪರಿಂದೇ ಕೂತ್ಕೋ’ ಎಂದು ಗಂಡನ ಕಾಲೆಳೆಯುತ್ತಾರೆ .
ನಂತರ ಆಲಿಯಾ ತಮ್ಮ ‘ಜಿಗ್ರಾ’ ಚಿತ್ರದ ಮಾದರಿಯಲ್ಲಿ ಕಥೆ ಪ್ರಸ್ತಾಪಿಸುತ್ತಾರೆ. ‘ಜೈಲಿನಲ್ಲಿರುವ ಸಹೋದರನನ್ನು ರಕ್ಷಿಸಲು ಹುಡುಗಿಗೆ ಜೈಲು ಒಡೆಯಲು ಸಾಧ್ಯವಾಗುವುದಿಲ್ಲ’ ಎನ್ನುತ್ತಾರೆ . ಇದಕ್ಕೆ ಶಾರೂಖ್ ಖಾನ್, ‘ಆ ಜಾಹೀರಾತು ನೋಡುವ ಧೈರ್ಯ ಯಾರಲ್ಲೂ ಮಾಡಲ್ಲ’ ಎಂದು ರೇಗಿಸುತ್ತಾರೆ.
ಇದನ್ನೂ ಓದಿ: Bigg Boss Kannada 13: ಸತತ 3 ಗಂಟೆಗಳ ಕಾಲ ಸುದೀರ್ಘ ಪ್ರಸಾರ; ಮತ್ತಿಬ್ಬರು ಔಟ್ ಗ್ಯಾರಂಟಿ!
ಶಾರುಖ್ ಮತ್ತು ಆಲಿಯಾ ತೆರೆ ಹಂಚಿಕೊಂಡಿರುವುದು ಇದೇ ಮೊದಲಲ್ಲ. ಈ ಹಿಂದೆ ಇಬ್ಬರೂ ಗೌರಿ ಶಿಂಧೆ ಅವರ 2016 ರ ಚಿತ್ರ ಡಿಯರ್ ಜಿಂದಗಿಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಆದಾಗ್ಯೂ, ಶಾರುಖ್ ಮತ್ತು ರಣಬೀರ್ ಇಲ್ಲಿಯವರೆಗೆ ಯಾವುದೇ ಚಿತ್ರದಲ್ಲಿ ಒಟ್ಟಿಗೆ ನಟಿಸಿಲ್ಲ.