ಹೊಂಬಾಳೆ ಫಿಲ್ಮ್ಸ್ (Hombale Films) ಸಂಸ್ಥೆಯು 'ಶಿವ ಶಂಭೋ ಸ್ವಯಂಭೋ' ಹಾಡಿನ (Shiva Shambho Swayambho) ಪ್ರೊಮೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದೆ. 'ಭಕ್ತಿಯ ಅಲೆ ಆರಂಭವಾಗಿದೆ' ಎಂಬ ಅಡಿಬರಹ ನೀಡಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಹೊಂಬಾಳೆ ಫಿಲ್ಮ್ಸ್ ನಿಮ್ಮನ್ನು ಭಕ್ತಿ ಸಾಗರದಲ್ಲಿ ಮುಳುಗಿಸಲು ಸಿದ್ಧವಾಗಿದೆ. ಕೆಜಿಎಫ್ ಮತ್ತು ಕಾಂತಾರದಂತಹ ದೊಡ್ಡ ಚಿತ್ರಗಳನ್ನು ನೀಡಿದ ಹೊಂಬಾಳೆ ಫಿಲ್ಮ್ಸ್ ಈಗ ಸಂಗೀತ ಕ್ಷೇತ್ರದಲ್ಲಿ (Music) ತನ್ನ ಛಾಪು ಮೂಡಿಸುತ್ತಿದೆ.
ನಾಳೆಯೇ ಸಾಂಗ್ ರಿಲೀಸ್
ಶಿವನ ಸಾರವನ್ನು ವ್ಯಕ್ತಪಡಿಸಲು "ಶಿವ ಶಂಭೋ ಸ್ವಯಂಭು" ಎಂಬ ಶಕ್ತಿಶಾಲಿ ಹಾಡನ್ನು ಭಕ್ತರಿಗೆ ತರುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಪ್ರೋಮೋವನ್ನು ನೋಡಿದರೆ, ಈ ಹಾಡು ದೃಶ್ಯ ಮತ್ತು ಸಂಗೀತದ ದೃಷ್ಟಿಯಿಂದ ಮನಸ್ಸಿಗೆ ಮುದ ನೀಡಲಿದೆ ಎಂದು ಅರ್ಥವಾಗುತ್ತದೆ. ದೈವಿಕ ಸಂಗೀತದ ಜೊತೆಗೆ, ಶಿವನ ಭಕ್ತಿಯನ್ನು ವ್ಯಕ್ತಪಡಿಸುವ ಸಾಹಿತ್ಯವು ಪ್ರೇಕ್ಷಕರನ್ನು ಮೆಚ್ಚಿಸುತ್ತಿದೆ.
ಇದನ್ನೂ ಓದಿ: Allu Sirish Wedding: ಅಲ್ಲು ಸಿರೀಶ್ ಹಳದಿ ಶಾಸ್ತ್ರ ಫೋಟೋ ವೈರಲ್; ಅಲ್ಲು ಅರ್ಜುನ್ ಬೇಸರ ಹೊರಹಾಕಿದ್ದೇಕೆ?
ಸಿಕ್ಕಾಪಟ್ಟೆ ಟ್ರೆಂಡಿಂಗ್
ಫೆಬ್ರವರಿ 15 ಮಹಾಶಿವರಾತ್ರಿ. ಈ ಹಿನ್ನೆಲೆಯಲ್ಲಿ ಹೊಂಬಾಳೆ ಫಿಲ್ಮ್ಸ್ ಬಹುನಿರೀಕ್ಷಿತ ಭಕ್ತಿಗೀತೆಯನ್ನು ರಿಲೀಸ್ ಮಾಡುವುದಕ್ಕೆ ಮುಂದಾಗಿದೆ. 'ಶಿವ ಶಂಭೋ ಸ್ವಯಂಭೋ' ಎಂಬ ಹಾಡನ್ನು ಶಿವರಾತ್ರಿ ಹಬ್ಬದಂದೇ ರಿಲೀಸ್ ಮಾಡುತ್ತಿದೆ. ಫೆಬ್ರವರಿ 15ರಂದು ಮಹಾಶಿವರಾತ್ರಿಯ ಪವಿತ್ರ ಹಬ್ಬದ ಸಂದರ್ಭದಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗುತ್ತಿದೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್ ಆಗಿದೆ.
ಈ ಪ್ರೋಮೋ ಮೂಲಕ ಪೂರ್ಣ ಹಾಡಿನ ಬಿಡುಗಡೆ ದಿನಾಂಕವನ್ನು ತಯಾರಕರು ಘೋಷಿಸಿದ್ದಾರೆ. ಈ ಹಾಡಿನ ಪೂರ್ಣ ವೀಡಿಯೊ ಫೆಬ್ರವರಿ 15 ರಂದು ಬೆಳಿಗ್ಗೆ 10 ಗಂಟೆಗೆ ಬಿಡುಗಡೆಯಾಗಲಿದೆ. ನಾರಾಯಣ್ ಶರ್ಮಾ ಸಂಯೋಜಿಸಿ ಸಚಿನ್ ಬಾಗ್ಲೆ ನಿರ್ದೇಶಿಸಿರುವ ಈ ಹಾಡು ಹೊಂಬಾಳೆ ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ದಿ ಅಸ್ಟ್ರಾ ಸ್ಟುಡಿಯೋಸ್ ಸಹಯೋಗದೊಂದಿಗೆ ಸಿದ್ಧಪಡಿಸಲಾಗಿದೆ.
'ಶಿವ ಶಂಭೋ ಸ್ವಯಂಭೋ' ನಾಳೆ (ಫೆಬ್ರವರಿ 15) ಬಿಡುಗಡೆಯಾಗಲಿದೆ. ಆದರೆ, ಅದಕ್ಕೂ ಮೊದಲು ಡಿಜಿಟಲ್ ಲೋಕದಲ್ಲಿ ಸಿಕ್ಕಾಪಟ್ಟೆ ಸಂಚಲನವನ್ನು ಮೂಡಿಸಿದೆ. ಈಗಾಗಲೇ ಈ ಭಕ್ತಿಗೀತೆಯ ಪ್ರೋಮೋವನ್ನು ಸುಮಾರು 6 ಮಿಲಿಯನ್‌ಗೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದು, ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ" ಎಂದು ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಹೇಳಿಕೊಂಡಿದೆ.
ಇದನ್ನೂ ಓದಿ: Yash: ಪ್ರತಿದಿನ ನನ್ನನ್ನೇ ಆಯ್ಕೆ ಮಾಡಿದ್ದಕ್ಕೆ ಧನ್ಯವಾದ; ವ್ಯಾಲೆಂಟೈನ್ ಡೇಗೆ ಯಶ್‌ಗೆ ಕ್ಯೂಟ್ ಆಗಿ ವಿಶ್ ಮಾಡಿದ ರಾಧಿಕಾ
ವಿಜಯ್ ಕಿರಗಂದೂರು ಅವರ ನೇತೃತ್ವದ ಹೊಂಬಾಳೆ ಫಿಲ್ಮ್ಸ್ ಈಗಾಗಲೇ ಕೆಜಿಎಫ್, ಕಾಂತಾರ ಮತ್ತು ಸಲಾರ್‌ನಂತಹ ಬ್ಲಾಕ್‌ಬಸ್ಟರ್ ಚಿತ್ರಗಳ ಮೂಲಕ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದೆ. ವಿಶೇಷವಾಗಿ 'ಕಾಂತಾರ' ಸಿನಿಮಾ ಜನರ ಮನ ಗೆದ್ದಿತ್ತು. ಈಗ ಅದೇ ಹಾದಿಯಲ್ಲಿ 'ಹೊಂಬಾಳೆ ಫಿಲ್ಮಂ ಲೇಬಲ್ ಅಡಿಯಲ್ಲಿ ಈ ಗೀತೆಯನ್ನು ಬಿಡುಗಡೆ ಮಾಡಲಾಗುತ್ತಿದೆ.