ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸೆಲ್ಫಿ ತೆಗೆಯಲು ಬಂದ ಅಭಿಮಾನಿಗೆ ಅವಮಾನ ಮಾಡಿದ್ರಾ ಶಾರುಖ್‌ ಖಾನ್‌? ವೈರಲ್‌ ಆಗ್ತಿರೋ ವಿಡಿಯೋದಲ್ಲೇನಿದೆ?

Shah Rukh Khan: ಇತ್ತೀಚೆಗಷ್ಟೇ ಸೌದಿ ಅರೇಬಿಯಾದಲ್ಲಿ 'ಜಾಯ್ ಅವಾರ್ಡ್ಸ್ 2026'ಕಾರ್ಯಕ್ರಮ ಗ್ರ್ಯಾಂಡ್ ಆಗಿ ಆಯೋಜನೆ ಮಾಡಿದ್ದು ‌ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಅವರು ಭಾಗಿ ಯಾಗಿದ್ದರು. ಆದ್ರೆ ಇದೇ ಅವಾರ್ಡ್ಸ್ ನಲ್ಲಿ ಅಭಿಮಾನಿಯೊಬ್ಬರು ಸೆಲ್ಫಿ ತೆಗೆದುಕೊಳ್ಳುವುದನ್ನು ಶಾರುಖ್ ತಡೆದಿದ್ದು ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೇದಿಕೆ ಮೇಲೆ ಸೆಲ್ಫಿ ತಡೆದ ಶಾರುಖ್ ಖಾನ್

ರಿಯಾದ್,ಜ.20: ಬಾಲಿವುಡ್ ಕಿಂಗ್ ಖಾನ್ ಎಂದೇ ಕರೆ ಯಲ್ಪಡುವ ಶಾರುಖ್ ಖಾನ್ (Shah Rukh Khan) ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅದರಲ್ಲೂ ದೊಡ್ಡ ಮಟ್ಟದ ಅಭಿಮಾನಿ ಬಳಗ ಇವರಿಗಿದ್ದು ಶಾರುಖ್ ಕಂಡೊಡನೆ ಮುಗಿ ಬೀಳುವ ಅಭಿಮಾನಿಗಳಿದ್ದಾರೆ. ಅಂತೆಯೆ ಇತ್ತೀಚೆಗಷ್ಟೇ ಸೌದಿ ಅರೇಬಿಯಾದಲ್ಲಿ 'ಜಾಯ್ ಅವಾರ್ಡ್ಸ್ 2026 ಕಾರ್ಯಕ್ರಮ ಗ್ರ್ಯಾಂಡ್ ಆಗಿ ಆಯೋಜನೆ ಮಾಡಿದ್ದು ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಅವರು ಭಾಗಿಯಾಗಿದ್ದರು. ಆದ್ರೆ ಇದೇ ಅವಾರ್ಡ್ಸ್ ನಲ್ಲಿ ಅಭಿಮಾನಿಯೊಬ್ಬರು ಸೆಲ್ಫಿ ತೆಗೆದುಕೊಳ್ಳುವುದನ್ನು ಶಾರುಖ್ ತಡೆದಿದ್ದು ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸೌದಿಯಲ್ಲಿ ನಡೆದ ಜಾಯ್ ಅವಾರ್ಡ್ಸ್‌ನ ವಿಡಿಯೊವೊಂದು ಆನ್‌ಲೈನ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ. ರಿಯಾದ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಾರುಖ್ ಖಾನ್ ಅವರು ಅತಿಥಿಯಾಗಿ ಪಾಲ್ಗೊಂಡು ಪ್ರಶಸ್ತಿಯನ್ನು ವಿತರಿಸುತ್ತಿದ್ದರು. ಈ ವೇಳೆ ಪ್ರಶಸ್ತಿ ಪಡೆಯಲು ಬಂದವರು ಶಾರುಖ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ವೇದಿಕೆಯಲ್ಲಿಯೇ ಪ್ರಯತ್ನಿಸಿದ್ದು ಶಾರುಖ್ ನಿಧಾನವಾಗಿ ಅತ್ಯಂತ ನಯವಾಗಿಯೇ ಅವರ ಕೈಯಲ್ಲಿದ್ದ ಫೋನ್ ಅನ್ನು ಕೆಳಗಿಳಿಸಿದ್ದಾರೆ.

ವಿಡಿಯೋ ನೋಡಿ:



ಅಲ್ಲದೆ, ವೇದಿಕೆಯ ಮುಂದೆ ಭಾಗಿಯಾಗಿದ್ದ ಫೋಟೋ ಗ್ರಾಫರ್‌ಗಳತ್ತ ಮುಖ ಮಾಡಿ ಪೋಸ್ ನೀಡುವಂತೆ ಅವರಿಗೆ ಸಲಹೆ ನೀಡಿದರು. ಪ್ರಶಸ್ತಿ ಪ್ರದಾನ ಫೋಟೋಗಳಲ್ಲಿ ಯಾವುದೇ ಅಡೆತಡೆ ಆಗಬಾರದು ಎಂಬ ಉದ್ದೇಶದಿಂದ ಶಾರುಖ್ ಹೀಗೆ ಮಾಡಿದ್ದು ಸದ್ಯ ಶಾರುಖ್ ಅವರ ಈ ನಡೆಗೆ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಬೆಂಬಲ ವ್ಯಕ್ತಪಡಿಸಿದ್ದಾರೆ.

ವೀಡಿಯೊದಲ್ಲಿ, ಶಾರುಖ್ ಸೆಲ್ಫಿ ಕ್ಲಿಕ್ಕಿಸಲು ಪ್ರಯತ್ನಿಸುತ್ತಿರುವ ವ್ಯಕ್ತಿಯಿಂದ ನಿಧಾನವಾಗಿ ಫೋನ್ ತೆಗೆದುಕೊಳ್ಳುವಾಗ ನಗುತ್ತಿರುವುದನ್ನು ಕಾಣಬಹುದು. ಒಬ್ಬ ವ್ಯಕ್ತಿ ಸೆಲ್ಫಿ ಕ್ಲಿಕ್ಕಿಸಲು ಪ್ರಯತ್ನಿಸುತ್ತಾನೆ, ಮತ್ತು ಶಾರುಖ್ ಮತ್ತೊಮ್ಮೆ ಮುಂಭಾಗದ ಕ್ಯಾಮೆರಾವನ್ನು ನೋಡುವಂತೆ ಅವರಿಗೆ ಸೂಚಿಸುತ್ತಾರೆ.ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಕೆಲವರು ಇದನ್ನು ಶಾರುಖ್ ಅವರ ಅಹಂಕಾರ ಎಂದು ಟೀಕಿಸಿದ್ದರು. ಆದರೆ, ಬಹುತೇಕ ನೆಟ್ಟಿಗರು ನಟನ ಪರವಾಗಿ ನಿಂತಿದ್ದಾರೆ. ಸಾಮಾಜಿಕ ಮಾಧ್ಯಮದ ಒಂದು ವರ್ಗವು ಶಾರುಖ್ ಅವರ ನಡವಳಿಕೆಯನ್ನು ಸಮರ್ಥಿಸಿಕೊಂಡಿದೆ.

The Devil Movie: ʻಡೆವಿಲ್‌ʼ ದರ್ಶನ್ ದರ್ಬಾರ್! ಸಿನಿಮಾ ರಿಲೀಸ್‌ ಆದ ಬೆನ್ನಲ್ಲೇ ಸುಮಲತಾ ಅಂಬರೀಶ್ ಪೋಸ್ಟ್

ಶಾರುಖ್ ಸ್ಪಷ್ಟವಾಗಿ ಮುಂಭಾಗದಲ್ಲಿ ಫೋಟೋ ಕ್ಲಿಕ್ಕಿಸುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ, ಇದರಿಂದ ಅವರು ಎಷ್ಟು ಶಿಸ್ತಿನ ಮನುಷ್ಯ ಎಂದು ಅರಿವು ಆಗುತ್ತಿದೆ. ಶಾರುಖ್ ಅವರು ನಗು ಮುಖದಿಂದಲೇ ಅದನ್ನು ತಡೆದು ಸರಿಯಾಗಿ ಪೋಸ್ ನೀಡುವಂತೆ ಹೇಳಿದ್ದು ನಿಜಕ್ಕೂ ಗ್ರೇಟ್ ಎಂದು ಬಳಕೆದಾರ ರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಸ್ಟೇಜ್ ಮೇಲೆ ಫೋಟೋ ತೆಗೆಯಲು ಕ್ಯಾಮೆರಾಮನ್ ಸೆಲ್ಫಿಗಳ ಅವಶ್ಯಕತೆ ಇರಲಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಶಾರುಖ್ ಖಾನ್ 2026 ರ ಜಾಯ್ ಅವಾರ್ಡ್ಸ್‌ನಲ್ಲಿ ಭಾಗ ವಹಿಸಿದ ಪ್ರಮುಖ ಜಾಗತಿಕ ತಾರೆಗಳಲ್ಲಿ ಒಬ್ಬರು, ಮಿಲ್ಲಿ ಬಾಬಿ ಬ್ರೌನ್, ಕೇಟಿ ಪೆರ್ರಿ, ಲೀ ಜಂಗ್-ಜೇ ಮತ್ತು ಲೀ ಬ್ಯುಂಗ್-ಹನ್ ಅವರಂತಹ ಪ್ರಸಿದ್ಧ ವ್ಯಕ್ತಿಗಳೊಂದಿಗೆ ಇವರು ಪಾಲ್ಗೊಂಡಿದ್ದು ಕಾರ್ಯಕ್ರಮದ ನಂತರ ಶಾರುಖ್ ಖಾನ್ ಅವರು ಟ್ವೀಟ್ ಮಾಡಿ ಸೌದಿ ಅರೇಬಿಯಾದ ಆತಿಥ್ಯವನ್ನು ಕೂಡ ಹೊಗಳಿದ್ದಾರೆ.