ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Shiva rajkumar: ಶಿವರಾಜ್‌ಕುಮಾರ್ - ಅಭಿಶನ್ ಜೀವಿಂತ್ ಚಿತ್ರಕ್ಕೆ ‘ಪಿಕಾಸೊ’ ಟೈಟಲ್! ಫಸ್ಟ್ ಲುಕ್ ರಿಲೀಸ್‌

Shiva rajkumar:ಡಾ. ಶಿವರಾಜ್‌ಕುಮಾರ್ ಮತ್ತು ಯೂಥ್‌ ಸೆನ್ಸೇಷನ್ ಅಭಿಶನ್ ಜೀವಿಂತ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಸಿನಿಮಾದ ಶೀರ್ಷಿಕೆ ಹಾಗೂ ಫಸ್ಟ್ ಲುಕ್ ಅಧಿಕೃತವಾಗಿ ಬಿಡುಗಡೆಯಾಗಿದ್ದು, ಚಿತ್ರಕ್ಕೆ ‘ಪಿಕಾಸೊ’ ಎಂದು ಹೆಸರಿಡಲಾಗಿದೆ. ನಟ-ನಿರ್ದೇಶಕ ರಿಷಬ್ ಶೆಟ್ಟಿ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಅನಾವರಣಗೊಳಿಸಿದರು. ‘ಡ್ರಾಮಾ ಕಂಪನಿ’ ಅರ್ಪಿಸುವ ಈ ಚಿತ್ರದ ಮೂಲಕ ಶಿವರಾಜ್‌ಕುಮಾರ್‌ ಅವರ ಗಂಭೀರ ಸ್ಕ್ರೀನ್ ಪ್ರೆಸೆನ್ಸ್ ಹಾಗೂ ಹೊಸ ತಲೆಮಾರಿನ ನಟ ಅಭಿಶನ್ ಅವರ ಉತ್ಸಾಹ ಒಂದಾಗುತ್ತಿದ್ದು, ಗೌತಮ್ ಶಿವರಾಮನ್ ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ.

ಪಿಕಾಸೊ

ಕನ್ನಡ ಚಿತ್ರರಂಗದ ಸೂಪರ್‌ಸ್ಟಾರ್ ಡಾ. ಶಿವರಾಜ್‌ಕುಮಾರ್ (Shivarajkumar) ಮತ್ತು ಯೂಥ್‌ ಸೆನ್ಸೇಷನ್ ಅಭಿಶನ್ ಜೀವಿಂತ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಸಿನಿಮಾದ ಶೀರ್ಷಿಕೆ ಹಾಗೂ ಫಸ್ಟ್ ಲುಕ್ ಅಧಿಕೃತವಾಗಿ ಬಿಡುಗಡೆಯಾಗಿದ್ದು, ಚಿತ್ರಕ್ಕೆ ‘ಪಿಕಾಸೊ’ (PICASSO) ಎಂದು ಹೆಸರಿಡಲಾಗಿದೆ. ನಟ-ನಿರ್ದೇಶಕ ರಿಷಬ್ ಶೆಟ್ಟಿ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಅನಾವರಣಗೊಳಿಸಿದರು. ‘ಡ್ರಾಮಾ ಕಂಪನಿ’ ಅರ್ಪಿಸುವ ಈ ಚಿತ್ರದ ಮೂಲಕ ಶಿವರಾಜ್‌ಕುಮಾರ್‌ ಅವರ ಗಂಭೀರ ಸ್ಕ್ರೀನ್ ಪ್ರೆಸೆನ್ಸ್ ಹಾಗೂ ಹೊಸ ತಲೆಮಾರಿನ ನಟ ಅಭಿಶನ್ ಅವರ ಉತ್ಸಾಹ ಒಂದಾಗುತ್ತಿದ್ದು, ಗೌತಮ್ ಶಿವರಾಮನ್ ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ.

ಫಸ್ಟ್ ಲುಕ್ ಪೋಸ್ಟರ್ ವಿಭಿನ್ನ

ಬಿಡುಗಡೆಯಾಗಿರುವ ಫಸ್ಟ್ ಲುಕ್ ಪೋಸ್ಟರ್ ತನ್ನ ವಿಭಿನ್ನ ದೃಶ್ಯ ಶೈಲಿಯಿಂದಲೇ ಗಮನ ಸೆಳೆಯುತ್ತದೆ. ಡಾ. ಶಿವರಾಜಕುಮಾರ್ ಮತ್ತು ಅಭಿಶನ್ ಜೀವಿಂತ್ ಇಬ್ಬರೂ ಬಿಳಿ ಉಡುಪಿನಲ್ಲಿ, ಸುಟ್ಟು ಹೋದ ಪಟಾಕಿಗಳ ನಡುವೆ ಕುಳಿತು ನೀಡಿರುವ ತಮಾಷೆಯ ಹಾಗೂ ಕೂಲ್ ಆದ ಭಂಗಿ ಪ್ರೇಕ್ಷಕರ ಕುತೂಹಲ ಕೆರಳಿಸಿದೆ. ಹಿನ್ನೆಲೆಯಲ್ಲಿರುವ ಸ್ಫೋಟಕ ವಾತಾವರಣಕ್ಕೆ ತದ್ವಿರುದ್ಧವಾಗಿರುವ ಇವರ ಶಾಂತ ಮುಖಭಾವ ಹಾಗೂ ಕೈಬರಹದಂತಿರುವ ಹಳದಿ ಬಣ್ಣದ ‘PICASSO’ ಅಕ್ಷರಗಳು ಪೋಸ್ಟರ್‌ಗೆ ವಿಶಿಷ್ಟ ಕಲಾತ್ಮಕ ಮೆರುಗು ನೀಡಿವೆ. ತಮಿಳು, ಕನ್ನಡದ ಜೊತೆಗೆ ವಿವಿಧ ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್‌ ಆಗಲಿದೆ.

ಇದನ್ನೂ ಓದಿ: Panchayat Season 5: ʻಪಂಚಾಯತ್ 5’ ರಿಲೀಸ್ ಡೇಟ್ ಬಿಗ್‌ ಅಪ್‌ಡೇಟ್

ಶಿವರಾಜಕುಮಾರ್ ಹಾಗೂ ಅಭಿಶನ್ ಜೀವಿಂತ್ ಅವರ ಈ ಸಮಾಗಮ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಶಿವರಾಜಕುಮಾರ್ ತಮ್ಮ ವರ್ಚಸ್ವಿ ನಟನೆಯ ಮೂಲಕ ಭಾಷೆಯ ಗಡಿ ಮೀರಿ ಪ್ರೇಕ್ಷಕರನ್ನು ಸೆಳೆಯುತ್ತಿದ್ದರೆ, ಅತ್ತ ‘ಟೂರಿಸ್ಟ್ ಫ್ಯಾಮಿಲಿ’ ನಿರ್ದೇಶನದ ಯಶಸ್ಸು ಹಾಗೂ ‘ವಿತ್ ಲವ್’ ಚಿತ್ರದ ನಟನೆಯ ಮೂಲಕ ಯುವ ಪ್ರೇಕ್ಷಕರ ಮನಗೆದ್ದಿರುವ ಅಭಿಶನ್, ಭರವಸೆಯ ಯುವ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ. ಎರಡು ವಿಭಿನ್ನ ತಲೆಮಾರು ಮತ್ತು ಶೈಲಿಯ ನಟರನ್ನು ಒಂದೇ ವೇದಿಕೆಗೆ ತರುತ್ತಿರುವುದು ‘ಪಿಕಾಸೊ’ ಚಿತ್ರದ ಪ್ರಮುಖ ಹೈಲೈಟ್‌ ಆಗಿದೆ.

ಈ ಚಿತ್ರಕ್ಕೆ ಗೌತಮ್ ಶಿವರಾಮನ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದು, ಲಿಯೋನ್ ಜೇಮ್ಸ್ ಸಂಗೀತ ಸಂಯೋಜನೆ ಮತ್ತು ಪ್ರಗದೀಶ್ ಪ್ರಭು ಛಾಯಾಗ್ರಹಣ ನಿರ್ವಹಿಸುತ್ತಿದ್ದಾರೆ. ಸುರೇಶ್ ಅವರ ಸಂಕಲನ, ಸ್ವಾತಿ ರಾಮಕೃಷ್ಣನ್ ಅವರ ವಸ್ತ್ರವಿನ್ಯಾಸ ಹಾಗೂ ವಿಜು ವಿಜಯನ್ ಅವರ ಕಲಾ ನಿರ್ದೇಶನ ಚಿತ್ರಕ್ಕಿದೆ. ಚಿತ್ರದಲ್ಲಿ ಶಿವಾನಿ ನಗರಂ ನಾಯಕಿಯಾಗಿ ನಟಿಸುತ್ತಿದ್ದು, ಯೋಗಲಕ್ಷ್ಮಿ ಪ್ರಮುಖ ಪಾತ್ರದಲ್ಲಿದ್ದಾರೆ. ಜೊತೆಗೆ ಗಾಯಕ ಗಾನಾ ವಿನೋದ್ ಈ ಚಿತ್ರದ ಮೂಲಕ ನಟನಾಗಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

‘ಡ್ರಾಮಾ ಕಂಪನಿ’ ಅರ್ಪಿಸುವ ಈ ಸಿನಿಮಾವನ್ನು ಎ. ಬಾಲಮುರುಗನ್ ನಿರ್ಮಿಸುತ್ತಿದ್ದು, ಆರ್. ಕಾರ್ತಿಕೇಯನ್, ದಿನೇಶ್ ಬಾಲಚಂದ್ರನ್ ಹಾಗೂ ಆರ್. ಆರ್. ದೀಪನ್ ರಾಜ್ ಸಹ-ನಿರ್ಮಾಪಕರಾಗಿದ್ದಾರೆ. ಗ್ರೀನ್ ಗಾಡ್ ಮತ್ತು ಡಿ ಪಿಕ್ಚರ್ಸ್ ಸಂಸ್ಥೆಗಳು ನಿರ್ಮಾಣದಲ್ಲಿ ಕೈಜೋಡಿಸಿವೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ.

ಇದನ್ನೂ ಓದಿ: Toxic: ಯೂಟ್ಯೂಬರ್‌ಗೆ ಲೀಗಲ್ ನೋಟಿಸ್ ನೀಡಿದ ಟಾಕ್ಸಿಕ್‌ ಚಿತ್ರತಂಡ

‘ಪಿಕಾಸೊ’ ಚಿತ್ರತಂಡ ಮುಂದಿನ ದಿನಗಳಲ್ಲಿ ಇನ್ನಷ್ಟು ಅಪ್‌ಡೇಟ್‌ಗಳೊಂದಿಗೆ ಪ್ರೇಕ್ಷಕರ ಮುಂದೆ ಬರಲಿದೆ.

Yashaswi Devadiga

View all posts by this author